Thursday, 19th September 2024

ಭಾರತದ ಜತೆಗಿನ ಬಾಂಧವ್ಯಕ್ಕೆ ಪೂರಕವಾದ ನಡೆ

ಯಾವುದೇ ದೇಶಗಳಿಗೆ ಮತ್ತೊಂದು ದೇಶಗಳ ಸಹಕಾರ ಅವಶ್ಯ. ಪ್ರತಿಯೊಂದು ದೇಶಗಳು ಒಂದೊಂದು ದೇಶದೊಂದಿಗೆ
ಮಿತೃತ್ವವನ್ನು ಹೊಂದಿರುತ್ತವೆ.

ಚೀನಾದ ಕುತಂತ್ರ ನಡೆಯ ಸಂದರ್ಭದಲ್ಲಿ ಅಮೆರಿಕವು ಭಾರತಕ್ಕೆ ಪೂರಕವಾಗಿ ಸ್ಪಂದಿಸಿದ್ದನ್ನೂ ಗಮನಿಸಬಹುದು.
ನೆದರ್ ‌ಲ್ಯಾಂಡ್ ಘೋಷಿಸಿದ ಒಂದು ದಿಟ್ಟ ಕ್ರಮ ಹಲವು ದೇಶಗಳ ಮೆಚ್ಚುಗೆ ಗಳಿಸಿದ್ದರ ಜತೆಗೆ ಭಾರತಕ್ಕೆ ಬಹಳಷ್ಟು ಅನುಕೂಲವಾಗಿದೆ.

ತನ್ನ ದೇಶಕ್ಕೆ ಕಳ್ಳತನದ ಮೂಲಕ ಬಂದ ಪ್ರಾಚೀನ ವಿಗ್ರಹಗಳನ್ನು ಆಯಾ ದೇಶಗಳಿಗೆ ಮರಳಿಸುವುದಾಗಿ ನೆದರ್‌ಲ್ಯಾಂಡ್ ಘೋಷಿಸಿತು. ಈ ಕ್ರಮ ಹಲವು ದೇಶಗಳಿಗೆ ಮೆಚ್ಚುಗೆಯಾಗಿದ್ದರಿಂದ ಇತರ ರಾಷ್ಟ್ರಗಳೂ ಈ ನಡೆಯನ್ನು ಅನುಸರಿಸಿದವು. ಈ ನಡೆ ದೇಶ-ದೇಶಗಳ ನಡುವಿನ ಬಾಂಧವ್ಯ ಹೆಚ್ಚಳಕ್ಕೂ ಕಾರಣವಾಯಿತು. ಈ ಬೆಳವಣಿಗೆಯಿಂದ ಇದೀಗ ಭಾರತಕ್ಕೆ ಮರಳಿ
ಪ್ರಾಚೀನ ವಿಗ್ರಹಗಳು ದೊರೆತಿವೆ. ನಾನಾ ದೇಶಗಳಲಿದ್ದ ಪುರಾತನ ವಿಗ್ರಹಗಳನ್ನು ಮರಳಿ ಪಡೆಯುವಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಹತ್ವದ ಪಾತ್ರವಹಿಸಿದೆ.

ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ದೇಶಗಳ ವಸ್ತು ಸಂಗ್ರಹಾಲಯಗಳಲ್ಲಿದ್ದ 36 ಪ್ರಾಚೀನ ವಿಗ್ರಹಗಳನ್ನು ಭಾರತವು ಕಳೆದ ಐದು ವರ್ಷಗಳಲ್ಲಿ ಮರಳಿ ಪಡೆದುಕೊಂಡಿದೆ. ಇವುಗಳೆಲ್ಲವೂ ಐತಿಹಾಸಿಕ ದಾಖಲೆಗಳಾಗಿದ್ದು, ಪುನಃ ದೇಶಕ್ಕೆ ಮರಳಿರುವುದು ಮಹತ್ವ. ಧಾರ್ಮಿಕವಾಗಿ ಬಹಳಷ್ಟು ನಂಬಿಕೆ ಹೊಂದಿರುವ ಭಾರತಕ್ಕೆ ಮರಳಿರುವ ಪುರಾತನ ವಿಗ್ರಹಗಳೂ ದೇವರ ವಿಗ್ರಹಗಳೆ ಎಂಬುದು ಮತ್ತೊಂದು ಬಹುಮುಖ್ಯ ಸಂಗತಿ.

ಸ್ವಪ್ರೇರಣೆಯಿಂದ ಅನ್ಯ ದೇಶಗಳು ನಮ್ಮ ದೇಶದ ಪುರಾತನ ವಸ್ತುಗಳನ್ನು ಮರಳಿಸುವ ಮೂಲಕ ಬಾಂಧವ್ಯ ವೃದ್ಧಿಗೆ ಪೂರಕ ವಾಗಿ ನಡೆದುಕೊಂಡಿರುವುದು ಶ್ಲಾಘನೀಯ ಕಾರ್ಯ.

Leave a Reply

Your email address will not be published. Required fields are marked *