ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 74
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಖ್ಯಾತ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ
ಬೆಂಗಳೂರು: ದೈವಿ ಸಮಾಜಕ್ಕೆ ದಾನವಾಗಿ ದುಡಿದು ಕೈಲಾಸ ಕಾಣುವುದು ಶರಣ ಸಂಸ್ಕೃತಿ. ಒಬ್ಬ ವ್ಯಕ್ತಿ ಅರೋಗ್ಯವಾಗಿದ್ದರೆ ಸಮಾಜದ ಆರೋಗ್ಯ ಉತ್ತಮ ವಾಗಿರುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶರಣ ಸಂಸ್ಕೃತಿಯೇ ಸಂಜೀವಿನಿ ಎಂದು ಖ್ಯಾತ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ತಿಳಿಸಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, 12ನೇ ಶತಮಾನ ದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳವಳಿ ಯಲ್ಲಿ ವೈಜ್ಞಾನಿಕ ಚಿಂತನೆಗಳನ್ನು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ವ್ಯಕ್ತಿ ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕವಾಗಿ ಫಲಕಾರಿಯಾದ ಜೀವನ ನಡೆಸುವು ದನ್ನು ಆರೋಗ್ಯ ಎಂದು ವಿಶ್ವಸಂಸ್ಥೆ ತಿಳಿಸುತ್ತದೆ. ಉತ್ತಮ ಆರೋಗ್ಯ ಹೊಂದಲು ಪ್ರತಿದಿನ ವ್ಯಾಯಾಮ, ಹಿತ-ಮಿತ ಆಹಾರ ಸೇವನೆಯ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮನುಷ್ಯ ಸಮಾಧಾನದ ಬದುಕು ರೂಪಿಸಿಕೊಳ್ಳಬೇಕು. ಕೋಪ ಆರೋಗ್ಯಕ್ಕೆ ಹಾನಿಕಾರ. ಅದು ಮಿದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ದ್ವೇಷದ ಪ್ರವೃತ್ತಿಯನ್ನು ಮೂಡಿಸುತ್ತದೆ. ಅಕ್ಕಮಹಾದೇವಿ ಹೇಳಿದಂತೆ ಸ್ತುತಿ ನಿಂದೆಗಳು ಬಂದರೆ ಕೋಪವ ತಾಳದೆ ಸಮಾಧಾನವಾಗಿರಬೇಕು ಎಂಬ ಮಾತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯವಂತರಾಗಿರಬೇಕಾದರೆ ಮೊದಲು ವ್ಯಸನಗಳಿಂದ ದೂರವಿರಬೇಕು. ಶರೀರಕ್ಕೆ ಬರುವ ಕಾಯಿಲೆ ಗುಣಪಡಿಸ ಬಹುದು. ಆದರೆ ಮನಸ್ಸಿಗೆ ಬರುವ ಕಾಯಿಲೆಯನ್ನು ಗುಣಪಡಿಸು ವುದು ಕಷ್ಟಸಾಧ್ಯ. ಹೀಗಾಗಿ ಮನಸ್ಸು ಸದಾ ಭಗವಂತನ ಚಿಂತೆಯಲ್ಲಿ ತೊಡಗಬೇಕು. ಒತ್ತಡ ಮುಕ್ತ ಜೀವನ ನಡೆಸಲು ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರಬಂದು ಧ್ಯಾನ-ಯೋಗಗಳ ಮೊರೆ ಹೋಗಬೇಕಿದೆ ಎಂದರು.
ಹಸಿವಿಲ್ಲದುಣಬೇಡ, ಹಸಿದು ಮತ್ತಿರಬೇಡ, ಬಿಸಿಗೂಡಿ ತಂಗುಳುಣಬೇಡ, ವೈದ್ಯನ ಬೆಸಸಲೇ ಬೇಡ ಸರ್ವಜ್ಞ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಂದರೆ ಹಸಿವು ಇಲ್ಲದೆ ಊಟ ಮಾಡಬೇಡ, ಹಸಿವಾಗಿದ್ದರೆ ಮಾತ್ರ ಊಟ ಮಾಡದೆ ಇರಬೇಡ. ಬಿಸಿಯಲ್ಲಿ ತಂಗಳ ಬೆರೆಸಿದ ಅನ್ನವನ್ನು ಉಣಬೇಡ. ಅಂದರೆ ಯಾವಾಗಲೂ ವೈದ್ಯನಿಂದ ದೂರವಿರುವಿರಿ ಎಂದು ಸರ್ವಜ್ಞನ ಸಾಲುಗಳನ್ನು ವಿವರಿಸಿದರು.
ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹ ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇದನ್ನು ವಚನದಲ್ಲಿ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ. ಅಂದರೆ ಕಳ್ಳತನ ಮಾಡಬೇಡ, ಕೊಲ್ಲಬೇಡ, ಸಿಟ್ಟು ಮಾಡಿಕೊಳ್ಳಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಶಂಶೆಯಲ್ಲಿ ತೊಡಗಬೇಡ- ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ-ಬಹಿರಂಗವೂ ಶುದ್ಧಿಯಾಗಿರುವುದು, ದೇವರನೊಲಿಸಿಕೊಳ್ಳಲು ಇದೇ
ಮಾರ್ಗ. ಆತ್ಮೋದ್ಧಾರಕ್ಕೆ ,ಆತ್ಮಶುದ್ಧಿಗೆ ಇದೇ ಸರಳ ಮಾರ್ಗ ಎಂದು ಬಸವಣ್ಣ ತಿಳಿಸಿzರೆ ಎಂದು ಹೇಳಿದರು.
***
ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಮಾತು, ವೃತ್ತಿಯಿಂದ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿzರೆ. ಅವರು ಮಕ್ಕಳ ಹೃದಯ ತಜ್ಞರೂ ಆಗಿದ್ದಾರೆ. ಚಿಕ್ಕ ಮಗುವಿನ ಹೃದಯದಲ್ಲಿ ತೊಂದರೆ ಕಂಡುಬಂದರೆ ಗುಣಪಡಿಸುತ್ತಾರೆ. ಶಸ್ತ್ರಕ್ರಿಯೆ ಇಲ್ಲದೆ ಮಕ್ಕಳಲ್ಲಿನ ಹೃದಯ ಸಂಬಂಧಿ ತೊಂದರೆಗಳನ್ನು ನಿವಾರಿಸಿದ ವಿಶ್ವದ
ಪ್ರಥಮ ವೈದ್ಯೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 37 ಚಿನ್ನದ ಪದಕ ಪಡೆದಿದ್ದಾರೆ. ಶಿಕ್ಷಣ, ಸಾಮಾಜಿಕ ಜೀವನದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು
ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರ ಭಾಷಣವು ಸ್ವಾರಸ್ಯ, ನಗುವಿನಿಂದ ಕೂಡಿರುತ್ತದೆ. ದಾಸರ ಪದಗಳು, ಚುಟುಕುಗಳು ನಗೆ ಚಟಾಕೆ ಅವರ ಮಾತಿನಲ್ಲಿ
ಕಾಣಬಹುದು. ಒಳ್ಳೆಯ ಹಾಡು, ನೃತ್ಯಗಾರ್ತಿಯೂ ಆಗಿದ್ದಾರೆ. ಅವರ ಸೇವೆ, ಪ್ರೋತ್ಸಾಹದಾಯಕ ಮಾತುಗಳು ಸಮಾಜಕ್ಕೆ ಸಿಗಲಿ.
– ಷಡಕ್ಷರಿ ಅಂಕಣಕಾರರು
***
ಆರೋಗ್ಯವಂತ ಜೀವನಕ್ಕೆ ಸಲಹೆಗಳು
ವಚನಗಳು ಸೃಜನಶೀಲ, ಸಮಾಜಮುಖಿ ಜೀವನಕ್ಕೆ ಅವಶ್ಯಕತೆ. ಶಿಕ್ಷಕರಿಗೂ ನೈತಿಕ ಮೌಲ್ಯ ಕಲಿಸಬೇಕು. ವೈದ್ಯ ವಿeನಕ್ಕಿಂತ ವಚನ ಸಾಹಿತ್ಯ ಒಂದು
ಹೆಜ್ಜೆ ಮುಂದೆ ಇದೆ. ನೂತನ ಶಿಕ್ಷಣ ಪದ್ಧತಿಯಲ್ಲಿ ವಚನ, ಸಂಸ್ಕೃತಿ ಅಳವಡಿಸುವ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಬಹುದು. ಎಷ್ಟೇ ವಿದ್ಯಾವಂತ ರಾದರೂ ಸಾವು ಬಂದೇ ಬರುತ್ತದೆ. ಹುಟ್ಟಿದವನು ಸಾಯಲೇಬೇಕು.
ಸಾಯುವ ಮೊದಲು ಬದುಕುವ ರೀತಿ ಕಲಿಯಬೇಕು. ಗಂಡ ಹೆಂಡತಿ ವಿವಾಹ ವಿಚ್ಛೇದನ ಹಂದಿಗಳು ಗಂಜಲದೊಳಗೆ ಮೂಸಿದಾಗೆ. ಸ್ನೇಹ ಪೂರಕವಾಗಿ ಬದುಕಬೇಕು. ನಮ್ಮ ಚಿಂತೆ ಹೋಗಲು ಭಗವಂತನ ಧ್ಯಾನ ಮಾಡಬೇಕು. ಯೋಗ ಮಾಡಿದರೆ ಶರೀರ, ಆತ್ಮ ಶುದ್ಧವಾಗಿರುತ್ತದೆ. ಚಿಂತೆ-ಚಿತೆಗೆ ಸೊನ್ನೆ ಯೊಂದೇ ವ್ಯತ್ಯಾಸ. ಚಿತೆ ಸತ್ತವರನ್ನು ಸುಟ್ಟರೆ, ಚಿಂತೆ ಬದುಕಿದವರನ್ನು ಸುಡುತ್ತದೆ