Monday, 16th September 2024

ಗೋಹತ್ಯೆ ನಿಷೇಧ ವಿಧೇಯಕ ಗೊಂದಲಗಳಿಗೆ ಆಸ್ಪದ ಅನಗತ್ಯ

ರಾಜ್ಯದಲ್ಲಿ ಬಹುದಿನಗಳ ಬೇಡಿಕೆಯಾಗಿ ಉಳಿದಿದ್ದ ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿದೆ. ವಿಪಕ್ಷಗಳ ವಿರೋಧದ
ನಡುವೆಯೂ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ –೨೦೨೦ ವಿಧಾನಪರಿಷತ್‌ನಲ್ಲಿ ಅಂಗೀಕಾರಗೊಂಡಿದೆ.

ಕೃಷಿ ಹಾಗೂ ಜಾನುವಾರುಗಳಿಗೆ ರಕ್ಷಣೆ ನೀಡುವ ಸಲುವಾಗಿ ಗೋಹತ್ಯೆ ನಿಷೇಧ ಕಾಯಿದೆ ಜಾರಿ ಗೊಳಿಸಲಾಗಿದೆ ಎಂಬುದಾಗಿ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ವೇಳೆ ಅನಗತ್ಯ ಗೊಂದಲಗಳಿಗೆ ಆಸ್ಪದ ನೀಡುವುದಕ್ಕಿಂತ ಸೂಕ್ತ ಮಾರ್ಗದರ್ಶನದ ಅನುಸರಣೆ ಮುಖ್ಯವಾಗ ಬೇಕಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಕರ್ನಾಟಕದಲ್ಲಿ ಈ ವಿಧೇಯಕದ ಜಾರಿಗಾಗಿ ಅನೇಕ ಹೋರಾಟಗಳು ನಡೆದಿದ್ದವು.

ರಾಜ್ಯದ ರೈತರು ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡಲು ಯಾವುದೇ ರೀತಿ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. ಗೋಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ಮಾತ್ರವೇ ಈ ವಿಧೇಯಕ ಪ್ರಮುಖಪಾತ್ರವಹಿಸಲಿದೆ. ಕೃಷಿ ಉದ್ದೇಶಕ್ಕಾಗಿಯೇ ಜಾನುವಾರು
ಸಾಗಾಣಿಕೆ ಮಾಡುವವರು ತಮ್ಮ ಸಂಪೂರ್ಣ ವಿಳಾಸ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಸಾಗಾಣಿಕೆ ಉದ್ದೇಶದ ವಿವರಣೆ ಹೊಂದಿರುವ ದೃಢೀಕರಣ ನೀಡಿ ಸಾಗಾಣಿಕೆ ಮಾಡಬಹುದು.

ಈ ಕಾಯಿದೆಯ ಅನುಷ್ಠಾನದಿಂದ ನಿಜವಾಗಿ ತೊಡಕು ಉಂಟಾಗುವುದು ಗೋಹತ್ಯೆ ಹಿನ್ನೆಲೆಯಲ್ಲಿ ಜಾನುವಾರು ಸಾಗಾಣಿಕೆ ಮಾಡುವವರಿಗೆ. ಕೃಷಿಗೆ ಪೂರಕವಾಗಿ ಜಾನುವಾರುಗಳ ರಕ್ಷಣೆಗಾಗಿ ರಚಿಸಿರುವ ಈ ವಿಧೇಯಕದ ವಿಚಾರದಲ್ಲಿ ಗೊಂದಲಗಳಿ ಗಿಂತ ಪೂರಕ ಅಂಶಗಳ ಅರಿವು ಮುಖ್ಯವಾಗಬೇಕಿದೆ.

Leave a Reply

Your email address will not be published. Required fields are marked *