Friday, 22nd November 2024

Kempegowda Fest: ದುಬೈನಲ್ಲಿ ಅದ್ಧೂರಿ ಕೆಂಪೇಗೌಡ ಉತ್ಸವ

ದುಬೈನಲ್ಲಿ ಅ.27 ರಂದು ನಾಡಪ್ರಭು ಕೆಂಪೇಗೌಡರ ಸ್ಮರಣೆಗಾಗಿ ಕನ್ನಡ ಪರಂಪರೆ ಮತ್ತು ಸಂಸ್ಕೃತಿಯನ್ನು ಸ್ಮರಿಸುವ ಉತ್ಸವ ಅದ್ಧೂರಿಯಾಗಿ ನೆರವೇರಿತು. ದುಬೈನ ಕನ್ನಡ ಒಕ್ಕೂಟಗಳು ಮತ್ತು ದುಬೈ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು  ಕನ್ನಡಿಗರು ಮತ್ತು ಕರ್ನಾಟಕದಿಂದ  ಅಥಿತಿಗಳು ಭಾಗವಹಿಸಿದರು. ಅದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ಕನ್ನಡಿಗರ ಏಕತೆಯ ಪ್ರತಿಬಿಂಬ ಈ ಉತ್ಸವ, ಇದು ಕನ್ನಡ ನಾಡು ಮತ್ತು ಭಾವೈಕ್ಯತೆಯನ್ನು ಜಾಗೃತಗೊಳಿಸುವ ಮಹತ್ವದ ಕಾರ್ಯವಾಗಿದೆ ,ಈ ಉತ್ಸವವು ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಸ್ಮರಿಸುವ ಮತ್ತು ಪ್ರೇರಣೆ ಮಾಡುವ ಕೆಲಸ ಮಾಡಲಿದೆ ಎಂಬುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ, ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ಸನ್ಮಾನಿಸಲ್ಪಟ್ಟರು. ರಾಜ್ಯ ಪಶುಸಂಗೋಪನಾ ಸಚಿವರಾದ ಶ್ರೀ ವೆಂಕಟೇಶ್, ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವಥ್  ನಾರಾಯಣ್, ಮಾಜಿ ಸಚಿವರಾದ ಸಿ.ಟಿ. ರವಿ, ಶಾಸಕರಾದ ರವಿಕುಮಾರ್ ಗಣಿಗ, ಮತ್ತು ಚಿತ್ರನಟ ಉಪೇಂದ್ರ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ಕಿರಣ್ ಗೌಡ, ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷರು, ನಮ್ಮ ಪರಂಪರೆ, ಸಂಸ್ಕೃತಿ ಮತ್ತು ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಮುಂದಿನ ತಲೆಮಾರಿಗೂ ಪರಿಚಯಿಸಲು ಈ ಉತ್ಸವವೇ ಆದರ್ಶ ಮಾದರಿಯಾಗಿದೆ,ಎಂದು ಸಂತೋಷ ವ್ಯಕ್ತಪಡಿಸಿದರು. ಚಿತ್ರನಟ ಉಪೇಂದ್ರ ಈ ಉತ್ಸವದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, “ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ,” ಎಂದು ಅಭಿಪ್ರಾಯಪಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ ಪ್ರದರ್ಶನಗಳು, ಮತ್ತು ಸಾಮಾಜಿಕ ಸೇವಾ ಸನ್ಮಾನಗಳನ್ನು ನಡೆಸಲಾಯಿತು. ಪ್ರತೀ ವರುಷ ಈ ಉತ್ಸವವನ್ನು ಕನ್ನಡ ನಾಡಿನ ಸಂಸ್ಕೃತಿಯ ದೀಪವನ್ನು ಮತ್ತಷ್ಟು ವಿಸ್ತಾರವಾಗಿಸಲು ಸಂಘಟಕರು ನಿರ್ಧರಿಸಿದ್ದಾರೆ.

ಮುಂದೆ ಓದಿ

Joy Alukkas

Joy Alukkas: ರೋಲ್ಸ್ ರಾಯ್ಸ್ ಕಾರು ಖರೀದಿಗೆ ಹೋದಾಗ ಅವಮಾನಿತರಾದರೂ ಅದನ್ನು ಖರೀದಿಸಿ ಬಹುಮಾನವಾಗಿ ಕೊಟ್ಟ ಭಾರತೀಯ ಉದ್ಯಮಿ

ಭಾರತದ ಬಿಲಿಯನೇರ್ (Indian Billionaire ) ಉದ್ಯಮಿಯೊಬ್ಬರು  ದುಬೈನಲ್ಲಿ (dubai) ಕಾರು ಶೋ ರೂಮ್ ನಲ್ಲಿ (Rolls Royce car Showroom) ಅವಮಾನಿತರಾದರೂ ಅವರು ಅದೇ ಕಾರನ್ನು...

ಮುಂದೆ ಓದಿ

‘ವಿದೇಶಿ ಬ್ಯಾಂಕು’ಗಳ ಮೇಲೆ 20% ತೆರಿಗೆ

ದುಬೈ: ದುಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ವಿದೇಶಿ ಬ್ಯಾಂಕುಗಳ’ ಮೇಲೆ 20% ತೆರಿಗೆ ವಿಧಿಸುವ ಕಾನೂನು ಜಾರಿಗೆ ತರಲಾಗಿದೆ. ಯುಎಇಯ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್...

ಮುಂದೆ ಓದಿ

ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ದುಬೈ ಭೇಟಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ದುಬೈಗೆ ಭೇಟಿ ನೀಡಿದ್ದು, ವಿಶ್ವಸಂಸ್ಥೆಯ ಕಾನ್ಫರೆನ್ಸ್ ಆಫ್ ಪಾರ್ಟೀಸ್(ಸಿಒಪಿ-28) ಜೊತೆಗೆ ನಡೆಯಲಿರುವ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ....

ಮುಂದೆ ಓದಿ

ಬುರ್ಜ್‌ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜ: ಪಾಕಿಸ್ತಾನಕ್ಕೆ ಮುಖಭಂಗ

ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಎಂದೇ ಖ್ಯಾತಿ ದುಬೈನ ಬುರ್ಜ್‌ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ತಾರ ಮೂಡಿದೆ. ಪಾಕಿಸ್ತಾನದ ರಾಷ್ಟ್ರಧ್ವಜದ ಬೆಳಕಿನ ಚಿತ್ತಾರ ಮೂಡಿಸದ...

ಮುಂದೆ ಓದಿ

ಬುರ್ಜ್ ಖಲೀಫಾದಲ್ಲಿ ಭಾರತೀಯ ಧ್ವಜ ಪ್ರದರ್ಶನ

ನವದೆಹಲಿ : ಮಂಗಳವಾರ ದೇಶಾದ್ಯಂತ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ಸ್ವಾತಂತ್ರ್ಯ ದಿನಾ ಚರಣೆಯ ಸಂದರ್ಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್...

ಮುಂದೆ ಓದಿ

ದುಬೈನಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ: ಭಾರತೀಯ ಸೇರಿ ನಾಲ್ವರ ಸಾವು

ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್): ಶ್ರೀಮಂತ ಗಲ್ಫ್ ಎಮಿರೇಟ್‌ನಲ್ಲಿ ದುಬೈನಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಭಾರತೀಯರು ಸೇರಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು...

ಮುಂದೆ ಓದಿ

ನಂಬರ್ ಪ್ಲೇಟ್ P7 55 ಮಿಲಿಯನ್ ದಿರ್ಹಮ್‌’ಗೆ ಮಾರಾಟ..!

ದುಬೈ: ‘ಮೋಸ್ಟ್ ನೋಬಲ್ ನಂಬರ್’ಗಳ ಹರಾಜಿನಲ್ಲಿ ಕಾರಿನ ನಂಬರ್ ಪ್ಲೇಟ್ P7 ದಾಖಲೆಯ 55 ಮಿಲಿಯನ್ ದಿರ್ಹಮ್‌ ಗಳಿಗೆ (ಸುಮಾರು 1,22,61,44,700 ರೂ.) ಮಾರಾಟ ವಾಗಿದೆ. ಹರಾಜಿನಲ್ಲಿ...

ಮುಂದೆ ಓದಿ

ದುಬೈ ಕಾರ್ಯಕ್ರಮದಲ್ಲಿ ಶಕೀಬ್ ಅಲ್ ಹಸನ್’ಗೆ ಹಲ್ಲೆ

ದುಬೈ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ ದುಬೈನ ಕಾರ್ಯ ಕ್ರಮವೊಂದರಲ್ಲಿ ಹಲ್ಲೆಗೊಳಗಾಗಿದ್ದು ಅಭಿಮಾನಿ ಗಳ ತಳ್ಳಾಟದಲ್ಲಿ ಕ್ರಿಕೆಟಿಗ ನೆಲದ ಮೇಲೆ ಬಿದ್ದಿದ್ದು...

ಮುಂದೆ ಓದಿ

ದುಬೈ ಪ್ರವಾಸ ಕೈಗೊಳ್ಳಲು ನಟಿ ಜ್ಯಾಕಲಿನ್’ಗೆ ಅನುಮತಿ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್‌ ನಟಿ ಜ್ಯಾಕಲಿನ್ ಫೆರ್ನಾಂಡೀಸ್ ಅವರು ದುಬೈ ಪ್ರವಾಸ ಕೈಗೊಳ್ಳಲು ದೆಹಲಿ ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ವಿದೇಶದಲ್ಲಿ ನಡೆಯುವ...

ಮುಂದೆ ಓದಿ