Wednesday, 21st February 2024

ಸಂಸದರಿಗೆ ಮುಂಬರುವ ಚುನಾವಣೆಯಲ್ಲಿ ಸಮಾ ಜದ ಪ್ರತಿಯೊಬ್ಬರು ತಕ್ಕ ಪಾಠ ಕಲಿಸಬೇಕು

ಇಂಡಿ : ಸುಮಾರು ೩೦ ದಶಕಗಳು ಕಳೆದರು ಒಳಮಿಸಲಾತಿ ಜಾರಿಗೆ ತರುವಲ್ಲಿ ವಿಫಲರಾದ ರಾಜ್ಯದ ಪಜಾ ಎಡಗೈ ಹಾಗೂ ಬಲಗೈ ಸಮುದಾಯದ ಶಾಸಕರು,ಸಚಿವರು ಹಾಗೂ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳ ಬೇಕು. ಎಸ್ಸಿ ಸಮುದಾಯದ ಹೆಸರಿನಲ್ಲಿ ಮೀಸಲಾತಿಯಲ್ಲಿ ಅಧಿಕಾರ ಹಿಡಿದು ಅಧಿಕಾರ ಸಿಕ್ಕ ಮೇಲೆ ಸಮಾಜದ ಜನರ ಹಿತ ಕಾಪಾಡುವಲ್ಲಿ ವಿಫಲರಾದ ಎಡಗೈ ಹಾಗೂ ಬಲಗೈ ಇಂದಿನ ಶಾಸಕರಿಗೆ, ಸಂಸದರಿಗೆ ಮುಂಬರುವ ಚುನಾವಣೆಯಲ್ಲಿ ಸಮಾ ಜದ ಪ್ರತಿಯೊ ಬ್ಬರು ತಕ್ಕ ಪಾಠ ಕಲಿಸಬೇಕು ಎಂದು ಕರ್ನಾಟಕ ರಾಜ್ಯ ಗಡಿನಾಡು ಮಾದಿಗರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ರಾಜು ಪಡಗಾನೂರ ಪ್ರಕಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇತರೆ ಸಮುದಾಯದ ನಾಯಕರು,ಶಾಸಕರು,ಸಂಸದರು ತಮ್ಮ ಸಮುದಾಯದ ಮೀಸಲಾ ತಿಗಾಗಿ ಸದನದಲ್ಲಿ, ಸರ್ಕಾರದ ಮಟ್ಟದಲ್ಲಿ ದೊಡ್ಡ ಪ್ರಮಾಣದ ಧ್ವನಿ ಎತ್ತಿ ಅವರ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ.

ಆದರೆ ರಾಜ್ಯದ ಎಡಗೈ,ಬಲಗೈ ಸಮುದಾಯದ ಶಾಸಕರು, ಸಂಸದರು ಸದನದಲ್ಲಿ, ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರದೆ ಇರುವು ದರಿಂದ ಇನ್ನೂ ನಿದ್ರೆಯಲ್ಲಿ ಇದ್ದಾರೆ ಎಂಬುದು ತೊರಿಸುತ್ತದೆ.

ಈಗಲಾದರು ರಾಜ್ಯದ ಬಹುಸಂಖ್ಯಾತ ಪಜಾ ಎಡಗೈ,ಬಲಗೈ ಶಾಸಕರು, ಸಂಸದರು ಒಳ ಮಿಸಲಾತಿ ಕಲ್ಪಿಸಿಕೊಡಿ,ಇಲ್ಲವೆ ರಾಜಿನಾಮೆ ನೀಡಿ ಎಂಬ ಘೋಷಣೆಯೊಂದಿಗೆ ಮುಂಬರುವ ದಿನದಲ್ಲಿ ಸಮಾಜದ ರಾಜಕೀಯ ನಾಯಕರ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

error: Content is protected !!