Thursday, 19th September 2024

ಸರಕಾರ ಸಜ್ಜಾಯಿತು ಜನರಲ್ಲಿ ಮೂಡಬೇಕಿದೆ ಜಾಗೃತಿ

ದೇಶದಲ್ಲಿ ಎರಡನೆ ಹಂತದ ಕೋವಿಡ್ ಹರಡುವಿಕೆ ಆರಂಭಗೊಂಡಿದೆ. ದಿನೇ ದಿನೇ ಸೋಂಕು ವೇಗವಾಗಿ ಹರಡುತ್ತಿರುವ ಬೆಳವಣಿಗೆ ಸರಕಾರಗಳನ್ನೂ ಕಂಗೆಡಿಸಿದೆ.

ಕೋವಿಡ್ ನಿಯಂತ್ರಣದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಮುನ್ನಡೆ ಸಾಧಿಸಿದೆ. ಆದರೆ ಸುರಕ್ಷಿತ ವಲಯಗಳೆಂದು
ಗುರುತಿಸಿಕೊಂಡಿದ್ದ ದೇಶದ ೭೦ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳ ವಾಗಿರುವುದು ಮತ್ತೊಮ್ಮೆ ಆತಂಕ ಹೆಚ್ಚಳಕ್ಕೆ ಕಾರಣ. ಈ ಬೆಳವಣಿಗೆ ಅರಿತಿರುವ ಕೇಂದ್ರ ಸರಕಾರ ದೇಶದ ಸಣ್ಣ, ಸಣ್ಣ ನಗರಗಳಲ್ಲಿಯೂ ಪರೀಕ್ಷಾ ಕೇಂದ್ರ ಹಾಗೂ ಲಸಿಕಾ ಕೇಂದ್ರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಇದಕ್ಕಾಗಿ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲಾಗಿದೆ.

ಸರ್ವರ ಪ್ರಯತ್ನ ಹಾಗೂ ಕಠಿಣ ಕ್ರಮಗಳಿಂದ ಮಾತ್ರವೇ ಸೋಂಕಿನ ನಿಯಂತ್ರಣ ಸಾಧ್ಯ ಎಂಬ ನಿರ್ಣಯಕ್ಕೆ ಬಂದಿದೆ ಕೇಂದ್ರ ಸರಕಾರ. ಆದರೆ ಇದನ್ನು ಅನುಷ್ಠಾನಗೊಳಿಸುವ ವೇಳೆ ಜನರು ಭಯಗೊಳ್ಳುವಂಥ ವಾತಾವರಣ ನಿರ್ಮಿಸದೆ ಜಾಗೃತಿ ಮೂಡಿಸುವ ಮೂಲಕ ಕಾರ್ಯನಿರ್ವಹಿಸುವಂತೆ ನೀಡಿರುವ ಪ್ರಧಾನಿಯವರ ಸಲಹೆ ಶ್ಲಾಘನೀಯವಾಗಿದೆ.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಂದ ಕೋವಿಡ್ ನಿಯಂತ್ರಣಕ್ಕಾಗಿ ಈಗಾಗಲೇ ಪ್ರಯತ್ನಗಳು ಆರಂಭಗೊಂಡಿವೆ. ದೇಶದಲ್ಲಿ ದಿನಕ್ಕೆ 30ಲಕ್ಷ ಜನರಿಗೆ ಲಸಿಕೆ ವಿತರಿಸಲು ಸಜ್ಜುಗೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ಜನತೆಯ ಪಾತ್ರವೂ ಮುಖ್ಯ. ಸರಕಾರ ರೂಪಿಸಿರುವ 3-ಟಿ ಸೂತ್ರ ( ಟೆಸ್ಟ್ -ಟ್ರ್ಯಾಕ್-ಟ್ರೀಟ್) ಅನುಸರಿಸಲು ರಾಜ್ಯ ಸರಕಾರ ಪ್ರಯತ್ನ ಆರಂಭಿಸಿದೆ. ಇಂಥ ಸಂದರ್ಭದಲ್ಲಿ ಜನತೆ ಊಹಾಪೋಹ ಹೇಳಿಕೆಗಳತ್ತ ಗಮನಹರಿಸಿದೆ ಸರಕ್ಷತೆಗೆ ಆದ್ಯತೆ ನೀಡಬೇಕಿದೆ.

ಲಸಿಕೆ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹೊರತು, ವಾತಾವರಣದಲ್ಲಿನ ಸೋಂಕನ್ನು ನಿಯಂತ್ರಿಸುವು ದಿಲ್ಲ. ಆದ್ದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸರಕಾರದ ಸೂಚನೆ ಪಾಲಿಸುವುದು ಕೋವಿಡ್ ನಿಯಂತ್ರಣ ಕ್ಕಿರುವ ಏಕೈಕ ದಾರಿ. ಈ ಹಿನ್ನೆಲೆಯಲ್ಲಿ ಸರ್ವರ ಪ್ರಯತ್ನವೂ ಮುಖ್ಯ.

Leave a Reply

Your email address will not be published. Required fields are marked *