ರಾಜ್ಯದಲ್ಲಿ ನೂತನವಾಗಿ ಉದ್ಯಮಗಳನ್ನು ಆರಂಭಿಸುವವರಿಗಾಗಿ ಸರಕಾರದಿಂದ ಬಹಳಷ್ಟು ಸಹಕಾರ ದೊರೆಯುತ್ತಿದೆ. ಆದರೆ ನೂತನವಾಗಿ ಆರಂಭಗೊಳ್ಳುವ ಉದ್ಯಮಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕಿರುವ ಅವಶ್ಯಕತೆಯಿದೆ. ಇದೀಗ ಜಾರಿಗೊಳಿಸಿರುವ ಇಂಡಸ್ಟ್ರಿಯಲ್ ಫೆಸಿಲಿಟೇಷನ್ ಆ್ಯಕ್ಟ್ (ಐಎಫ್‌ಎ) ಮತ್ತಷ್ಟು ಅನುಕೂಲ ಒದಗಿಸಿದೆ. ಉದ್ದಿಮೆ ಸ್ಥಾಪನೆಗೆ ಅಗತ್ಯವಿರುವ ಸವಲತ್ತು, ಉತ್ತೇಜನ, ಮೂಲ ಸೌಕರ್ಯ ಹಾಗೂ ಅನುಮತಿಯನ್ನು ತ್ವರಿತವಾಗಿ ಒದಗಿಸುವ ನಿಟ್ಟಿ ನಲ್ಲಿ ಈ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸರ್ವಾನುಮತ ದ ಅನುಮತಿ ದೊರೆತಿದ್ದು, ಈ ಕಾಯಿದೆ ಜಾರಿಯಿಂದ ಉದ್ಯಮಿ ಯೊಬ್ಬರು ಅನುಮತಿ ದೊರೆತ […]