Monday, 16th September 2024

ಆಕ್ಸಿಜನ್ ಮಾರಾಟ ಮಳಿಗೆಗಳ ಆರಂಭ ಸಂಭ್ರಮವಲ್ಲ

ಇಂದು ದೇಶವು ಎದುರಿಸುತ್ತಿಿರುವ ಸಮಸ್ಯೆೆಗಳಲ್ಲಿ ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆೆ ಬಹುಮುಖ್ಯವಾಗಿದೆ. ಹೆಚ್ಚುತ್ತಿಿರುವ ವಾಹನಗಳು, ಅನೈರ್ಮಲ್ಯಗಳಿಂದಾಗಿ ಜನರ ಆರೋಗ್ಯದಲ್ಲಿ ಬಹಳಷ್ಟು ಏರುಪೇರುಗಳಾಗುತ್ತಿಿವೆ. ಶುದ್ಧ ಗಾಳಿಯ ಅಭಾವದಿಂದ ಮುಖ್ಯವಾಗಿ ಉಸಿರಾಟ ಸಮಸ್ಯೆೆ ಎದುರಿಸುತ್ತಿಿರುವ ದೇಶಗಳಲ್ಲಿ ಭಾರತ ಅಗ್ರ ಎಂಬುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆೆಯ ಪ್ರಕಾರ ಪ್ರತಿವರ್ಷ ಭಾರತದಲ್ಲಿ 15ಲಕ್ಷ ಜನ ವಾಯುಮಾಲಿನ್ಯದಿಂದ ಸಾವೀಗೀಡಾಗುತ್ತಾಾರೆ. ಮಕ್ಕಳು ಶ್ವಾಾಸಕೋಶ ಸಮಸ್ಯೆೆಯಿಂದ ಬಳಲುತ್ತಾಾರೆ ಎಂಬುದು.

ಇಂತಹ ಸಮಸ್ಯೆೆ ನಿವಾರಣೆಗಾಗಿ ಇದೀಗ ದೇಶದಲ್ಲಿ ಕೃತಕ ಉಸಿರಾಟದ ಆಕ್ಸಿಿಜನ್ ಬಾರ್‌ಗಳು ಆರಂಭಗೊಳ್ಳುತ್ತಿಿವೆ. ಇದು ಒಂದೆಡೆ ಒಳ್ಳೆೆಯ ಬೆಳವಣಿಗೆ. ಆದ್ದರಿಂದ ಬಹಳಷ್ಟು ಜನರ ಸಂಭ್ರಮಕ್ಕೆೆ ಕಾರಣವಾಗಿದೆ. ಆದರೆ ಇದು ಸಮಸ್ಯೆೆಗೆ ಸೂಕ್ತ ಪರಿಹಾರ ಅಲ್ಲ. ಈ ಆಕ್ಸಿಿಜನ್ ಬಾರ್‌ಗಳ ಆರಂಭ ಒಂದೆಡೆ ಸಂತಸವಾದರೆ, ಆತಂಕದ ಸಂಗತಿ. ನಾವು ಆದ್ಯತೆ ನೀಡಬೇಕಿರುವುದು ಕೃತಕ ಆಕ್ಸಿಿಜನ್ ಬಾರ್‌ಗಳ ಸ್ಥಾಾಪನೆಗಲ್ಲ, ಬದಲಾಗಿ ನಮ್ಮ ಪರಿಸರವನ್ನು ಶುದ್ಧವಾಗಿರಿಸಿ, ಪರಿಶುದ್ಧ ಗಾಳಿ ಒದಗಿಸಲು. ಆದರೆ ಇಂದು ದೇಶದ ರಾಜಧಾನಿ ದೆಹಲಿಯಲ್ಲಿ ಜನರು ಉಸಿರಾಡಲು ಶುದ್ಧ ಗಾಳಿ ಸಿಗದೆ ಆಮ್ಲಜನಕದ ಅಂಗಡಿಗಳು(ಆಕ್ಸಿಿಜನ್ ಬಾರ್) ಮೊರೆಹೋಗುತ್ತಿಿದ್ದಾಾರೆ.

ಗಾಳಿಯ ಗುಣಮಟ್ಟ ಅಪಾಯದ ಸ್ಥಿಿತಿ ತಲುಪಿರುವ ಹಿನ್ನೆೆಲೆಯಲ್ಲಿ ದೆಹಲಿಯಲ್ಲಿ ಆರೋಗ್ಯದ ತುರ್ತು ಪರಿಸ್ಥಿಿತಿ ಸೃಷ್ಟಿಿಯಾಗಿದೆ. ಜನರಿಗೆ ಆಮ್ಲಜನಕ ಅಗತ್ಯತೆ ತಕ್ಷಣದ ಪರಿಹಾರ ಮತ್ತು ಅನಿವಾರ್ಯವಾಗುತ್ತಿಿದೆ. ‘ಆಕ್ಸಿಿ ಎಂದು ಕರೆಯಲ್ಪಡುತ್ತಿಿರುವ ಆಕ್ಸಿಿಜನ್ ಬಾರ್ ಅಥವಾ ಆಮ್ಲಜನಕ ಮಳಿಗೆಗಳಲ್ಲಿ ಗ್ರಾಾಹಕರು ನಳಿಕೆಗಳ ಮೂಲಕ ಆಮ್ಲಜನಕ ಹೀರಬಹುದಾಗಿದೆ. 15ನಿಮಿಷದ ಗಾಳಿಗೆ 250 ರಿಂದ 500ರು. ಹಣವನ್ನು ಪಾವತಿಸಬೇಕಾಗುತ್ತಿಿದೆ.

ಆಮ್ಲಜನಕದ ಅಗತ್ಯ ಇದೀಗ ಒಂದು ವ್ಯಾಾಪಾರವಾಗತೊಡಗಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಆಕ್ಸಿಿಜನ್ ಬಾರ್‌ಗಳು ಆರಂಭಗೊಳ್ಳಲು ಪ್ರಯತ್ನ ಆರಂಭಿಸಿವೆ. ಈ ಪರಿಸ್ಥಿಿತಿಯನ್ನು ಗಮನಿಸಿದಾಗ ದೇಶದಲ್ಲಿ ಪರಿಸರ ಮಾಲಿನ್ಯ ಮತ್ತು ಜನರ ಆರೋಗ್ಯ ಯಾವ ಸ್ಥಿಿತಿಯಲ್ಲಿದೆ ಎಂಬುದು ತಿಳಿಯಬಹುದು. ಇದು ನಮ್ಮೆೆಲ್ಲರಿಗೂ ಆತ್ಮಾಾವಲೋಕನದ ಈ ಸಂದರ್ಭದಲ್ಲಿ ಆಕ್ಸಿಿಜನ್ ಮಾರಾಟ ಮಳಿಗೆಗಳ ಸ್ಥಾಾಪನೆಗೆ ಆದ್ಯತೆ ನೀಡುವುದಕ್ಕಿಿಂತಲೂ ಅಭಿವೃದ್ಧಿಿ ಜತೆಗೆ ಪರಿಸರದ ಕಾಳಜಿ, ಮರಗಳ ಉಳಿವು ಹಾಗೂ ಜನಸಂಖ್ಯೆೆಗೆ ಅನುಗುಣವಾಗಿ ನೂತನವಾಗಿ ಸಸ್ಯಪೋಷಣೆ ಆರಂಭಿಸುವ ಪ್ರಯತ್ನಗಳಾಗಬೇಕಿದೆ. ಇಂಥದೊಂದು ಪ್ರಯತ್ನದ ಆರಂಭ ಹಾಗೂ ಯಶಸ್ಸಿಿಗೆ ಸರಕಾರಗಳು ಬಹಳಷ್ಟು ಕಾಳಜಿವಹಿಸಬೇಕಿರುವ ಅನಿವಾರ್ಯತೆ ಇಂದು ಸೃಷ್ಟಿಿಯಾಗಿದೆ. ಈ ಅನಿವಾರ್ಯ ಪರಿಸ್ಥಿಿತಿಯಲ್ಲಿ ಸುಲಭದ ಮತ್ತು ತತ್‌ಕ್ಷಣದ ಮಾರ್ಗೋಪಾಯವಾಗಿರುವ ಆಕ್ಸಿಿಜನ್ ಮಾರಾಟ ಮಳಿಗೆಗಳ ಕಡೆ ಧಾವಿಸುವ ಆಲೋಚನೆಗಳನ್ನು ತೊಡೆದುಹಾಕಿ ಇಂದಿನಿಂದಲೇ ಸಸ್ಯಪೋಷಣೆ ಹಾಗೂ ಆದ್ಯತೆ ನೀಡಬೇಕಿದೆ.

ಸರಕಾರದ ಮಾಲಿನ್ಯ ನಿಯಂತ್ರಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ತಮ್ಮ ಮೇಲೆ ಜವಾಬ್ದಾಾರಿ ಹೆಚ್ಚಾಾಗಿದೆ ಎಂಬುದನ್ನು ಮನಗಂಡು ಹೆಚ್ಚು ಕಾರ್ಯಪ್ರವೃತ್ತವಾಗಬೇಕಿದೆ. ಈ ಸಂದರ್ಭದಲ್ಲಿ ನಾವು ಮತ್ತೊೊಮ್ಮೆೆ ಮನನ ಮಾಡಿಕೊಳ್ಳಬೇಕಿರುವ ಸಂಗತಿ ಎಂದರೆ ಆಕ್ಸಿಿಜನ್ ಮಾರಾಟ ಮಳಿಗೆಗಳ ಸ್ಥಾಾಪನೆ ಸುಲಭದ ಮಾರ್ಗೋಪಾಯ ಮಾತ್ರ. ಆದ್ದರಿಂದ ಈ ಬೆಳವಣಿಗೆ ನಮಗೆ ಸಂತಸದ ಸಂಗತಿಯಲ್ಲ ಆತಂಕ ಹಾಗೂ ಅವಲೋಕನದ ಸಂಗತಿ.

Leave a Reply

Your email address will not be published. Required fields are marked *