ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 75
ಗರ್ಭಿಣಿಯರ ಕಾಲಲ್ಲಿ ನೀರು ತುಂಬಿಕೊಳ್ಳುವುದು ಸಹಜ
ಮಗುವಿನ ಜನನದ ಹಂತದ ಬಗ್ಗೆ ತಿಳಿಯುವುದು ಅಗತ್ಯ: ಡಾ.ಕಾಮಿನಿ ರಾವ್
ಬೆಂಗಳೂರು: ಗರ್ಭಾವಸ್ಥೆಯು ಮಹಿಳೆಯರ ಜೀವನದಲ್ಲಿ ಒಂದು ಅದ್ಭುತ ಹಂತ. ಆಕೆ ತಾಯಿಯಾಗುವುದರಿಂದ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿ ಬದಲಾಗುತ್ತಾಳೆ.
ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ, ದೃಢವಾಗಿರುತ್ತಾಳೆ, ಹೆಚ್ಚು ಕಾಳಜಿ ವಹಿಸುತ್ತಾಳೆ. ಈ ಹಂತದಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುವು ದರಿಂದ, ತುಂಬಾ ತೊಂದರೆಗಳು ಎದುರಾಗಬಹುದು. ಆಗ ಗಂಡನ ಪ್ರೀತಿ, ಬೆಂಬಲ ಬೇಕು ಎಂದು ಸ್ತ್ರೀರೋಗ ತಜ್ಞೆ ಡಾ.ಕಾಮಿನಿ ರಾವ್ ತಿಳಿಸಿದರು.
‘ವಿಶ್ವವಾಣಿ ಕ್ಲಬ್‌ಹೌಸ್’ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಸಿರುತನ ಮೂರು ಹಂತದಗುತ್ತದೆ. ಗರ್ಭಿಣಿಯರು ಪೌಷ್ಟಿಕಾಹಾರ ತಿನ್ನಬೇಕು. ಮೊದಲ ಮೂರು ತಿಂಗಳಲ್ಲಿ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಎಷ್ಟೇ ಗಟ್ಟಿ ಮನಸು ಇದ್ದರೂ ಮಾನಸಿಕವಾಗಿ ಚಂಚಲತೆ ಇರುತ್ತದೆ ಎಂದರು.
ಪ್ರಥಮ ಹಂತದ ಬಸಿರುತನದಲ್ಲಿ (first Trimester) ಆಕೆಯ ಮನಸ್ಸನ್ನು ಗಮನಿಸಬೇಕು. ಕೂದಲು, ಚರ್ಮ, ಹಲ್ಲು ಬದಲಾಗುತ್ತಿರುತ್ತದೆ. ಒಸಡಿನಿಂದ ರಕ್ತಸ್ರಾವ ಆಗಬಹುದು. ಮಧುಮೇಹ, ರಕ್ತದೊತ್ತಡ ನಿಯಂತ್ರಣದಲ್ಲಿರ ಬೇಕು. ಇದು ವ್ಯತ್ಯಾಸವಾದಾಗ ತಕ್ಷಣ ಆಸ್ಪತ್ರೆಗೆ ಹೋಗಬೇಕು. ಗರ್ಭಿಣಿಯರು ದೈನಂದಿನ ತಪಾಸಣೆ, ಪೌಷ್ಟಿಕಾಂಶ ಆಹಾರ ಸೇವನೆ ಮಾಡುವುದು ಮುಖ್ಯ. ಪೌಷ್ಟಿಕಾಹಾರ, ವ್ಯಾಯಾಮ ಮಾಡುವ ಮೂಲಕ ಮಾನಸಿಕವಾಗಿ ಸಂತೋಷ ವಾಗಿರಬೇಕು. ಗಂಡಸರು ಅವರನ್ನು ಖುಷಿಪಡಿಸಬೇಕು. ಎರಡನೇ ಹಂತದ ಬಸಿರುತನದಲ್ಲಿ ಮಗುವಿನ ಚಲನವಲನ ಗೊತ್ತಾಗುತ್ತದೆ. ಗರ್ಭಿಣಿಯರ ಕಾಲಲ್ಲಿ ನೀರು ತುಂಬಿಕೊಳ್ಳುವುದು ಸಹಜ. ಮಗುವಿಗೆ ಗಂಡ ಪೋಷಣೆ ಮಾಡಿದಾಗ ಆರೋಗ್ಯವಂತ ಮಗು ಜನಿಸಲು ಸಾಧ್ಯ ಎಂದು ತಿಳಿಸಿದರು.
ಗಂಡನೂ ಸ್ಥಳದಲ್ಲಿ ಇರಬೇಕು: ಮೂರನೇ ಹಂತದ ಬಸಿರುತನ ೭-೯ ತಿಂಗಳಲ್ಲಿ ಕಾಣಬಹುದು. ಮಗುವಿನ ಸಂಪೂರ್ಣ ದೇಹವನ್ನು ಪರೀಕ್ಷಿಸುತ್ತಾರೆ. ಈ
ಹಂತದಲ್ಲಿ. ಪ್ರತಿಯೊಂದು ಹಂತದಲ್ಲಿ ಗಂಡ- ಹೆಂಡತಿಯ ನಿರ್ಧಾರ ಪ್ರಮುಖ ಮುಖ್ಯ. ಮಗು ಆರೋಗ್ಯದಿಂದ ಕೂಡಿರಬೇಕು. ಮಗು ಚೆನ್ನಾಗಿ ಬೆಳೆದು,
ಅಭಿವೃದ್ಧಿಯಾಗಿದ್ದರೆ ಹೆರಿಗೆಗೆ ಹೇಗೆ ತಯಾರಿಯಾಗಬೇಕು ಎಂಬುದು ತಿಳಿಯಬೇಕು. ಹೆರಿಗೆ ನೋವು ಬರುವುದು ಗೊತ್ತಾಗುವುದಿಲ್ಲ. ಹೆರಿಗೆ ಸಂದರ್ಭದಲ್ಲಿ ಗಂಡನೂ ಸ್ಥಳದಲ್ಲಿ ಇರಬೇಕು ಎಂದು ಮಾಹಿತಿ ನೀಡಿದರು. ಸಾಮಾನ್ಯ ಹೆರಿಗೆ ಮಾಡಲು ಮೊದಲೇ ನಿರ್ಧರಿಸಲಾಗುತ್ತದೆ. ಏಕೆಂದರೆ ಮಗುವಿನ ಹೃದಯ ಬಡಿತದಲ್ಲಿ ಏರುಪೇರು ಆಗಿದ್ದಾಗ ಸಿಸೇರಿನ್ ಮಾಡಬೇಕಾಗುತ್ತದೆ. ಮಗು ಬರುವ ಜಾಗ ಕಡಿಮೆ ಇದ್ದರೆ ಸಿಸೇರಿನ್ ಮಾಡಬೇಕಾಗುತ್ತದೆ. ಶೇ.೮೦ರಷ್ಟು ನಾರ್ಮಲ್ ಡೆಲವರಿ, ಶೇ.೨೦ರಷ್ಟು ಸಿಸೇರಿನ್ ಚಿಕಿತ್ಸೆ ಮೂಲಕ ಡೆಲವರಿ ನಡೆಯುತ್ತಿದೆ. ಸಿಸೇರಿನ್ ಮಾಡಲು ನಾನಾ ಕಾರಣಗಳಿರುತ್ತವೆ. ಹೆರಿಗೆ ಸಂದರ್ಭ ದಲ್ಲಿ ಎಷ್ಟು ಕಷ್ಟ ಎಂದು ಗಂಡ ಅರ್ಥ ಮಾಡಿಕೊಳ್ಳಬೇಕು. ಗಂಡನಿಗೂ ಗೊತ್ತಾಗಬೇಕು ಮಗುವಿನ ಜನನದ ಹಂತದ ಬಗ್ಗೆ ತಿಳಿದು ಕೊಳ್ಳಬೇಕು ಎಂದು ವಿವರಿಸಿದರು.
ಹೆಚ್ಚಿನ ಪ್ರಮಾಣದ ಮಾನಸಿಕ ಬೆಂಬಲ
ವೈದ್ಯ ಡಾ.ಜಿ.ಜಿ.ಹೆಗಡೆ ಮಾತನಾಡಿ, ಮಗು ಹೆತ್ತ ಮೇಲೆ, ಹೆಂಡತಿಗೆ ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದ ಮಾನಸಿಕ ಬೆಂಬಲ ಬೇಕಾಗುತ್ತದೆ. ಮುಂಚೆ
ಮಾಡುತ್ತಿದ್ದ ಸಹಾಯಗಳು, ಅಕ್ಕರೆ, ಪ್ರೀತಿ ಎಲ್ಲವೂ ಕೂಡ ಮುಂದುವರಿಯಬೇಕು. ಉದ್ಯೋಗಸ್ಥ ಪತ್ನಿಯಾಗಿದ್ದಲ್ಲಿ ಸಮಾನ ಜವಾಬ್ದಾರಿಗಳನ್ನು ಪತಿಯೂ ತೆಗೆದುಕೊಳ್ಳಲಿ ಎಂದು ಅಪೇಕ್ಷಿಸುವುದು ತಪ್ಪಲ್ಲ. ಪತಿ ಪಾಲಿಸಲೇಬೇಕಾದ ಅಂಶವಿದು. ಗಂಡ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಯಾವುದೇ ವೈದ್ಯ ಕೀಯ ಪರೀಕ್ಷೆಗೆ ಗಂಡ ಬರಬೇಕು. ನೂರು ಯಜ್ಞ ಮಾಡುವುದು, ತಾಯಿಯಾಗುವುದು ಬಹಳ ಕಷ್ಟ. ತಾಯಿ ಅನ್ನುವುದು ವಿಶ್ವಾಸ. ಅಪ್ಪ ಹೇಳುವುದು ನಂಬಿಕೆ ಎಂದರು.
ಗಂಡ ಭಾವನಾತ್ಮಕವಾಗಿ ತೊಡಗಲಿ
ನಮ್ಮ ದೇಶದ ಸಂಸ್ಕೃತಿಯಲ್ಲಿ ತಾಯಿಗೆ ದೊಡ್ಡ ಗೌರವವಿದೆ. ಆದರೆ ತಾಯಂದಿರ ಮರಣ ಪ್ರಮಾಣ ಹೆಚ್ಚಿದೆ. ಮಹಿಳೆ ಹೆರಿಗೆಯಾಗುವ ಮಷಿನ್‌ಗಳು ಎಂದು ತಿಳಿದಿದ್ದೇವೆ. ಕಾಮಕ್ಕಾಗಿ ಮದುವೆ ಆಗುವುದಲ್ಲ. ಅದು ಎರಡು ಕುಟುಂಬಗಳ ಮಿಲನ ಹಾಗೂ ಸಂತಾನೋತ್ಪತ್ತಿ ಕ್ರಿಯೆ. ಗರ್ಭಿಣಿಯರ ಆರೈಕೆಯಲ್ಲಿ ಗಂಡನ ಪಾತ್ರವಿದೆ. ಜಗತ್ತಿನಲ್ಲಿ ೮೦ ಲಕ್ಷ ಯೋನಿಗಳಿವೆ. ಅವೆಲ್ಲವೂ ಸಂತಾನೋತ್ಪತ್ತಿ ಆಗುತ್ತದೆ. ಮನುಷ್ಯ ಬದಲಾಗುತ್ತಾ ವಿಜ್ಞಾನದ ಮೇಲೆ ಅವಲಂಬನೆಯಾಗು ತ್ತಿzನೆ. ಗರ್ಭಾವಸ್ಥೆ ಎಂಬುದು ನಿಸರ್ಗದತ್ತವಾದುದು. ತಾಯಿ ಆದವರ ಮರಣ ತಪ್ಪಿಸುವುದು ವಿeನದ ಗುರಿ. ಗಂಡಸರು ಭಾವನಾತ್ಮಕವಾಗಿ ತೊಡಗಿಸಿ ಕೊಳ್ಳಬೇಕು. ಗರ್ಭಿಣಿ ಆದ ಮೇಲೆ ನಮ್ಮ ಕೆಲಸ ಮುಗೀತು ಎನ್ನುವುದಲ್ಲ. ಆಕೆಯ ಆಸೆ ಆಕಾಂಕ್ಷೆಗಳಿಗೆ ಸ್ಪಂದಿಸುವಂತಿರಬೇಕು ಎಂದು ವೈದ್ಯ ಡಾ.ಜಿ.ಜಿ. ಹೆಗಡೆ ತಿಳಿಸಿದ್ದಾರೆ.
***
ಗರ್ಭಿಣಿಯರ ಬಗ್ಗೆ ಇರಲಿ ಕಾಳಜಿ
ಜನಸಂಖ್ಯೆ ನಿಯಂತ್ರಣ ಆಗಲಿ. ಮನೆಗೆ ಎರಡು ಮಕ್ಕಳು ಮಾತ್ರ ಸಾಕು.
ಸ್ತನ್ಯಪಾನ್ಯ ಕುರಿತು ಪಾಠ ಮಾಡಬೇಕಾದ ಅನಿವಾರ್ಯ ಬಂದಿದೆ. ಮಗುವಿಗೆ ಎದೆ ಹಾಲು ನೀಡಿದರೆ ಸೌಂದರ್ಯ ಹಾಳಾಗುತ್ತದೆ ಎಂಬುದು ತಪ್ಪು. ಡಿ
ಆರೋಗ್ಯಕರ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗುವುದು ತಪ್ಪಲ್ಲ. ಲೈಂಗಿಕ ಕ್ರಿಯೆ ದೇಹದ ಮಿಲನವಲ್ಲ. ಮನಸುಗಳ ಮಿಲನ.
ಗರ್ಭಿಣಿಯರ ಆರೈಕೆ ಮಾಡುವ ಗಂಡ, ಆಕೆಯ ಮನೋಭಾವಕ್ಕೆ ಸ್ಪಂದಿಸಬೇಕು.
***
ಕಾಮಿನಿ ರಾವ್ ಅವರದು ನಮ್ಮ ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರ ಕೊಡುಗೆ ಅನನ್ಯ, ಅಸಾಧಾರಣ. ಸಂತಾನೋತ್ಪತ್ತಿ ವಿಭಾಗದಲ್ಲಿ ಹೆಚ್ಚು ಪ್ರಾವೀಣ್ಯತೆ ಹೊಂದಿzರೆ. ಭ್ರೂಣ ಹತ್ಯೆ ತಡೆ ಬಗ್ಗೆ ಅಭಿಯಾನ ಮಾಡಿದವರು. ಹೆಣ್ಣಿನ ಸ್ಥಾನ ಮಾನ ಎತ್ತರಿಸಲು ಶ್ರಮಿಸಿದವರು. ಇವರ ೫೦ಕ್ಕೂ ಹೆಚ್ಚು ವೈದ್ಯಕೀಯ ಪುಸ್ತಕಗಳು ಪಠ್ಯವಾಗಿದೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು