Thursday, 19th September 2024

ಬರಲಿದೆ ಚೇತಕ್ ಎಂಬ ಹಂಸ

ಜಯ ಚಾಮರಾಜೇಂದ್ರ ರಸ್ತೆೆಯ ಹಂಚಿನಲ್ಲಿ ಒಂದೆರಡು ಸೈಕಲ್ ಅಂಗಡಿಗಳಿದ್ದವು. ಅಲ್ಲಿ ಸೈಕಲ್‌ನ್ನು ಬಿಡಿಬಿಡಿಯಾಗಿ ಖರೀದಿಸಿ ತಂದು ಅದನ್ನು ಮೆಕಾನಿಕ್‌ನಿಂದ ಜೋಡಿಸಿಕೊಂಡು ಸವಾರಿ ಮಾಡುವುದರಲ್ಲಿ ರೋಚಕವಿದ್ದಿತ್ತು. ಸೈಕಲ್ ಖರೀದಿಸಿಟ್ಟಿಿಕೊಂಡವನು ಅಂದಿನ ದಿನಮಾನಗಳಲ್ಲಿ ದೊಡ್ಡ ‘ರುಸ್ತುಂ ರಾಜ’ ಎನಿಸಿಕೊಳ್ಳುತ್ತಿಿದ್ದ. ಅಂತಹ ಕಾಲದಲ್ಲಿ ಮೋಟರ್ ಸೈಕಲ್‌ಗಳದ್ದೇ ದೊಡ್ಡ ಫ್ಯಾಾಶನ್ ಜೋರ್ ಎನಿಸಿತ್ತು. ಸುವೇಗ, ಲೂನ, ಹೀರೋ ಪುಕ್, ಅವಂತಿನೋವ, ಟಿವಿಎಸ್ ಎಕ್ಸೆೆಲ್, ಎಕ್‌ಸ್‌‌ಟಿ, ಚ್ಯಾಾಂಪ್ ಹೆಸರಿನ ಮೊಪೆಡ್‌ಗಳು ಬೆಂಗಳೂರಿಗೆ ಲಗ್ಗೆೆ ಇಟ್ಟಿಿದ್ದವು. ಇಂತಹ ಮೊಪೆಡ್ ಗಾಡಿಗಳನ್ನು ಓಡಿಸಿಕೊಂಡು ಮುಖ್ಯರಸ್ತೆೆಗೆ ಬಂದರೆ ಅದೆಂತಹ ರೋಮಾಂಚನವಿರುತ್ತಿಿತ್ತು ಎಂಬುದು ಆ ಸವಾರನೇ ಬಲ್ಲವನಿಗೆ ಗೊತ್ತಿಿತ್ತು.

ಇದರ ಜತೆಯಲ್ಲಿ ದ್ವಿಿಚಕ್ರ ಸವಾರನ ಮಹಾರಥ ಎನಿಸಿಕೊಂಡಿದ್ದು ಬಜಾಜ್ ಚೇತಕ್. ಅಂದಿನ ಅಂದರೆ 1972ರಲ್ಲಿ ಪರಿಚಯಗೊಂಡ ಚೇತಕ್ ಮೊಪೆಡ್ ಆಗಿರದೆ ನಾಲ್ಕು ಗೇರ್ ಒಳಗೊಂಡ ಟೂ ಸ್ಟ್ರೋೋಕ್ ಎಂಜಿನ್ ಹೊಂದಿತ್ತು. ಆ ಕಾಲದಲ್ಲಿ ವರದಕ್ಷಿಣೆಯ ವಸ್ತುಗಳಲ್ಲಿ ಈ ಸ್ಕೂಟರ್ ಬಹು ಬೇಡಿಕೆಯ ವಸ್ತು ಆಗಿತ್ತು. ಆಭರಣ ಮನೆ ಸ್ಕೂಟರ್ ಎಂಬುದು ವರನ ಕಡೆಯವರ ಸಾಮಾನ್ಯ ಬೇಡಿಕೆಯಲ್ಲಿ ಸ್ಥಾಾನ ಪಡೆದು ಕೊಂಡಿತ್ತು. ಈ ಚೇತಕ್‌ನ ವಿಶೇಷವೆಂದರೆ ಚಾಲನಕ ಆಸನ ಭದ್ರವಾದ ಸ್ಪ್ರಿಂಗ್ ಹೊಂದಿದೆ. ಇದು ಎಂತಹ ಹಳ್ಳಕೊಳ್ಳಗಳೇ ಇರಲಿ ದೇಹದ ಸೂಕ್ಷ್ಮ ಅಂಗವಾದ ಬೆನ್ನು ಮೂಳೆಯನ್ನು ಜೋಪಾನವಾಗಿ ರಕ್ಷಣೆ ಮಾಡುವುದು ಇದೆ ವೈಶಿಷ್ಟವಾಗಿದೆ.

ವಾಹನ ಸವಾರನಿಗೆ ಬೆನ್ನು ನೋವು ಎಂಬುದೇ ಇರದಂತೆ ಈ ಚೇತಕ್ ಆರೋಗ್ಯಕರವಾಗಿದ್ದಿತ್ತು. ಈಗಿನ ಲಕ್ಷಾಂತರ ರುಪಾಯಿಗಳ ದ್ವಿಿಚಕ್ರಗಳನ್ನು ಖರೀದಿಸಿದರೂ ಬೆನ್ನು ಮೂಳೆಗೆ ಇದಕ್ಕಿಿಂತ ರಕ್ಷಣಾತ್ಮಕ ಪೀಠ ನೀಡಲು ಸಾಧ್ಯವಾಗಿಲ್ಲ. ಆದರೆ, 2000ರಲ್ಲಿ ತರೆಕಂಡ ವರ್ಷದ ನಂತರ ಹೋಂಡ ಅವರ ಆಕ್ಟಿಿವಾ ದ್ವಿಿಚಕ್ರ ವಾಹನ ಪರಿಚಯವಾದಾಗ ಆಗ ಜನ ಚೇತಕ್‌ನ್ನು ಕಡೆಗಣಿಸಿದರು, ಎರಡು ಕೈ ಒಂದು ಕಾಲಿನ ಅವಶ್ಯಕತೆ ಇದ್ದ ಚೇತಕ್‌ನ್ನು ಬಿಟ್ಟು, ಎರಡು ಕೈಗಳು ಸಾಕೆಂದು ಹೋಂಡಾ ಆಕ್ಟಿಿವಾ ಗಾಡಿಗೆ ಜೋತುಬಿದ್ದರು. ಚೇತಕ್‌ನ ಒಂದು ದೌರ್ಬಲ್ಯವೆಂದರೆ ಅದು ಗಂಡಹೆಂಡತಿಯನ್ನು ಪ್ರತ್ಯೇಕಾಸನದಲ್ಲಿ ವ್ಯವಸ್ಥೆೆ ಹಾಗೆಯೇ ಅದರ ಪೀಠದಲ್ಲಿ ಕುಳಿತುಕೊಳ್ಳುವಂತೆ ಮಾಡಿ ಒಬ್ಬರಿಗೊಬ್ಬರು ಅಂಟಿಕೊಂಡು ಕೂರುವಂತೆ ಬಿಡುತ್ತಿಿರಲಿಲ್ಲ. ಹೀಗಾಗಿ ಅಂದು ಜನ ಇಂತಹ ಅನುಕೂಲಕರ ಆರೋಗ್ಯಕರ ಚೇತಕ್‌ನ್ನು ಮಾರಲು ಶುರು ಮಾಡಿದರು. ಸಹಜವಾಗಿ 2006 ಬಜಾಜ್ ಕಂಪನಿಯ ಚೇತಕ್ ಉತ್ಪಾಾದನೆಯನ್ನು ನಿಲ್ಲಿಸಿಯೇ ಬಿಟ್ಟರು. ಆದರೆ, ಇಂದು ಸಹ ಐವತ್ತು ದಾಡಿದ ದ್ವಿಿಚಕ್ರ ವಾಹನ ಸವಾರರು ಬೆನ್ನು ನೋವಿನಿಂದ ಪಾರಾಗಲು ಹಳೆಯ ಚೇತಕ್‌ನ್ನು ನೆನೆಸಿಕೊಳ್ಳುವಂತ್ತಾಾಗಿದೆ. ಈಗ ಬಂದಿರುವ ಹೊಸ ಸುದ್ದಿಯಂತೆ ಬಜಾಜ್ ಕಂಪನಿ ಚೇತಕ್‌ನ್ನು ಬ್ಯಾಾಟರಿ ಚಾಲಿತವಾಗಿ ಪುನಃ ಪರಿಚಯಿಸುತ್ತಿಿದೆ. ನಿರಾಸೆ ಎಂದರೆ ಮೊದಲಿನಂತೆ ಸ್ಪ್ರಿಂಗ್ ಸೀಟ್ ಆಗಿರದೆ ಇಂದಿನ ಆಕ್ಟಿಿವಾ ಆಕ್ಸೆೆಸ್ ಜುಪಿಟರ್ ಪ್ರೆೆಸರ್ ಗಾಡಿಗಳಿಗೆ ಪೈಪೋಟಿ ನೀಡುವುದಕಷ್ಟೇ ಆಗಿದೆ.

Leave a Reply

Your email address will not be published. Required fields are marked *