Monday, 16th September 2024

ನೈಜ ಬೋಗಸ್ ಕಾರ್ಡ್‌ದಾರರನ್ನು ಹುಡುಕಿ

ಫ್ರಿಡ್ಜ್, ಟಿವಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎನ್ನುವ ಹೇಳಿಕೆ ಇದೀಗ ಭಾರಿ ವಿವಾರಕ್ಕೆ ಕಾರಣ
ವಾಗಿದೆ. ಆಹಾರ ಸಚಿವ ಉಮೇಶ್ ಕತ್ತಿ ಅವರ ಈ ಹೇಳಿಕೆ ಸಾರ್ವಜನಿಕರು, ಪ್ರತಿಪಕ್ಷಗಳು ಮಾತ್ರವಲ್ಲದೇ ಸ್ವತಃ ಬಿಜೆಪಿ ನಾಯಕರೇ ವಿರೋಧಿಸಿದ್ದಾರೆ.

ಕತ್ತಿ ಅವರು ನೀಡಿರುವ ಹೇಳಿಕೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಟಿ.ವಿ ಇಲ್ಲದ ಮನೆ ಹುಡುಕುವುದು, ‘ಸಾವಿಲ್ಲದ ಮನೆಯಿಂದ ಸಾಸಿವೆ’ ತರುವಷ್ಟೇ ಕಷ್ಟದ ಕೆಲಸ. ದಿನಮಾನಕ್ಕೆ ತಕ್ಕಂತೆ ಜನ ಬದಲಾಗುತ್ತಿದ್ದು, ಟಿ.ವಿ., ಫ್ರಿಡ್ಜ್, ದ್ವಿಚಕ್ರ ವಾಹನಗಳು ಇಂದಿನ ಅಗತ್ಯವಸ್ತುಗಳ ಪಟ್ಟಿಗೆ ಅನಧಿಕೃತವಾಗಿ ಬಂದು ಸೇರಿಕೊಂಡಿವೆ. ಆದ್ದರಿಂದ
ಟಿ.ವಿ ಇದ್ದ ಮಾತ್ರಕ್ಕೆ ಬಿಪಿಎಲ್ ಪಡೆಯಲು ಅನರ್ಹ ಎನ್ನಲು ಸಾಧ್ಯವಿಲ್ಲ.

ಆದರಿಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಕತ್ತಿ ಅವರ ಹೇಳಿಕೆಯಲ್ಲಿ ಶಬ್ದಗಳ ಅರ್ಥವನ್ನು ಮಾತ್ರ ಅರ್ಥೈಸಿಕೊಳ್ಳದೇ,
ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ರಾಜ್ಯದಲ್ಲಿ ಬೋಗಸ್ ಬಿಪಿಎಲ್ ಕಾರ್ಡ್ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಐಷಾರಾಮಿ ಕಾರು, ಬಂಗಲೆ, ಚಿನ್ನ ಬೆಳ್ಳಿ ಹಾಕಿಕೊಂಡು ಬರುವ ಅದೆಷ್ಟೋ ಮಂದಿ, ಬಿಪಿಎಲ್ ಕಾರ್ಡ್‌ನಲ್ಲಿ ಪಡಿತರ ಪಡೆಯುತ್ತಿರುವುದು ಗೊತ್ತಿರುವ ಸಂಗತಿ.

ಆದ್ದರಿಂದ ಅಕ್ರಮವಾಗಿ ಕಾರ್ಡ್ ಹೊಂದಿರುವವರ ವಿರುದ್ಧ ಈ ಸಮರ ಸಾರುವುದಾದರೆ ಸ್ವಾಗತಾರ್ಹ. ಕತ್ತಿ ಅವರು ತಮ್ಮ ಅವಽಯಲ್ಲಿ ಇಂತಹ ದಿಟ್ಟ ಕ್ರಮವನ್ನು ಕೈಗೊಂಡರೆ, ನಿಜವಾಗಿಯೂ ಅರ್ಹರಿಗೆ ಸಹಾಯವಾಗಲಿದೆ. ಒಂದು ವೇಳೆ ಈ ರೀತಿಯ ಬೋಗಸ್ ಬಡವರನ್ನು ಸದೆಬಡೆಯುವ ಯೋಜನೆಯನ್ನು ಇಟ್ಟುಕೊಂಡಿದ್ದರೆ, ಅದಕ್ಕೆ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.

ಬಡವ-ಶ್ರೀಮಂತ ಎನ್ನುವ ವ್ಯತ್ಯಾಸವನ್ನು ಇಂದಿನ ಯುಗಕ್ಕೆ ಸರಿಹೊಂದುವುದಕ್ಕೆ ಇರುವ ಮಾನದಂಡಗಳೇನು ಎನ್ನುವ ಬಗ್ಗೆ ಚರ್ಚಿಸಿ ಕ್ರಮವಹಿಸಲಿ. ಅದನ್ನು ಬಿಟ್ಟು ಈ ರೀತಿ ಟಿ.ವಿ. ಫ್ರಿಡ್ಜ್ ಹೊಂದಿರುವವರನ್ನು ಅನರ್ಹರೆಂದು ಪರಿಗಣಿಸುವುದಾಗಿ ಹೇಳಿದರೆ ಗೊಂದಲವಲ್ಲದೇ ಬೇರೇನು ಆಗುವುದಿಲ್ಲ.ನೈಜ ಬೋಗಸ್ ಕಾರ್ಡ್‌ದಾರರನ್ನು ಹುಡುಕಿ ಫ್ರಿಡ್ಜ್, ಟಿವಿ ಹೊಂದಿರು ವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎನ್ನುವ ಹೇಳಿಕೆ ಇದೀಗ ಭಾರಿ ವಿವಾರಕ್ಕೆ ಕಾರಣವಾಗಿದೆ.

ಆಹಾರ ಸಚಿವ ಉಮೇಶ್ ಕತ್ತಿ ಅವರ ಈ ಹೇಳಿಕೆ ಸಾರ್ವಜನಿಕರು, ಪ್ರತಿಪಕ್ಷಗಳು ಮಾತ್ರವಲ್ಲದೇ ಸ್ವತಃ ಬಿಜೆಪಿ ನಾಯಕರೇ ವಿರೋಧಿಸಿದ್ದಾರೆ. ಕತ್ತಿ ಅವರು ನೀಡಿರುವ ಹೇಳಿಕೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಟಿ.ವಿ ಇಲ್ಲದ ಮನೆ ಹುಡುಕುವುದು, ‘ಸಾವಿಲ್ಲದ ಮನೆಯಿಂದ ಸಾಸಿವೆ’ ತರುವಷ್ಟೇ ಕಷ್ಟದ ಕೆಲಸ. ದಿನಮಾನಕ್ಕೆ ತಕ್ಕಂತೆ ಜನ
ಬದಲಾಗುತ್ತಿದ್ದು, ಟಿ.ವಿ., ಫ್ರಿಡ್ಜ್, ದ್ವಿಚಕ್ರ ವಾಹನಗಳು ಇಂದಿನ ಅಗತ್ಯವಸ್ತುಗಳ ಪಟ್ಟಿಗೆ ಅನಧಿಕೃತವಾಗಿ ಬಂದು ಸೇರಿ ಕೊಂಡಿವೆ. ಆದ್ದರಿಂದ ಟಿ.ವಿ ಇದ್ದ ಮಾತ್ರಕ್ಕೆ ಬಿಪಿಎಲ್ ಪಡೆಯಲು ಅನರ್ಹ ಎನ್ನಲು ಸಾಧ್ಯವಿಲ್ಲ.

ಆದರಿಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಕತ್ತಿ ಅವರ ಹೇಳಿಕೆಯಲ್ಲಿ ಶಬ್ದಗಳ ಅರ್ಥವನ್ನು ಮಾತ್ರ ಅರ್ಥೈಸಿಕೊಳ್ಳದೇ,
ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ರಾಜ್ಯದಲ್ಲಿ ಬೋಗಸ್ ಬಿಪಿಎಲ್ ಕಾರ್ಡ್ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಐಷಾ ರಾಮಿ ಕಾರು, ಬಂಗಲೆ, ಚಿನ್ನ ಬೆಳ್ಳಿ ಹಾಕಿಕೊಂಡು ಬರುವ ಅದೆಷ್ಟೋ ಮಂದಿ, ಬಿಪಿಎಲ್ ಕಾರ್ಡ್‌ನಲ್ಲಿ ಪಡಿತರ ಪಡೆಯುತ್ತಿರು ವುದು ಗೊತ್ತಿರುವ ಸಂಗತಿ.

ಆದ್ದರಿಂದ ಅಕ್ರಮವಾಗಿ ಕಾರ್ಡ್ ಹೊಂದಿರುವವರ ವಿರುದ್ಧ ಈ ಸಮರ ಸಾರುವುದಾದರೆ ಸ್ವಾಗತಾರ್ಹ. ಕತ್ತಿ ಅವರು ತಮ್ಮ ಅವಽಯಲ್ಲಿ ಇಂತಹ ದಿಟ್ಟ ಕ್ರಮವನ್ನು ಕೈಗೊಂಡರೆ, ನಿಜವಾಗಿಯೂ ಅರ್ಹರಿಗೆ ಸಹಾಯವಾಗಲಿದೆ. ಒಂದು ವೇಳೆ ಈ ರೀತಿಯ ಬೋಗಸ್ ಬಡವರನ್ನು ಸದೆಬಡೆಯುವ ಯೋಜನೆಯನ್ನು ಇಟ್ಟುಕೊಂಡಿದ್ದರೆ, ಅದಕ್ಕೆ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.

ಬಡವ-ಶ್ರೀಮಂತ ಎನ್ನುವ ವ್ಯತ್ಯಾಸವನ್ನು ಇಂದಿನ ಯುಗಕ್ಕೆ ಸರಿಹೊಂದುವುದಕ್ಕೆ ಇರುವ ಮಾನದಂಡಗಳೇನು ಎನ್ನುವ ಬಗ್ಗೆ ಚರ್ಚಿಸಿ ಕ್ರಮವಹಿಸಲಿ. ಅದನ್ನು ಬಿಟ್ಟು ಈ ರೀತಿ ಟಿ.ವಿ. ಫ್ರಿಡ್ಜ್ ಹೊಂದಿರುವವರನ್ನು ಅನರ್ಹರೆಂದು ಪರಿಗಣಿಸುವುದಾಗಿ ಹೇಳಿದರೆ ಗೊಂದಲವಲ್ಲದೇ ಬೇರೇನು ಆಗುವುದಿಲ್ಲ.

Leave a Reply

Your email address will not be published. Required fields are marked *