Tuesday, 3rd December 2024

ಸಿಬಿಐ ದಾಳಿ ರಾಜಕೀಯ ಹಗೆತನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿರು ವುದು ಈಗ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವೊದಗಿಸಿದೆ.

ಹಾಗೆ ನೋಡಿದರೆ ಡಿಕೆಶಿ ಮನೆ, ಕಚೇರಿ ಮೇಲೆ ದಾಳಿನಡೆಯುತ್ತಿರುವುದು ಇದು ಹೊಸದೂ ಅಲ್ಲ, ಮೊದಲ ಬಾರಿಯೂ ಅಲ್ಲ. ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐಟಿ) ದಾಳಿಗಳು ನಡೆದಿದ್ದು 2018 ರಲ್ಲಿ ಬಂಧನವಾಗಿತ್ತು. 48 ದಿನಗಳ ತಿಹಾರ್ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ಸಿಬಿಐ ಸರದಿ.

ಇದು ರಾಜಕೀಯ ಪ್ರೇರಿತ ದಾಳಿ ಎಂದು ಡಿಕೆಶಿ ಅವರೂ ಹೇಳಿದ್ದಾರೆ. ಕಾಂಗ್ರೆಸ್ ಕೂಡ ಇದೇ ಕಾರಣದ ಮೇಲೆ ಅವರ ಬೆಂಬಲಕ್ಕೆ ನಿಂತಿದೆ. ಆರ್ ಆರ್ ನಗರ ಉಪಚುನಾವಣೆ ನಡೆಯುತ್ತಿರು ವ ಈ ಸಂದರ್ಭದಲ್ಲಿ ದಾಳಿ ನಡೆಯುತ್ತಿರುವುದುರಿಂದ ಇಂಥ ಸಂಶಯ ಬರುವುದು ಸಹಜ. ಸಿಬಿಐ ಮತ್ತಿತರ ಸರಕಾರಿ ಸಂಸ್ಥೆಗಳನ್ನು ಬಿಜೆಪಿಯು ತನ್ನ ಕೈಗೊಂಬೆ ಮಾಡಿಕೊಂಡಿದ್ದು ದುರ್ಬಳಕೆ ಮಾಡಿಕೊಡುತ್ತಿದೆ ಎಂಬ ಕಾಂಗ್ರೆಸ್ ಆರೋಪ ಇಂದು ನಿನ್ನೆಯದಲ್ಲ. ಆ ಈ ಆರೋಪ ಮಾಡಲು ಕಾಂಗ್ರೆಸ್‌ಗೆ ಎಷ್ಟರ ಮಟ್ಟಿನ ನೈತಿಕ ಹಕ್ಕಿದೆ ಎಂಬುದು ಈಗಿನ ಪ್ರಶ್ನೆ. ಏಕೆಂದರೆ ಅದು ಅಧಿಕಾರದಲ್ಲಿದ್ದಾಗಲೂ ಇಂಥ ಕೆಲಸಕ್ಕೆ ಕೈಹಾಕಿದೆ. ರಾಜಕೀಯ ಹಗೆತನ, ಸರಕಾರಿ ತನಿಖಾ ಸಂಸ್ಥೆಗಳ ದುರ್ಬಳಕೆ ಇವೆಲ್ಲ ಹೊಸ ಸಂಗತಿಯಲ್ಲ. ಇನ್ನು ದಾಳಿಯ ಸಮಯ ಸಂಶಯ ಕ್ಕೆಡೆ ಮಾಡಿದೆ ಎಂಬ ವಿಚಾರ. ಮೇಲ್ನೋಟಕ್ಕೆ ಹಾಗೆ ಅನಿಸುವುದು ಸಹಜವೇ.

ಆದರೆ ಇದು ಇಡಿ, ಐಟಿ ದಾಳಿಯ ಮುಂದುವರಿದ ಭಾಗ ಎಂಬುದಂತೂ ನಿಜ. ಸಿಬಿಐ, ಸಾಕಷ್ಟು ಅಧ್ಯಯನ ನಡೆಸಿ ದಾಳಿಗೆ ಮುಂದಾಗಿದೆ. ಅಲ್ಲದೆ ಡಿಕೆಶಿಯವರು ತಮ್ಮ ವಿರುದ್ಧ ತನಿಖೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋಟ್ ತಿರಸ್ಕರಿಸಿದೆ. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆೆ ಸಲ್ಲಿಸಲಾಗಿರುವ ಅರ್ಜಿ ಇನ್ನೂ ಇತ್ಯರ್ಥವಾಗಬೇಕಿದೆ. ಇದರ ಮಧ್ಯೆ ಇನ್ನೂ ಕೆಲವು ವಿಷಯಗಳ ಬಗೆಗೆ ಚರ್ಚೆ ನಡೆದಿದೆ. ‘ತನಿಖೆಗೆ ನಾನೊಬ್ಬನೇ ಸಿಗೋದಾ ಇವರಿಗೆ ?’ ಎಂದು ಡಿಕೆಶಿ ಪ್ರಶ್ನಿಸಿ ದ್ದಾರೆ. ಆದರೆ ಅವರ ಪ್ರಶ್ನೆಯಲ್ಲೇ ಉತ್ತರವೂ ಅಡಗಿದೆ. ಅವರೊಬ್ಬರೇ ತನಿಖಾ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗುವುದೇಕೆ ಎಂಬುದನ್ನು ಅವರೇ ಕೇಳಿಕೊಳ್ಳಬೇಕು. ‘ನಾನೇನೂ ಇಂಥವಕ್ಕೆಲ್ಲ ಬೆದರು ವನಲ್ಲ’ ಎಂಬ ಅವರ ಮಾತಿನಿಂತೆಯೇ ಅವರು
ಹೆದರುವುದು ಬೇಡ. ತನಿಖೆ ನಡೆಯಲಿ. ಐಟಿ ದಾಳಿಯೂ ನಡೆಯಬಹುದು ಎಂಬುದು ಕಾಂಗ್ರೆಸ್‌ಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಇಷ್ಟೆೆಲ್ಲ ಆದ ಮೇಲೂ ಬೆಂಬಲಕ್ಕಾಗಿ ಬೆಂಬಲ ನೀಡುವುದು ಸರಿಯೇ ಎಂಬುದನ್ನು ಅವರು ಯೋಚನೆ ಮಾಡಬೇಕು. ಹಾಗೆಂದು ತನಿಖೆಯಲ್ಲಿ ತಮ್ಮ ಪಾತ್ರ, ಕೈವಾಡ ಏನೂ ಇಲ್ಲ ಎಂಬ ಬಿಜೆಪಿಯವರು ತಾರಮ್ಮಯ್ಯ ಆಡಿಸಿದರೂ ಅದನ್ನೂ
ಯಾರು ನಂಬುವುದಿಲ್ಲ.

ತನಿಖೆ ನಡೆಯಲಿ, ಕೋರ್ಟು ಇದೆ. ವಿಚಾರಣೆ ನಡೆ ಯಲಿ. ಮುಂದೆ ಏನಾಗುತ್ತದೆಯೋ ಆಗುತ್ತದೆ. ಅಲ್ಲದೆ ದಾಳಿ ಕುರಿತು ಪ್ರತಿಭ
ಟನೆ, ಪತ್ರಿಕಾಗೋಷ್ಟಿ ನಡೆಸಿ ಒತ್ತಡ ಹೇರಿದರೆ ಪ್ರಯೋಜನವೇನೂ ಇಲ್ಲ