Thursday, 19th September 2024

ನೂರೊಂದು ನೆನಪು

ಮೊದಲೆಲ್ಲಾಾ ಕನ್ನಡ ಸಿನಿಮಾ ಯಶಸ್ವಿಿಯಾದರೆ ‘ಯಶಸ್ವಿಿ 50ನೇ , 100ನೇ ದಿನ, ಅಮೋಘ 25ನೇ ವಾರ’ ಎಂಬ ಬರಹಗಳು ಪತ್ರಿಿಕೆಗಳಲ್ಲಿ ವಾಲ್ ಪೋಸ್ಟರ್‌ಗಳಲ್ಲಿ ರಾರಾಜಿಸುತ್ತಿಿದ್ದವು. ಈಗ ಹತ್ತನೇ ದಿನ, ಇಪ್ಪತ್ತೈದನೇ ದಿನಕ್ಕೇ ವಿಜೃಂಭಿಸುವಂತ್ತಾಾಗಿದೆ. ಅದೇ ರೀತಿ ರಾಜಕೀಯದಲ್ಲೂ ಹಿಂದಿನ ದಿನಮಾನಗಳಲ್ಲಿ ಐದು ವರ್ಷಗಳ ಸಂಪೂರ್ಣ ಆಡಳಿತ ಶತಸಿದ್ಧ ಎಂಬ ವಾಡಿಕೆ ಇತ್ತು. ಶಾಸಕರಾರಾದರು ಅಕಾಲಿಕವಾಗಿ ಸತ್ತು ಹೋದರೆ ಮಾತ್ರ ಉಪ ಚುನಾವಣೆಗಳು ನಡೆಯುತ್ತಿಿದ್ದವು. ಅಥವಾ ಮುಖ್ಯಮಂತ್ರಿಿಗಳ ಆಡಳಿತ ವೈಖರಿಗೆ ಒಂದು ಮಾನದಂಡ ಇರುತ್ತಿಿತ್ತು. ಅದರಲ್ಲಿ ವಿಫಲವಾದರೆ ಅವರನ್ನು ಪಕ್ಷವೇ ಗೌರವಯುತವಾಗಿ ಇಳಿಸಿ ಅನ್ಯರನ್ನು ನೇಮಿಸುತ್ತಿಿದ್ದರು.

ಆದರೆ, ಇಂದು ಅವೆಲ್ಲವೂ ಬದಲಾಗಿ ಸರಕಾರದ ಆಡಳಿದಲ್ಲೂ ನೂರು ದಿನ ಇನ್ನೂರು ದಿನ ಒಂದು ವರ್ಷ ಎಂಬ ಕಿರು ಅವಧಿಯ ‘ಸಾಧನೆ’ಯ ಅವಲೋಕನ ಮಾಡಿ ಅದರ ಆಯಸ್ಸನ್ನು ನಿರ್ಧರಿಸುವಂತಾಗಿದೆ. ಅದಕ್ಕೂ ಮೊದಲು ಸರಕಾರ ರಚಿತವಾದ ಒಂದು ತಿಂಗಳು ಎಲ್ಲವೂ ಸರಿಯಾಗದಿದ್ದರೆ ‘ಸರಕಾರ ಇನ್ನೂ ಟೇಕಾಫ್’ ಆಗಲಿಲ್ಲ ಎಂದು ತಿರ್ಮಾನಿಸುತ್ತಾಾರೆ. ಕುಮಾರಸ್ವಾಾಮಿಯ ಆ ಇಪ್ಪತ್ತು ತಿಂಗಳು, ಈ ಹದಿನಾಲ್ಕು ತಿಂಗಳು, ದೇವೇಗೌಡರ ಆ ಹನ್ನೊೊಂದು ತಿಂಗಳು ಎಂದು ಮೆಲುಕು ಹಾಕುತ್ತಾಾ ಒಂದು ದೊಡ್ಡ ಚರಿತ್ರೆೆಯಂತೆ ನೋಡಬಹುದು. ಇನ್ನು ದೇವರಾಜ ಅರಸರ ನಂತರ ಸಿದ್ದರಾಮಯ್ಯ ಮಾತ್ರ ಐದು ವರ್ಷ ಪೂರೈಸಿದರು, ಈ ಮಧ್ಯೆೆ ಯಡಿಯೂರಪ್ಪನವರೇ ಅದೃಷ್ಟವಂತರು. ಏಕೆಂದರೆ ಅವರು ಬರೋಬ್ಬರಿ ನಾಲ್ಕು ಬಾರಿ ಮುಖ್ಯಮಂತ್ರಿಿಗಳಾಗಿದ್ದರು ಎಂಬುದು ಚರಿತ್ರೆೆಯಲ್ಲಿ ದಾಖಲೆ ಸಾಧನೆಗೆ ಸಾಕ್ಷಿಿ. ಮೊದಲ ಏಳು ದಿನಗಳು, ನಂತರ ಮೂವತ್ತೆೆಂಟು ತಿಂಗಳು, ಈ ವರ್ಷದಲ್ಲೇ ಮೂರನೇ ಬಾರಿ ಎರಡು ದಿನಗಳು, ಈಗ ಮತ್ತೆೆ ನಾಲ್ಕನೇ ಬಾರಿ ನೂರು ದಿನಗಳನ್ನು ಪೂರೈಸಿ ಹಾಗೆಯೇ ಈ ನೂರು ದಿನಗಳಲ್ಲಿ ನಮ್ಮ ನಾಡಿನಲ್ಲಿ ಜೋರು ಮಳೆಯಾಗಿ ನೆರೆಯಾಗಿ ಈಗ ಅದೇ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಅಸಹಜವಾಗಿ ನಂಬಿಕೆ ಇರಿಸಿದ್ದ ಸವದಿ ಎಂಬ ಸೋತ ಮುಖ ಸವೆದು ಹೋಗಿದೆ. ರಾಜ್ಯಾಾಧ್ಯಕ್ಷರಾದ ನಳಿನ್‌ಕುಮಾರ್ ಕಟೀಲ್, ಸಿಎಂಗೆ ಕಳವಳಕಾರಿಯಾಗಿದ್ದರೆ, ಶಾಸಕ ಬಸವನ ಗೌಡ ಪಾಟೀಲ್ ಯತ್ನಾಾಳ್, ಶ್ರೀನಿವಾಸ್ ಪ್ರಸಾದ್ ಕೆಲ ಮಂದಿ ನಿಷ್ಠುರವಾದಿಗಳಾಗಿದ್ದಾಾರೆ. ಇನ್ನು ಅನರ್ಹ ಶಾಸಕರು ಹೊಸಿಲು ಮೆಟ್ಟಿಿದ ಹೆಣ್ಣಿಿನಂತಾಗಿ ಹುಟ್ಟಿಿದ ಮನೆ ಬಿಟ್ಟು ಬಿಜೆಪಿ ಹೊಸ್ತಿಿಲು ಮೆಟ್ಟಲೂ ಆಗದೆ ತ್ರಿಿಶಂಕು ಸ್ಥಿಿತಿಯಲ್ಲಿದ್ದಾಾರೆ. ಈ ಅವಧಿಯಲ್ಲಿ ಬೆಂಗಳೂರು ಮಹಾನಗರವನ್ನು ಐದನೇ ವರ್ಷ ಉಳಿಸಿಕೊಂಡಿದ್ದೇ ಪಕ್ಷದ ಸಾಧನೆಯಾಗಿದೆ.

Leave a Reply

Your email address will not be published. Required fields are marked *