Monday, 16th September 2024

ದಂಡ ಶುಲ್ಕ ಇಳಿಕೆ ಜನಧ್ವನಿಗೆ ಸಲ್ಲಿಸಿದ ಗೌರವ

ರಾಜ್ಯದಲ್ಲಿ ಮಾಸ್ಕ್ ಧರಿಸದಿರುವವರಿಗೆ ವಿಧಿಸಲಾಗುತ್ತಿರುವ ದಂಡ ಜನರಿಗೆ ಹೊರೆಯಾಗಿ ಪರಿಣಮಿಸಿತೆ? ಎಂಬ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿರುವ ಸರಕಾರ ತನ್ನ ಆದೇಶವನ್ನು ಬದಲಿಸಿಕೊಂಡಿದೆ. ಇದು ಸರಕಾರವೊಂದು ಜನಧ್ವನಿಗೆ ಸಲ್ಲಿಸಿದ ನಿಜವಾದ ಗೌರವ.

ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕಾಗಿ ಸರಕಾರವು ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯ ಗೊಳಿಸಿ ಆದೇಶಿಸಿತ್ತು. ಧರಿಸದವರಿಗೆ ಒಂದು ಸಾವಿರ ರುಪಾಯಿ ದಂಡ ವಿಧಿಸುವ ಪ್ರಕ್ರಿಯೆ ಆರಂಭಗೊಳಿಸಿತ್ತು.

ಕಠಿಣ ಕ್ರಮಕ್ಕಾಗಿ ದಂಡವನ್ನು 200 ರು.ನಿಂದ ಸಾವಿರ ರು.ಗೆ ಹೆಚ್ಚಿಸಿದ್ದರಿಂದ ಅಪಸ್ವರಗಳು ಕೇಳಿಬರಲಾರಂಭಿಸಿದ್ದಲ್ಲದೆ, ಜನಾಕ್ರೋಶ ವ್ಯಕ್ತವಾಗಿತ್ತು. ಇದು ಸಾರ್ವಜನಿಕರ ಸುರಕ್ಷತೆಗಾಗಿ ಕೈಗೊಂಡ ಕ್ರಮವಾದರೂ, ಕರೋನಾ ಸೃಷ್ಟಿಸಿರುವ ಆರ್ಥಿಕ ಸಂಕಷ್ಟದ ಈ ಸಂದರ್ಭದಲ್ಲಿ 1000 ರು.ದಂಡ ಪಾವತಿ ಬಡ ಹಾಗೂ ಮಧ್ಯಮ ವರ್ಗದವರ ಪಾಲಿಗೆ ಹೊರೆಯಾಗಿ ಪರಿಣಮಿ ಸಿತ್ತು.

ಇದೇ ಸಂದರ್ಭದಲ್ಲಿ ಗಣ್ಯರು ನಿಯಮಗಳನ್ನು ಗಾಳಿಗೆ ತೂರಿ, ಸಾರ್ವಜನಿಕರಿಗೆ ಮಾತ್ರವೇ ದಂಡ ವಿಧಿಸುತ್ತಿದ್ದ ಬೆಳವಣಿಗೆಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಜನತೆಯಿಂದ ಈ ನಡೆಯ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದವು. ಕೂಡಲೇ ಜನಧ್ವನಿಗೆ ಮಾನ್ಯತೆ ನೀಡಿ ರುವ ಸರಕಾರ ದಂಡ ಶುಲ್ಕವನ್ನು ಸಾವಿರ ರು.ನಿಂದ 250 ರು.ಗೆ ಇಳಿಸಿದೆ.

ಜನರಲ್ಲಿ ಜಾಗೃತಿ ಹಾಗೂ ಸುರಕ್ಷತೆ ಮೂಡಿಸುವ ದೃಷ್ಟಿಯಿಂದ ದಂಡವನ್ನು ವಿಽಸಬೇಕೆ ಹೊರತು, ಈ ಕ್ರಮ ಬಡ ಮತ್ತು ಮಧ್ಯಮ ವರ್ಗದವರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಾರದೆಂಬ ಅಭಿಪ್ರಾಯಗಳು, ಆಕ್ರೋಶಗಳು ವ್ಯಕ್ತವಾಗಿ ದ್ದವು. ಇದೀಗ ಮಾಸ್ಕ್ ಧರಿಸದವರಿಗೆ 250 ರು. ದಂಡ ನಿಗದಿಗೊಳಿಸಲಾಗಿದೆ. ಜನರ ಆಗ್ರಹಕ್ಕೆ ಸರಕಾರದಿಂದ ಸದಾ ಸ್ಪಂದನೆ ಇರಬೇಕು. ಅದೇ ರೀತಿ ಸರಕಾರದ ನಿಯಮಗಳ ಪಾಲನೆಯಲ್ಲಿ ಜನರು ಜನರೂ ಜವಾಬ್ದಾರರು ಎಂಬುದನ್ನು ಮರೆಯು ವಂತಿಲ್ಲ.

Leave a Reply

Your email address will not be published. Required fields are marked *