Wednesday, 11th December 2024

ವೆಸ್ಟ್​ ಇಂಡೀಸ್​ ಟೆಸ್ಟ್​: ಟೀಂ ಇಂಡಿಯಾ ಬಿಗಿ ಹಿಡಿತ

ರೋಸೋ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ತಂಡವನ್ನು ಕೇವಲ 150 ರನ್​ಗಳಿಗೆ ಆಲೌಟ್ ಮಾಡಿ, ಬ್ಯಾಟಿಂಗ್​ನಲ್ಲೂ ಮೇಲುಗೈ ಸಾಧಿಸುತ್ತಿದೆ.

ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದೆ. ರೋಹಿತ್ ಶರ್ಮಾ (30) ಮತ್ತು ಯಶಸ್ವಿ ಜೈಸ್ವಾಲ್ (40) ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ 70 ರನ್‌ಗಳ ಹಿನ್ನಡೆಯಲ್ಲಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ವಿಂಡೀಸ್,​ 10 ಓವರ್​ಗಳ ಮುಕ್ತಾಯಕ್ಕೆ ವಿಕೆಟ್​ ನಷ್ಟವಿಲ್ಲದೇ 29 ರನ್​ ಕಲೆ ಹಾಕಿತ್ತು. ಆರಂಭಿಕ ಬ್ಯಾಟರ್​ ತ್ಯಾಗ್ನಾರಾಯಣ ಚಂದ್ರಪಾಲ್ (12) ಅವರನ್ನು ಅಶ್ವಿನ್ ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಜೊತೆಯಾ ಟಕ್ಕೆ ಬ್ರೇಕ್​ ಹಾಕಿದರು. ಬ್ರಾಥ್ ವೈಟ್ (20) ಅವರು ಅಶ್ವಿನ್ ಬೌಲಿಂಗ್​ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತರೆ, ಶಾರ್ದೂಲ್ ಠಾಕೂರ್ ಎಸೆದ 20ನೇ ಓವರ್​ನಲ್ಲಿ ರೀಫರ್ (2) ಅವರು ವಿಕೆಟ್ ಕೀಪರ್​ಗೆ ಕ್ಯಾಚ್ ಕೊಟ್ಟರು. ಭೋಜನ ವಿರಾಮಕ್ಕೂ ಮುನ್ನ ಬ್ಲಾಕ್ ವುಡ್ (14) ಜಡೇಜಾ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

ಭೋಜನ ವಿರಾಮದ ವೇಳೆಗೆ ವಿಂಡೀಸ್​ 68/4 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವಿರಾಮದ ನಂತರ ಜಡೇಜಾ ಎಸೆದ 32ನೇ ಓವರ್​ನಲ್ಲಿ ಜೋಶುವಾ ಡ ಸಿಲ್ವಾ (2) ವಿಕೆಟ್ ಕೀಪರ್ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿದರೆ, ಸಿರಾಜ್​ ಎಸೆತದಲ್ಲಿ ಹೋಲ್ಡರ್ (18), ಅಲ್ಜಾರಿ ಜೋಸೆಫ್ (4) ಮತ್ತು ಅಥಾನಾಜೆ ಅವರನ್ನು ಅಶ್ವಿನ್ ಪೆವಿಲಿಯನ್‌ಗೆ ಕಳುಹಿಸಿ ದರು. ಚಹಾ ವಿರಾಮದ ಹೊತ್ತಿಗೆ ವೆಸ್ಟ್ ಇಂಡೀಸ್ ಎಂಟು ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತ್ತು. ಕೊನೆಯ ಸೆಷನ್‌ನಲ್ಲಿ ಜಡೇಜಾ ಬೌಲಿಂಗ್‌ನಲ್ಲಿ ಕೀಮರ್ ರೋಚ್ (1) ಎಲ್ಬಿಡಬ್ಲ್ಯೂ ಆದರು.

Read E-Paper click here

ಮಾರಕ ಸ್ಪಿನ್​ ದಾಳಿ ನಡೆಸಿದ ಆರ್‌. ಅಶ್ವಿನ್ 5 ವಿಕೆಟ್ ಪಡೆದು ಕೆರಿಬಿಯನ್ನರು ಸರ್ವಪತನದಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದೆಡೆ, ಜಡೇಜಾ 3, ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

ಲೋನ್ ಆಪ್ ಅವಾಂತರ: 900 ಪ್ರಕರಣ ದಾಖಲು click here
http://vishwavani.news/districts/bengaluru-urban/loan_app_/

ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 95ನೇ ಬಾರಿಗೆ ಬ್ಯಾಟರ್‌ಗಳನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಅನಿಲ್ ಕುಂಬ್ಳೆ 94 ಕ್ಲೀನ್​ ಬೌಲ್ಡ್​ ಮಾಡಿದ್ದ ದಾಖಲೆ ಮುರಿದಿದ್ದಾರೆ. ಇದರೊಂದಿಗೆ ವೃತ್ತಿ ಜೀವನದ 700ನೇ ಅಂತಾರಾಷ್ಟ್ರೀಯ ವಿಕೆಟ್‌ ಪಡೆದರು. ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿಕೊಂಡರು. ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ 956 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದರೆ, ಹರ್ಭಜನ್ ಸಿಂಗ್ 711 ವಿಕೆಟ್‌ಗಳನ್ನು ಪಡೆದು 2ನೇ ಕ್ರಮಾಂಕ ದಲ್ಲಿದ್ದಾರೆ.

ಭಾರತದ ಯುವ ಆಟಗಾರರಾದ ಇಶಾನ್​ ಕಿಶಾನ್​, ಯಶಸ್ವಿ ಜೈಸ್ವಾಲ್ ಆಯ್ಕೆಯಾಗಿದ್ದು, ಇದು ಇಬ್ಬರು ಆಟಗಾರರ ಚೊಚ್ಚಲ ಟೆಸ್ಟ್​ ಪಂದ್ಯವಾಗಿದೆ.