Monday, 16th September 2024

ಗೊಂದಲ – ಗದ್ದಲದಲ್ಲಿ ಮರೆಯಾದ ರೈತರ ಕಾಳಜಿ

ಕೃಷಿ ಕಾಯಿದೆ ವಿರೋಽಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ದಿನೇ ದಿನೇ ನಷ್ಟ
ಸಂಭವಿಸುತ್ತಿದೆ ಹೊರತು ಯಾವುದೇ ಸಹಕಾರಿಯಾಗಿಲ್ಲ.

ಇದೀಗ  ಮಂಗಳವಾರ ನಡೆದ ಸಂಸತ್ ಕಲಾಪದಲ್ಲಿ ಕೃಷಿ ಕಾಯಿದೆ ವಿಷಯ ಸಮರ್ಪಕವಾಗಿ ಚರ್ಚೆಗೊಳ್ಳದೆ ಪ್ರತಿಭಟನೆಯ ಕಾರಣದಿಂದ ಎರಡು ಬಾರಿ ಮುಂದೂಡಲಾಗಿರುವುದು ದುರಂತದ ಸಂಗತಿ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿದ್ಧ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರೂ, ಪ್ರತಿಪಕ್ಷಗಳ ಪ್ರತಿಭಟನೆ ಹಾಗೂ ಗದ್ದಲದಿಂದ ಎರಡು ಬಾರಿ ಕಲಾಪವನ್ನು ಮುಂದೂಡಲಾಗಿದೆ.

ಆಂದೋಲನದಲ್ಲಿ ೧೭೦ ರೈತರು ಮೃತಪಟ್ಟಿದ್ದಾರೆ, ಪ್ರತಿಭಟನಾ ರೈತರ ಮೇಲೆ ದೌರ್ಜನ್ಯ ಮುಂದುವರಿದಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಈ ವಿಷಯಗಳನ್ನು ಚರ್ಚೆಯ ಮೂಲಕ ಪ  ರಿಹಾರ ಕಂಡುಕೊಳ್ಳದೆ ಗದ್ದಲದ ಮೂಲಕ ಸದನ
ಮುಂದೂಡಲ್ಪಡಲು ಕಾರಣವಾಗಿರುವುದು ನಿಜವಾದ ರೈತಪರ ಕಾಳಜಿಯಲ್ಲ. ಪ್ರತಿಭಟನೆ ಆರಂಭವಾದಾಗಿನಿಂದ ಪ್ರತಿಭಟನೆ, ಬಂಧನ, ಗೊಂದಲಗಳ ಮೂಲಕವೇ ಸಾಗುತ್ತಿರುವಾಗ ಸಮಸ್ಯೆ ನಿವಾರಣೆ ಎಂಬುದು ಮರೀಚಿಕೆಯಾಗಿದೆ. ರೈತರಿಗೆ ಕಿರುಕುಳ ಹಾಗೂ ಬಂಧನ ನಿಲ್ಲುವವರೆಗೆ ಔಪಚಾರಿಕ ಮಾತುಕತೆ ನಡೆಸುವುದಿಲ್ಲ ಎಂದು ರೈತರು ಆಗ್ರಹಿಸುತ್ತಾರೆ.

ಸರಕಾರ ಸಿದ್ಧವಿದ್ದರೂ ಮಾತುಕತೆಯ ಪ್ರಯತ್ನಗಳು ವಿ-ಲವಾಗುತ್ತಲೇ ಸಾಗುತ್ತಿರುವುದು ಕಳವಳಕಾರಿ ಸಂಗತಿ. ಪ್ರತಿಭಟನೆಗಳು ಪ್ರತಿಷ್ಠೆಯ ಸಂಗತಿಯಾಗದೆ, ರೈತ ಕಾಳಜಿ ವಿಷಯವನ್ನಾಗಿ ಪರಿಗಣಿಸಿದಾಗ ಮಾತ್ರ ಪರಿಹಾರ ದೊರೆಯಲು ಸಾಧ್ಯ. ಆದರೆ ರೈತರಿಗಿಂತಲೂ ರೈತ ಮುಖಂಡರು ಹಾಗೂ ವಿಪಕ್ಷಗಳು ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುವುದಕ್ಕಿಂತಲೂ ಪ್ರತಿಭಟನೆಯನ್ನು ಮುಂದುವರಿಸುವ ಪ್ರಯತ್ನದಲ್ಲಿಯೇ ಹೆಚ್ಚಿನ ಆಸಕ್ತಿ ತಳೆದಂತೆ ತೋರುತ್ತಿರುತ್ತಿದೆ. ಈ ಬೆಳವಣಿಗೆಯೇ ಸಮಸ್ಯೆ ಇನ್ನೂ
ಮುಂದುವರಿಯಲು ಕಾರಣವಾಗಿರುವುದು ವಿಪರ್ಯಾಸ.

Leave a Reply

Your email address will not be published. Required fields are marked *