Thursday, 19th September 2024

ಬಾಂಬ್ ಸ್ಫೋಟ: ಇಬ್ಬರು ಐಟಿಬಿಟಿ ಸಿಬ್ಬಂದಿಗೆ ಗಾಯ

ಇಂಫಾಲ : ಮಣಿಪುರದ ಕಾಕ್ಚಿಂಗ್ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡು ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಐಟಿಬಿಟಿ ಸಿಬ್ಬಂದಿ ಗಾಯಗೊಂಡಿ ದ್ದಾರೆ. ರಾಜ್ಯ ರಾಜಧಾನಿ ಇಂಫಾಲದಿಂದ ಸುಮಾರು 60 ಕಿ.ಮೀಗಳಷ್ಟು ದೂರವಿರುವ ವಾಂಗೂ ತೇರಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಬಾಂಬ್ ಸ್ಫೋಟಿಸಿತು ಎಂದು ಹೇಳಿದ್ದಾರೆ. ಘಟನೆ ಸಂಭವಿಸಿದಾಗ ಐಟಿಬಿಟಿ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಇವರನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಉತ್ತರಾಖಂಡ್ ಮೂಲದವರಾದ ಈ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಇಂಫಾಲದ ಆಸ್ಪತ್ರೆ […]

ಮುಂದೆ ಓದಿ