Saturday, 27th July 2024

ಅವಶ್ಯಕತೆ ಅರಿತು ಬರುವವನೇ ನಿಜ ಗೆಳೆಯ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಫ್ರೆಂಡ್‌ಶಿಪ್ ಡೇಗೆ ಅಂಕಣಕಾರ ಎಸ್.ಷಡಕ್ಷರಿ ಮಾತು

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಪ್ರಪಂಚದಲ್ಲಿ ಸ್ನೇಹಕ್ಕೆ ತನ್ನದೇ ಆದ ಮಹತ್ವವಿದೆ. ಆತ್ಮೀಯ ಸ್ನೇಹಿತ ಎಂದರೆ ದಿನದ ೨೪ ಗಂಟೆಯೂ ಜತೆಗಿರಬೇಕು ಎಂದೇ ನಿಲ್ಲ. ನಮ್ಮ ಅವಶ್ಯಕತೆ ಅರಿತು ಬರುವವನೇ ನಿಜವಾದ ಸ್ನೇಹಿತ ಎಂದು ಖ್ಯಾತ ಅಂಕಣಕಾರ, ಉದ್ಯಮಿ, ರಮಣಶ್ರೀ ಗ್ರೂಪ್‌ನ ಎಸ್.ಷಡಕ್ಷರಿ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಫ್ರೆಂಡ್‌ಶಿಪ್ ಡೇ ಕುರಿತ ಕಾರ್ಯಕ್ರಮದಲ್ಲಿ ಮಾತ ನಾಡಿ, ಗೆಳೆತನದ ಮಹತ್ವ, ನಂಬಿಕೆ ಕುರಿತಂತೆ ಉದಾಹರಣೆಗಳ ಸಹಿತ ವಿವರಿಸಿದರು. ನಿಕೋಲ್ ರಿಚಿ ಎಂಬುವರು ಒಂದು ಕಡೆ, ‘ಟ್ರೂ ಫ್ರೆಂಡ್ಸ್ ಆರ್ ಲೈಕ್ ಡೈಮಂಡ್ಸ್. ಬ್ರೈಟ್, ಬ್ಯೂಟಫುಲ್,  ವ್ಯಾಲ್ಯುವೇಬಲ್ ಅಂಡ್ ಆಲ್ವೇಸ್ ಇನ್ ಸ್ಮೈಲ್’ ಎಂದು ಹೇಳುತ್ತಾರೆ. ಆ ಮೂಲಕ ಸ್ನೇಹದ ಮಹತ್ವವನ್ನು ತಿಳಿಸುತ್ತಾರೆ. ನಿಮ್ಮ ಸ್ನೇಹಿತರಿಗೆ ನೀವೇಂದೂ ಓಟ್ ಆ- ಫ್ಯಾಷನ್ ಆಗುವುದಿಲ್ಲ. ನೀವು ಎಲ್ಲೇ ಇರಬಹುದು, ಏನೇ ಮಾಡುತ್ತಿರಬಹುದು, ನಿಮ್ಮ ಸ್ನೇಹ ಮಾತ್ರ ಹಾಗೆಯೇ ಇರುತ್ತದೆ. ದಿನದ ೨೪ ಗಂಟೆಯೂ ಅಥವಾ ಹೆಚ್ಚಿನ ಅವಧಿ ನಮ್ಮ  ಜತೆ ಇರುವವರು ಮಾತ್ರ ಸ್ನೇಹಿತರು ಎಂದಲ್ಲ. ಅವಶ್ಯಕತೆಯನ್ನು ಅರಿತು ಬರುವವನೇ ನಿಜವಾದ ಸ್ನೇಹಿತ ಎಂದು ತಿಳಿಸಿದರು.

ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನನ್ನ ಜೀವನದಲ್ಲಿ ಏನೆಲ್ಲ ಸಾಧನೆ ಮಾಡಿದ್ದೇನೋ ಅದಕ್ಕೆಲ್ಲಾ ದೇವರ ಅನುಗ್ರಹ, ತಂದೆ-ತಾಯಿಯ ಆಶೀರ್ವಾದ ಜತೆಗೆ ಸ್ನೇಹಿತರ ಸಹಾಯ ತುಂಬಾ ಮುಖ್ಯವಾಗಿದೆ. ‘ನಿನ್ನ ಬಳಿ ಬೆನ್ಜ್ ಕಾರು ಬಂದಾಗ ಬಹಳ ಜನ ಬರುತ್ತಾರೆ. ಆದರೆ, ನಿನ್ನ ಬಳಿ ಸೈಕಲ್ ಇದ್ದಾಗ ಜತೆಗಿದ್ದರಲ್ಲಾ, ಅವರೇ ನಿಜವಾದ ಸ್ನೇಹಿತರು’ ಎಂದು ನನ್ನ ತಂದೆ ಹೇಳುತ್ತಿದ್ದರು. ಅಂದು ಅವರಾಡಿದ ಮಾತು ಇಂದಿಗೂ ಸತ್ಯ. ನಾವು ಎಲ್ಲಿದ್ದರೂ, ಹೇಗಿದ್ದರೂ ಸ್ನೇಹಿತರನ್ನು ನೆನಪಿನಲ್ಲಿಡಬೇಕು ಎಂದರು.

ಬೇರೇನೂ ಕೇಳದೆ ಕೇವಲ ನಮ್ಮ ಸಾಂಗತ್ಯ ಭಯಸುವವನೇ ನಿಜವಾದ ಸ್ನೇಹಿತ ಎಂಬ ಮಾತಿದೆ. ಸ್ನೇಹಿತರು ನಿಮಗೆ ಊಟ ತಂದುಕೊಡುತ್ತಾರೆ. ಅದರೆ ಆಪ್ತ ಸ್ನೇಹಿತ ನಿಮ್ಮ ಊಟವನ್ನು ತಿನ್ನುತ್ತಾನೆ ಎನ್ನುವ ಮಾತು ಇದೆ. ಬಂಧು- ಬಾಂಧವರಿಗಿಂತ

ಹೆಚ್ಚಿನ ಮಹತ್ವವನ್ನು ಸ್ನೇಹಿತರಿಗೆ ನೀಡುತ್ತೇವೆ. ಒಡಹುಟ್ಟಿದವರು ಅಲ್ಲ, ರಕ್ತ ಸಂಬಂಧಿಗಳಲ್ಲದೇ ಇದ್ದರೂ ನಮಗೆ ಪರಿಚಿತ ರಾಗಿ ನಮ್ಮ ಜೀವನದಲ್ಲಿ ನೆಲೆಸುವಂತವರು, ಶಾಶ್ವತವಾಗಿ ಬಾಳುವಂತವರು ಸ್ನೇಹಿತರು. ಹೀಗಾಗಿ ಸ್ನೇಹಿತರಿಗೆ ವಿಶೇಷ ಸ್ಥಾನ-ಮಾನ ಎಲ್ಲರ ಜೀವದಲ್ಲೂ ಇರುತ್ತದೆ. ಒಬ್ಬ ಸ್ನೇಹಿತ ಎಂದು ಕರೆಸಿಕೊಳ್ಳಲೂ ಒಂದು ಯೋಗ್ಯತೆ ಇರಬೇಕು. ಸ್ನೇಹ ದೇವ ದುರ್ಲಭವಾದಂತಹ ಸಂಬಂಧ. ಅದು ಎಲ್ಲರಿಗೂ ಪ್ರಾಪ್ತಿಯಾಗುವಂತಹದಲ್ಲ. ಹೆಂಡತಿ, ಮಕ್ಕಳೊಂದಿಗೆ ಹೇಳಿಕೊಳ್ಳಲಾಗದ ಗುಟ್ಟನ್ನು ಸ್ನೇಹಿತನ ಬಳಿ ಹೇಳಿಕೊಳ್ಳುತ್ತೇವೆ. ಇದರಿಂದ ಸ್ನೆಹಿತರು ನಮ್ಮ ಹೃದಯಕ್ಕೆ ಎಷ್ಟು ಹತ್ತಿರದವರು ಎಂದು ತಿಳಿಯುತ್ತದೆ.

– ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ

ನನ್ನ ಫ್ರೆಂಡ್ಸ್ ಇಲ್ಲದೇ ಜೀವನವೇ ಇಲ್ಲ. ಜೀವನದಲ್ಲಿ ಸ್ನೇಹದ ಮಹತ್ವವನ್ನು ನನಗೆ ಮೊದಲ ಬಾರಿಗೆ ತಿಳಿಸಿದ ಗುರುಗಳು ಟಿ.ಎಸ್.ರಾಮಚಂದ್ರರಾಯರು. ನಂತರ ಜೆ.ಎಚ್.ಪಟೇಲ್. ಬಳಿಕ ವಿಶ್ವೇಶ್ವರ ಭಟ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮ ಯ್ಯ ಸ್ನೇಹದ ಬೆಲೆ ಏನು ಎಂದು ಕಲಿಸಿದರು. ವಿಶ್ವೇಶ್ವ ಭಟ್ಟರು ನನ್ನ ಜತೆ ಇದ್ದರೆ ಒಂದು ಎನ್‌ಸೈಕ್ಲೋಪೀಡಿಯಾ ಇದ್ದಹಾಗೆ. ಜೀವನದಲ್ಲಿ ಭಟ್ಟರು ಸ್ನೇಹಿತರಾಗಿ ಸಿಕ್ಕಿರುವುದು ನನ್ನ ಪೂರ್ವಜನ್ಮದ ಸುಕೃತ.

 ಎಂ. ಶ್ರೀನಿವಾಸ್ ವಿಧಾನ ಪರಿಷತ್ ಮಾಜಿ ಸದಸ್ಯ

ನಮ್ಮ ತಂದೆಗೆ ಇರುವ ಎಲ್ಲ ಸ್ನೇಹಿತರೂ ಆತ್ಮೀಯ ಸ್ನೇಹಿತರೆ. ಒಂದು ದಿನವೂ ಅವರು ಸ್ನೇಹಿತರಿಲ್ಲದೆ ಇರುವುದಿಲ್ಲ. ವಿಶ್ವೇಶ್ವರ ಭಟ್, ಮೋಹನ್ ಕುಮಾರ್ ಮತ್ತು ನನ್ನ ತಂದೆಯವರ ಮಧ್ಯೆ ಇರುವುದು ಒಂದುಶೇಷವಾದ ಸ್ನೇಹ.
– ವೀರೇಂದ್ರ ಷಡಕ್ಷರಿ

ಸ್ನೇಹಕ್ಕೆ ಮಹತ್ವ ನೀಡಿದ ಬೊಮ್ಮಾಯಿ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದರು. ಜತೆಗೆ ಅಧಿಕಾರ ಎಂದಿಗೂ ಶಾಶ್ವತವಲ್ಲ. ನಾವು ಹೊಂದಿರುವ ಸ್ನೇಹ ಮಾತ್ರ ಶಾಶ್ವತ ಎಂದು ಹೇಳುವ ಮೂಲಕ ಸ್ನೇಹದ ಬಗ್ಗೆ ಅವರಿಗಿದ್ದ ಪ್ರೀತಿ-ಗೌರವವನ್ನು ತೋರಿದ್ದರು ಎಂದು ಷಡಕ್ಷರಿ ನೆನಪಿಸಿಕೊಂಡರು. ಪುರಾಣ ಪುಣ್ಯಕಥೆಗಳಲ್ಲೂ ಸ್ನೇಹದ ಮಹತ್ವವನ್ನು ಸಾರಲಾಗಿದೆ. ಶ್ರೀರಾಮ- ಸುಗ್ರೀವ, ಕೃಷ್ಣ – ಕುಚೇಲ, ಕರ್ಣ-ಧುರ್ಯೋಧನ ಇವರಲ್ಲಿ ಪ್ರಮುಖರು. ಸ್ನೇಹಿತ ನಿಂದ ಏನು ಕಿತ್ತುಕೊಳ್ಳಬಹುದು ಎನ್ನುವುದಕ್ಕಿಂತ ಆತನಿಗೆ ನಾನೇನು ಮಾಡಬಹುದು ಎಂದು ಪರಸ್ಪರ ಯೋಚಿಸುವವನೇ ನಿಜವಾದ ಸ್ನೇಹಿತ. ಅದೇ ನಿಜವಾದ ಸ್ನೇಹ.

ಸ್ನೇಹದ ಮಹತ್ವ ಸಾರುವ ಮಾತು
ನಾವೀಗ ಕ್ಲೋಸ್ ಫ್ರೆಂಡ್ಸ್. ನಾವು ಸತ್ತ ಮೇಲೂ ಜತೆಗಿದ್ದರೆ ಗೋಸ್ಟ್ ಫ್ರೆಂಡ್ಸ್. ಮೊದಲು ನಾವು ಒಳ್ಳೆ ಸ್ನೇಹಿತರಾಗಬೇಕು.
ಆಗ ಮಾತ್ರ ನಮಗೆ ಒಳ್ಳೆಯ ಸ್ನೇಹಿತ ಸಿಗಲು ಸಾಧ್ಯ. ಹೊಸ ಸ್ನೇಹಿತನನ್ನು ಪಡೆಯುವುದು ಬಹಳ ಸುಲಭ. ಆದರೆ, ಪ್ರಾಮಾಣಿಕ ಸ್ನೇಹಿತನನ್ನು ಪಡೆಯುವುದು ತುಂಬಾ ಕಷ್ಟ.

error: Content is protected !!