Wednesday, 30th October 2024

ಜನರ ಸಹಭಾಗಿತ್ವ ಅಗತ್ಯ

ಕೇರಳದ ವಯನಾಡಲ್ಲಿ ಸಂಭವಿಸಿದ ಭೂಕುಸಿತದದಿಂದ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಜನರ ಮನೆ, ಆಸ್ತಿ-ಪಾಸ್ತಿ ಹೇಳಹೆಸರಿಲ್ಲದಂತೆ ನಾಶವಾಗಿವೆ. ಮೃತರ ಸಂಖ್ಯಖ್ಯೆ ೧೭೦ ದಾಟಿದೆ. ಹಲವರು ನಾಪತ್ತೆಯಾಗಿzರೆ. ಇಡೀ ಹಳ್ಳಿ, ಶಾಲಾ ಕಟ್ಟಡಗಳು, ರಸ್ತೆಗಳು, ಸೇತುವೆಗಳು, ಇತರ ಕಟ್ಟಡ ಗಳು ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿ ಧ್ವಂಸಗೊಂಡಿವೆ.

ಇಡೀ ಊರಿಗೆ ಊರೇ ಮಸಣವಾಗಿ, ಸಾವಿನ ಸಂಖ್ಯೆ ಲೆಕ್ಕಕ್ಕೇ ಸಿಗುತ್ತಿಲ್ಲ. ಇದು ಪ್ರಕೃತಿಯ ವಿಕೋಪವಾದರೂ ಪ್ರಕೃತಿಯ ಮೇಲಣ ಮನುಷ್ಯನ ವಿಕೃತಿ ಯೂ ಹೌದು. ಅರಣ್ಯನಾಶ, ಅತಿಕ್ರಮಣ, ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು ಹಾಗೂ ಗಣಿಗಾರಿಕೆಯಿಂದಾಗಿ ಪಶ್ಚಿಮಘಟ್ಟ ಪ್ರದೇಶಕ್ಕೆ ಎದುರಾಗಿರುವ ಅಪಾಯಗಳ ಬಗ್ಗೆ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿಯು ೨೦೧೧ರಲ್ಲಿ ವರದಿ ಸಿದ್ಧಪಡಿಸಿದೆ. ಇಂತಹ ದುರಂತಗಳು ಸಂಭವಿಸ ಬಹುದು ಎಂಬುದನ್ನು ವರದಿಯು ಊಹಿಸಿತ್ತು, ವಿಕೋಪಗಳನ್ನು ತಡೆಯಲು ಕೆಲವು ಕ್ರಮಗಳನ್ನು ಸೂಚಿಸಿತ್ತು.

ಗಾಡ್ಗೀಳ್ ಸಮಿತಿಯ ವರದಿಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಸರಕಾರವು ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ದುರ್ಬಲಗೊಳಿಸಿದ ಶಿಫಾರಸುಗಳನ್ನು ಕೂಡ ಅನುಷ್ಠಾನಕ್ಕೆ ತರುವ ಕೆಲಸ ಆಗಲಿಲ್ಲ. ಸರಕಾರವು ರಾಜಕೀಯ ಹಾಗೂ ಇತರ ಒತ್ತಡಗಳಿಗೆ ಮಣಿದು ಎಲ್ಲ ಶಿಫಾರಸುಗಳನ್ನು ನಿರ್ಲಕ್ಷಿಸಿತು. ಈಗ ಪಶ್ಚಿಮಘಟ್ಟ ಪ್ರದೇಶದ ಹಲವೆಡೆ, ಪರಿಸರ ನಾಶ ಹಾಗೂ ಹವಾಮಾನ ಬದಲಾವಣೆಯ ಕಾರಣದಿಂದಾಗಿ
ಅವಘಡಗಳು ಸಂಭವಿಸುತ್ತಿವೆ. ವಯನಾಡ್ ದುರಂತವು ಇತರ ರಾಜ್ಯಗಳಿಗೂ ಒಂದು ಎಚ್ಚರಿಕೆಯಾಗಬೇಕು. ಸರಕಾರವಷ್ಟೇ ಈ ಕೆಲಸ ಮಾಡಲಿ ಎಂದು ಕಾಯದೆ, ಜನರ ಸಹಭಾಗಿತ್ವವೂ ಇದ್ದರೆ ಯಶಸ್ಸು ಸಾಧ್ಯ.

ಪರಿಸರ ಸಂರಕ್ಷಣೆಯಂತಹ ಕೆಲಸಗಳಿಗೆ ಜನರನ್ನು ಪ್ರೇರೇಪಿಸಲು ಸರಕಾರಿ ಹುದ್ದೆಗಳಲ್ಲಿ ಭೂ ರಕ್ಷಕ, ಹಸಿರು ರಕ್ಷಕ ಎಂಬ ಪ್ರಮಾಣಪತ್ರಗಳನ್ನು
ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಆಗ ಜನಸಾಮಾನ್ಯರು ಕೂಡ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿದ್ದು, ಮುಂದಿನ ದಿನಗಳಲ್ಲಿ
ಅನಾಹುತಗಳನ್ನು ತಡೆಯಲು ಸಾಧ್ಯವಾಗುತ್ತದೆ.