Monday, 16th September 2024

ಲಸಿಕೆ ವಿತರಣೆ ತಾರತಮ್ಯ ದೂರಾಗಲಿ

ಕರೋನಾ ನಿವಾರಣೆಗೆ ಲಸಿಕೆ ಕಂಡುಹಿಡಿದ ಸಂತಸದಲ್ಲಿರುವ ಈ ಸಂದರ್ಭದಲ್ಲಿ ಅದು ಉಂಟುಮಾಡಿರುವ ಹಾನಿಯ ತೀವ್ರತೆ
ಆತಂಕಕಾರಿಯಾಗಿದೆ. ಒಂದೆಡೆ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಸೋಂಕಿನ ಮೂಲ ಪತ್ತೆಗೆ ಸಂಶೋ ಧನಾ ತಂಡ ಪರೀಕ್ಷೆ ಆರಂಭಿಸಿದೆ.

ಕರೋನಾ ಸೋಂಕಿನ ದಾಳಿಗೆ ಬಹಳಷ್ಟು ದೇಶಗಳು ತತ್ತರಿಸಿದ್ದರೂ, ಹೆಚ್ಚಿನ ಹಾನಿಗೊಳಗಾಗಿರುವುದು ಅಮೆರಿಕ. ವಿಶ್ವದ
ಸೋಂಕಿನ ಅತಿ ಹೆಚ್ಚು ತೀವ್ರತೆ ಹೊಂದಿರುವ ಅಮೆರಿಕಾದಲ್ಲಿ ಕರೋನಾದಿಂದ ಮೃತಪಟ್ಟವರ ಸಂಖ್ಯೆ ಎರಡನೇ ಮಹಾ ಯುದ್ಧದಲ್ಲಿ ಮರಣ

ಹೊಂದಿದವರ ಸಂಖ್ಯೆಯನ್ನು ಮೀರಿದೆ. ಎರಡನೆ ಮಹಾಯುದ್ಧದಲ್ಲಿ ಮರಣ ಹೊಂದಿದ ಅಮೆರಿಕನ್ನರ ಸಂಖ್ಯೆ ೪,೦೫,೩೯೯ ಕ್ಕಿಂತ ಹೆಚ್ಚು. ಕರೋನಾದಿಂದ ಮೃತಪಟ್ಟವರ ಸಂಖ್ಯೆ ಈವರೆಗೆ ೪,೦೫,೪೦೦. ವಿಶ್ವ ಆರೋಗ್ಯ ಸಂಸ್ಥೆ ಒಳಗೊಂಡಿರುವ ಅಗ್ರಗಣ್ಯ ರಾಷ್ಟ್ರದ ಸ್ಥಿತಿಯೇ ಈ ರೀತಿಯಾದರೆ ಸಣ್ಣ ರಾಷ್ಟ್ರಗಳ ಸ್ಥಿತಿ ಇನ್ನೂ ಚಿಂತಾನಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಲಸಿಕೆ ವಿತರಣೆಯಲ್ಲಿ ತಾರತಮ್ಯ ನಿವಾರಣೆಯಾಗಬೇಕಿದೆ.

ಕೆಲವು ರಾಷ್ಟ್ರಗಳು ಮೊದಲು ನಮಗೆ ಲಸಿಕೆ ಲಭ್ಯವಾಗಲಿ ಎಂಬ ಮನೋಭಾವ ಹೊಂದಿರುವುದು ಕೆಲವು ಬಡ ರಾಷ್ಟ್ರಗಳಲ್ಲಿ ಅಪಾಯದ ಸ್ಥಿತಿ ಸೃಷ್ಟಿ ಯಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಕಳವಳ ವ್ಯಕ್ತಪಡಿಸಿದ್ದು, ಲಸಿಕೆ ವಿತರಣೆಯಲ್ಲಿ ಶ್ರೀಮಂತ – ಬಡ ರಾಷ್ಟ್ರಗಳೆಂಬ ತಾರತಮ್ಯ ಸರಿಯಲ್ಲ ಎಂದು ತಿಳಿಸಿದೆ. ಲಸಿಕೆಗಳ ಹಂಚಿಕೆ ವಿಷಯದಲ್ಲಿ ಲಸಿಕೆ ತಯಾರಕರು ಹಾಗೂ ಸರಕಾರಗಳು ಸಮಾನ ನ್ಯಾಯ ಪಾಲಿಸಬೇಕೆಂದು ಸೂಚಿಸಿರುವುದು ಉತ್ತಮ ಬೆಳವಣಿಗೆ.

Leave a Reply

Your email address will not be published. Required fields are marked *