Thursday, 19th September 2024

ಆರ್‌ಸಿಇಪಿ: ಸಕಾಲಿಕ ತೀರ್ಮಾನ

ಒಂದು ವೇಳೆ ಕರಡಿಗೆ ಸಹಿ ಹಾಕಿದ್ದರೆ ವಿರೋಧ ಕೇಳಿಬರುತ್ತಿಿತ್ತು. ಪ್ರತಿಭಟನೆಗಳು ತೀವ್ರಗೊಂಡರೆ ಕೇಂದ್ರ ಸರಕಾರಕ್ಕೆೆ ತಲೆಬಿಸಿಯಾಗಲಿದೆ. ನವಂಬರ್ 17ರೊಳಗೆ ಅಯೋಧ್ಯಾಾ ತೀರ್ಪು ಹೊರಬಂದು ಮತ್ತಷ್ಟು ಸಮಸ್ಯೆೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ದೇಶದಲ್ಲಿ ಶಾಂತಿ-ಸುವ್ಯವಸ್ಥೆೆ ಕಾಪಾಡುವ ದೃಷ್ಟಿಿಯಿಂದ ಪ್ರಧಾನಿ ಮೋದಿ ಅವರು ಸಕಾಲಿಕ ತೀರ್ಮಾನ ಕೊಂಡಿದ್ದಾಾರೆ.

ಆತಂಕ ದೂರವಾಯಿತು. ನೆಮ್ಮದಿಯ ವಾತಾವರಣ ಮೂಡಿತು. ರೈತರಲ್ಲಿ, ರೈತ ಸಂಘಟನೆಗಳಲ್ಲಿ, ವಿಪಕ್ಷಗಳ ನಾಯಕರಲ್ಲಿ ಆ ಒಂದು ತೀರ್ಮಾನ ನೆಮ್ಮದಿ ತಂದಿದೆ. ಪ್ರಾಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆೆ ಕೊನೆಗೂ ಭಾರತ ಸಹಿ ಹಾಕುವುದಿಲ್ಲ ಎಂದು ಘೋಷಿಸಿದೆ. ಅರ್ಥಾತ್ ಒಪ್ಪಂದವನ್ನು ತಿರಸ್ಕರಿಸಲಾಗಿದೆ. ಪರಿಣಾಮ ಕಳೆದ ಹಲವು ದಿನಗಳಿಂದ ರಾಜ್ಯ ಹಾಗೂ ದೇಶದ ನಾನಾ ಕಡೆ ನಡೆಯುತ್ತಿಿದ್ದ ಪ್ರತಿಭಟನೆಗಳು ಫಲ ನೀಡಿವೆ. ವಿಪಕ್ಷಗಳು ಅದರಲ್ಲೂ ಕಾಂಗ್ರೆೆಸ್, ಇದು ( ಸಹಿ ಬೀಳದಿರುವುದು) ನನ್ನ ತೀವ್ರ ವಿರೋಧದ ಫಲ ಎಂದು ಬೀಗಿಕೊಂಡರೆ, ನಾನಾ ಸಂಘಟನೆಗಳು ತಮ್ಮ ಹೋರಾಟಗಳಿಗೆ ಸಂದ ಜಯ ಎಂದು ಸಂತಸ ಪಟ್ಟಿಿವೆ. ಎಲ್ಲವನ್ನು ತೂಗಿ ನೋಡಿ, ತಾನು ರೈತ ವಿರೋಧಿ ಎಂಬ ಕಟು ಟೀಕೆಗಳಿಗೆ ಆಹಾರವಾಗಬಾರದು ಎಂಬ ದೀರ್ಘಾಲೋಚನೆಯಿಂದ ಪ್ರಧಾನಿ ನರೇಂದ್ರಮೋದಿ ಅವರು ಒಂದು ಉತ್ತಮ ನಿರ್ಧಾರ ಕೈಗೊಂಡಿದ್ದಾಾರೆ ಎಂದು ಅರ್ಥೈಸಬಹುದು.

ಭಾರತದ ಆತಂಕಗಳಿಗೆ ಕರಡು ಒಪ್ಪಂದದಲ್ಲಿ ಪರಿಹಾರಗಳಿಲ್ಲ. ಆದ್ದರಿಂದ ಅದನ್ನು ತಿರಸ್ಕರಿಸಲಾಯಿತು ಎಂದು ಪ್ರಧಾನಿ ವಿವರಣೆ ನೀಡಿದ್ದಾಾರೆ. ಆದರೂ ಭಾರತದ ಮೇಲಿನ ಅಭಿಮಾನದಿಂದಾಗಿ, ಈ ಒಕ್ಕೂಟದ ಸದಸ್ಯತ್ವ ಪಡೆಯುವ ಬಗ್ಗೆೆ ಮತ್ತೆೆ ಚಿಂತಿಸುತ್ತದೆ ಎಂಬ ವಿಶ್ವಾಾಸವಿದೆ. ಭಾರತಕ್ಕಾಾಗಿ ನಮ್ಮ ಬಾಗಿಲನ್ನು ಸದಾ ತೆರೆದಿರುತ್ತದೆ ಎಂದು ಆಸ್ಪ್ರೇಲಿಯಾದ ವಾಣಿಜ್ಯ ಸಚಿವ ಸಿಮೊನ್ ಬರ್ಮಿಂಗ್‌ಹ್ಯಾಾಂ ವಿಶ್ವಾಾಸ ಇಟ್ಟುಕೊಂಡಿದ್ದಾಾರೆ. ಇದರಿಂದಾಗಿ ‘ಆಸಿಯಾನ್’ (ದಿ ಅಸೋಸಿಯೇಷನ್ ಆಫ್ ಸೌತ್ ಈಸ್‌ಟ್‌ ಏಷಿಯನ್ ನೇಷನ್‌ಸ್‌) ರಾಷ್ಟ್ರಗಳ ಎದುರು ನಮ್ಮ ದೇಶದ ಪ್ರಭಾವ ಏನೆಂಬುದನ್ನು ಅರಿಯಬಹುದು. ಚೀನಾ, ನ್ಯೂಜಿಲೆಂಡ್, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಇದರ ವ್ಯಾಾಪ್ತಿಿಯಲ್ಲಿ ಬರುತ್ತವೆ.

ಆರ್‌ಸಿಇಪಿ ವಿಷಯ ಇತ್ತೀಚಿನದಲ್ಲ. 2012ರಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಾಗ ಈ ಒಪ್ಪಂದ ಮಾತುಕತೆ ಪ್ರಾಾರಂಭವಾಗಿತ್ತು. ಕೆಲವು ಸರಕುಗಳನ್ನು ಸುಂಕ ರಹಿತ ವ್ಯಾಾಪಾರದಿಂದ ಹೊರಗಿಡಬೇಕೆಂಬ ಅಭಿಪ್ರಾಾಯವನ್ನು ವ್ಯಕ್ತಪಡಿಸಿತ್ತು. ಪರಿಣಾಮ ಒಪ್ಪಂದ ಅಂತಿಮವಾಗಿರಲಿಲ್ಲ. ಆದರೆ, ಚೀನಾ ಈ ಬಾರಿ ಒಪ್ಪಂದ ಆಗಲೇಬೇಕು ಎಂದು ಆಗ್ರಹಿಸಿದ್ದರಿಂದ ಭಾರತ ಬಿಟ್ಟು ಉಳಿದ 15 ರಾಷ್ಟ್ರಗಳು ಒಪ್ಪಂದದ ಕರಡನ್ನು ಅಂತಿಮಗೊಳಿಸಿವೆ. 2020ರ ಫೆಬ್ರವರಿಯಲ್ಲಿ ವಿಯೆಟ್ನಾಾಂನಲ್ಲಿ ನಡೆಯುವ ಆರ್‌ಸಿಇಪಿ ಶೃಂಗಸಭೆಯಲ್ಲಿ ಈ ರಾಷ್ಟ್ರಗಳು ಒಪ್ಪಂದಕ್ಕೆೆ ಸಹಿ ಹಾಕಲಿವೆ.

ಇಷ್ಟಾಾದರೂ ಭಾರತವನ್ನು ಒಕ್ಕೂಟಕ್ಕೆೆ ಸೇರಿಸಿಕೊಳ್ಳುವ ಆಯ್ಕೆೆಯನ್ನು ಮುಕ್ತವಾಗಿರಿಸಿವೆ. ಒಪ್ಪಂದವು ಅನುಷ್ಠಾಾನಕ್ಕೆೆ ಬಂದರೆ ಆಸಿಯಾನ್ ರಾಷ್ಟ್ರಗಳು ಹಾಗೂ ಚೀನಾದಿಂದ ಅತಿ ಕಡಿಮೆ ಬೆಲೆಯಲ್ಲಿ ಸರಕುಗಳು ಭಾರತಕ್ಕೆೆ ಬರುತ್ತವೆ. ದೇಶದಲ್ಲಿ ತಯಾರಾಗುವ ಸರಕುಗಳಿಗಿಂತಾ ಕಡಿಮೆ ಬೆಲೆಯಲ್ಲಿ ಇವು ದೊರೆತರೆ ದೇಶಿಯ ವಸ್ತುಗಳಿಗೆ ಬೇಡಿಕೆ ಕುಸಿಯುತ್ತವೆ ಎಂಬ ಆತಂಕವೇ ಈ ಒಪ್ಪಂದಕ್ಕೆೆ ಸಹಿ ಹಾಕಬಾರದೆಂಬುದಕ್ಕೆೆ ಕಾರಣವಾಗಿತ್ತು. ಜತೆಗೆ ಹೈನೋತ್ಪನ್ನಗಳು ಕಮ್ಮಿಿ ಬೆಲೆಯಲ್ಲಿ ಆಮದಾಗುವುದರಿಂದ ಸ್ಥಳೀಯವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿದೆ ಎಂಬ ಚಿಂತೆ ಹೈನೋದ್ಯಮದಲ್ಲಿರುವ ರೈತರದ್ದಾಾಗಿತ್ತು.

ಒಂದು ವೇಳೆ ಕರಡಿಗೆ ಸಹಿ ಹಾಕಿದ್ದರೆ ವಿರೋಧ ಕೇಳಿಬರುತ್ತಿಿತ್ತು. ಪ್ರತಿಭಟನೆಗಳು ತೀವ್ರಗೊಂಡರೆ ಕೇಂದ್ರ ಸರಕಾರಕ್ಕೆೆ ತಲೆಬಿಸಿಯಾಗಲಿದೆ. ನವಂಬರ್ 17ರೊಳಗೆ ಅಯೋಧ್ಯಾಾ ತೀರ್ಪು ಹೊರಬಂದು ಮತ್ತಷ್ಟು ಸಮಸ್ಯೆೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ದೇಶದಲ್ಲಿ ಶಾಂತಿ-ಸುವ್ಯವಸ್ಥೆೆ ಕಾಪಾಡುವ ದೃಷ್ಟಿಿಯಿಂದ ಪ್ರಧಾನಿ ಮೋದಿ ಅವರು ಸಕಾಲಿಕ ತೀರ್ಮಾನ ಕೊಂಡಿದ್ದಾಾರೆ.

Leave a Reply

Your email address will not be published. Required fields are marked *