ಹುಳಿಯಾರು: ಪತ್ರಿಕೆಯ ವರದಿಯ ಫಲಶೃತಿಯಿಂದ ದೊಡ್ಡಎಣ್ಣೇಗೆರೆ ಗ್ರಾಪಂ ಮುಂದೆ ಹಾರಾಡುತ್ತಿದ್ದ ಹರಿದ ರಾಷ್ಟçಧ್ವಜವನ್ನು ಬದಲಾಯಿಸಿ ಹೊಸ ರಾಷ್ಟçಧ್ವಜ ಹಾರಿಸಲಾಗಿದೆ.
ರಾಷ್ಟç ಧ್ವಜಕ್ಕೆ ತನ್ನದೇಯಾದ ಗೌರವ ಘನತೆ ಇದೆ. ಹರಿದ, ಕೊಳಕಾದ, ಹಾಳಾದ ರಾಷ್ಟçಧ್ವಜ ಹಾರಿಸುವದು ಅಪರಾಧ. ಆದರೂ ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿ ಧ್ವಜಸ್ಥಂಭದಲ್ಲಿ ಹರಿದ ದ್ವಜ ಹಾರಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪತ್ರಿಕೆ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತು ಎಚ್ಚೆತ್ತುಕೊಂಡ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹೊಸ ರಾಷ್ಟçಧ್ವಜ ಹಾರಿಸುತ್ತಿದ್ದಾರೆ.
ಈ ಸಂಬ0ಧ ಹಂದನಕೆರೆ ಪೊಲೀಸರು ಪಂಚಾಯ್ತಿ ಕಛೇರಿಗೆ ಭೇಟಿ ನೀಡಿ ಹರಿದ ರಾಷ್ಟçಧ್ವಜ ಹಾರಿಸುತ್ತಿದ್ದ ಬಗ್ಗೆ ಸಿಬ್ಬಂದಿ ಹಾಗೂ ಜನಪತ್ರಿನಿಧಿಗಳಿಂದ ಹೇಳಿಕೆ ಪಡೆದಿದ್ದಾರೆ.
***
ಗ್ರಾಪಂ ಕಛೇರಿಯಲ್ಲಿ ಎರಡ್ಮೂರು ರಾಷ್ಟçಧ್ವಜ ಇರುತ್ತದೆ. ನಿತ್ಯ ಹಾರಿಸುತ್ತಿರುವ ರಾಷ್ಟçಧ್ವಜ ಹಾಳಾದರೆ ತಕ್ಷಣ ಬದಲಾಯಿಸಿ ಹೊಸ ರಾಷ್ಟçಧ್ವಜ ಹಾರಿಸ ಲಾಗುತ್ತದೆ. ಹಾಗಾಗಿ ನಮ್ಮ ಪಂಚಾಯ್ತು ಧ್ವಜ ಹರಿದಿರುವ ವಿಷಯ ತಿಳಿದ ತಕ್ಷಣ ಹೊಸ ರಾಷ್ಟçಧ್ವಜ ಕೊಟ್ಟು ಬದಲಾಯಿಸುವಂತೆ ಸಿಬ್ಬಂದಿಗೆ ತಿಳಿಸಿದ್ದೆ. ಆದರೂ ಅದೇಕೆ ಬದಲಾಯಿಸಿಲ್ಲವೂ ತಿಳಿಯಲಿಲ್ಲ. ಕೆಲಸದ ಒತ್ತಡದಲ್ಲಿ ನಂತರದ ದಿನಗಳಲ್ಲಿ ಗಮನಿಸಲಿಲ್ಲ. ಇನ್ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ.
ಅಡವಿಶ್ಕುಮಾರ್, ಪಿಡಿಓ, ದೊಡ್ಡಎಣ್ಣೇಗೆರೆ