Thursday, 31st October 2024

Vishweshwar Bhat Column: ಹಿಸ್ಪಾನಿಕ್‌ ಸಮುದಾಯ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಇಂದು ಬೆಳಗ್ಗೆ ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯನ್ನು ಓದುವಾಗ‌ Where two stories reveal Hispanic political
diversity‌ ಎಂಬ ಹೆಡ್‌ಲೈನ್ ಗಮನ ಸೆಳೆಯಿತು. ಈ ಹೆಡ್‌ಲೈನ್‌ನಲ್ಲಿರುವ Hispanic ಪದವನ್ನು ಕೇಳಿ ಬಹಳ ದಿನಗಳೇ ಆಗಿದ್ದವು. ಹಿಸ್ಪಾನಿಕ್ ಅಂದರೆ ಕ್ಯೂಬಾ, ಮೆಕ್ಸಿಕೋ, ಡೊಮಿನಿಕನ್ ರಿಪಬ್ಲಿಕ್, ಪುರ್ಟೋ ರಿಕೋ, ದಕ್ಷಿಣ ಅಮೆರಿಕ (ಅರ್ಜೆಂಟೀನಾ, ಕೊಲಂಬಿಯಾ, ಪೆರು) ಅಥವಾ ಸೆಂಟ್ರಲ್ ಅಮೆರಿಕನ್ (ಹೋಂಡುರಾಸ್, ಎಲ್ ಸಾಲ್ವ ಡೋರ್) ಗೆ ಸೇರಿದ ಜನಸಮೂಹ ಅಥವಾ ಸ್ಪ್ಯಾನಿಷ್ ಮೂಲ-ಸಂಸ್ಕೃತಿಗೆ ಸೇರಿದ ಜನ ಎಂದರ್ಥ.

ಸ್ಥೂಲವಾಗಿ, ಹಿಸ್ಪಾನಿಕ್ ಎಂದರೆ ಸ್ಪೇನ್ ಭಾಷಾ ಮತ್ತು ಸಂಸ್ಕೃತಿ ಮೂಲವನ್ನು ಹೊಂದಿರುವ, ಆದರೆ ಬಹಳಷ್ಟು ದಕ್ಷಿಣ ಮತ್ತು ಮಧ್ಯ ಅಮೆರಿಕದ ಪ್ರಾಂತಗಳಿಂದ ಬಂದವರು, ಅಥವಾ ಅಮೆರಿ ಕದಲ್ಲಿರುವ ಅವರ ಸಂತತಿಗಳು ಎಂದು ಹೇಳಬಹುದು. ಈ ಜನ ಸ್ಪೇನ್ ಭಾಷೆ, ಧರ್ಮ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಯೋಜಿತವಾ ಗಿರುವವರು.

ಲ್ಯಾಟಿನೋ ಅಥವಾ ಲ್ಯಾಟಿನಾ ಪದವನ್ನು ಸಹ ದಕ್ಷಿಣ ಅಮೆರಿಕ ಮತ್ತು ಮಧ್ಯ ಅಮೆರಿಕ ಮೂಲದವರನ್ನು ಸೂಚಿಸಲು ಬಳಸಲಾ ಗುತ್ತದೆ. ಹಿಸ್ಪಾನಿಕ್ ಎಂಬುದು ಭಾಷಾ ಆಧಾರಿತವಾಗಿದೆ, ಆದರೆ ಲ್ಯಾಟಿ ನೋ/ಲ್ಯಾಟಿನಾ
ಎನ್ನುವುದು ಭೌಗೋಳಿಕ ಆಧಾರವನ್ನು ಸೂಚಿಸುತ್ತದೆ. ಅಮೆರಿಕದಲ್ಲಿ ಹಿಸ್ಪಾನಿಕ್ ಸಮುದಾಯವು ದೊಡ್ಡ ಪ್ರಮಾಣದಲ್ಲಿ ಇದೆ ಮತ್ತು ಈ ಸಮುದಾಯ ಸಾಂಸ್ಕೃತಿಕ ಪರಂಪರೆ, ಭಾಷಾ ಪ್ರಭಾವ, ಆಹಾರ, ಸಂಗೀತ,
ನೃತ್ಯ, ಉತ್ಸವಗಳ ಮೂಲಕ ಹೆಸರಾಗಿದೆ. ಹಿಸ್ಪಾನಿಕ್ ಸಮುದಾಯದವರಲ್ಲಿ ಇಂಗ್ಲಿಷ್ ಮತ್ತು ಸ್ಪೇನ್ ಎರಡೂ ಭಾಷೆಗಳ ಬಳಕೆ ಹೆಚ್ಚಾಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ವರ್ಷದಿಂದ ವರ್ಷಕ್ಕೆ ಹಿಸ್ಪಾನಿಕ್ ಸಮುದಾಯ ಪ್ರಮುಖ ಪಾತ್ರವನ್ನು ವಹಿಸುತ್ತಿ ರುವುದನ್ನು ಕಾಣಬಹುದಾಗಿದೆ. ಈ ಸಮುದಾಯವು ನಿರ್ಣಾಯಕ ಮತದಾರರ ಗುಂಪಾಗಿ ಬೆಳೆದಿದೆ.
ಹಿಸ್ಪಾನಿಕ್ ಮತದಾರರು ಪ್ರಾತಿನಿಧಿಕವಾಗಿ ಹೆಚ್ಚುತ್ತಿರುವುದರಿಂದ, ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ (ಬ್ಯಾಟಲ್‌ಗ್ರೌಂಡ್ ಸ್ಟೇಟ್ಸ್) ಈ ಸಮುದಾಯದ ಮತವು ಫಲಿತಾಂಶವನ್ನು ನಿರ್ಧರಿಸುತ್ತದೆ.

ಒಂದು ಅಂದಾಜಿನ ಪ್ರಕಾರ, ಅಮೆರಿಕದ ಒಟ್ಟೂ ಮತದಾರರ ಪೈಕಿ ಹಿಸ್ಪಾನಿಕ್ ಸಮುದಾಯ ಶೇ.೧೫ರಷ್ಟು ಮತದಾರರನ್ನು ಹೊಂದಿದೆ. ಹಿಸ್ಪಾನಿಕ್ ಜನಸಂಖ್ಯೆಯು ಅಮೆರಿಕದಲ್ಲಿ ಶೀಘ್ರವಾಗಿ ಬೆಳೆದಿ ದ್ದರಿಂದ, ಅವರು
ರಾಜಕೀಯದಲ್ಲಿ ಪ್ರಮುಖ ಮತದಾರರ ಗುಂಪಾಗಿ ಎದ್ದು ಬರುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಹಿಸ್ಪಾನಿಕ್ ಮತದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವರ ಧ್ವನಿಯನ್ನು ಮತ್ತು ಆಗ್ರಹಗಳನ್ನು ರಾಜಕೀಯ ಪಕ್ಷಗಳು ಗಮನಿ
ಸಲಾರಂಭಿಸಿವೆ.

ಪ್ರಮುಖ ರಾಜ್ಯಗಳಾದ ಟೆಕ್ಸಸ್, ಫ್ಲೋರಿಡಾ, ಆರಿಜೋನಾ ಮತ್ತು ನೆವಡಾದಲ್ಲಿ ಹಿಸ್ಪಾನಿಕ್ ಸಮುದಾಯದವರು ಬಹುಸಂಖ್ಯಾತರಾಗಿರುವುದರಿಂದ, ಯಾರು ಗೆಲ್ಲಬೇಕು ಎಂಬುದನ್ನು ನಿರ್ಧರಿಸುವಷ್ಟು ಪ್ರಭಾವವನ್ನು ಬೆಳೆಸಿಕೊಂಡಿ ರುವುದು ಗಮನಾರ್ಹ. ಈ ಸಮುದಾಯದ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ವಿಶೇಷ ಕಾಳಜಿ ತೋರಿಸುತ್ತವೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳು ಹಿಸ್ಪಾನಿಕ್ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತವೆ.

ಇತ್ತೀಚಿನ ವರ್ಷಗಳಲ್ಲಿ ಹಿಸ್ಪಾನಿಕ್ ಸಮುದಾಯವು ಡೆಮಾಕ್ರಟಿಕ್ ಪಕ್ಷದ ಕಡೆ ಹೆಚ್ಚು ಒಲವು ತೋರಿಸುತ್ತಿದೆ ಎಂದು ಅನಿಸಿದರೂ, ರಿಪಬ್ಲಿಕನ್ ಪಕ್ಷವು ಕೂಡ ಆ ಸಮುದಾಯದ ಮತದಾರರನ್ನು ಆಕರ್ಷಿಸಲು ಯಶಸ್ವಿಯಾ
ಗುತ್ತಿದೆ. ಈ ಸಲದ ಚುನಾವಣೆಯಲ್ಲೂ ಈ ಸಮುದಾಯದ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ. ಆದರೆ ಬಹುತೇಕ ಹಿಸ್ಪಾನಿಕ್ ಮತದಾರರಿಗೆ ಡೊನಾಲ್ಡ್ ಟ್ರಂಪ್ ತಮ್ಮ ಪರ ಅಲ್ಲ ಎಂದು ಅನಿಸಿದೆ. ಈ ಸಂಗತಿ
ಯನ್ನು ಅವರು ಬಹಿರಂಗವಾಗಿ ಹೇಳುತ್ತಿದ್ದಾರೆ. ಹೀಗಾಗಿ ಅರಿಜೋನಾ‌ ಮತ್ತು ನೆವಡಾದಲ್ಲಿ ಇದು ಟ್ರಂಪ್ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‌Vishweshwar Bhat Column: ಫಿಡೊ ಎಂಬ ನಾಯಿ