Thursday, 19th September 2024

ಗೌರವಯುತ ವಿದಾಯದ ಅವಕಾಶ ತಪ್ಪಿಸಿಕೊಂಡ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಿಲ್ಲೊಂದು ಗದ್ದಲ, ವಿವಾದಗಳಿಂದಲೇ ಸದ್ದು ಮಾಡಿದ್ದರು.

ಅನೇಕ ಬಾರಿ ಟ್ರಂಪ್ ಅವರ ಹೇಳಿಕೆಗಳು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಗೌರವತರಬಹುದಾದ ಹೇಳಿಕೆಗಳಾಗಿರಲಿಲ್ಲ. ಆದ್ದರಿಂದಲೇ ಅವರು ಅಧಿಕಾರ ಅವಧಿ ಮುಗಿಯುವ ಮೊದಲೇ, ಅನೇಕರು ಟ್ರಂಪ್ ಎಂದರೆ ಮೂಗು ಮುರಿಯುವ ರೀತಿ ಮಾಡಿಕೊಂಡಿದ್ದರು. ಅದಕ್ಕಾಗಿಯೇ ಅಧ್ಯಕ್ಷೀಯ ಚುನಾವಣಾ ಸಮಯದಲ್ಲಿ ಟ್ರಂಪ್ ವಿರೋಧಿಗಳಿಗಿಂತ ಹೆಚ್ಚಾಗಿ ಅಮೆರಿಕ ಜನರೇ ಟ್ರಂಪ್ ಅವರ ಬದಲು ಬೈಡನ್ ಬೇಕು ಎನ್ನುವ ಅಭಿಯಾನವನ್ನು ಆರಂಭಿಸಿದರು.

ಇಷ್ಟೆಲ್ಲ ಆದರೂ ಟ್ರಂಪ್ ಅವರ ಪರವಾಗಿಯೇ ಹಲವು ಸಮೀಕ್ಷೆಗಳು ಬಂದವು. ಅಂತಿಮವಾಗಿ ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಆಗಬೇಕು ಎನ್ನುವ ಜನಮತ ಬಂದಿತ್ತು. ಅಧ್ಯಕ್ಷರಾಗಿದ್ದ ಐದು ವರ್ಷಗಳ ಹಲವು ಬಾರಿ ವಿವಾದಗಳಿಂದ ಮುಜುಗರಕ್ಕೆ ಒಳಗಾಗಿದ್ದ ಟ್ರಂಪ್ ಅಧ್ಯಕ್ಷೀಯ ಸ್ಥಾನವನ್ನು ಹಸ್ತಾಂತರಿಸುವಾಗಲಾದರೂ ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಎನ್ನುವ
ನಿರೀಕ್ಷೆಯಲ್ಲಿ ಅನೇಕರದಿದ್ದರು. ಅದರಲ್ಲಿಯೂ ವಿಶ್ವದ ದೊಡ್ಡಣ್ಣನಂತಿರುವ ಅಮೆರಿಕದ ಅಧ್ಯಕ್ಷರಿಂದ ಈ ರೀತಿ ನಿರೀಕ್ಷೆ ಮಾಡುವುದು ಸಹ ಸಹಜ.

ಚುನಾವಣೆ ಬಳಿಕ ಜನಾದೇಶದಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದರೂ, ಕೋರ್ಟ್ ಮೊರೆ ಹೋಗುವುದಾಗಿ ಹೇಳಿಕೊಂಡಿದ್ದ ಟ್ರಂಪ್ ಅವರು ಗುರುವಾರ ತಮ್ಮ ಬೆಂಬಲಿಗರ ಮೂಲಕ ಎಲೆಕ್ಟೊರಲ್ ಮತ ಎಣಿಕೆ ನಡೆಯುತ್ತಿದ್ದ ಸ್ಥಳದಲ್ಲಿ ದಾಂಧಲೆ ಮಾಡುವ ಮೂಲಕ ಇಡೀ ವಿಶ್ವವೇ ಅಚ್ಚರಿಯಿಂದ ನೋಡುವಂತೆ ಮಾಡಿದೆ. ಗುರುವಾರ ಅಮೆರಿಕ ಸಂಸತ್ ಮೇಲೆ ನಡೆಸಿರುವ ಹಿಂಸಾ ಚಾರ 220ಕ್ಕೂ ಹೆಚ್ಚು ವರ್ಷಗಳಲ್ಲೇ ಭೀಕರವಾಗಿದೆ ಎಂದು ಹೇಳಲಾಗಿದ್ದು, ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವದ ಸ್ಥಾನವನ್ನು ಅಪವಿತ್ರಗೊಳಿಸುವ ಘಟನೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿದೆ.

ವಿಶ್ವದ ಪ್ರಬಲ ರಾಷ್ಟ್ರ ಅಮೆರಿಕವನ್ನು ಐದು ವರ್ಷಗಳ ಕಾಲ ಆಳಿದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಂತಿಮ ವಿದಾಯ ವನ್ನಾದರೂ ಗೌರತಯುತವಾಗಿ ಮಾಡಿಕೊಳ್ಳಬಹುದಿತ್ತು.

Leave a Reply

Your email address will not be published. Required fields are marked *