Monday, 16th September 2024

ಕರೋನಾ ಲಸಿಕೆ ಭಯ ನಿವಾರಿಸಿ

ವಿಶ್ವವನ್ನು ಕಾಡಿದ ಕರೋನಾಕ್ಕೆ ಇದೀಗ ಲಸಿಕೆ ಕಂಡು ಹಿಡಿಯಲಾಗಿದೆ. ಹಲವು ದೇಶಗಳು ಈಗಾಗಲೇ ಲಸಿಕೆಯನ್ನು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ.

ಇದೇ ರೀತಿ ಭಾರತವೂ ಸ್ವದೇಶಿ ನಿರ್ಮಿತ ಲಸಿಕೆಯನ್ನು ಅನುಮೋದಿಸಿದೆ. ಆದರೆ ಈ ಲಸಿಕೆ ಬಗ್ಗೆ ಜನರಲ್ಲಿ ಪೂರ್ಣ ವಿಶ್ವಾಸ
ಮೂಡಿಲ್ಲ ಎನ್ನುವ ಭಾವನೆ ಮೂಡುತ್ತಿದೆ. ಸರಕಾರ ಕರೋನಾ ಲಸಿಕೆ ವಿತರಣೆಗೆ ಅನುಮತಿ ನೀಡಿದ ಬಳಿಕ, ಯಾವ ರೀತಿಯಲ್ಲಿ ಲಸಿಕೆ ಹಂಚಿಕೆಯಾಗುತ್ತದೆ ಎನ್ನುವ ಬಗ್ಗೆ ಹಲವು ಮಾಹಿತಿ ನೀಡಿತ್ತು.

ಯಾರಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಈ ಲಸಿಕೆಯನ್ನು ಹೇಗೆ ಶೇಖರಣೆ ಮಾಡಲಾಗುತ್ತದೆ, ಯಾವ ರೀತಿ ವಿತರಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಆದರೆ ಲಸಿಕೆ ಹಾಕುವ ಪ್ರಕ್ರಿಯೆ ಆರಂಭಗೊಂಡ ಬಳಿಕ ಶುರುವಾಗಿರುವ ಆತಂಕ ವನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಮಾತ್ರ ಸರಕಾರ ಹೆಚ್ಚು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.

ಕರೋನಾ ಲಸಿಕೆ ಹಾಕಿಸಿಕೊಂಡ ಕೆಲವರಿಗೆ ಸೈಡ್ ಎಫೆಕ್ಟ್ ಕಾಣಿಸಿಕೊಂಡಿದೆ. ಭಾರತದಲ್ಲಿ ಮಾತ್ರವಲ್ಲದೇ, ವಿಶ್ವದೆಲ್ಲೆಡೆ ಲಸಿಕೆ ಹಾಕಿಸಿಕೊಂಡ ಬಳಿಕ ಕೆಲವರಲ್ಲಿ ಅಡ್ಡ ಪರಿಣಾಮ ಮೂಡಿದೆ. ಯಾವುದೇ ಲಸಿಕೆ ಅಥವಾ ಔಷಧವಾಗಲಿ, ಈ ರೀತಿಯ ಸೈಡ್ ಎಫೆಕ್ಟ್ ಇರುವುದು ಸಹಜ. ಆದರೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಕೆಲಸವನ್ನು ಸರಕಾರಗಳು ಮಾಡಬೇಕಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ಕೂಡಲೇ ಬಗೆಹರಿಸುವ ಅಥವಾ ಮುಂದಿನ ದಿನದಲ್ಲಿ ಈ ಬಗ್ಗೆ
ಎಚ್ಚರಿಕೆ ವಹಿಸುವ ಕೆಲಸವನ್ನು ಮಾಡುವುದರೊಂದಿಗೆ, ಜನರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದಾಗ ಮಾತ್ರ ಲಸಿಕೆಯನ್ನು ಜನರು ಪೂರ್ಣ ನಂಬಿ ಸ್ವೀಕರಿಸುತ್ತಾರೆ.

ಈ ನಿಟ್ಟಿನಲ್ಲಿ ಸರಕಾರಗಳು ಕೆಲಸ ಮಾಡಬೇಕಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ಕೂಡಲೇ ಬಗೆಹರಿಸುವ ಅಥವಾ ಮುಂದಿನ ದಿನದಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸುವ ಕೆಲಸವನ್ನು ಮಾಡುವುದರೊಂದಿಗೆ, ಜನರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದಾಗ ಮಾತ್ರ ಲಸಿಕೆಯನ್ನು ಜನರು ಪೂರ್ಣ ನಂಬಿ ಸ್ವೀಕರಿಸುತ್ತಾರೆ. ಈ ನಿಟ್ಟಿನಲ್ಲಿ ಸರಕಾರಗಳು ಕೆಲಸ ಮಾಡಬೇಕಿದೆ.

Leave a Reply

Your email address will not be published. Required fields are marked *