Monday, 16th September 2024

ರಕ್ಷಣಾ ವ್ಯವಸ್ಥೆಗೆ ಮಾರಕವಾದ ದಾಳಿ

ದೇಶದಲ್ಲಿ ರೈತರ ಪ್ರತಿಭಟನೆಗಳಿಂದ ಆಂತರಿಕವಾಗಿ ರಕ್ಷಣಾ ವ್ಯವಸ್ಥೆ ಹದಗೆಟ್ಟಿರುವ ಸಂದರ್ಭದಲ್ಲಿ ಭಾರತೀಯ ಸೇನೆಗೂ ಸವಾಲಿನ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಒಂದೆಡೆ ಚೀನಾ ಗಡಿ ಸಮಸ್ಯೆ, ಮತ್ತೊಂದೆಡೆ ಪಾಕಿಸ್ತಾನದಿಂದ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ
ಅಗಾಗ್ಗೆ ಸಂಭವಿಸುವ ಉಗ್ರಗಾಮಿ ಚಟುವಟಿಕೆಗಳು ಸೇನೆಗೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಸೇನೆ ಎಷ್ಟೇ ಬಲಿಷ್ಠ ವಾಗಿದ್ದರೂ ಅಗಾಗ್ಗೆ ಸಂಭವಿಸುತ್ತಿರುವ ಉಗ್ರಗಾಮಿ ಚಟುವಟಿಕೆಗಳು ದೇಶದ ರಕ್ಷಣಾ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸು ತ್ತಿದೆ.

ಈ ಹಿನ್ನೆಲೆಯಲ್ಲಿ ಉಗ್ರನಿಗ್ರಹಕ್ಕೆ ಮತ್ತಷ್ಟು ಆದ್ಯತೆ ನೀಡಬೇಕಿರುವ ಅಗತ್ಯ ಹಾಗೂ ಅನಿವಾರ್ಯ ಪರಿಸ್ಥಿತಿ ನಿರ್ಮಾಣ
ಗೊಂಡಿದೆ. ಉತ್ತರ ಕಾಶ್ಮೀರ ಜಿಯಲ್ಲಿ ೭೨ನೇ ಗಣರಾಜ್ಯೋತ್ಸವ ಆಚರಣೆಯ ನಂತರ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳು ಜೀವಂತ ಗ್ರೆನೇಡ್ ಪತ್ತೆ ಹಚ್ಚಿ ದೊಡ್ಡ ದುರಂತವನ್ನು ತಪ್ಪಿಸಿವೆ. ಬಾರಾಮುದ ಚಂದೂಸಾದ ಶೆರ್ಪೊರಾ ಗ್ರಾಮದಲ್ಲಿ ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದಾಗ ಜೀವಂತ ಗ್ರೆನೇಡ್ ಪತ್ತೆಯಾಗಿದೆ.

ಸೈನಿಕರು ಗ್ರೆನೇಡ್ ನಿಷ್ಕ್ರಿಯಗೊಳಿಸಿ ಅಪಾಯವನ್ನು ತಪ್ಪಿಸಿದ್ದಾರೆ. ಮತ್ತೊಂದೆಡೆ, ದಕ್ಷಿಣ ಕಾಶ್ಮೀರ ಕುಲ್ಗಾಮ್ ಜಿಯಲ್ಲಿ ಉಗ್ರರು ಸುಧಾರಿತ ಸೋಟಕ ಸಾಧನ (ಐಇಡಿ) ಸೋಟಿಸಿದ ಘಟನೆಯಲ್ಲಿ ಓರ್ವ ಸೈನಿಕ ಹುತಾತ್ಮನಾಗಿದ್ದು, ಇತರ ಮೂವರು ಸೈನಿಕರು ಗಾಯಗೊಂಡಿದ್ದಾರೆ. ಕುಲ್ಗಾಮ್‌ನ ಖಾನಾಬಾಲ್ನಾ ಪ್ರದೇಶದ ಶಹಶಿಪೋರಾದಲ್ಲಿ ಸೈನಿಕರ ನೈರ್ಮಲ್ಯೀಕರಣದ ಅಭ್ಯಾಸದ ವೇಳೆ ಗ್ರೆನೇಡ್ ದಾಳಿ ನಡೆದಿದೆ.

ಖಾಸಗಿ ಶಾಲೆಯ ಬಳಿ ಮುಖ್ಯ ರಸ್ತೆಯಲ್ಲಿ ಹೂತಿಡಲಾಗಿದ್ದ ಐಇಡಿಯನ್ನು ಸ್ಪೋಟಿಸಿ ಸೈನಿಕರ ಹತ್ಯೆಗೆ ಮುಂದಾಗಿದ್ದಾರೆ ಉಗ್ರರು. ಇಂಥ ದಾಳಿಗಳು ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುತ್ತಿರುವ ಇಂಥ ಸಂದರ್ಭದಲ್ಲಿ ಉಗ್ರಗಾಮಿ ಚಟುವಟಿಕೆಗಳ ಕಡಿವಾಣಕ್ಕೆ ಆದ್ಯತೆ ಹೆಚ್ಚಾಗಬೇಕಿದೆ.

Leave a Reply

Your email address will not be published. Required fields are marked *