Monday, 16th September 2024

ಭಾರತೀಯರ ಶಿಸ್ತು ಮಾದರಿ

#corona

ಕಳೆದ ಒಂದು ವರ್ಷದ ಹಿಂದೆ ಕೋವಿಡ್ ಸೋಂಕು ಚೀನಾದಿಂದ ಹಲವು ರಾಷ್ಟ್ರಗಳಿಗೆ ಹರಡಿದ ವೇಳೆ ಇಡೀ ಜಗತ್ತೇ ಬೆಚ್ಚಿ ಬಿದ್ದಿತು. ಇಂಥ ವೇಳೆಯಲ್ಲಿ ಭಾರತದಲ್ಲಿ ಕರೋನಾ ನಿಯಂತ್ರಣಕ್ಕೆ ಸಹಕಾರಿಯಾದದ್ದು ಭಾರತೀಯರ ಶಿಸ್ತು.

ಯಾವುದೇ ಪರಿಹಾರ ಕಾಣದಿದ್ದ ಸಂದರ್ಭದಲ್ಲಿ ಮೊಟ್ಟಮೊದಲನೆಯದಾಗಿ ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದರು. ಪ್ರಧಾನಿಯವರ ಒಂದೇ ಒಂದು ಕರೆಗೆ ಜನರು ವ್ಯಕ್ತಪಡಿಸಿದ ಪ್ರತಿಕ್ರಿಯೆ ಅಭೂತಪೂರ್ವವಾಗಿದ್ದು, ಯಶಸ್ವಿಗೊಳಿಸ ಲಾಯಿತು. ಜನತಾ ಕರ್ಫ್ಯೂನಿಂದ ಪ್ರೇರಿತರಾದ ಭಾರತೀಯರು ನಂತರ ಮೋದಿಯವರ ಪ್ರತಿಯೊಂದು ಕರೆಗೂ ಸ್ಪಂದಿಸ ತೊಡಗಿದರು.

ಆರಂಭಿಕ ದಿನಗಳಲ್ಲಿ ಕರೋನಾ ನಿಯಂತ್ರಣಕ್ಕೆ ದೊರೆತ ಏಕೈಕ ಮಾರ್ಗ ಲಾಕ್‌ಡೌನ್. ಈ ವೇಳೆಯೂ ಜನತೆ ತಮ್ಮ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಸರಕಾರ ಸೂಚಿಸಿದಂತೆ ಶಿಸ್ತನ್ನು ಪಾಲಿಸಿದರು. ಮೊಟ್ಟ ಮೊದಲು ಜನರ ಶಿಸ್ತು ಪಾಲನೆ ಯಿಂದಾಗಿಯೇ ಕರೋನಾ ಸೋಂಕಿನ ನಿಯಂತ್ರಣ ಸಾಧ್ಯವಾಯಿತು. ಇದೀಗ ಎರಡನೆಯ ಅಲೆ ಆರಂಭಗೊಂಡು ಪ್ರಕರಣ ಗಳಲ್ಲಿ ಏರಿಕೆ ಕಂಡುಬರುತ್ತಿದ್ದರೂ ಈಗಾಗಲೇ ಹಲವು ಮಾರ್ಗೋಪಾಯಗಳನ್ನು ಕಂಡುಹಿಡಿಯಲಾಗಿದೆ.

ಸೋಂಕಿತರಿಗೆ ಲಸಿಕೆ ನೀಡಲಾಗುತ್ತಿದೆಯಾದರೂ, ಇತರರಿಗೆ ಹರಡದಂತೆ ತಡೆಯುವುದೇ ಪ್ರಮುಖ ಜವಾಬ್ದಾರಿಯಾಗಿದೆ. ಇಂಥ ದಿನಗಳಲ್ಲಿ ಮತ್ತೊಮ್ಮೆ ಜನರಿಂದ ಶಿಸ್ತಿನ ಪಾಲನೆ ಅಗತ್ಯವಿದೆ. ಕರೋನಾ ಎಂಬ ಅನಿರೀಕ್ಷಿತ ಆಘಾತ ಭಾರತಕ್ಕೆ ಅಪ್ಪಳಿಸಿ ಇದೀಗ ಒಂದು ವರ್ಷ ಕಳೆದಿದೆ. ಅಂದಿನ ಸಂಕಷ್ಟ ಸಮಯದಲ್ಲಿ ಜನರು ತೋರಿದ ಶಿಸ್ತಿನ ಬಗ್ಗೆ ಪ್ರಧಾನಿಯವರು ಪ್ರಸ್ತುತ
ತಮ್ಮ ೭೫ನೇ ಮನ್ ಕಿ ಬಾತ್‌ನಲ್ಲಿ ಸ್ಮರಿಸಿದ್ದಾರೆ. ಕರೋನಾ ವಾರಿಯರ‍್ಸ್‌ಗಳ ಸೇವೆ ಶ್ಲಾಘನೀಯ.

ಜನರು ಚಪ್ಪಾಳೆ ತಟ್ಟಿ, ದೀಪ ಬೆಳಗಿ ಕರೋನಾ ವಾರಿಯರ‍್ಸ್‌ಗಳ ಸೇವೆಗೆ ಗೌರವ ಸೂಚಿಸಿದ್ದು ನಿಸ್ವಾರ್ಥ ಸೇವೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತೀಯರ ಈ ಶಿಸ್ತು ವಿಶ್ವಕ್ಕೆ ಪ್ರೇರಣೆ ಎಂಬುದು ಪ್ರತಿಯೊಬ್ಬ ಭಾರತೀಯರಿಗೂ ಹಮ್ಮೆಯ ಸಂಗತಿ.

Leave a Reply

Your email address will not be published. Required fields are marked *