Friday, 2nd June 2023

ದುಬೈ ಕಾರ್ಯಕ್ರಮದಲ್ಲಿ ಶಕೀಬ್ ಅಲ್ ಹಸನ್’ಗೆ ಹಲ್ಲೆ

ದುಬೈ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ ದುಬೈನ ಕಾರ್ಯ ಕ್ರಮವೊಂದರಲ್ಲಿ ಹಲ್ಲೆಗೊಳಗಾಗಿದ್ದು ಅಭಿಮಾನಿ ಗಳ ತಳ್ಳಾಟದಲ್ಲಿ ಕ್ರಿಕೆಟಿಗ ನೆಲದ ಮೇಲೆ ಬಿದ್ದಿದ್ದು ಈ ವಿಡಿಯೋ ವೈರಲ್ ಆಗಿದೆ.
ಕಾರ್ಯಕ್ರಮದ ಮಧ್ಯೆ ಜನಸಂದಣಿ ತುಂಬಾ ಇತ್ತು, ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಿಕೆಟಿಗ ಮತ್ತು ಅವರ ಜೊತೆಯಲ್ಲಿದ್ದ ಜನರಿಗೆ ಕಷ್ಟವಾಯಿತು. ವಿಡಿಯೋದಲ್ಲಿ ಶಕೀಬ್ ಸ್ಥಳದಿಂದ ನಿರ್ಗಮಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ನೂರಾರು ಅಭಿಮಾನಿಗಳು ಸುತ್ತುವರೆ ದಿದ್ದಾರೆ.
ಯಾರೋ ಅವನ ಅಂಗಿಯನ್ನು ಹಿಡಿದು ಎಳೆದಾಡಿದರು. ಮತ್ತೊಬ್ಬರು ಕ್ರಿಕೆಟಿಗನನ್ನು ತಳ್ಳಿದರು. ಇದರಿಂದ ನಿಯಂತ್ರಣ ಕಳೆದುಕೊಂಡ ಶಕೀಬ್ ಬಹುತೇಕ ನೆಲದ ಮೇಲೆ ಬಿದ್ದರು. ನಂತರ ಎದ್ದು ಸಾಧ್ಯವಾದಷ್ಟು ಬೇಗ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಶಕೀಬ್ ಸ್ಥಳದಿಂದ ಹೊರ ಹೋಗುತ್ತಿದ್ದಂತೆ ಅವರಿಗೆ ಯಾವುದೇ ಭದ್ರತೆ ಇರಲಿಲ್ಲ.

ಇದಕ್ಕೂ ಮೊದಲು, ಮತ್ತೊಂದು ವೀಡಿಯೊ ವೈರಲ್ ಆಗಿತ್ತು. ಇದರಲ್ಲಿ ಶಕೀಬ್ ತನ್ನ ಸ್ವಂತ ಕ್ಯಾಪ್ನಿಂದ ಅಭಿಮಾನಿಯನ್ನು ಹೊಡೆಯುವುದನ್ನು ಕಾಣಬಹುದು. ಶಕೀಬ್ ಅಭಿಮಾನಿಗೆ ಕ್ಯಾಪ್ ಹಿಡಿದು ನಿರ್ದಯವಾಗಿ ಥಳಿಸಲು ಆರಂಭಿಸಿದರು. ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು, ಅವರನ್ನು ಬಲವಂತವಾಗಿ ಕರೆದೊಯ್ಯಲಾಯಿತು.

error: Content is protected !!