ಮಂಗಳೂರು: ಡ್ರಗ್‌ಸ್ ಜಾಲದ ವಿರುದ್ದ ಪೊಲೀಸ್ ಇಲಾಖೆ ಸಮರ ಸಾರಿದೆ. ಡ್ರಗ್‌ಸ್ ಜಾಲದ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಡ್ರಗ್‌ಸ್ ಸೇವನೆಯಿಂದ ಅಪರಾಧ ಕೇಸ್ ಹೆಚ್ಚಳವಾಗಿದೆ. ಡ್ರಗ್‌ಸ್ ಖರೀದಿಸುವವರು, ಮಾರಾಟ ಮಾಡುವವರು, ಡ್ರಗ್ ಪೂರೈಕೆ ಮಾಡುವವರು ಸಮಾಜ ದ್ರೋಹಿಗಳು ಎಂದು ಟೀಕಿಸಿದ ನಳಿನ್, ಯಾವುದೇ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಿ, ಏನೂ ತೊಂದರೆ ಆಗದಂತೆ ಪಕ್ಷ ನೋಡಿಕೊಳ್ಳುತ್ತೆ ಎಂದು ಭರವಸೆ ಕೊಟ್ಟರು.
ಡ್ರಗ್‌ಸ್ ಜಾಲದ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ: ನಳಿನ್ ಟ್ವೀಟ್
