ಚೆನ್ನೈ : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಶನಿವಾರ 70ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಕಾಮನ್ ಡಿಪಿ ಮೂಲಕ ಅಭಿಮಾನಿಗಳು ಸಂಭ್ರಮದಿಂದ ಶುಭ ಹಾರೈಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ತಲೈವಾ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಸೆಲಬ್ರಿಟಿಗಳು ಹಾಗೂ ಅಭಿಮಾನಿಗಳು ಕಾಮನ್ ಡಿಪಿಯನ್ನು ತಮ್ಮ ಫೇಸ್ಬುಕ್, ವಾಟ್ಸಾಪ್ ಸೇರಿ ಇತರ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ರಜಿನಿಗೆ ಹಾರೈಸಿದ್ದಾರೆ. ರಜಿನಿಕಾಂತ್ ಹುಟ್ಟುಹಬ್ಬದ ವಿಶೇಷವಾಗಿ ಮುಂಬರಲಿರುವ ‘ಅಣ್ಣಾತೆ’ ಸಿನಿಮಾದ ಪೋಸ್ಟರನ್ನು ಚಿತ್ರತಂಡ […]