ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಸುದೀರ್ಘ ದಾಂಪತ್ಯವನ್ನ ಕೊನೆಗೊಳಿಸಿದ್ದಾರೆ. ಜಂಟಿ ಹೇಳಿಕೆಯ ಮೂಲಕ ಈ ದಂಪತಿ ಶನಿವಾರ ತಮ್ಮ ವಿವಾಹ ವಿಚ್ಛೇದನದ ವಿಚಾರವನ್ನ ಬಹಿರಂಗಪಡಿಸಿದೆ. ನಮ್ಮ ಸಂಬಂಧವು ನಂಬಿಕೆ, ಗೌರವ ಹಾಗೂ ಪ್ರೀತಿಯ ನೆಲೆಗಟ್ಟಿನಲ್ಲಿ ಬೆಳೆದಿದೆ. ಆದರೆ ಇದೀಗ ನಾವು ನಮ್ಮ ಜೀವನದ ಹೊಸ ಅಧ್ಯಾಯವನ್ನ ತೆರೆಯಲು ಹೊರಟಿದ್ದೇವೆ. ನಾವು ಇನ್ಮೇಲೆ ಪತಿ – ಪತ್ನಿಯಲ್ಲ. ಆದರೆ ಪೋಷಕರಾಗಿ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ. ನಾವು ಇನ್ಮೇಲೆ ಪ್ರತ್ಯೇಕವಾಗಿ ವಾಸಿಸಲಿದ್ದೇವೆ. ಆದರೆ […]