ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯ ಈ ಪರಿಕಲ್ಪನೆಗಳು ಯಾವುದೇದೇಶದಲ್ಲಿ ಪ್ರಜಾಪ್ರಭುತ್ವವು ಯಶಸ್ವಿಗೊಳ್ಳಲು ಅವಶ್ಯಕವಾದ ಪ್ರಮುಖ ಅಂಶಗಳು. ಭಾರತವು ಬಹು ಸಂಸ್ಕೃತಿಯನ್ನು ಹೊಂದಿದರಾಷ್ಟ್ರವಾಗಿದೆ, ಇಲ್ಲಿ ವಿಭಿನ್ನಜಾತಿ, ಪಂಥ, ಜನಾಂಗ, ಧರ್ಮಗಳನ್ನು ಹೊಂದಿರುವ ಜನತೆಯಿದ್ದು, ಈ ವಿಭಿನ್ನಜಾತಿ ಹಾಗೂ ಜನಾಂಗಗಳ ನಡುವೆಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳಿರುವುದು ಸಾಮಾನ್ಯವಾದ ಸಂಗತಿ ಯಾಗಿದೆ.
ಪ್ರಜಾಪ್ರಭುತ್ವದ ಸದಾಶಯವೆಂದರೆ ವಿಭಿನ್ನ ಗುಂಪುಗಳ ನಡುವೆಯಾವುದೇರೀತಿಯ ಭೇದ ಭಾವಎಣಿಸದೆಎಲ್ಲರನ್ನೂ ಸಮ ದೃಷ್ಟಿಯಿಂದ ನೋಡು ವುದೇ ಆಗಿದೆ. ರಾಜ್ಯದ ಸಂಪನ್ಮೂಲ ಮತ್ತು ಅವಕಾಶಗಳನ್ನು ಸಮಾನವಾಗಿ, ನ್ಯಾಯಯುತವಾಗಿ ಹಂಚಿಕೆ ಮಾಡುವುದೇ ಯಶಸ್ವೀ ಪ್ರಜಾ ಪ್ರಭುತ್ವದ ಬಹುಮುಖ್ಯಅಗತ್ಯಾಂಶವಾಗಿದೆ. ಈ ಪರಿಕಲ್ಪನೆಯನ್ನೇ ಸಾಮಾಜಿಕ ನ್ಯಾಯವೆನ್ನಬಹುದು, ಎಲ್ಲಾ ರೀತಿಯ ಸಾಮಾಜಿಕತಾರತಮ್ಯದ ನಾಡಾಗಿದ್ದ ಭಾರತದಲ್ಲಿ ಸಾಮಾಜಿಕ ನ್ಯಾಯವುಆಹಾರದಷ್ಟೇಅಗತ್ಯವಾದ ಸ್ಥಿತಿಗತಿಯಾಗಿದೆ. ಬಡತನದಲ್ಲಿ ಬೇಯುತ್ತಿದ್ದ ಭಾರತೀಯರಿಗೆಎರಡು ಹೊತ್ತಿನ ಊಟವೂ ಮಹಾಪ್ರಸಾದವಾಗಿತ್ತು. ಇಂದಿಗೂ ಶೇ.೪೦ರಷ್ಟು ಭಾರತೀಯರು ಬಡತನರೇಖೆಯ ಕೆಳಗಿದ್ದಾರೆಂಬುದು ವಾಸ್ತವಾಂಶವಾಗಿದೆ.
ಸಂವಿಧಾನದ ೨೧ನೇ ವಿಧಿಯು “ಯಾವುದೇ ವ್ಯಕ್ತಿಯಜೀವ ಮತ್ತು ವೈಯಕ್ತಿಕ ಸ್ವಾತಂತ್ರ‍್ಯವನ್ನು ಕಾನೂನಿನ ಸಮ್ಮತವಿಲ್ಲದೇ ಕಸಿದು ಕೊಳ್ಳುವಂತಿಲ್ಲ” ಎ೦ಬುದಾಗಿ ಸ್ಪಷ್ಟಪಡಿಸಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವುತನ್ನ ಅನೇಕ ತೀರ್ಪುಗಳಲ್ಲಿ ಅಭಿಪ್ರಾಯಪಟ್ಟಿರುವಂತೆ ಜೀವನವೆ೦ದರೆ ಗೌರವಯುತವಾದ ಜೀವನ, ಅಂದರೆ ವ್ಯಕ್ತಿಯಜೀವನಕ್ಕೆಅಗತ್ಯವಾದಎಲ್ಲಾ ಸನ್ನ್ನಿವೇಶಗಳನ್ನು ಹಾಗೂ ಅಂಶಗಳನ್ನು ರಾಜ್ಯವುಒದಗಿಸಬೇಕುಎಂದು ಘನ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಸಮಾಜದಎಲ್ಲಾ ವರ್ಗಗಳಿಗೂ ಸಮಾನಅವಕಾಶವನ್ನು ಕಲ್ಪಿಸಿ ಸರ್ವರಅಭಿವೃದ್ಧಿಗೆರಾಜ್ಯವು ಸಹಕರಿಸಬೇಕುಎಂಬುದು ಬಹು ಹಿಂದಿನಿAದಲೂ ಮುನ್ನೆಲೆಗೆ ಬಂದಿರುವ೦ತಹ ಚರ್ಚಾ ವಿಷಯವಾಗಿದೆ. ತಮಿಳುನಾಡಿನಲ್ಲಿ ಶ್ರೀ ಪೆರಿಯಾರ್‌ರವರುದ್ರಾವಿಡಿಯನ್ ಚಳುವಳಿಯನ್ನು ಆರಂಭಿಸಿ ಜಾತಿ ವ್ಯವಸ್ಥೆಯಲ್ಲಿರುವತಾರತಮ್ಯವನ್ನು ಹೋಗಲಾಡಿಸಬೇಕೆಂದು ಒತ್ತಿ ಹೇಳಿದರು. ಅದೇರೀತಿ ಮಹಾರಾಷ್ಟçದಲ್ಲಿಜ್ಯೋತಿಬಾ ಪುಲೆಯವರು ಸರ್ವಜನ ರನ್ನು ಸಮಾನ ದೃಷ್ಟಿಯಿಂದಕಾಣಬೇಕು ಎ೦ದು ಕರೆ ನೀಡಿದರು.
ಕರ್ನಾಟಕದಲ್ಲಿ ಬಸವೇಶ್ವರರು, ಮಹಾತ್ಮಗಾಂಧೀಜಿಯವರು ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ರವರುಜಾತಿಯಾಧಾರಿತ ಶೋಷಣೆಯನ್ನು ಖಂಡಿಸಿ ದರು. ಅದಾಗ್ಯೂ ಭಾರತ ಸ್ವಾತಂತ್ರö್ಯಗೊAಡು ೭೬ ವಸಂತಗಳು ಕಳೆದರೂ ಸಂವಿಧಾನದ ಪ್ರಸ್ತಾವನೆಯಲ್ಲಿನ ಬಹು ಮುಖ್ಯ ತತ್ವಗಳಾದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ.
ಈ ರೀತಿಯಆರ್ಥಿಕ ಮತ್ತು ಸಾಮಾಜಿಕತಾರತಮ್ಯವನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು ಸ್ವಾತಂತ್ರಾö್ಯನAತರ ಅಸ್ತಿತ್ವಕ್ಕೆ ಬಂದAತಹಕೇAದ್ರ ಮತ್ತುರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆತಂದವು. ಈ ನಿಟ್ಟಿನಲ್ಲಿಮಾರ್ಚ್ ೨೦, ೧೯೭೨ ರಂದುಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀ ದೇವರಾಜಅರಸ್‌ರವರ ನೇತೃತ್ವದ ಸರ್ಕಾರಕರ್ನಾಟಕದಲ್ಲಿ ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿ ಯಶಸ್ವಿಯಾಗಿರುವುದನ್ನು ನಾವು ಕಾಣುವುದು.
ಅರಸುರವರುಆಗಸ್ಟ್ ೨೦, ೧೯೧೫ ರಂದು ಮೈಸೂರುಜಿಲ್ಲೆ ಹುಣಸೂರುತಾಲ್ಲೂಕಿನ ಬೆಟ್ಟದತುಂಗ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ದೇವರಾಜ ಅರಸು ತಾಯಿ ದೇವೀ ರಮ್ಮಣ್ಣಿ.ಅರಸು ಜನಾ೦ಗಕ್ಕೆ ಸೇರಿದ ದೇವರಾಜು ಅರಸರವರುತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವಗ್ರಾಮದಲ್ಲಿ ಪಡೆದು. ಮೈಸೂರು ಮತ್ತು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಶಿಕ್ಷಣವನ್ನು ಪಡೆದ ನಂತರತಮ್ಮ ಸ್ವಗ್ರಾಮವಾದ ಕಲ್ಲಹಳ್ಳಿಯಲ್ಲಿ ಕೃಷಿಕರಾಗಿ ಜೀವನವನ್ನು ರೂಪಿಸಿಕೊಂಡ ಅರಸರುರವರಿಗೆ ಗ್ರಾಮೀಣ ಜನರ ಜೀವನ, ಅವರ ಕಷ್ಟ ಕಾರ್ಪಣ್ಯಗಳು, ಸಮಾಜದ ಶೋಷಿತ ವರ್ಗಗಳ ಸ್ಥಿತಿಗತಿಗಳ ಬಗ್ಗೆ ಅಪಾರವಾದಜ್ಞಾನವಿತ್ತು.
ಕಾಂಗ್ರೆಸ್ ಪಕ್ಷದ ಆ ಕಾಲದ ಧೀಮಂತ ನಾಯಕರಾಗಿದ್ದ ಸಾಹುಕಾರಚನ್ನಯ್ಯನವರ ಪ್ರಭಾವದಿಂದಕಾAಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಅರಸುರವರು ೧೯೪೬ರ ಮೈಸೂರು ಪ್ರತಿನಿಧಿ ಸಭೆಗೆ ಹುಣಸೂರುಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಸ್ವಾತಂತ್ರಾö್ಯ ನಂತರದ ಮೈಸೂರುರಾಜ್ಯದ ವಿಧಾನಸಭಾ ಚುನಾವಣೆಗಳಲ್ಲಿಯೂ ಹುಣಸೂರುಕ್ಷೇತ್ರದಿಂದ ನಿರಂತರವಾಗಿ ಸ್ಪರ್ಧಿಸಿ ಜಯಗಳಿಸಿದ ಶ್ರೀ ಡಿ.ದೇವರಾಜಅರಸುರವರು ೧೯೬೨ ರಿಂದ ೧೯೬೮ರ ವರೆಗೆ ನಿಜಲಿಂಗಪ್ಪನವರ ಸರ್ಕಾರದಲ್ಲಿಕಾರ್ಮಿಕ, ಸಾರಿಗೆ, ವಸತಿ ಹಾಗೂ ಪಶುಸಂಗೋಪನೆ ಇನ್ನಿತರ ಇಲಾಖೆಗಳ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಸುಮಾರುಎರಡು ವರ್ಷಗಳ ಕಾಲ ಕೇಂದ್ರೀಯರೇಷ್ಮೆ ಮಂಡಳಿಯ ಅಧ್ಯಕ್ಷರಾಗಿಕಾರ್ಯನಿರ್ವಹಿಸಿದರು.
೧೯೬೯ ರಲ್ಲಿಕಾಂಗ್ರೇಸ್ ಪಕ್ಷ ವಿಭಜನೆಯಾದಾಗಅರಸುರವರು ಶ್ರೀಮತಿ ಇಂದಿರಾಗಾ೦ಧಿಯವರ ಗುಂಪಿನಲ್ಲಿ ಗುರುತಿಸಿಕೊಂಡರು. ಇಂದಿರಾಗಾ೦ಧಿ ಯವರ ನೇತೃತ್ವದಕಾಂಗ್ರೆಸ್ (ಅರ್) ೧೯೭೧ರ ಲೋಕಸಭಾಚುನಾವಣೆಯಲ್ಲಿಕರ್ನಾಟಕದಎಲ್ಲಾ ೨೭ ಲೋಕಸಭಾ ಸ್ಥಾನಗಳನ್ನು ಅರಸುರವರ ನಾಯಕತ್ವದಲ್ಲಿ ತನ್ನದಾಗಿಸಿಕೊಂಡಿತು. ಅರಸುರವರುಕರ್ನಾಟಕದಲ್ಲಿ ಪ್ರಥಮವಾಗಿ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ೧೯೭೨ರ ವಿಧಾನಸಭಾಚುನಾವಣೆಯಲ್ಲಿಅಭಿವೃದ್ಧಿ ಪಡಿಸಿರುವುದನ್ನು ನಾವು ಗಮನಿಸಬಹುದಾಗಿದೆ.
ಕರ್ನಾಟಕದ ರಾಜಕಾರಣದಲ್ಲಿ ಮೊದಲ ಬಾರಿಗೆ ಪ್ರಭಲ ಜಾತಿಗಳ ವಿರುದ್ಧ ಹಿಂದುಳಿದ ವರ್ಗಗಳು ಪೈಪೋಟಿ ನೀಡಿರುವುದನ್ನು ಅಂಕಿ ಅಂಶಗಳಿAದ ಕಾಣಬಹುದಾಗಿದೆ. ೧೯೭೨ ರಲ್ಲಿ ವಿಧಾನ ಸಭೆಯಒಟ್ಟು ಸ್ಥಾನಗಳು ೨೨೩ ಇದ್ದುಅಲ್ಲಿಯವರೆಗೂ ಪ್ರಭಲ ಜನಾಂಗಗಳು ಸುಮಾರು ೧೫೦ ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಟಿಕೆಟ್ ಪಡೆಯುತ್ತಿದ್ದರು. ಕೇವಲ ೬೫ ರಿಂದ ೭೦ ಸ್ಥಾನಗಳಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಟಿಕೆಟ್ ಪಡೆಯುಲು ಶಕ್ತರಾಗುತ್ತಿದ್ದರು.
ಆದರೆ ದೇವರಾಜ ಅರಸುರವರು ಈ ಅಂಕಿ ಅಂಶಗಳನ್ನು ತಲೆಕೆಳಕಾಗಿ ಮಾಡಿದರು. ೧೯೭೨ ರಚುನಾವಣೆಯಲ್ಲಿಕಾಂಗ್ರೇಸ್ (ಆರ್) ಪಕ್ಷದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಹಿಂದಿಳಿದ ವರ್ಗಗಳಿಗೆÀ ಒಟ್ಟು ೧೩೩ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರು ಕೇವಲ ೯೦ ಟಿಕೆಟ್‌ಗಳನ್ನು ಪ್ರಭಲ ಜಾತಿಗಳ ಅಭ್ಯರ್ಥಿಗಳಿಗೆ ಕಾಂಗ್ರೇಸ್ (ಆರ್) ಪಕ್ಷದಿಂದ ನೀಡಲಾಯಿತು. ವಿಧಾನಸಭಾ ಚುನಾವಣೆಗಳು ನೆಡೆದು ಪಲಿತಾಂಶ ಪ್ರಕಟವಾದಾಗಅಕ್ಷರಶಃಅಚ್ಚರಿಯೇಕಾದಿತ್ತು. ಒಟ್ಟು ೨೨೩ ಸ್ಥಾನಗಳಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್ (ಅರ್) ಪಕ್ಷವು ೧೬೩ ಸ್ಥಾನಗಳಲ್ಲಿ ಗೆಲುವನ್ನುಕಂಡಿತು. ಮತ್ತೊಂದು ಬಹು ಮುಖ್ಯವಾದಅಂಶವೆAದರೆ ಈ ೧೬೩ ರಲ್ಲಿಗೆದ್ದ ಅಭ್ಯರ್ಥಿಗಳ ಪೈಕಿ ೯೨ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದರುಎಂಬುದುಗಮನಾರ್ಹವಾದ ಸಂಗತಿಯಾಗಿದೆ.
ಅರಸುರವರು ಈ ರಾಜಕೀಯ ಸಮೀಕರಣವನ್ನು ಹಾಗೂ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಹೀಗೆ ವಿವರಿಸಿದ್ದಾರೆ. “ನಾವು ಎಂದಿಗೂ ಪ್ರಭಲ ಸಮುದಾಯಗಳ ವಿರೋಧಿಗಳಲ್ಲ. ಪ್ರಜಾಪ್ರಭುತ್ವಅರ್ಥಪೂರ್ಣವಾಗಬೇಕಾದರೆ ಶೋಷಿತ ಸಮುದಾಯಗಳಿಗೂ ರಾಜಕೀಯಅಧಿಕಾರವನ್ನು ನೀಡಿದಾಗ ಮಾತ್ರಅದು ಸಾಧ್ಯವಾಗುತ್ತದೆ”. ವಿಧಾನಸಭಾ ಚುನಾವಣೆಗಳು ನಡೆದು ಶ್ರೀಮತಿ ಗಾಂಧಿಯªರÀ ನೇತೃತ್ವದಕಾಂಗ್ರೆಸ್ (ಅರ್) ಪಕ್ಷವು ಸ್ಪಷ್ಟ ಬಹುಮತವನ್ನು ಪಡೆಯಿತು. ಬಾಂಗ್ಲಾದೇಶದಡಾಕಾದಲ್ಲಿದ್ದ ಶ್ರೀಮತಿ ಗಾಂಧಿಯವರು ಶ್ರೀ ಡಿ.ದೇವರಾಜಅರಸುರವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿಆಯ್ಕೆ ಮಾಡಿದರು. ಪಕ್ಷದ ಶಾಸಕರಅನುಮೋದನೆಯೊಂದಿಗೆಮಾರ್ಚ್ ೨೦, ೧೯೭೨ ರಂದು ಶ್ರೀ ಡಿ.ದೇವರಾಜಅರಸುರವರು ಮೈಸೂರುರಾಜ್ಯದ ಮುಖ್ಯಮಂತ್ರಿಗಳಾದರು.
ಮಂತ್ರಿ ಮಂಡಲವನ್ನುರಚಿಸುವ ಸಂದರ್ಭದಲ್ಲಿಯೂಅರಸರುರವರು ಸಾಮಾಜಿಕ ನ್ಯಾಯ ಸಿದ್ಧಾಂತವನ್ನು ಕಡೆಗಣಿಸಲಿಲ್ಲ. ಅವರ ಸಂಪುಟದಲ್ಲಿ ಅತಿಸೂಕ್ಷ್ಮ ಸಮುದಾಯಗಳ ಶಾಸಕರಿಗೂಅವಕಾಶವನ್ನು ನೀಡಿದರು. ಹುಬ್ಬಳ್ಳಿಯಿಂದ ಜಯಗಳಿಸಿದ ಕುರುಬ ಸಮುದಾಯಕ್ಕೆ ಸೇರಿದಡಿ.ಕೆ ನಾಯ್ಕರ್‌ರವರು, ಕಲಬುರ್ಗಿಯಿಂದ ಗೆದ್ದಿದ್ದ ಮಡಿವಾಳ ಸಮುದಾಯದ ದೇವೇಂದ್ರಪ್ಪ ಘಾಲಪ್ಪನವರು, ಬೆಳಗಾವಿಯಿಂದ ಗೆದ್ದಿದ್ದಕಮ್ಮಾರ ಸಮುದಾಯದ ಆರ್.ಡಿಕಿತ್ತೂರ್ ರವರನ್ನು ಒಳಗೊಂಡ೦ತೆ ಹಲವರುಅರುಸುರವರ ಸಂಪುಟದಲ್ಲಿ ಸ್ಥಾನವನ್ನು ಪಡೆದರು.
ಅರಸುರವರು ಅಧಿಕಾರದಲ್ಲಿದ್ದ ಅವಧಿಯವರೆಗೂ ವಿಧಾನಸಭೆಗೆ ಹಿಂದುಳಿದ ವರ್ಗಗಳ ಮತ್ತುಅಲ್ಪಸಂಖ್ಯಾತ ಸಮುದಾಯಗಳ ಶೇ. ೭೦ ರಷ್ಟು ಅಭ್ಯರ್ಥಿಗಳು ಜಯಶೀಲರಾಗಿ ಆಯ್ಕೆಯಾಗುತ್ತಿದ್ದರು ಎನ್ನುವುದು ಬಹುಮುಖ್ಯವಾದ ಸಂಗತಿಯಾಗಿದೆ.
ಕೇವಲ ರಾಜಕೀಯಕ್ಷೇತ್ರದಲ್ಲಿಅಲ್ಲದೇ ಸರ್ಕಾರಿಉದ್ಯೋಗದಲ್ಲಿಯೂಅರಸುರವರು ಹಿಂದುಳಿದ ವರ್ಗಗಳಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸಿದರು. ಅವರುಅಧಿಕಾರಕ್ಕೆ ಬಂದಆರೇ ತಿಂಗÀಳಲ್ಲಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿಯನ್ನುತಂದರು. ಅದುವರೆವಿಗೂಎಲ್ಲಾ ಉದ್ಯೋಗಗಳನ್ನು ಕೆ.ಪಿ.ಎಸ್.ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರಸುರವರುಜಿಲ್ಲಾ ಮಟ್ಟದ ನೇಮಕಾತಿ ಸಮಿತಿಗಳನ್ನು ರಚಿಸುವ ಮೂಲಕ ಎ ಮತ್ತು ಬಿ ದರ್ಜೆ ನೇಮಕಾತಿಗಳನ್ನು ಹೊರತು ಪಡಿಸಿ ಉಳಿದ ಸ್ಥಳೀಯ ನೇಮಕಾತಿಗಳನ್ನು ಈ ಜಿಲ್ಲಾ ಮಟ್ಟದ ನೇಮಕಾತಿ ಸಮಿತಿಗಳಿಂದಲೇ ಮಾಡಿಕೊಳ್ಳಲು ಅನುಮತಿಯನ್ನು ನೀಡಿದರು. ಯಾವುದೇಅಧಿಕಾರವನ್ನು ಪಡೆಯದ ಹಲವು ಸಮುದಾಯಗಳು ಸರ್ಕಾರದಉದ್ಯೋಗವನ್ನು ಪಡೆಯಲುಅರಸುರವರ ಈ ನೀತಿಯಿಂದ ಸಾಧ್ಯವಾಯಿತು. ಆದರೆ ಈ ಜಿಲ್ಲಾ ಮಟ್ಟದ ನೇಮಕಾತಿ ಸಮಿತಿಯ ಕೆಲವು ಸದಸ್ಯರು ಭ್ರಷ್ಟಾಚಾರದಲ್ಲಿತೊಡಗಿದ್ದರು ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡಿದವು. ಆದರೆ ಶೋಷಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯಅಭಿವೃದ್ಧಿಯ ಬಗ್ಗೆ ಅರಸುರವರಿಗೆಇದ್ದ ಕಾಳಜಿಯನ್ನು ಯಾರೂ ಎಂದಿಗೂ ಅಲ್ಲಗಳೆಯಲು ಸಾಧ್ಯವಿಲ್ಲ.
ಹಿಂದಿಳಿದ ಸಮುದಾಯಗಳ ಈ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಹಿನ್ನೆಡೆಗೆ ಬಹು ಮುಖ್ಯಕಾರಣವೆಂದರೆ ಕೃಷಿ ಭೂಮಿಯಅಸಮಾನ ಹಂಚಿಕೆ, ಎರಡನೆಯ ಅಂಶವೆ0ದರೆ ಶಿಕ್ಷಣ ಹಾಗೂ ಸರ್ಕಾರಿಉದ್ಯೋಗವು ಈ ಸಮುದಾಯಗಳಿಗೆ ಸಮರ್ಪಕವಾಗಿದೊರೆಯದಿರುವುದೇಆಗಿದೆ ಎಂಬ ಸ್ಪಷ್ಟಅರಿವುಅರಸುರವರಿಗಿತ್ತು.
ಹಿಂದುಳಿದ ವರ್ಗಗಳ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕಅಭಿವೃದ್ಧಿಯು ಸಾಧ್ಯವಾಗಬೇಕಾದರೆಎರಡು ಅಂಶಗಳು ಬಹಳ ಮುಖ್ಯ ಎಂದು ಅರಸುರವರು ಪ್ರಭಲವಾಗಿ ನಂಬಿದ್ದರು. ಅವುಗಳೆಂದರೆ ೧. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನ್ನುಕಲ್ಪಿಸುವುದು. ಈ ಕಾರಣಕ್ಕಾಗಿಎಲ್.ಜಿ ಹಾವನೂರ್‌ರವರ ನೇತೃತ್ವದಲ್ಲಿ ಹಿಂದಿಳಿದ ವರ್ಗಗಳ ಆಯೋಗವನ್ನು ನೇಮಿಸಿದರು. ೨. ಭೂಸುಧಾರಣೆಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸುವ ಮೂಲಕ ಉಳುವವನೇ ಭೂಮಿಯಒಡೆಯ ಎಂಬ ನೀತಿಯನ್ನು ಜಾರಿಗೆ ತಂದರು.
ಸoವಿಧಾನದ ೧೫(೪) ಮತ್ತು ೧೬(೪) ನೇ ವಿಧಿಗಳು ಶಿಕ್ಷಣ ಮತ್ತುಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದಿಳಿದ ವರ್ಗಗಳ ಜನತೆಗೆ ಸಮರ್ಪಕವಾದ ಮೀಸಲಾತಿಯನ್ನುರಾಜ್ಯವು ಅನುಷ್ಠಾನಗೊಳಿಸಬೇಕು ಎಂಬುದಾಗಿ ಸ್ಪಷ್ಟಪಡಿಸಿವೆ. ಸ್ವಾತಂತ್ರö್ಯ ಪೂರ್ವದಲ್ಲಿಯೇಅಂದರೆ ೧೯೧೮ ರಲ್ಲಿ ಮಿಲ್ಲರ್ ಸಮಿತಿಯು ಬ್ರಾಹ್ಮಣೇತರ ಜಾತಿಗಳನ್ನು ಹಿಂದುಳಿದ ವರ್ಗಗಳಾಗಿ ಗುರುತಿಸಿ ಈ ವರ್ಗಗಳ ಅಭಿವೃದ್ಧಿಗೆರಾಜ್ಯವು ಕ್ರಮ ಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡಿತು. ಸ್ವತಂತ್ರö್ಯ ನಂತರ ೧೯೬೧ ರಲ್ಲಿಆರ್ ನಾಗನಗೌಡರವರ ನೇತೃತ್ವದಲ್ಲಿರಚಿತವಾದ ಮೈಸೂರು ಹಿಂದುಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಲು ಶಿಫಾರಸ್ಸು ಮಾಡಿತು. ಆದರೆ ಹಿಂದುಳಿದ ವರ್ಗಗಳಿಗೆ ಯಾವುದೇ ನ್ಯಾಯಯುತವಾದ ಅವಕಾಶಗಳು ಸಿಗಲಿಲ್ಲ. ಅರಸುರವರು ಅಧಿಕಾರಕ್ಕೆ ಬಂದ ಮೇಲೆ ಹೆಸರಾಂತ ನ್ಯಾಯವಾಧಿಗಳಾದ ಎಲ್.ಜಿ ಹಾವನೂರ್‌ರವರ ಅಧ್ಯಕ್ಷತೆಯಲ್ಲಿ ಹಿಂದಿಳಿದ ವರ್ಗಗಳ ಆಯೋಗವನ್ನು ನೇಮಿಸಿದರು. ಈ ಸಮಿತಿಯು ಹಿಂದುಳಿದ ವರ್ಗಗಳ ಬಗ್ಗೆ ವಿಸ್ತೃತವಾದ ಅಧ್ಯಯನವನ್ನು ಮಾಡಿ ಸರ್ಕಾರಕ್ಕೆ ೧೯೭೫ ರಲ್ಲಿ ವರದಿ ಸಲ್ಲಿಸಿತ್ತು. ಅರಸುರವರ ಸರ್ಕಾರವು ೧೯೭೭ ರಲ್ಲಿ ಈ ಆಯೋಗದ ವರದಿಯನ್ವಯ ಸರ್ಕಾರಿಆದೇಶವನ್ನು ಹೊರಡಿಸಿ ಶಿಕ್ಷಣ ಮತ್ತುಉದ್ಯೋಗದಲ್ಲಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸಿ ಅವರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಕಾರಣಕರ್ತರಾದರು.
ಅರಸುರವರು ಆರ್ಥಿಕ ಮತ್ತು ಸಾಮಾಜಿಕಅಭಿವೃದ್ಧಿ ಸಾಧ್ಯವಾಗಬೇಕಾದರೆ ಕೃಷಿ ಭೂಮಿಯ ಸಮಾನ ಹಂಚಿಕೆಯಾಗಬೇಕು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಈ ಕಾರಣದಿಂದಾಗಿಯೇಅರಸುರವರ ಸರ್ಕಾರವು ೧೯೬೧ ರಕರ್ನಾಟಕ ಭೂಸುಧಾರಣಾಕಾಯ್ದೆಗೆಆಮೂಲಾಗ್ರತಿದ್ದುಪಡಿಯನ್ನುತಂದು ೧೯೭೪ ರ ಭೂಸುಧಾರಣಾತಿದ್ದುಪಡಿಕಾಯ್ದೆಯನ್ನುಜಾರಿಗೆತಂದಿತು. ಈ ಕಾಯ್ದೆಯನ್ವಯರಾಜ್ಯದಎಲ್ಲಾ ತಾಲ್ಲೂಕುಗಳಲ್ಲಿಯೂ ಉಪ ವಿಭಾಗಧಿಕಾರಿಗಳ ಅಧ್ಯಕ್ಷತೆಯಲ್ಲಿ ಭೂ ನ್ಯಾಯ ಮಂಡಳಿಗಳು ರಚನೆಗೊಂಡವು. ೧೯೭೪ ರಕಾಯ್ದೆಯನ್ವಯ ಈ ನ್ಯಾಯ ಮಂಡಳಿಗಳು ಭೂ ಉಳುಮೆಗಾರರು ಭೂಮಿಯ ಹಕ್ಕನ್ನು ಹೊಂದಲುಕೋರಿ ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ಉಳುಮೆಗಾರರಿಗೆ ಭೂಮಿಯಒಡೆತನ ನೀಡುವಅಧಿಕಾರವನ್ನು ಹೊಂದಿದ್ದವು. ಈ ಭೂ ನ್ಯಾಯ ಮಂಡಳಿಗಳು ನೀಡುವತೀರ್ಪಿನ ವಿರುದ್ದ ಮೇಲ್ಮನವಿಗೆಅವಕಾಶವಿರಲಿಲ್ಲ. ಆದರೆ ಈ ತೀರ್ಪಿನ ವಿರುದ್ದ ಕೇವಲ ಹೈಕೋರ್ಟಿನಲ್ಲಿ ಮಾತ್ರ ಪ್ರಶ್ನೆ ಮಾಡಬಹುದಾಗಿತ್ತು. ಈ ಕಾಯ್ದೆಯನ್ವಯ ಭೂಮಿಯ ಹಕ್ಕನ್ನು ಪಡೆಯಲುರಾಜ್ಯಾದ್ಯಂತ ಸುಮಾರು ೭,೫೫,೦೦೦ ಹಿಡುವಳಿದಾರರು ಮನವಿ ಸಲ್ಲಿಸಿದ್ದು ಸುಮಾರು ೧೦೦೦ ಮನವಿಗಳನ್ನುಳಿದು ಉಳಿದ ಎಲ್ಲಾ ಅರ್ಜಿಗಳನ್ನು ಈ ನ್ಯಾಯ ಮಂಡಲಿಗಳು ಪರಿಶೀಲಿಸಿ ಬಗೆಹರಿಸಿದವು. ಅತಿ ಹೆಚ್ಚು ಮನವಿಗಳನ್ನು ಸ್ವೀಕರಿಸಿದ ಜಿಲ್ಲೆಗಳೆಂದರೆ ದಕ್ಷಿಣಕನ್ನಡ (೧,೭೬,೦೦೦) ಹಾಗೂಉತ್ತರಕನ್ನಡ (೯೮,೯೭೬).ಅರಸುರವರುಜಾರಿಗೆತಂದ ಈ ಭೂಸುಧಾರಣಾ ನೀತಿಗಳಿಂದ ಲಕ್ಷಾಂತರ ಭೂರಹಿತರು ಭೂಮಿಯ ಹಕ್ಕನ್ನು ಪಡೆದರು. ಸಹಜವಾಗಿ ಭೂಸೂಧಾರಣಾ ನೀತಿಯುಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೂಕಾರಣವಾಯಿತು.
ಇಷ್ಟೇ ಅಲ್ಲದೆಅರಸುರವರುತಮ್ಮಅಧಿಕಾರದಅವಧಿಯಲ್ಲಿಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಹಾಗೂ ನಿರುದ್ಯೋಗಿಯುವಕರಿಗೆ ಸ್ಟೆöÊಫಂಡ್ ಯೋಜನೆಗಳನ್ನೊಳಗೊಂಡAತೆ ಅನೇಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಗೌರವಯುತವಾಗಿಜೀವನ ನಡೆಸಲು ಅನುವು ಮಾಡಿಕೊಟ್ಟರು.
ಡಾ. ಗುಂಡೇಗೌಡ
ಸAಯೋಜಕರು ಮತ್ತು ಸಹಾಯಕ ಪ್ರಾಧ್ಯಾಪಕರು
ಶ್ರೀ ಡಿ. ದೇವರಾಜುಅರಸುಅಧ್ಯಯನ ಪೀಠ
ತುಮಕೂರು ವಿಶ್ವವಿದ್ಯಾನಿಲಯ
ತುಮಕೂರು