Sunday, 15th December 2024

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: ಭರ್ಜರಿ ಅಭ್ಯಾಸ ನಡೆಸಿದ ಟೀಂ ಇಂಡಿಯಾ

ಸೌತಾಂಪ್ಟನ್‌: ಜೂ.18ರಂದು ನ್ಯೂಜಿಲೆಂಡ್‌ ವಿರುದ್ಧ ಆರಂಭಗೊಳ್ಳಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ಅಭ್ಯಾಸ ನಡೆಸಿದೆ. ಫೈನಲ್‌ ಪಂದ್ಯವು ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ವಿಡಿಯೊ ಹಂಚಿಕೊಂಡಿದ್ದು, ಬಿಸಿಸಿಐ ಟೀಂ ಇಂಡಿಯಾದ ಅಭ್ಯಸದ ವಿಡಿಯೊವನ್ನು ಅಪ್‌ಲೋಡ್‌ ಮಾಡಿದೆ.

ಫೈನಲ್‌ ಪಂದ್ಯದಲ್ಲಿ ಗೆಲ್ಲಲು ತಂಡದ ಆಟಗಾರರು ಮಾನಸಿಕವಾಗಿ ಸದೃಡರಾಗಿರಬೇಕು ಎಂದು ನಾಯಕ ವಿರಾಟ್‌ ಕೊಹ್ಲಿ ಕಿವಿಮಾತು ಹೇಳಿದ್ದಾರೆ. ಮುಂಬೈನಲ್ಲಿ ಕೊಹ್ಲಿ ಪಡೆ ಮೂರು ವಾರಗಳ ಕಾಲ ಕ್ವಾರಂಟೈನ್‌ ಮುಗಿಸಿ ಹ್ಯಾಂಪ್‌ಶೈರ್‌ಗೆ ಜೂ.3ರಂದು ಆಗಮಿಸಿತ್ತು. ಮೂರು ದಿನಗಳ ಕಾಲ ಪ್ರತ್ಯೇಕ ವಾಸದಲ್ಲಿ ಇದ್ದರು.