Monday, 16th September 2024

ಭಾರತೀಯ ಸಂಜಾತರ ಪ್ರಾಬಲ್ಯ

ಕರೋನಾ ಸೋಂಕಿನ ವಿಚಾರದಿಂದ ನಾನಾ ರಾಷ್ಟ್ರಗಳಿಗೆ ಚೀನಾದ ಮೇಲೆ ಉಂಟಾದ ಅಸಮಾಧಾನ ಭಾರತಕ್ಕೆ ಅನುಕೂಲ ವಾಗಿ ಪರಿಣಮಿಸಿತು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವ್ಯಾವಹಾರಿಕ ಹೂಡಿಕೆಯ ಅತ್ಯುತ್ತಮ ರಾಷ್ಟ್ರವಾಗಿ ಗಮನಸೆಳೆಯುತ್ತಿರುವ ಭಾರತ ಪ್ರಬಲ
ರಾಷ್ಟ್ರವಾಗಿ ಕಂಗೊಳಿಸುತ್ತಿದೆ. ಮತ್ತೊಂದೆಡೆ ಅನೇಕ ರಾಷ್ಟ್ರಗಳಲ್ಲಿ ಭಾರತೀಯ ಸಂಜಾತರ ಪ್ರಾಬಲ್ಯ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ.

ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳಿಗೆ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಲಸೆ ತೆರಳಿದ್ದಾರೆ. ಇವರೆಲ್ಲರೂ ನಾನಾ ದೇಶಗಳಲ್ಲಿ ಅತ್ಯುತ್ತಮ ಸ್ಥಾನಗಳನ್ನು ಅಲಂಕರಿಸಿ ದ್ದಾರೆ. ಇದು ಭಾರತದ ಪಾಲಿಗೂ ಗೌರವ ಸಲ್ಲುವ ವಿಚಾರ. ಅಮೆರಿಕದಲ್ಲಿ ಬೈಡನ್ ನೇತೃತ್ವದಲ್ಲಿ ರಚಿಸಲಾಗುತ್ತಿರುವ ನೂತನ ಸರಕಾರದಲ್ಲಿ ೧೫ಕ್ಕೂ ಹೆಚ್ಚಿನ ಭಾರತೀಯ ಸಂಜಾತರನ್ನು ನೇಮಿಸಲಾಗಿದೆ.

ಇವರಲ್ಲಿ ಭಾರತದಲ್ಲಿ ಹುಟ್ಟಿ, ಬೆಳೆದು ಅಮೆರಿಕ ಪೌರತ್ವ ಪಡೆದವರಾಗಿದ್ದು, ಕೆಲವರು ಕರ್ನಾಟಕ ದವರೂ ಇದ್ದಾರೆ. ಇಂದಿಗೂ ಹೊರ ರಾಷ್ಟ್ರಗಳಿಗೆ ತೆರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ೨೦೨೦ರಲ್ಲಿ ದೇಶದ ೧.೮ ಕೋಟಿ ಜನರು ಭಾರತದಿಂದ
ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಯುಎಇಯಲ್ಲಿ ೩.೫ಕೋಟಿ, ಅಮೆರಿಕದಲ್ಲಿ ೨.೭ಕೋಟಿ, ಸೌದಿ ಅರೇಬಿಯಾದಲ್ಲಿ ೨.೫ಕೋಟಿ ಭಾರತೀಯರು ವಲಸೆ ತೆರಳಿದ್ದಾರೆ.

೨೦೦೦ ಸಾಲಿನಿಂದ ೨೦೨೦ರ ಸಾಲಿನ ನಡುವೆ ಹೆಚ್ಚು ಭಾರತೀಯರು ೧೭೯ ದೇಶಗಳಿಗೆ ವಲಸೆ ತೆರಳಿದಾರೆನ್ನಲಾಗಿದೆ. ಒಟ್ಟಾರೆ ವಿವಿಧ ರಾಷ್ಟ್ರಗಳಲ್ಲಿ ಭಾರತೀಯ ಸಂಜಾತರ ಪ್ರಾಬಲ್ಯ ಹೆಚ್ಚುತ್ತಿರುವುದು ಮಹತ್ವದ ಬೆಳವಣಿಗೆ.

Leave a Reply

Your email address will not be published. Required fields are marked *