Monday, 16th September 2024

ಕಲ್ಯಾಣದ ಅಪಸ್ವರ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಇಂದಿನ ಬಿಜೆಪಿ ಸರಕಾರ ಬಹಳಷ್ಟು ಆದ್ಯತೆ ನೀಡಿದೆ ಎನ್ನಲಾಗುತ್ತದೆ. ಈ ಹೇಳಿಕೆಗಳಿಗೆ ಪ್ರಸ್ತುತ ವ್ಯತಿರಿಕ್ತ ಹೇಳಿಕೆಗಳೂ ಕೇಳಿಬರುತ್ತಿವೆ.

ಒಟ್ಟಾರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಿರುವುದಾಗಿ ತಿಳಿಸುತ್ತಿರುವಂತೆಯೇ ಅಪಸ್ವರಗಳೂ ಕೇಳಿ ಬರಲಾ ರಂಭಿಸಿವೆ. ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಸರಕಾರ ಚಿಂತನೆ ನಡೆಸಿದೆ. ಹತ್ತು ಸಾವಿರ ಶಿಕ್ಷಕರ ನೇಮಕ ಹಾಗೂ 15 ಸಾವಿರಕ್ಕೂ ಅಧಿಕ ಶಾಲೆಯ ಹಳೆ ಕಟ್ಟಡಗಳ  ಬಜೆಟ್ ‌ನಲ್ಲಿ ಅವಕಾಶ ಒದಗಿಸುವಂತೆ ಕೋರಲಾಗಿದೆ.

ಈಗಾಗಲೇ ಬಹಳಷ್ಟು ಯೋಜನೆಗಳನ್ನು ಘೋಷಿಸಿರುವುದಾಗಿ ಸರಕಾರ ಪ್ರಕಟಿಸಿದೆ. ಮತ್ತಷ್ಟು ಯೋಜನೆಗಳ ಅನುಷ್ಠಾನಕ್ಕಾಗಿ
ಚಿಂತನೆ ನಡೆಸಿದೆ. ಈ ವೇಳೆ ಮತ್ತಷ್ಟು ಬೇಡಿಕೆಗಳೂ ಕೇಳಿಬರಲಾರಂಭಿಸಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಹ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಬಗ್ಗೆ ಆರೋಪಿಸಿದ್ದು, ಇಲ್ಲಿನ ಅಭಿವೃದ್ಧಿ ಕೇವಲ ಘೋಷಣೆಗೆ ಸೀಮಿತಗೊಳಿಸಿರುವುದಾಗಿ ಆರೋಪಿಸಿ ದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿವೃದ್ಧಿಯ ಬಗ್ಗೆ ಪ್ರಕಟಿಸುವ ಸರಕಾರ ಇಲ್ಲಿನ ಯೋಜನೆಗಳನ್ನು ಸ್ಥಳಾಂತರಿಸುತ್ತಿರುವುದಾಗಿ ದೂರಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಚರ್ಚೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ, ಏಮ್ಸ್ ಆಸ್ಪತ್ರೆ, ಸೆಂಟರ್ ಫಾರ್ ಎಕ್ಸಲೆನ್ಸ್ , ಇಂಧನ ಅಭಿವೃದ್ಧಿ ಕಚೇರಿ, ಸಿಪೆಟ್, ಐಐಟಿ ಸ್ಥಳಾಂತರ ಮಾಡಲಾಗಿದೆ.

ಸಾವಿರಾರು ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಅನುದಾನವನ್ನು ತಡೆಹಿಡಿಯಲಾಗಿದೆ. ಜವಳಿ ಪಾರ್ಕ್ ಭರವಸೆಯಾಗಿಯೇ ಉಳಿದಿದೆ. ಪಶು ವೈದ್ಯಕೀಯ ವಿವಿ ವಿಭಜನೆಯ ಚರ್ಚೆ ನಡೆಯುತ್ತಿದೆ. ಈ ಬೆಳವಣಿಗೆ ಅಭಿವೃದ್ಧಿಗೆ ಮಾರಕವಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಒಂದೆಡೆ ರಾಜ್ಯ ಸರಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಯೋಜನೆಗಳನ್ನು ಘೋಷಿಸುತ್ತಿದ್ದರೆ, ಮತ್ತೊಂದೆಡೆ ಹಲವು ಅಪಸ್ವರಗಳೂ ಕೇಳಿಬರುತ್ತಿವೆ. ಈ ಸಮಸ್ಯೆಗಳನ್ನು ಆಲಿಸಿ ಸಮರ್ಪಕ ಅಭಿವೃದ್ಧಿಯ ಅನುಷ್ಠಾನಕ್ಕೆ ಆದ್ಯತೆ ನೀಡುವಲ್ಲಿ ಸರಕಾರದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ.

Leave a Reply

Your email address will not be published. Required fields are marked *