ಫೋಟೋ ಕೃಪೆ: ಸುಧಾಕರ್ ದೇವರಾಜ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಮಂಗಳವಾರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಮಾಜಿ ಕ್ರಿಕೇಟಿಗರಾದ ವಿವಿಎಸ್ ಲಕ್ಷ್ಮಣ್, ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ, ಇಎಎಸ್ ಪ್ರಸನ್ನ, ಗುಂಡಪ್ಪ ವಿಶ್ವನಾಥ್, ಬೃಜೇಶ್ ಪಟೇಲ್, ಸುಜೀತ್ ಸೋಮಸುಂದರ್ ಮುಂತಾದವರು ಗ್ರೂಪ್ ಫೋಟೋ ತೆಗೆಸಿಕೊಂಡರು. ಕ್ರಿಕೇಟ್ ಅಭಿಮಾನಿಗಳು ಕೂಡ ಈ ವೇಳೆ ಟ್ರೋಫಿ ಜತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಪಟ್ಟರು.