Thursday, 19th September 2024

ಶ್ರೀಗಳ ಪ್ರತಿಮೆ: ವೀರಾಪುರದಲ್ಲಿ ಸ್ವಾಗತಾರ್ಹ

ಶ್ರೀಗಳ ಅವರ ಹುಟ್ಟುರಾದ ವೀರಾಪುರದಲ್ಲಿ ‘ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಾಪಿಸುತ್ತಿರುವುದು ಸ್ವಾಾಗತಾರ್ಹ’ವಾದದ್ದು
ತಮ್ಮ ಜೀವಿತಾವಧಿಯ ವೀರಾಪೂರ ಸಮಾಜಕ್ಕೆೆ ಶ್ರೀಗಂಧದ ಕೊರಡಿನಂತೆ ಬದುಕನ್ನು ಸವೆಸಿದ ಮಹಾ ಶಿವಶರಣ ಡಾ. ಶ್ರೀಶ್ರೀಶ್ರೀ ಶಿವಕುಮಾರ ಸ್ವಾಾಮೀಜಿಯವರನ್ನು ಈ ದೇಶ ಈ ನಾಡು ಎಂದೂ ಮರೆಯಲು ಸಾಧ್ಯವೇ ಇಲ್ಲ. ಹನ್ನೊೊಂದನೇ ಶತಮಾನದ ಬಸವಣ್ಣನವರು ಹೇಗ ವಿಶ್ವಮಾನವ ಎಂದೆನಿಸಿದರೋ ಅದೇ ಹಾದಿಯಲ್ಲಿ ಸ್ವಾಾಮೀಜಿಗಳು ಸಹ ಶತ ಶತಮಾನಗಳವರೆಗೂ ಸ್ಮರಿಸುವ ಆಧುನಿಕ ಬಸವಣ್ಣನೆಂದರೆ ಅದು ನಾಡಿನ ಗರಿಮೆ. ಬಸವಣ್ಣನವರಂತೆ ವಚನ ಸಾಹಿತ್ಯ ರಚಿಸದೇ ಇರಬಹುದು ಆದರೆ, ಅವರ ಜೀವನವೇ ಒಂದು ಮಹಾವಚನದಂತೆ. ಅವರನ್ನು ಅನುಸರಿಸಿದರೆ ಸಾವಿರ ವಚನಗಳನ್ನು ಪಠಿಸಿದಂತೆ. ಅನ್ನ ದಾಸೋಹ ಅಕ್ಷರ ದಾಸೋಹ ಆಶ್ರಯ ದಾಸೋಹವೆಂಬ ಮಹಾವಚನಕ್ಕೆೆ ಸ್ವಾಾಮೀಜಿಗಳ ಹೆಸರೇ ಕಾವ್ಯನಾಮ.

ಅವರು ಬದುಕು ಬಾಳಿದ ನೂರಾ ಹನ್ನೊೊಂದು ವರ್ಷಗಳ ಮೂರು ಸಂಖ್ಯೆೆಗಳು ಅಕ್ಷರ, ಅನ್ನ ಆಶ್ರಯದ ಸಂಕೇತವಾಗಿ ನಿಲ್ಲುತ್ತದೆ. ಇಂತಹ ನಾಡಿನ ಸಾಂಸ್ಕೃತಿಕ ಪುರುಷನ ಚಿರಸ್ಮರಣೆಯ ದ್ಯೋೋತಕವಾಗಿ ಅವರ ಹುಟ್ಟುರಾದ ವೀರಾಪುರದಲ್ಲಿ ‘ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಾಪಿಸುತ್ತಿರುವುದು ಸ್ವಾಾಗತಾರ್ಹ’. ವೀರಾಪುರದಲ್ಲಿ ಹದಿನಾರು ಎಕರೆ ವಿಶಾಲ ಪ್ರದೇಶದಲ್ಲಿ ಇದು ಸ್ಥಾಾಪನೆಗೊಂಡು ಅಲ್ಲಿ ಧ್ಯಾಾನ ಮಂದಿರ, ದಾಸೋಹ ಭವನ, ವಸ್ತು ಸಂಗ್ರಹಾಲಯವನ್ನು ನಿರ್ಮಿಸುತ್ತಿರುವುದು ರಾಮನಗರ ಜಿಲ್ಲೆೆಗೆ ಕಿರೀಟ ತೊಡಿಸಿದಂತೆ. ಅದಲ್ಲದೆ ಸ್ವಾಾಮೀಜಿಗ ಬದುಕನ್ನು ಸೂಚಿಸುವ ನೂರು ಹನ್ನೊೊಂದು ಅಡಿಗಳ ಪ್ರತಿಮೆಯನ್ನು ಸ್ಥಾಾಪಿಸುತ್ತಿರುವುದು ಕರ್ನಾಟಕಕ್ಕೇ ಒಂದು ಇತಿಹಾಸಗಲ್ಲು. ಇಂತಹ ಮಹಾ ಪುರುಷರ ಪ್ರತಿಮೆಗಳು ಖಂಡಿತಾ ಅವಶ್ಯಕತೆ ಇದೆ.

ಮೆರು ಪುರುಷರನ್ನು ಮುಂದಿನ ಪೀಳಿಗೆಯ ವಿದ್ಯಾಾರ್ಥಿಗಳು ತಲೆಯೆತ್ತಿ ನೋಡಬೇಕಾದ ಅವಶ್ಯಕತೆ ಇದೆ. ಇಂತಹ ಮಹಾಕಾರ್ಯಕ್ಕೆ ನಿನ್ನೆೆ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಶಂಕುಸ್ಥಾಾಪನೆ ನೆರವೇರಿಸಿದ್ದು ಅವರ ಸರಕಾರದಿಂದ ಪ್ರಯತ್ನಿಸಿದ ಮೊದಲ ಅತ್ಯುತ್ತಮ ಕೆಲಸವೆಂದರೆ ತಪ್ಪಾಾಗಲಾರದು. ಇಂತಹ ಕಾರ್ಯವನ್ನು ಮಾಡಿದಾಗ ಮುಖ್ಯಮಂತ್ರಿ ಪದವಿಗೆ ಒಂದು ಕೀರ್ತಿ ದೊರೆಯುತ್ತದೆ ಹೊರತು ಪದವಿಯಿಂದ ಪ್ರತಿಮೆಗಲ್ಲ. ಆ ಮಟ್ಟದ ಸಾಧಕರೆನಿಸಿದ್ದಾಾರೆ ಸ್ವಾಾಮೀಜಿಗಳು. ಮುಂಬರುವ ದಿನಗಳಲ್ಲಿ ವೀರಾಪುರ ದಾರ್ಶನಿಕಪುರವಾಗಿ ಕಂಗೊಳಿಸಲೆಂದು ಆಶಿಸುತ್ತಿರಲಿ.

Leave a Reply

Your email address will not be published. Required fields are marked *