Monday, 16th September 2024

ಸ್ನೇಹಪರತೆ, ಪ್ರಬುದ್ಧತೆ ಪ್ರದರ್ಶನ

 ದೇಶದ ಮುಸಲ್ಮಾಾನರು ಇತ್ತೀಚಿನ ವರ್ಷಗಳಿಂದ ಸಹೃದಯಿಗಳಾಗಿದ್ದಾಾರೆ. ಸ್ನೇಹಮಯಿಯಾಗಿದ್ದಾಾರೆ. ಎಲ್ಲದಗಿಂತ ನೆಮ್ಮದಿಯ ಜೀವನ ಮುಖ್ಯ ಎಂಬ ಭಾವನೆಯೂ ಮೂಡಿದೆ.

ದೇಶದಲ್ಲಿ ನಿಜವಾದ ಬದಲಾವಣೆ ಪ್ರಗತಿಯನ್ನು ಪ್ರಾಾಮಾಣಿಕತೆಯಿಂದ ಬಯಸುವ ಸಹಜ ನಾಗರಿಕತೆ ಇಂದು ನಮ್ಮ ದೇಶದಲ್ಲಿ ಚಿಗುರೊಡೆಯುತ್ತಿಿದೆ. ದೇಶದಲ್ಲಾಾಗುವ ಅಥವಾ ಬದಲಾಗಲು ಸಾಧ್ಯವೇ ಇಲ್ಲ ಎನ್ನುವಂತ ವಿಚಾರಗಳು ನಡೆದುಹೋದಾಗ ಆಗಬಾರದ್ದೆೆಲ್ಲಾಾ ಆಗಿ ಹೋಗುತ್ತದೆ. ದೇಶದಲ್ಲ ಏನಾಗುವುದೋ ಎಂಬ ಗುಮ್ಮ, ಆತಂಕ ಭಯ ಶತಮಾನಗಳಿಂದಲೂ ಇದ್ದಿತ್ತು. ಮೊನ್ನೆೆ ಜಮ್ಮು -ಕಾಶ್ಮೀರಕ್ಕೆೆ ಶಾಪವಾಗಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ಎಷ್ಟು ಜಾಣ್ಮೆೆಯಿಂದ ರದ್ದುಪಡಿಸಿತಲ್ಲ, ಆ ನಂತರ ಆದ ಬೆಳವಣಿಗೆಗಳು ಅಥವಾ ಆಗದ ಬದಲಾವಣೆಗಳು ನಿಜಕ್ಕೂ ಆಶ್ಚರ್ಯ ಹುಟ್ಟಿಿಸುತ್ತದೆ. 370ನೇ ವಿಧಿ ಎಂಬುದು ಬೆಂಕಿಗೆ ಕೈ ಹಾಕಿದಂತೆ ಅದರ ಜ್ವಾಾಲೆ ದೇಶವನ್ನು ಹೊತ್ತಿಿ ಉರಿಸುತ್ತದೆ ಎಂಬ ಅಭಿಪ್ರಾಾಯ ದೇಶಾದ್ಯಂತ ಇತ್ತು. 370ನೇ ವಿಧಿ ಮುಟ್ಟಿಿದರೆ ಜೇನುಗೂಡಿಗೆ ಕೈಹಾಕಿದಂತೆ ಎಂಬ ಆತಂಕವೂ . ಆದರೆ, ಅಲ್ಲಿ ನಡೆದದ್ದು ಮಾತ್ರ ‘ಪವಾಡ’. ಸಾಕಷ್ಟು ಸಿದ್ಧತೆ ಮಾಡಿಕೊಂಡ ಮೋದಿ ನೇತೃತ್ವದ ಸರಕಾರ 370ನೇ ವಿಧಿಯನ್ನು ಸುಸೂತ್ರವಾಗಿ ‘ಮಲಗಿಸಿತು’.

ಅಂತಹುದೇ ಆತಂಕ ಅಯೋಧ್ಯೆೆ ವಿಚಾರದಲ್ಲೂ ಇತ್ತು. ತೀರ್ಪು ಪ್ರಕಟಗೊಂಡರೆ ದೇಶದಲ್ಲಿ ಹಿಂಸಾಚಾರಗಳಾಗುತ್ತವೆ, ಕೋಮು ಗಲಭೆಗಳಾಗಿ ದೇಶ ಹೊತ್ತಿಿ ಉರಿಯುತ್ತದೆ. ಸಾವು ನೋವುಗಳು ಸಂಭವಿಸಿಬಿಡುತ್ತವೆ ಭಯ ರಾಜಕಾರಣಿಗಳು ಹಾಗೂ ಜನರಲ್ಲಿತ್ತು. ಆದರೆ, ಅದು ಆರೀತಿ ಅಲ್ಲ ಎಂಬುದು ಮೊನ್ನೆೆಯ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇಶದಲ್ಲಿ ಕಂಡು ಬಂದ ಪ್ರತಿಕ್ರಿಿಯೆಗಳು ಸಾರುತ್ತಿಿವೆ. ಭಾರತದಲ್ಲಿ ಏಕತೆ. ಸಮಗ್ರತೆ ಉತ್ತಮವಾಗೆ ಎಂದು ವಿಶ್ವಕ್ಕೆೆ ತೋರಿಸಲಾಯಿತು. ದೇಶದ ಮುಸಲ್ಮಾಾನರು ಪರಿಸ್ಥಿಿತಿಗೆ ಉತ್ತಮವಾಗಿಯೇ ಸ್ಪಂದಿಸಿದರು. ಅಸಲಿಗೆ ಒಂದು ಟೈರ್ ಸಹ ಉರಿಯಲಿಲ್ಲ. ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶ ಸರಕಾರ ಸೂಕ್ತ ಬಂದೋಬಸ್‌ತ್‌ ಮಾಡಿದ್ದವು.

ತೀರ್ಪು ಏನೇ ಬಂದರೂ ಉದ್ವೇಗಕ್ಕೊೊಳಗಾಗದೆ ಸಮ್ಯಮದಿಂದ, ಕ್ರೀಡಾ ಮನೋಭಾವದಿದಂದ ಇರಬೇಕು ಎಂದು ಭಾರತೀಯರಿಗೆ ಹೇಳಲಾಗಿತ್ತು. ಏನೇ ಆಗಲಿ ಉದ್ವೇಗಕ್ಕೊೊಳಬಾರದು ಎಂಬ ಹಿತನುಡಿಯು ಚೆನ್ನಾಾಗಿಯೇ ಕೆಲಸ ಮಾಡಿದೆ. ದೇಶದ ಮುಸಲ್ಮಾಾನರು ಇತ್ತೀಚಿನ ವರ್ಷಗಳಿಂದ ಸಹೃದಯಿಗಳಾಗಿದ್ದಾಾರೆ. ಸ್ನೇಹಮಯಿಯಾಗಿದ್ದಾಾರೆ. ಎಲ್ಲದಗಿಂತ ನೆಮ್ಮದಿಯ ಜೀವನ ಮುಖ್ಯ ಎಂಬ ಭಾವನೆಯೂ ಮೂಡಿದೆ. ಸಮಾಜದಲ್ಲಿ ಸಹಬಾಳ್ವೆೆ -ಸೌಹಾರ್ದತೆಯನ್ನು ಅಪೇಕ್ಷಿಸುತ್ತಾಾರೆ. ರಾಜಕಾರಣಿಗಳು ಅಯೋಧ್ಯೆೆಯ ವಿಚಾರದಲ್ಲಿ ಎಲ್ಲರೂ ಮೆಚ್ಚುವಂತಹ ಭಾವನೆ ಮೂಡಿಸಿದ್ದಾಾರೆ. ಇಂತಹ ವಾತಾವರಣ ಶಾಶ್ವತವಾಗಿ ಇರಲಿ. ವ್ಯಕ್ತಿಿ- ಸಮುದಾಯಕ್ಕಿಿಂತ ದೇಶ ಮೊದಲು ಎಂಬುದನ್ನು ಭಾರತೀಯರು ಅರಿತರೆ ವಿಶ್ವದ ಮುಂದೆ ಭಾರತ ಅಸಮಾನ್ಯ ದೇಶ ಎಂಬ ಭಾವನೆ ಮೂಡಿತ್ತದೆ. ಈಗಾಗಲೆ ತಾನು ಏನೆಂದು ವಿಶ್ವಕ್ಕೆೆ ಭಾರತ ತೋರಿಸಿದೆ. ಇದಕ್ಕೆೆ ಪ್ರಧಾನಿ ನರೇಂದ್ರ ಮೋದಿಯರ ಪಾತ್ರವೂ ಸಾಕಷ್ಟಿದೆ.

Leave a Reply

Your email address will not be published. Required fields are marked *