Monday, 16th September 2024

ಸರಕಾರದ ಮೌನ ಜನರಲ್ಲಿ ಹೆಚ್ಚಿದ ಆತಂಕ

Arvind Kejrival

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕು ನಿಯಂತ್ರಿಸಲು ಮತ್ತೆ ಏಳು ದಿನಗಳ ಲಾಕ್ ಡೌನ್ ಮಾಡುವುದಾಗಿ ಮುಖ್ಯಮಂತ್ರಿ
ಘೋಷಿಸಿದ್ದಾರೆ.

ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಫ್ಯೂ ಯಶಸ್ವಿಗೊಂಡಿದೆ. ಇದೀಗ ರಾಜ್ಯದಲ್ಲಿ ಮುಂದಿನ ಕ್ರಮಗಳೇನು
ಎಂಬುದು ರಾಜ್ಯದ ನಿರೀಕ್ಷೆ. ಆದರೆ ರಾಜ್ಯದಲ್ಲಿ ಯಾವುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಒಬ್ಬೊಬ್ಬ ಜನಪ್ರತಿನಿಧಿಗಳ ಹೇಳಿಕೆ ಒಂದೊಂದು ರೀತಿಯಿಂದ ಕೂಡಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಕಳೆದ ಬಾರಿಗೆ ಹೋಲಿಸಿದರೆ ಜನರ ವಿಶ್ವಾಸ ಗಳಿಸುವಲ್ಲಿ ಈ ಬಾರಿ ಸರಕಾರ ವಿಫಲವಾಯಿತೆ ಎಂಬ ಅನುಮಾನ ಕಾಡುತ್ತಿದೆ.

ಕೇವಲ ಹತ್ತು ದಿನಗಳಲ್ಲಿ ತುರ್ತು ನಿಗಾ ಘಟಕಕ್ಕೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬೆಡ್ ಹಾಗೂ ಆಕ್ಸಿಜನ್‌ಗಳ ಅವಶ್ಯಕತೆ ದಿನೇ ದಿನೇ ಹೆಚ್ಚುತ್ತಿದೆ. ಕರೋನಾ ಸಂದರ್ಭದಲ್ಲಿ ಮಾನಸಿಕ ಸ್ಥೈರ್ಯದಿಂದ ಇರುವಂತೆ ಪ್ರಧಾನಿ ಮನ್ ಕಿ ಬಾತ್ ಮೂಲಕ ಸಂದೇಶ ರವಾನಿಸಿದ್ದಾರೆ. ಇಂದು ರಾಜ್ಯದಲ್ಲಿ ಕಫ್ಯೂ ಜತೆಯಲ್ಲಿಯೇ ಔಷಧ – ಆಕ್ಸಿಜನ್‌ಗಳ
ಅವಶ್ಯಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬಹಳಷ್ಟು ಪ್ರಯತ್ನಗಳಾಗಬೇಕಿದೆ.

ಇಂಥ ವೇಳೆ ರಾಜ್ಯವು ಕೈಗೊಂಡಿರುವ ಕ್ರಮಗಳ ಬಗ್ಗೆ ಎಲ್ಲವು ಅಸ್ಪಷ್ಟವಾಗಿ ಗೋಚರಿಸುತ್ತಿದೆ. ತಾನು ಕೈಗೊಳ್ಳುವ ಕ್ರಮಗಳ ಮೂಲಕ ಜನರಲ್ಲಿ ಭರವಸೆ ಮೂಡಿಸಬೇಕಾದ ಸರಕಾರ ಮೌನವಹಿಸಿದೆ.ಇದರಿಂದ ಜನರಲ್ಲಿ ದಿನೇ ದಿನೇ ಹೆಚ್ಚಳವಾಗು ತ್ತಿರುವುದು ದುರಂತದ ಸಂಗತಿ.

Leave a Reply

Your email address will not be published. Required fields are marked *