Monday, 16th September 2024

ತ್ರಿಭಾಷಾ ಸೂತ್ರ – ಸಾಯತ್ತ ಸ್ಥಾನಮಾನ ಮತ್ತಷ್ಟು ಆದ್ಯತೆ ಅವಶ್ಯ

ರಾಜ್ಯದಲ್ಲಿ ಕನ್ನಡದ ಅಭಿವೃದ್ಧಿಗೆ ಮತ್ತಷ್ಟು ದೊರೆಯಬೇಕಾದ ಅವಶ್ಯಕತೆ ಕಂಡುಬರುತ್ತಿದೆ. ನಾಡು – ನುಡಿ – ಸಾಹಿತ್ಯ-
ಸಾಂಸ್ಕೃತಿಕ ರಕ್ಷಣೆಗಾಗಿ ಅನೇಕ ಸಂಸ್ಥೆಗಳು, ಹೋರಾಟಗಾರರು ಶ್ರಮಿಸುತ್ತಿದ್ದರೂ, ಕನ್ನಡದ ಕಾರ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವು ವರ್ಷಗಳ ಆಗ್ರಹದ ಫಲವಾಗಿ 2008ರಲ್ಲಿ ಕನ್ನಡಕ್ಕೆ ಶಾಸೀಯ ಸ್ಥಾನಮಾನ ದೊರೆಯಿತಾದರೂ, ನಂತರದಲ್ಲಿ ನಡೆದ ಬೆಳವಣಿಗೆ ನಿರೀಕ್ಷೆಯನ್ನು ಹುಸಿಗೊಳಿಸಿದೆ. ರಾಜ್ಯದ ಜನತೆ ಶಾಸ್ತ್ರೀಯ ಸ್ಥಾನಮಾನದಷ್ಟೇ ಮುಖ್ಯವಾಗಿ ನಿರೀಕ್ಷಿಸಿದ್ದು ತ್ರಿಭಾಷಾ ಸೂತ್ರವನ್ನು. ರಾಜ್ಯದಲ್ಲಿರುವ ಕೇಂದ್ರ ಸರಕಾರದ ಕಚೇರಿಗಳಲ್ಲಿನ ಫಲಕಗಳಲ್ಲಿ ಕನ್ನಡವನ್ನು ಕಾಣಬೇಕೆಂಬುದು ಕನ್ನಡಿಗರ ಬಹುದಿನದ ಅಪೇಕ್ಷೆ.

ಜತೆಗೆ ಖಾಸಗಿ ಬ್ಯಾಂಕ್ ವ್ಯವಹಾರದಲ್ಲೂ ಕನ್ನಡದ ಬಳಕೆ ಜಾರಿಗೊಳ್ಳಬೇಕೆಂಬ ಕೂಗು ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಈ ಸಮಸ್ಯೆ ಇಂದಿಗೂ ಈಡೇರಿಲ್ಲ. ಕನ್ನಡದ ವಿಷಯಗಳು ಬಹಳಷ್ಟು ಚರ್ಚೆಗೊಳಲ್ಪಡುವುದು ರಾಜ್ಯೋತ್ಸವ
ಸಂದರ್ಭದಲ್ಲಿ ಹೆಚ್ಚು. ನಂತರದಲ್ಲಿ ನಿರುತ್ಸಾಹದ ಸ್ಥಿತಿ ಕಂಡುಬರುತ್ತದೆ. ಶಾಸ್ತ್ರೀಯ ಸ್ಥಾನಮಾನ ದೊರೆತರೂ, ಕರ್ನಾಟಕದ ಕಚೇರಿಗಳಲ್ಲಿ ಕನ್ನಡ ಫಲಕಗಳನ್ನು ಕಾಣದಿರುವುದು ವಿಪರ್ಯಾಸ.

ಇದೀಗ ಮತ್ತೊಮ್ಮೆ ತ್ರಿಭಾಷಾ ಸೂತ್ರದ ಕೂಗು ಹೆಚ್ಚಿದೆ. ಮತ್ತೊಂದೆಡೆ ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಇಂಥ ಸ್ಥಿತಿಯಲ್ಲಿ ಕನ್ನಡಕ್ಕೆ ಶಾಸೀಯ ಸ್ಥಾನಮಾನ ದೊರೆತಿದೆ ಎಂಬುದಕ್ಕೆ ಹೆಮ್ಮೆಪಡುವುದರ ಜತೆಗೆ ತ್ರಿಭಾಷಾ ಸೂತ್ರ ಹಾಗೂ ಸ್ವಾಯತ್ತ ಸ್ಥಾನಮಾನಕ್ಕಾಗಿ ಮತ್ತಷ್ಟು ಪ್ರಯತ್ನ ಆರಂಭಿಸಬೇಕಿರುವ ಅವಶ್ಯಕತೆ ಕಂಡುಬರುತ್ತಿದೆ.

ಕೇಂದ್ರ ಸರಕಾರದಿಂದ ಈ ಬೇಡಿಕೆಗಳನ್ನು ಅನುಷ್ಠಾನ ಗೊಳಿಸಿಕೊ ಳ್ಳುವಲ್ಲಿ ಜನತೆಯ ಕೂಗಿನ ಜತೆಗೆ ರಾಜ್ಯ ಸರಕಾರದ
ಪ್ರಯತ್ನವೂ ಮಹತ್ವದ್ದಾಗಿದೆ.

Leave a Reply

Your email address will not be published. Required fields are marked *