Wednesday, 30th October 2024

ವೈದ್ಯಕೀಯ ಕ್ಷೇತ್ರದ ವಿಶ್ವಸಂಚಾರಿ, ಜನಾನೂರಾಗಿ ಡಾ.ಚಂದನ್ ದಾಸ್ !

ವಿನಾಯಕರಾಮ್ ಕಲಗಾರು

ವೈದ್ಯೋ ನಾರಾಯಣೋ ಹರಿಃ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆತನು ಕೇವಲ ರೋಗ ಪರಿಹಾರಕನಾಗಿರದೇ ರೋಗಿಯ ಹಿತಚಿಂತಕನೂ ಹೌದು. ಅಂಥದೊಂದು ಮಹತ್ ಕಾರ್ಯದಲ್ಲಿ ತೊಡಗಿ ಸದಾ ರೋಗಿಗಳ ಪರವಾಗಿಯೇ ಕೆಲಸ ಮಾಡುವ ವ್ಯಕ್ತಿತ್ವದ ಹೆಸರು, ಡಾ. ಚಂದನ್ ದಾಸ್. ಇವರ ಹೆಸರು ವೈದ್ಯಕೀಯ ಕ್ಷೇತ್ರದಲ್ಲಿ ಜನಜನಿತ. ಬಡ ರೋಗಿಗಳ ಪಾಲಿಗೆ ಇವರು ಜನಾನುರಾಗಿ, ಕಾಯಕ ಯೋಗಿ! ಇವರ ಈ ಸೇವೆಯನ್ನು ಗುರುತಿಸಿದ ವಿಶ್ವವಾಣಿ ಪತ್ರಿಕೆ ಪ್ರತಿಷ್ಟಿತ ಗ್ಲೋಬಲ್ ಅಚೀವರ‍್ಸ್ ಪ್ರಶಸ್ತಿ ನೀಡಿ ಗೌರವಿಸಿದೆ.

ಎಲ್ಲಾ ರೋಗಗಳಿಗೂ ಮೂಲ ನಮ್ಮ ನಕಾರಾತ್ಮಕ ಭಾವನೆ ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ನಕಾರಾತ್ಮಕ ಯೋಚನೆಯಿಂದ ಮೊದಲು ನಮ್ಮ ಮನಸ್ಸನ್ನು ಹಾಳುಗೆಡವಿಕೊಳ್ಳುತ್ತೇವೆ. ಅದರಿಂದ ವ್ಯಾಧಿಗಳು ಉತ್ಪನ್ನವಾಗಲು ಶುರುವಾ ಗುತ್ತದೆ. ಆರೋಗ್ಯವೊಂದು ಇಲ್ಲದಿದ್ದಲ್ಲಿ ಯಾವ ಸುಖಕ್ಕೂ ಅರ್ಥವಿಲ್ಲ. ಈ ಸುಖವನ್ನು ಕೆಡಿಸಲು ದೇಹ ಮನಸ್ಸಿ ಗಾಗುವ ಒಂದು ಪುಟ್ಟ ನೋವೂ ಸಾಕು. ಅದು ಕೂಡಲೇ ಮಾಯವಾಗು ವಂತಿದ್ದರೆ, ಮತ್ತೆ ಸುಖದ ತೆರೆ ಮೇಲೆದ್ದೀತು. ಆದರೆ ಅನಾ ರೋಗ್ಯ ಮುಂದುವರೆದಾಗ ಅದೊಂದು ನರಕವೇ ಆಗಿ ಬಿಡುತ್ತದೆ. ಇಂಥ ಸಂದರ್ಭ ದಲ್ಲಿ ರೋಗಿಗಳ ಪಾಲಿಗೆ ದೇವರಂತೆ ಬಂದೊದಗು ವವರು ವೈದ್ಯರು.

ಯಾವುದೇ ಕಾಯಿಲೆಯನ್ನು ಪತ್ತೆಹಚ್ಚಿ, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ, ರೋಗಿಯ ಬಾಳು ಹಸನಾಗುವಂತೆ ನೋಡಿಕೊಳ್ಳು ವವರು. ಅದೇ ರೀತಿ ಮೂಳೆ ರೋಗದಿಂದ ಬಳಲುತ್ತಿರು ವವರ ಪಾಲಿನ ಆಶಾಕಿರಣದಂತಿರುವವರು ಡಾ. ಚಂದನ್ ದಾಸ್, ಬಡವರ ಪರ ಕೆಲಸ ಮಾಡುವ ವಿಶೇಷ ವ್ಯಕ್ತಿತ್ವ ಇವರದ್ದು. ಆರೋಗ್ಯ ಕ್ಷೇತ್ರದಲ್ಲಿ ಈ ಹೆಸರಿಗೆ ದೊಡ್ಡ ಮಟ್ಟದ ಬೆಲೆಯಿದೆ. ಗೌರವವಿದೆ. ಇಡೀ ದೇಶದ ಆರೋಗ್ಯ ಕ್ಷೇತ್ರದಲ್ಲಿ ಈ ಹೆಸರು ಜನಜನಿತ.

ಡಾ.ಚಂದನ್ ದಾಸ್ ಅವರ ಸೇವೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಅವರು ಇಡೀ ದೇಶ ದಾದ್ಯಂತ ಹೆಸರು ಮಾಡಿದ್ದು, ವ್ಯಾಪಾರ ಮನೋಭಾವದ ಹೊರತಾಗಿ ವಿಶಾಲ ಹೃದಯವಂತಿಕೆಯಿಂದ ಸಾಕಷ್ಟು ರೋಗಿಗಳ ಬಾಳಿಗೆ ಬೆಳಕಿನ ಕಿರಣವಾಗಿದ್ದಾರೆ. ಅಶಕ್ತ ಜನಗಳ ಮನ ಗೆದ್ದಿದ್ದಾರೆ. ಜತೆಗೆ ಅಂತಾರಾ ಷ್ಟ್ರೀಯ ಮಟ್ಟದಲ್ಲೂ ದಾಸ್ ಸಾರ್ವ ಜನಿಕ ಆರೋಗ್ಯ ಸೇವೆಯನ್ನು ಕಾಯಾ ವಾಚಾ ಮನಸಾ ಮಾಡುವುದರ ಮೂಲಕ ಜನಮನ ಗೆದ್ದಿದ್ದಾರೆ. ನೂರಾರು ಬಡ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ.

ಆರೋಗ್ಯ ವ್ಯವಸ್ಥೆಯಲ್ಲಿ ಡಿಜಿಟಲ್ ಪರಿವರ್ತನೆ!

ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಡಿಜಿಟಲ್ ಪರಿವರ್ತನೆ ತರುವಲ್ಲಿ ಡಾ.ದಾಸ್ ಗರಿಷ್ಟ ಮಟ್ಟದ ಸೇವೆ ಸಲ್ಲಿಸಿದ್ದಾರೆ. ಹೆಲ್ತ್ ವಿಷಯದಲ್ಲಿ ಭಾರತೀಯರಾದ ನಾವು ಒಂದು ಕಾಲದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ತುಂಬಾ ಹಿಂದೆ ಇದ್ದೆವು. ಅದರಲ್ಲೂ ಔಷಧಿ ಖರೀದಿ, ಡಾಕ್ಟರ್‌ನ್ನು ಸಂಪರ್ಕ ಮಾಡುವಲ್ಲಿ, ಅಂತರ್ಜಾಲ ಮುಖೇನ ಔಷಧಿ ಖರೀದಿಯ ವಿಚಾರದಲ್ಲಿ ನಮ್ಮಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಕಮ್ಮಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್‌ಲೈನ್ ಮಯ ವಾಗಿದೆ. ಆರೋಗ್ಯ ವ್ಯವಸ್ಥೆ ಅತೀ ಸುಲಭದ ರೀತಿಯಲ್ಲಿ ಜನಸೇವೆಗೆ ಲಭ್ಯವಾಗುತ್ತದೆ.

ಅಂಥ ದೊಂದು ಮಹೋನ್ನತ ಕ್ರಾಂತಿ ಮತ್ತು ಪರಿವರ್ತನೆ ಆಗಲು ಹಲವಾರು ವೈದ್ಯರು ತಮ್ಮದೇ ಆದ ರೀತಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಡಿಜಿಟಲ್ ಪರಿವರ್ತನೆಯ ವಿಷಯದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವರು ಡಾ. ಚಂದನ್ ದಾಸ್. ಪರಿಣಿತಿ ಮತ್ತು ಸಮರ್ಪಣೆಯ ಸೇವೆಯಿಂದ ಜಾಗತಿಕ ಆರೋಗ್ಯ ಆರೈಕೆ ಗುಣಮಟ್ಟವನ್ನು ಸುಧಾ ರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಡಾ. ದಾಸ್ ಎನ್ನುವ ಹೆಮ್ಮೆಯ ಕನ್ನಡಿಗ !

ಸರಳ ಮತ್ತು ವಿರಳ ಸಾಧಕ!
ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬರಿಗೂ ವೈದ್ಯರು ದೇವರಂತೇ ಕಾಣುತ್ತಾರೆ. ಅಂಥಾ ಸಹಸ್ರಾರು ರೋಗಿಗಳ ಪಾಲಿಗೆ ಡಾ.ದಾಸ್ ಆತ್ಮಬಂಧು, ಆಪ್ತಮಿತ್ರ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಬಡ ರೋಗಿಗಳ ಸೇವೆ ಮಾಡುವ ಕಾರಣಕ್ಕೇ ಡಾ. ಚಂದನ್ ಎಂದರೆ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರು. ಅಚ್ಚರಿಯ ವಿಷಯ ಏನೆಂದರೆ ಡಾ.ದಾಸ್ ಅವರಿಗೆ
ಇವೆಲ್ಲವನ್ನೂ ಪ್ರಚಾರ ಪಡೆಯದೇ ಮಾಡಬೇಕು ಎನ್ನುವುದು ಸದಾ ಕಾಲದ ಆಶಯ.

ಸಾಧಾರಣ ವ್ಯಕ್ತಿಯಂತೇ ಬದುಕುವ ಇವರು, ಎಲ್ಲಿಯೂ ತನ್ನಿಂದ ಸಹಾಯವಾಯಿತು, ಒಂದಷ್ಟು ರೋಗಿಗಳಿಗೆ ಅನುಕೂಲ ಆಯಿತು ಎನ್ನುವ ವಿಷಯವನ್ನು ಪ್ರಚಾರಕ್ಕೆ ಬಳಸಿಕೊಂಡವರೇ ಅಲ್ಲ. ಸಮಾಜಸೇವೆಯ ಧ್ಯೇಯೋದ್ದೇಶದ ಮುಖೇನ
ವೈದ್ಯಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ಡಾ. ಚಂದನ್ ದಾಸ್ ಅತೀ ಸಂಕೋಚ ಮತ್ತು ಸರಳ ವ್ಯಕ್ತಿತ್ವದ ವಿರಳ ಸಾಧಕ!
ವಿಶ್ವ ಸಂಚಾರಿ, ವೈವಿಧ್ಯ ವಿಚಾರಿ!

ಡಾ. ದಾಸ್ ಹೆಚ್ಚಿನ ಸಮಯವನ್ನು ಟ್ರಾವೆಲಿಂಗ್‌ನಲ್ಲೇ ಕಳೆಯುತ್ತಾರೆ. ದೇಶವಿದೇಶಗಳಲ್ಲಿ ನಡೆಯುವ ವೈದ್ಯಕೀಯ ಸಂಬಂಧಿತ
ಕಾನ್ ಫರೆನ್ಸ್‌ಗಳಲ್ಲಿ ಭಾಗಿಯಾಗುವುದರ ಜತೆಗೆ ಆರೋಗ್ಯ ಕ್ಷೇತ್ರದ ವಿವಿಧ ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡು ಅಲ್ಲಿ ತಮ್ಮದೇ ಆದ ವಿಚಾರ ಮಂಡನೆ ಮಾಡುತ್ತಾರೆ.

ಮೊನ್ನೆ ಕೂಡ ಅವರು ಆಸ್ಟ್ರೇಲಿಯಾ ದೇಶದಲ್ಲಿ ಇದ್ದರು. ಅಲ್ಲಿಂದ ಬೆಂಗಳೂರಿಗೆ ಬಂದು, ಮತ್ತೆ ಇಂಡೋನೇಷ್ಯಾಗೆ ಪ್ರಯಾಣ ಬೆಳೆಸಿದ್ದಾರೆ. ನಂತರ ಇನ್ನೊಂದು ದೇಶದಲ್ಲಿ ನಡೆಯಲಿರುವ ಗ್ಲೋಬಲ್ ಮಟ್ಟದ ಗೋಷ್ಠಿಯ ಭಾಗವಾಗಲಿದ್ದಾರೆ. ತಿಂಗಳಲ್ಲಿ
ಹದಿನೈದಕ್ಕೂ ಹೆಚ್ಚು ದಿನ ಅವರು ವಿಶ್ವಸಂಚಾರದಲ್ಲೇ ಇರುತ್ತಾರೆ!

ಬ್ಲಾಸಮ್ ಗ್ರೂಪ್ ರೂವಾರಿ!
ಆರೋಗ್ಯಕ್ಷೇತ್ರದಲ್ಲಿ ಈ ಹೆಸರಿಗೆ ಬೃಹತ್ ಗಾತ್ರದ ಬ್ರ್ಯಾಂಡ್ ಇದೆ. ಬ್ಲಾಸಮ್ ಗ್ರೂಪ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿರುವ ಚಂದನ್ ದಾಸ್, ಸಮುದಾಯ ಆರೋಗ್ಯ ಆರೈಕೆ ಕ್ಷೇತ್ರಗಳ ಅಗತ್ಯತೆಗಳಿಗೆ ಅನುಗುಣವಾಗಿ ಆರೋಗ್ಯ ಸೇವೆಯನ್ನು ಕಲ್ಪಿಸು ವುದು, ಆ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸುವುದರಲ್ಲಿ ತಲ್ಲೀನರಾಗಿದ್ದಾರೆ. ವಿದೇಶಗಳಲ್ಲಿಯೂ ತಮ್ಮ ಆರೋಗ್ಯ ಸೇವೆಯನ್ನು ಮುನ್ನಡೆಸುತ್ತಿರುವ ಇವರು, ದೇಶ ವಿದೇಶಗಳ ರೋಗಿಗಳಿಗೆ ಮೆಚ್ಚುಗೆಯ ವೈದ್ಯರೆನಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಬ್ಲಾಸಮ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಐದು ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಆಪದ್ಭಾಂದವ ಎನಿಸಿದ್ದರು. ಆರೋಗ್ಯ ಸೇವೆ ಯಲ್ಲದೇ ಜನೋಪಕಾರೀ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ದಾಸ್, ಬ್ಲಾಸಮ್ ಗ್ರೂಪ್ ಅಡಿ ಬ್ಲಾಸಮ್ ಎಜುಕೇಷನಲ್ ಚಾರಿಟೆಬಲ್ ಟ್ರಸ್ಟ್ ಮೂಲಕ ಕರ್ನಾಟಕದ ಗ್ರಾಮೀಣ ಪ್ರದೇಶದ ಬಡ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ.

ವಿಶ್ವ ವಿಹಾರಿಗೆ ವಿಶ್ವವಾಣಿ ಗ್ಲೋಬಲ್ ಪಶಸ್ತಿ !
ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಮತ್ತು ಜನಪ್ರಿಯತೆ ಗಳಿಸಿ, ಸರಳ ಮತ್ತು ಸಾರ್ಥಕ ಬದುಕು ಕಟ್ಟಿಕೊಂಡಿರುವ ಡಾ. ಚಂದನ್ ದಾಸ್ ಅವರಿಗೆ ಈ ಸಲದ ಗ್ಲೋಬಲ್ ಅಚೀವರ‍್ಸ್ ಅವಾರ್ಡ್ ದೊರೆತಿದೆ. ವಿಶ್ವವಾಣಿ ಇಂಡೋನೇಷ್ಯಾದಲ್ಲಿ ಹಮ್ಮಿ ಕೊಂಡಿದ್ದ ಈ ಸಮಾರಂಭದಲ್ಲಿ ಡಾ. ದಾಸ್ ಪಾಲ್ಗೊಂಡು ಪ್ರಶಸ್ತಿಯನ್ನು ಸ್ವೀಕರಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಜನಸೇವೆ ಮಾಡಲು ಇಂಥ ಮಹೋನ್ನತ ಪ್ರಶಸ್ತಿಗಳು ಪ್ರೇರಣೆ ಯಾಗಲಿದೆ ಎನ್ನುವ ಅಭಿಪ್ರಾಯ ಹಂಚಿಕೊಂಡರು.

*

ಜನ ಸೇವೆಯೇ ಜನಾರ್ದನ ಸೇವೆ. ಅದೊಂದೇ ನನ್ನ ಗುರಿ. ಬಡಜನರಿಗೆ ಡಿಜಿಟಲ್ ಆರೋಗ್ಯ ವ್ಯವಸ್ಥೆ ಕಲ್ಪಿಸುವುದು ನನ್ನ ಪ್ರಪ್ರಥಮ ಉದ್ದೇಶ. ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ಬಡವರ ಪರ ಕೆಲಸ ಮಾಡುವ ಅವಕಾಶ ಇರುತ್ತದೆ. ಅಂಥ ಪವಿತ್ರ
ಕ್ಷೇತ್ರದಲ್ಲಿ ನಾನಿದ್ದೇನೆ, ನನ್ನ ಕೈಯಲ್ಲಾದ ಸರ್ವೀಸ್ ಮಾಡುತ್ತಿದ್ದೇನೆ ಎನ್ನುವ ಸಾರ್ಥಕತೆಯೇ ನಮ್ಮ ಮುಂದಿನ ಯೋಚನೆ/ಯೋಜನೆಗಳಿಗೆ ಸ್ಪೂರ್ತಿ!
-ಡಾ.ಚಂದನ್ ದಾಸ್, ಸಿಇಒ, ಬ್ಲಾಸಮ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್