Monday, 16th September 2024

ಮಹಾನಾಟಕಕ್ಕೆ ಸುಪ್ರೀಂ ತೆರೆ ಎಳೆಯಲಿ!

ರಾಜಕಾರಣದ ಬಗ್ಗೆೆ ಮುಂದೆ ಅಸಹ್ಯ ಮೂಡದಂತೆ ತಡೆಯಬೇಕಾದರೆ, ಇಂತಹ ಘಟನೆಗಳಿಗೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಬೇಕು. ಯಾವುದೇ ಪಕ್ಷ ಅಧಿಕಾರಕ್ಕೆೆ ಬರಲಿ ಅದು ಕಾನೂನು ವ್ಯಾಾಪ್ತಿಿಯೊಳಗೆ ನಡೆಯಲಿ. ಕುದುರೆ ವ್ಯಾಾಪಾರದಂತಹ ಘಟನೆಗಳಿಗೆ ರಾಜಕೀಯ ಬಲಿಯಾಗುವುದು ಬೇಡ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ದೇಶದ ರಾಜಕಾರಣಕ್ಕೆೆ ನೀಡಬೇಕು.

ಮಹಾರಾಷ್ಟ್ರದ ಬೆಳವಣಿಗೆಗೆ ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ತೆರೆ ಎಳೆಯಲೇಬೇಕಾದ ಅನಿವಾರ್ಯತೆ ಇದೆ. ರಾಜ್ಯಪಾಲರ ಅಧಿಕಾರ ವ್ಯಾಾಪ್ತಿಿಯ ಬಗ್ಗೆೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂಬ ವಾದ ಕೇಳಿಬರುತ್ತಿಿರುವ ಹೊತ್ತಿಿನಲ್ಲೇ ಅಧಿಕಾರಕ್ಕಾಾಗಿ ನಡೆಯುತ್ತಿಿರುವ ಪ್ರಹಸನಕ್ಕೆೆ ಕಾನೂನಿನ ರೀತಿಯಲ್ಲಿ ಕೊನೆಯಾಡಬೇಕಾದ ಅನಿವಾರ್ಯತೆ ಸುಪ್ರಿಿಂ ಕೋರ್ಟ್ ಮುಂದಿದೆ.
ಬಿಜೆಪಿ ಅತಿದೊಡ್ಡ ಪಕ್ಷ ಅಧಿಕಾರಕ್ಕೆೆ ಮುಂದಾಗುವುದು ಸಹಜ ಪ್ರಕ್ರಿಿಯೆ. ಆದರೆ, ಸರಕಾರ ರಚನೆಗೆ ಬೇಕಾದ ಅಗತ್ಯ ಬೆಂಬಲ ಪಡೆಯಲು ವಿಫಲವಾದಾಗ ಎಸ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆೆಸ್ ಪಕ್ಷಗಳು ಅಧಿಕಾರಕ್ಕೆೆ ಸರ್ಕಸ್ ನಡೆಸಿದವು. ಆದರೆ, ಕಾಂಗ್ರೆೆಸ್ ಈ ವಿಚಾರದಲ್ಲಿ ತುಸು ಜಾಸ್ತಿಿಯೇ ಚೌಕಾಸಿ ಮಾಡಿತು ಎನ್ನಬಹುದು. ಇದರ ಪರಿಣಾಮ ರಾತ್ರಿಿ ಬೆಳಗಾಗುವುದರೊಳಗೆ ಬಿಜೆಪಿ ಮುಖ್ಯಮಂತ್ರಿಿಯಾಗಿ ದೇವೇಂದ್ರ ಪಡ್ನವೀಸ್ ಅಧಿಕಾರ ಸ್ವೀಕರಿಸಿ, ಎನ್‌ಸಿಪಿ ಜತೆಗೆ ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ ನೀಡಿ ಅಚ್ಚರಿ ಮೂಡಿಸಿದರು.
ಆದರೆ, ಮೂರು ಪಕ್ಷದ ನಾಯಕರು ನಮ್ಮವರೆಲ್ಲ ಒಂದಾಗಿದ್ದೇವೆ. ಬಿಜೆಪಿಗೆ ಯಾವ ಶಾಸಕರು ಹೋಗಿಲ್ಲ ಎಂದು ರಾಜ್ಯಪಾಲರ ಮುಂದೆ ಬಹುಮತ ಸಾಭೀತು ಮಾಡುವ ಯತ್ನ ನಡೆಸಿದ್ದಾಾರೆ. ಎರಡು ವಾರ ಕಳೆದರೂ ರೆಸಾರ್ಟ್‌ಗಳಿಂದ ಶಾಸಕರು ಆಚೆ ಬರಲು ಸಾಧ್ಯವಾಗುತ್ತಿಿಲ್ಲ. ಇನ್ನು ಜನ ಸೇವೆ ಮತ್ತು ಸಾರ್ವಜನಿಕ ಕೆಲಸ ಕಾರ್ಯಗಳು ದೇವರೇ ಗತಿ. ಇಷ್ಟೆೆಲ್ಲ ಅವಾಂತರಗಳು ನಡೆಯುತ್ತಿಿರುವುದು ಅಧಿಕಾರಕ್ಕಾಾಗಿಯೇ ಹೊರತು ಬೇರೇನಿಲ್ಲ.
ಕೇಂದ್ರದಲ್ಲಿ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರ ಪಡೆದಿರುವ ಬಿಜೆಪಿ, ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಾಣಿ ಹಿಡಿದಿದ್ದು, ದೇಶದ ವಾಣಿಜ್ಯ ರಾಜಧಾನಿಯಾದ ಮುಂಬೈ ರಾಜಧಾನಿ ಅಧಿಕಾರ ಕಳೆದುಕೊಳ್ಳಲು ಇಷ್ಟಪಡುತ್ತಿಿಲ್ಲ. ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಲೇಬೇಕು ಎಂಬ ಕಾರಣಕ್ಕೆೆ ರಾಜ್ಯಪಾಲರ ಅಧಿಕಾರವನ್ನು ಮತ್ತು ಕೇಂದ್ರ ಸರಕಾರಕ್ಕಿಿರುವ ಪರಮಾಧಿಕಾರವನ್ನು ಬಳಸಿಕೊಂಡಿದೆ. ಅಧಿಕಾರದಲ್ಲಿರಲು ಅಧಿಕಾರದಲ್ಲಿರುವ ಸರಕಾರ ಇಂತಹ ಪ್ರಯತ್ನ ನಡೆಸುವುದು ಹೊಸದೇನು ಅಲ್ಲದಿದ್ದರೂ, ಬರೀ ಇದನ್ನೇ ನೋಡುತ್ತಿಿರುವ ಮತದಾರರ ಮನದಲ್ಲಿ ಅಸಹ್ಯ ಮೂಡುವುದಂತೂ ಸತ್ಯ.
ರಾಜಕಾರಣದ ಬಗ್ಗೆೆ ಮುಂದೆ ಅಸಹ್ಯ ಮೂಡದಂತೆ ತಡೆಯಬೇಕಾದರೆ, ಇಂತಹ ಘಟನೆಗಳಿಗೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಬೇಕು. ಯಾವುದೇ ಪಕ್ಷ ಅಧಿಕಾರಕ್ಕೆೆ ಬರಲಿ ಅದು ಕಾನೂನು ವ್ಯಾಾಪ್ತಿಿಯೊಳಗೆ ನಡೆಯಲಿ. ಕುದುರೆ ವ್ಯಾಾಪಾರದಂತಹ ಘಟನೆಗಳಿಗೆ ರಾಜಕೀಯ ಬಲಿಯಾಗುವುದು ಬೇಡ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ದೇಶದ ರಾಜಕಾರಣಕ್ಕೆೆ ನೀಡಬೇಕು. ಮಹಾರಾಷ್ಟ್ರ ಸರಕಾರ ರಚನೆ ಹಿನ್ನೆೆಲೆಯಲ್ಲಿ ಸುಪ್ರೀಂ ನೀಡುವ ತೀರ್ಪು ದೇಶಕ್ಕೆೆ ಮಾದರಿಯಾಗುವ ಜತೆಗೆ ರಾಜ್ಯದಲ್ಲಿ ನಡೆಯುತ್ತಿಿರುವ ಉಪಚುನಾವಣೆ ಮೇಲೆಯೂ ಪರಿಣಾಮ ಬೀರುವುದು ಸತ್ಯ. ಹೀಗಾಗಿ, ಕಾನೂನಿಗೆ ಅಧ್ಯತೆ ಸಿಗುವಂತೆ ತೀರ್ಪು ಸುಪ್ರೀಂ ಕೋರ್ಟ್‌ನಿಂದ ಪ್ರಕಟವಾಗಲಿ ಎಂಬುದು ದೇಶದ ಎಲ್ಲ ನಾಗರಿಕರ ಆಶಯ.

Leave a Reply

Your email address will not be published. Required fields are marked *