Tuesday, 20th February 2024

ಜಗತ್ತಿನ ಬಲಿಷ್ಠ ವ್ಯಕ್ತಿಯಾಗಿದ್ದ ಎಲಿಜಬೆತ್

ಸಂವಾದ – ೩೮೫

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬ್ರಿಟನ್ ರಾಣಿಯ ಸ್ಮರಣೆ: ಮೂಕನಹಳ್ಳಿ ಉಪನ್ಯಾಸ

ಬೆಂಗಳೂರು: ಸಾಮಾನ್ಯ ಜನರ ಬದುಕಿನಗೂ ರಾಜಮನೆತದ ಬದುಕಿಗೂ ಅಜಗ ಜಾಂತರ. ಚಿನ್ನದ ಪಂಜರದ ಬದುಕಿನ ಪಂಜರದಲ್ಲಿದ್ದರೂ ರಾಣಿ ಎಲಿಜಬೆತ್-೨ ಅವರಂತಹ ಬಲಿಷ್ಠರು ಮತ್ತೊಬ್ಬರಿಲ್ಲ. ಹೊಸ ಸಂಪ್ರದಾಯಗಳಿಗೆ ಅಡಿಪಾಯ
ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಲೇಖಕ ರಂಗಸ್ವಾಮಿ ಮೂಕನಹಳ್ಳಿ ಬಣ್ಣಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ‘ರಾಣಿ ಎಲಿಜಬೆತ್ ಎಂಬ ಅದ್ಭುತ’ ಎಂಬ ವಿಷಯ ಕುರಿತು ಮಾತನಾಡಿ, ಕ್ವೀನ್ ಎಲಿಜಬೆತ್ ಹೆಣ್ಣು ಮಕ್ಕಳಿಗೂ ರಾಜಮನೆತನದ ರುವಾರಿಯಾಗಲು ಅವಕಾಶ ಕಲ್ಪಿಸಿಕೊಟ್ಟರು. ಎಲಿಜಬೆತ್ ಇಂಗ್ಲೆಂಡಿನಲ್ಲಿ ಜನರಿಗೆ ಅನುಕೂಲ ವಾಗಲು ಬಳಷ್ಟು ವಿನಾಯಿತಿ ನೀಡಿದ್ದಾರೆ ಎಂದರು.

ರಾಜ ಕುಟುಂಬದವರು ಆರೋಗ್ಯವಂತರಾಗಿದ್ದಾಗ ರಕ್ತ ಶೇಖರಣೆ ಮಾಡುತ್ತಾರೆ. ಅವರಿಗೆ ಕಾಯಿಲೆ ಬಂದಾಗ ಅವರದೇ ಆದ ರಕ್ತದ ಬಳಸುತ್ತಾರೆ. ಅವರು ಯಾವುದೇ ದೇಶಕ್ಕೆ ಹೋದಾಗ ಕೂದಲು ಕತ್ತರಿಸಿಕೊಂಡರೆ, ಆ ಕತ್ತರಿಸಿದ ಕೂದಲನ್ನು ಇಂಗ್ಲೆಂಡ್‌ಗೆ ತರುತ್ತಿದ್ದರು. ಆ ಕೂದಲು ಪ್ರಯಾಣ ಮಾಡಿದ ದೇಶದಲ್ಲಿ ಬಿಡುವುದಿಲ್ಲ. ಆಕೆಯ ಉಗುರು, ಮಲ, ಮೂತ್ರಗಳನ್ನೂ ತಂದು ಇಂಗ್ಲೆಂಡಿನಲ್ಲಿ ವಿಸರ್ಜಿಸಲಾಗುತ್ತಿತ್ತು ಎಂಬಂಥ ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡರು.

ಜಯಚಾಮರಾಜ ಒಡೆಯರ್ ಅವರು ಕಾಲೇಜಿನ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಣಿ ಎಲಿಜಬೆತ್ ಅವರನ್ನು ಕರೆಸಲು ವೈಸರಾಯ್ ಲಾರ್ಡ್ ಕರ್ಜನ್ ಅವರನ್ನು ಕೇಳುತ್ತಾರೆ. ಅವರು ಮೇಡಂ ಅವರು ಬಹಳ ಬ್ಯುಸಿ ಎನ್ನುತ್ತಾರೆ. ಆಗ ಜಯಚಾಮ ರಾಜೇಂದ್ರ ಒಡೆಯರ್ ಎಲಿಜಬೆತ್ ಅವರನ್ನು ನೇರವಾಗಿ ಭೇಟಿ ಮಾಡಿ ಆಹ್ವಾನಿಸುತ್ತಾರೆ. ಅದರಂತೆ ಎಲಿಜಬೆತ್ ರಾಣಿ ಮೈಸೂರಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಮೂಲಕ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಎಲಿಜಬೆತ್ ರಾಣಿ ಗೌರವ ಸೂಚಿಸಿದರು ಎಂದು ತಿಳಿಸಿದರು.

ಎಲಿಜಬೆತ್-೨ ಅತಿ ಹೆಚ್ಚು ಬಾರಿಗೆ ಭೇಟಿ ನೀಡಿದ ದೇಶ ಕೆನಡಾ
ತನ್ನ ೭೦ ವರ್ಷಕ್ಕೂ ಹೆಚ್ಚಿನ ಆಡಳಿತದ ಅವಧಿಯಲ್ಲಿ ರಾಣಿ ಎಲಿಜಬೆತ್ ೧೦೦ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ೨೦೧೬ರಲ್ಲಿ ಬಕಿಂಗ್‌ಹ್ಯಾಂ ಅರಮನೆ ನೀಡಿದ ಹೇಳಿಕೆಯಲ್ಲಿ, ರಾಣಿ ಕನಿಷ್ಠ ೧೦,೩೨,೫೧೩ ಮೈಲಿ (೧೬,೬೧,೬೮೮ ಕಿಲೋ ಮೀಟರ್) ಪ್ರಯಾಣ ಮಾಡಿದ್ದಾರೆ ಮತ್ತು ೧೧೭ ದೇಶಗಳನ್ನು ಸಂದರ್ಶಿಸಿದ್ದಾರೆ ಎಂದಿತ್ತು. ಅವರು ಅತಿ ಹೆಚ್ಚು ಬಾರಿಗೆ ಭೇಟಿ ನೀಡಿದ ದೇಶ ಕೆನಡಾ. ಅವರ ಆಳ್ವಿಕೆಯ ಅವಧಿಯಲ್ಲಿ ಇಂಗ್ಲೆಂಡ್ ೧೫ ಪ್ರಧಾನ ಮಂತ್ರಿಗಳನ್ನು ಕಂಡಿದೆ. ಅವರು ವಿನ್‌ಸ್ಟನ್
ಚರ್ಚಿಲ್‌ರಿಂದ ಇತ್ತೀಚಿನ ಲಿಜ್ ಟ್ರಸ್ ಅವಧಿಯ ತನಕ ಆಡಳಿತ ನಡೆಸಿದ್ದಾರೆ.

ರಾಣಿಯ ಆಡಳಿತ ಅವಧಿಯಲ್ಲಿ ಅಮೆರಿಕವನ್ನು ೧೪ ಅಧ್ಯಕ್ಷರು ಆಳಿದ್ದಾರೆ. ಅವರು ೭ ಜನ ಪೋಪ್‌ಗಳನ್ನೂ ನೋಡಿದ್ದಾರೆ ಎಂದು ರಂಗಸ್ವಾಮಿ ಮೂಕನಹಳ್ಳಿ ಹೇಳಿದರು.

error: Content is protected !!