Monday, 16th September 2024

ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಘನತೆ ಒದಗಿಸಿದ ಧೀಮಂತ

ಸಿನಿಮಾ ಕ್ಷೇತ್ರ ಎಂದೊಡನೆ ಮುಖ್ಯವಾಗಿ ನೆನಪಾಗುವುದು ನಟ – ನಟಿಯರು ಮತ್ತು ನಿರ್ದೇಶಕರು. ಅವರ ಹೊರತಾಗಿಯೂ ಸಿನಿಮಾ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆಯಬೇಕೆಂದರೆ ಅದು ಸುಲಭ ಹಾದಿಯಲ್ಲ.

ಆದರೆ ಇಂಥ ಹಾದಿಯಲ್ಲಿ ಯಶಸ್ಸನ್ನು ಗಳಿಸುವುದರ ಜತೆಗೆ ಆ ಕ್ಷೇತ್ರದ ಘನತೆ ಕೂಡ ಹೆಚ್ಚಾಗುವಂತೆ ಸಾಧನೆ ತೋರಿದ ಧೀಮಂತ ವ್ಯಕ್ತಿ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಇವರು ಹಿನ್ನೆಲೆ ಗಾಯಕರಾಗಿದ್ದರೂ ಸಹ ಸಿನಿಮಾ ಸಾಹಿತ್ಯಕ್ಕೆ ಜೀವದನಿಯನ್ನು ನೀಡಿ, ಹಿನ್ನೆೆಲೆ ಸಂಗೀತ ಕ್ಷೇತ್ರಕ್ಕೆ ಘನತೆ ಒದಗಿಸಿದ ವಿಶಿಷ್ಟ ಸಾಧಕ. ಸಿನಿಮಾ ಸಂಗೀತ ಎಂದರೆ ಅಬ್ಬರದ ಸಂಗೀತ ಎಂದು ಮೂದಲಿಸುತ್ತಿದ್ದ ದಿನಗಳಲ್ಲಿ ತಮ್ಮ ಮಂತ್ರಮುಗ್ಧ ಧ್ವನಿಯಿಂದ ಸಾಹಿತ್ಯದ ಭಾವನೆಗಳಿಗೆ ಧ್ವನಿಯಾದವರು.

ಸಿನಿಮಾ ಸಂಗೀತ ಎಂದರೆ ಅಶ್ಲೀಲವೂ ಅಲ್ಲ, ಅಬ್ಬರವೂ ಅಲ್ಲ, ಅದೊಂದು ಮಧುರ ಭಾವಗಳ ಮಿಡಿತ ಎಂದು ತಮ್ಮ ಸುಮಧುರ ಧ್ವನಿಯ ಮೂಲಕ ಸಿನಿಮಾಸಕ್ತರಿಗೆ ಸ್ಪಷ್ಟಪಡಿಸಿದವರು. ತಮ್ಮದೆ ಆದ ಒಂದು ಹೊಸ ಟ್ರೆೆಂಡ್ ಸೃಷ್ಟಿಸಿದವರು. ಯಾವುದೇ ಸಿನಿಮಾ ಗೀತೆಗಳಲ್ಲಿ ಸ್ಪಷ್ಟತೆ ಇತ್ತು ಎಂದರೆ, ಅದನ್ನು ಎಸ್‌ಪಿಬಿ ಅವರೇ ಹಾಡಿದ್ದಾರೆ ಎಂದು ಜನರು ಭಾವಿಸು ವಷ್ಟು ಭಾವತೀವ್ರತೆಯನ್ನು ಮೂಡಿಸಿದ ಮಹತ್ವದ ಗಾಯಕ ಇವರು. ಇಡೀ ಪ್ರಪಂಚದ ಸಿನಿಮಾಗಳಲ್ಲಿ ಭಾರತೀಯ ಚಿತ್ರಗ ಳನ್ನು ಪ್ರತ್ಯೇಕಿಸುವುದೇ ಸಂಗೀತದ ಕಾರಣಕ್ಕಾಗಿ.

ಭಾರತೀಯ ಸಿನಿಮಾಗಳಲ್ಲಿ ಸಾಹಿತ್ಯ ಮತ್ತು ಸಂಗೀತವೇ ಪ್ರಧಾನ. ಆದರೆ ಇದನ್ನು ಸಾಬೀತುಪಡಿಸಿದವರು ವಿರಳ. ಆದರೆ ಈ ನಿಟ್ಟಿನಲ್ಲಿ ಹೆಮ್ಮೆಯಿಂದ ಹೇಳಬಹುದಾದ ಏಕೈಕ ಹೆಸರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಭಾರತೀಯ ಚಿತ್ರರಂಗ ಕಂಡ ಅಪರೂ ಪದ ಪ್ರತಿಭೆ. ಭಾಷೆಗಳನ್ನು ಮೀರಿ ಜನರ ಭಾವನೆಗಳನ್ನು ಮೀಟಿದ ಅಪರೂಪದ ಸಾಧಕ ಎಸ್‌ಪಿಬಿ.

Leave a Reply

Your email address will not be published. Required fields are marked *