ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ‘ವಿಶ್ವವಾಣಿ’ ರೂಪಿಸಿದ ವಿಶೇಷ ಸಂಚಿಕೆಗೆ (ಜ.೨೩) ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆಗಳು ಸೇರಿದಂತೆ, ಪತ್ರ ಹಾಗೂ ದೂರವಾಣಿ ಮುಖೇನ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ಆ ಪೈಕಿ ಕೆಲವಷ್ಟು ಅಭಿಪ್ರಾಯ ಮತ್ತು ಹಾರೈಕೆಗಳನ್ನು ಹೆಕ್ಕಿ ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಫ್ರೇಮ್ ಹಾಕಿಸಿಡಬೇಕು
‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ಸಹಸ್ರ ನಮನಗಳು. ಅಭೂತಪೂರ್ವ ಗಳಿಗೆ ಯಾದ ಅಯೋಧ್ಯೆಯ ಬಾಲರಾಮನ ಪ್ರತಿಷ್ಠಾಪನೆಯ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಕೋಟ್ಯಂತರ ಜನರು ಕಾದಿದ್ದು ಸರ್ವವಿದಿತ. ಅಂಥವರಲ್ಲಿ ನಾನೂ ಒಬ್ಬನಾಗಿದ್ದೆ. ನಿಮ್ಮ ಹಾಗೂ ಪತ್ರಿಕೆಯ ಅಸಂಖ್ಯ ಅಭಿಮಾನಿಗಳಲ್ಲಿ ನಾನೂ ಒಬ್ಬ. ನಿಮ್ಮ ಸಂಪಾದಕತ್ವವಿದ್ದಾಗ ವಿಜಯ ಕರ್ನಾಟಕ, ಕನ್ನಡಪ್ರಭ ಪತ್ರಿಕೆಗಳನ್ನು ತಪ್ಪದೆ ಕೊಂಡು ಓದುತ್ತಿದ್ದೆ. ಈಗ ಅದೇ ರೀತಿ ‘ವಿಶ್ವವಾಣಿ’ಯ ಶಾಶ್ವತ ಓದುಗನಾಗಿದ್ದೇನೆ. ಕೆಲ ವರ್ಷಗಳ ಹಿಂದೆ ನಿಮ್ಮ ಕಚೇರಿಗೂ ಒಂದೆರಡು ಬಾರಿ ಸೌಜನ್ಯದ ಭೇಟಿ ನೀಡಿದ್ದುಂಟು. ಈ ಪತ್ರ ಬರೆಯಲು ಪ್ರೇರಣೆಯಾಗಿದ್ದು ಐತಿಹಾಸಿಕ ವರದಿ ಮತ್ತು ವಿಭಿನ್ನ ಹೂರಣವನ್ನು ಒಳಗೊಂಡಿದ್ದ ಜ.೨೩ರ ವಿಶ್ವವಾಣಿಯ ವಿಶೇಷ ಆವೃತ್ತಿ. ಸಾಧಾರಣ ವಾಗಿ ದಿನಪತ್ರಿಕೆಯು ಓದಿದ ಮೇಲೆ ಮೂಲೆಗುಂಪಾಗುತ್ತದೆ.
ನಾನು ಮಾತ್ರ, ಅಯೋಧ್ಯೆಯಲ್ಲಿನ ಜ.೨೨ರ ಐತಿಹಾಸಿಕ ಕ್ಷಣಗಳನ್ನು ಒಳಗೊಂಡಿರುವ ಪತ್ರಿಕೆಯನ್ನು ಜೋಪಾನವಾಗಿ ಇಡಬೇಕೆಂದುಕೊಂಡಿದ್ದೆ. ಆದರೆ, ವಿಶ್ವವಾಣಿಯ ಈ ವಿಶೇಷ ಆವೃತ್ತಿಯು ಸಂಗ್ರಹ ಯೋಗ್ಯ ಮಾತ್ರವಲ್ಲ, ಫ್ರೇಮ್ ಹಾಕಿಸಿ ಇಡುವಷ್ಟು ಸುಂದರವಾಗಿದೆ. ಪುಟದ ವಿನ್ಯಾಸ, ವಿಷಯ ಸಂಯೋಜನೆ, ನಿರೂಪಣೆ, ಒಕ್ಕಣೆ, ಪೂರಕ/ಸಾಂದರ್ಭಿಕ ಚಿತ್ರಗಳು, ಶೀರ್ಷಿಕೆಗಳು, ಮಾಹಿತಿ ಗಳು ಹೀಗೆ ಪ್ರತಿಪುಟವೂ ಪುಟಕ್ಕಿಟ್ಟ ಚಿನ್ನದಂತೆ ಅಮೂಲ್ಯ ಸಂಗ್ರ ಹದ ಕಣಜವಾಗಿ ಮೂಡಿಬಂದಿದೆ. ಮಧ್ಯದಲ್ಲೆಲ್ಲೂ ಜಾಹೀರಾತಿನ ಕಿರಿಕಿರಿಯಿಲ್ಲದೆ, ಬೇರೆ ವಿಷಯಗಳು ನುಸುಳದೆ ಅಚ್ಚುಕಟ್ಟಾ ಗಿದ್ದು, ತುಂಬು ಮುತುವರ್ಜಿಯಿಂದ ಸಿದ್ಧಪಡಿಸಿರುವುದು ಎದ್ದುಕಾಣುತ್ತದೆ. ಇದಕ್ಕಾಗಿ ಶ್ರಮಿಸಿದ ನಿಮಗೆ ಹಾಗೂ ನಿಮ್ಮ ಎಲ್ಲ ಸಿಬ್ಬಂದಿಗೆ ಹೃತ್ಪೂರ್ವಕ ನಮನಗಳು ಮತ್ತು ಅಭಿನಂದನೆಗಳು.
– ವಿ. ಎಸ್. ಕಳಸೇಶ್ವರ ಬೆಂಗಳೂರು
ಸರ್ವವೂ ರಾಮಮಯ
ಜ.೨೩ರ ‘ವಿಶ್ವವಾಣಿ’ ಸಂಪೂರ್ಣ ರಾಮಮಯ ವಾಗಿತ್ತು. ಪತ್ರಿಕೆ ಓದಿದ ಮೇಲೆ ಅಯೋಧ್ಯೆಗೇ ಹೋಗಿಬಂದಹಾಗೆ ಆಯಿತು. ಅಲ್ಲಿಗೆ ಹೋಗಿದ್ದರೂ ಇಷ್ಟು ವಿಷಯ ತಿಳಿಯುತ್ತಿರಲಿಲ್ಲವೇನೋ? ರಾಮ ಮತ್ತು ಕರ್ನಾಟಕದ ನಂಟು ತುಂಬಾ ಇಷ್ಟವಾಯಿತು. ಸಂಪೂರ್ಣ ರಾಮಾಯಣವನ್ನು ಎಷ್ಟು ಚೆನ್ನಾಗಿ ಕೊಟ್ಟಿ ದ್ದೀರಿ. ಒಟ್ಟಿನಲ್ಲಿ ಇದು ಸಂಗ್ರಹಿಸಿಡಬೇಕಾದ ಸಂಚಿಕೆ.
– ರಾಘವೇಂದ್ರ ಜೋಯಿಸ್ ಮೈಸೂರು
‘ಇತಿಹಾಸಮಲ್ತು, ಬರಿ ಕಥೆಯಲ್ತು, ಕಥೆ ತಾಂ ನಿಮಿತ್ತ ಮಾತ್ರಂ, ಆತ್ಮಕೆ ಶರೀರದೊಲಂತೆ ಮೆಯ್ವೆತ್ತುದಿಲ್ಲಿ ರಾಮನ ಕಥೆಯ ಪಂಜರದಿ ರಾಮರೂಪದ ಪರಾತ್ಪರನ್ ಪುರುಷೋತ್ತಮನ ಲೋಕಲೀಲಾ ದರ್ಶನಂ..’. ಸಂಗ್ರಹಯೋಗ್ಯ ಸಂಚಿಕೆ. ಅದ್ಭುತ, ಅಭೂತಪೂರ್ವ ಮುಖಪುಟಕ್ಕೆ ಧನ್ಯವಾದಗಳು. ಜೈ ಶ್ರೀರಾಮ್.
– ಎನ್.ಎಸ್. ಸುದರ್ಶನ
ಪ್ರೀತಿಯ ಭಟ್ಟರ ನಿರ್ದೇಶನದಲ್ಲಿ ಮೂಡಿಬಂದ ಪತ್ರಿಕೆಯ ವಿಶೇಷ ಸಂಚಿಕೆಯು ಜೀವನ ಪೂರ್ತಿ ಕಾಯ್ದಿಟ್ಟುಕೊಳ್ಳಬೇಕಾಗಿರುವಂಥದ್ದು.
-ಗಣೇಶ್ ದೇಸಾಯಿ ಗಾಯಕರು, ಬೆಂಗಳೂರು
ಅದ್ಭುತ ಸಂಚಿಕೆ
‘ಬಾಲರಾಮ ಈಗ ಲೋಕಾಭಿರಾಮ’ ಶೀರ್ಷಿಕೆ ಹೊತ್ತುತಂದ ‘ವಿಶ್ವವಾಣಿ’ ಮುಖಪುಟ ಅದ್ಭುತವಾಗಿತ್ತು. ಸಾಕ್ಷಾತ್ ಶ್ರೀರಾಮಚಂದ್ರನೇ ಎದುರಿಗೆ ನಿಂತಂತೆ ಭಾಸವಾಗಿ, ಪ್ರತಿಯೊಬ್ಬರ ದೇವರಮನೆ ಅಲಂಕರಿಸುವಂತಿತ್ತು. ಜತೆಗೆ ಪ್ರತಿಯೊಂದು ಪುಟವೂ ನವನವೀನವಾಗಿತ್ತು. ಅಯೋಧ್ಯೆ ಯಲ್ಲಿ ನಡೆದ ರಾಮನ ಪ್ರಾಣಪ್ರತಿಷ್ಠೆಯ ಸಂಪೂರ್ಣ ವಿವರವು ಕಣ್ಣಿಗೆ ಕಟ್ಟುವಂತೆ ವರದಿಯಾಗಿದೆ. ಸಂಪೂರ್ಣ ರಾಮಾಯಣವನ್ನು ಕೇವಲ ೨೨ ದೃಶ್ಯಗಳಲ್ಲಿ ಚುಟುಕಾಗಿ ವರ್ಣನೆ ಮಾಡಿರುವುದಂತೂ ಅಮೋಘ. ‘ವಿಶ್ವವಾಣಿ’ಗೆ ಹ್ಯಾಟ್ಸಾಫ್!
– ಬೆಂ.ಮು.ಮಾರುತಿ ಬೆಂಗಳೂರು
ನಾವೆಲ್ಲರೂ ಧನ್ಯರೇ
ಮುಖಪುಟದಲ್ಲೇ ಬಾಲರಾಮನನ್ನು ರಾರಾಜಿಸುವಂತೆ ಮಾಡಿದ ವಿಶ್ವವಾಣಿ ಪತ್ರಿಕೆಯು ಸಂಗ್ರಹಯೋಗ್ಯ ಸಂಚಿಕೆಯೇ ಸರಿ. ಪುಟಪುಟವೂ ರಸದೌತಣ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಿದ ಪ್ರಧಾನಿಯವರು ಎಷ್ಟು ಭಾಗ್ಯಶಾಲಿಗಳೋ, ರಾಮ ಜನ್ಮಭೂಮಿಯನ್ನು ಮರಳಿ ಪಡೆಯಲು ಹೋರಾಡಿದ, ಸಮಾರಂಭದಲ್ಲಿ ಭಾಗವಹಿಸಿದ, ವೀಕ್ಷಿಸಿದ, ಸುದ್ದಿಯನ್ನು ಅರಿತ ಎಲ್ಲರೂ ಧನ್ಯರೇ. ಇಂಥ ಅವಕಾಶ ಜೀವನದಲ್ಲಿ ಇನ್ನೊಮ್ಮೆ ಯಾರಿಗೂ ಸಿಗಲಾರದು. ಇಸ್ಕಾನ್‌ನಂಥ ಹಲವು ದೇಗುಲಗಳಲ್ಲಿ ಟಿವಿಯ ನೇರಪ್ರಸಾರದ ಜತೆಗೇ ಏರ್ಪಡಿಸಿದ ಭಜನೆ, ಪ್ರವಚನ, ಕೀರ್ತನೆ, ಪೂಜೆ, ಪ್ರಸಾದ ವಿತರಣೆ ಎಲ್ಲವೂ ಅಚ್ಚುಕಟ್ಟೇ. ಇದಕ್ಕೆಲ್ಲಾ ಆ ಕೌಸಲ್ಯಾ ಕುವರನ ಅನುಗ್ರಹವೇ ಕಾರಣ.
ರಾಮನಂಥ ಮಗ, ಅಣ್ಣ, ಪತಿ, ಶಿಷ್ಯ, ಗೆಳೆಯ, ದುಷ್ಟ ಸಂಹಾರಕ ಹಾಗೂ ರಾಜನಿರಬೇಕು ಎಂದು ಜನರು ಬಯಸುವ ಕಾರಣವೇ ಆತ ಲೋಕಾಭಿರಾಮ.
-ಬಿ.ಎನ್.ಭರತ್ ಬೆಂಗಳೂರು
ಸರ್ ನಮಸ್ತೆ, ಸಂಚಿಕೆ ಅತ್ಯದ್ಭುತವಾಗಿ ಮೂಡಿ ಬಂದಿದೆ. ಮೊನ್ನೆ ಬಾಲರಾಮನ ಮೂರ್ತಿಯನ್ನು ನೋಡಿ ಎಮೋಷನಲ್ ಆಗಿ ಆನಂದಬಾಷ್ಪ ಸುರಿಸಿದ್ದೆವು. ಅದನ್ನು ಪತ್ರಿಕೆಯ ಮುಖಪುಟದಲ್ಲಿ ನೋಡಿದಾಗ ಮತ್ತೆ ಆನಂದಬಾಷ್ಪ. ಇದು ಸಂಗ್ರಹಯೋಗ್ಯ ಸಂಚಿಕೆ, ನಮ್ಮ ಮುಂದಿನ ಪೀಳಿಗೆಗೆ
ತೋರಿಸಲು ತೆಗೆದಿರಿಸುತ್ತೇನೆ. ನಿಮಗೆ ಮತ್ತು ನಿಮ್ಮ ತಂಡಕ್ಕೆ ಅಭಿನಂದನೆಗಳು.
– ವಿನುತ ನಿಶ್ಚಿತ್ ಕಿರಣ್
ಈ ರೀತಿಯೂ ಶ್ರೀರಾಮನ ಸೇವಕ ಎಂದು ತೋರಿಸಿಕೊಟ್ಟಿದ್ದೀರಿ. ನಿಮಗೆ ಸದಾ ಶ್ರೀರಾಮನ ಕೃಪಾಶೀರ್ವಾದ ಇರಲಿ. ಪ್ರಭು ಶ್ರೀರಾಮರನ್ನು ಪೂಜಿಸುವುದರ ಜತೆಗೆ ಅವರ ಆದರ್ಶಗಳನ್ನು ಪಾಲಿಸೋಣ.
– ವಿವೇಕ ಪ್ರದೀಪ
ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಬಹುಪಾಲು ಸೇವೆ ಕರ್ನಾಟಕದ್ದು. ಮತ್ತೊಮ್ಮೆ ನಾವು ಮರ್ಯಾದಾ ಪುರುಷೋತ್ತಮನಿಗೆ ನಮ್ಮ ಹನುಮನ ಸೇವೆ ಗೈದಿದ್ದೇವೆ.
– ರಾಘವೇಂದ್ರ ಎಂ. ಮಸಿ
ಅದ್ಭುತ ವರ್ಣರಂಜಿತ ಚಿತ್ರಗಳು ಮತ್ತು ಉಪಯುಕ್ತ ಮಾಹಿತಿ. ಅಭಿನಂದನೆಗಳು – ರಾಜೇಂದ್ರಕುಮಾರ್ ಮಠ ಧಾರವಾಡ
ದೇಶದ ಪ್ರಾಣಪ್ರತಿಷ್ಠೆ ವ್ಯಾಕರಣಬದ್ಧವಲ್ಲ ಅನ್ನಿಸಿತು.. ಪ್ರಾಣಪ್ರತಿಷ್ಠಾಪನೆ ಅಂತಲೇ ಬರೀಬೇಕಿತ್ತು. – ಪ್ರಭು ಹರಕಂಗಿ
ಇಂದಿನ ಮುಖಪುಟ ಅಮೋಘ, ಅದ್ಭುತ. ಸುಂದರ ರಾಮಲಲ್ಲಾ… – ಮೋಹನ್ ಕುಮಾರ್ ಎಚ್.ಬಿ.
ಸಂಚಿಕೆ ಗಮನ ಸೆಳೆಯಿತು. ಕಾರ್ಯದೊತ್ತಡದಿಂದ ಬೆಳಗ್ಗೆಯೇ ಮೆಸೇಜ್ ಹಾಕಲು ಸಾಧ್ಯವಾಗಿಲ್ಲ. ತುಂಬಾ ಚೆನ್ನಾಗಿದೆ. ಪ್ರತಿಪುಟವೂ ಸುಂದರ, ಅದರಲ್ಲೂ ಮುಖಪುಟ ಸುಂದರ, ಮುದ್ದು ನಗು ಮುಖದಿಂದ ಕಂಗೊಳಿಸುವ ರಾಮನಿಂದ ತುಂಬಿದ್ದು ತೀರಾ ವಿಭಿನ್ನ. ಸಾಕಷ್ಟು ವಿವರಗಳಿಂದ, ಗಣ್ಯರ ಫೋಟೋಗಳಿಂದ ತುಂಬಿದೆ. ಇಡೀ ಸಂಚಿಕೆ ನಯನ ಮನೋಹರವಾಗಿದೆ. ಓದಿದಷ್ಟೂ, ನೋಡಿದಷ್ಟೂ ತುಂಬಾ ಖುಷಿ ಕೊಡುತ್ತದೆ.
ಜಾಹೀರಾತು ರಹಿತ ಸಂಚಿಕೆ ನಿಜಕ್ಕೂ ಸಂಗ್ರಾಹ್ಯ. ಅಭಿನಂದನೆಗಳು ಮತ್ತು ಶುಭಾಶಯಗಳು ನಿಮಗೆ ಹಾಗೂ ನಿಮ್ಮಿಡೀ ಬಳಗಕ್ಕೆ.
-ಸವಿತಾ ಭಟ್ ಟ್ರಸ್ಟಿ, ಜನಶಕ್ತಿ ವಿಶ್ವಸ್ಥ ಮಂಡಳಿ
ಈ ಪುಣ್ಯಕಾಯದಲ್ಲಿ ನಾವೂ ಇದ್ದೇವೆ ಅನ್ನುವುದೇ ನಮ್ಮ ಭಾಗ್ಯ – ರಾಣಿ ಮಳೂರು
ಒಂದೇ ಒಂದು ಜಾಹೀರಾತಿಗೂ ಎಡೆಬಿಡದೆ ಸಂಪಾದಿಸಿದ್ದು ತುಂಬಾ ಇಷ್ಟವಾಯಿತು. ಮನೋಜ್ಞ ಹಾಗೂ ಸಂಗ್ರಹಯೋಗ್ಯ ಸಂಚಿಕೆ.
– ಪ್ರದೀಪ್ ಶಂಕರ್ ಎಂ.
ಪ್ರತಿಯೊಂದು ಪುಟವನ್ನೂ ಫ್ರೇಮ್ ಹಾಕಿಸಿ ಇಟ್ಟುಕೊಳ್ಳಬಹುದು, ಹಾಗಿದೆ… – ಛಾಯಾ ರಾವ್
ಜೈ ಶ್ರೀರಾಮ್. ಅದ್ಭುತವಾದ ದೃಶ್ಯಗಳು ಮತ್ತು ಚಿತ್ರಗಳ ಮೂಲಕ ಸಂಪೂರ್ಣ ಮಾಹಿತಿಯನ್ನು ನೀಡಿದ್ದೀರಿ. ಹೃದಯಪೂರ್ವಕ ಧನ್ಯವಾದಗಳು.
– ನರಸಿಂಹ ಎಚ್.ಕೆ.
ಸಂಗ್ರಹಯೋಗ್ಯ ಸಂಚಿಕೆ. ಧನ್ಯವಾದಗಳು – ವಿಶ್ವನಾಥ್, ಬಳುವನೇರಲು
ಎಂದೂ ಮರೆಯಲಾಗದ, ಎಂದಿಗೂ ಮರೆಯ ಬಾರದ ಸಂಗ್ರಹಯೋಗ್ಯ ಸಂಚಿಕೆ. – ಶಶಿಧರ ಹೆಗಡೆ
ಅದ್ಭುತವಾಗಿತ್ತು. ಗುಣಮಟ್ಟವನ್ನು ಹೀಗೇ ಕಾಯ್ದುಕೊಳ್ಳಿ. ಇದು ನಿಜಕ್ಕೂ ಸಂಗ್ರಹಯೋಗ್ಯ ಸಂಚಿಕೆ. – ಚಂದ್ರಶೇಖರ್