Sunday, 23rd June 2024

ಬಾಬರಿ ಮಸೀದಿ ಧ್ವಂಸ; ಹರಕೆಯ ಕುರಿ ಪಿ.ವಿ.ಎನ್

ಡಿಸೆಂಬರ್ 6, 1992ರ ಬೆಳಗ್ಗೆೆ 7 ಗಂಟೆಗೆ ಎದ್ದು ವಾಕಿಂಗ್ ಮಾಡಿ ಕುಳಿತಿದ್ದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ್‌ರಾವ್ ದೈನಂದಿನ ಪತ್ರಿಿಕೆಗಳನ್ನು ಓದುತ್ತಿಿದ್ದರು. ಅಂದು ಎಲ್ಲಾಾ ಪತ್ರಿಿಕೆಗಳಲ್ಲೂ ಸುಮಾರು ಎರಡು ಲಕ್ಷಕ್ಕಿಿಂತ ಅಧಿಕ ವಿಎಚ್‌ಪಿ ಕಾರ್ಯಕರ್ತರು ಉತ್ತರ ಪ್ರದೇಶದ ಆಯೋಧ್ಯೆೆಯ ಬಾಬರಿ ಮಸೀದಿ ಬಳಿ ಜಮಾಯಿಸುತ್ತಿಿದ್ದಾಾರೆಂಬ ಸುದ್ದಿ ತಿಳಿಯಿತು. ಈ ಮೊದಲೇ ತುಸು ಖಿನ್ನತೆಗೆ ಒಳಗಾಗಿದ್ದ ನರಸಿಂಹರಾವ್ ಅವರಿಗೆ ಬರಸಿಡಿಲು ಬಡೆದಂತಾಗಿ ಒಂದೆಡೆ ಕುಳಿತಿರುತ್ತಾಾರೆ. ಏನು ಮಾಡಬೇಕೆಂಬುದು ತೋಚದೆ ಯೋಚಿಸುತ್ತ ಉದ್ವೇಗದಲ್ಲಿಯೇ ತಮ್ಮ ಬೆಳಗಿನ ಚಟುವಟಿಕೆಗಳನ್ನು ಮುಗಿಸುತ್ತಾಾರೆ. ತಮ್ಮ ಆಫೀಸ್‌ನಲ್ಲಿಯೇ ಎಲ್ಲವನ್ನೂ ನೋಡುತ್ತಾಾ, ಕೈಕಟ್ಟಿಿ ಹಾಕಿದವರಂತೆ ಕುಳಿತುಕೊಳ್ಳುತ್ತಾಾರೆ.

ಮಧ್ಯಾಾಹ್ನ ಸರಿ ಸುಮಾರು 12:30 ರ ಸಮಯದಲ್ಲಿ ಟಿವಿ ವಾರ್ತೆಯಲ್ಲಿನ ಬಾಬರಿ ಮಸೀದಿಯ ಮೊದಲನೆಯ ಗೋಪುರವು ಧ್ವಂಸವಾಯಿತು, ಲಕ್ಷಾಾಂತರ ಕಾರ್ಯಕರ್ತರು ಮಸೀದಿಯ ಒಳಗೆ ಇಳಿದು, ಮಸೀದಿಯನ್ನು ಧ್ವಂಸ ಮಾಡುವಲ್ಲಿ ತೊಡಗಿದ್ದಾಾರೆಂದು ತೋರಿಸಿದಾಗ, ನರಸಿಂಹರಾವ್ ಅವರ ರಕ್ತದೊತ್ತಡ ಜಾಸ್ತಿಿಯಾಗುತ್ತದೆ. ಏನು ಆಗಬಾರದಿತ್ತು, ನಡೆಯಬಾರದಿತ್ತು ಎಂದು ಅವರು ಅಂದುಕೊಂಡಿದ್ದರೋ, ಅದು ಆಗಿ ಹೋಯಿತು ಎಂಬ ಬೇಸರ, ಹತಾಶೆ ಮನೋಭಾವ ಅವರನ್ನು ತುಂಬಾ ಆಳವಾಗಿ ಕಾಡಿತು. ತಾನು ಪಟ್ಟ ಪರಿಶ್ರಮವೆಲ್ಲ ವ್ಯರ್ಥವಾಯಿತು. ಇನ್ನು ನನಗೆ ಉಳಿಗಾಲವಿಲ್ಲವೆಂಬ ಯೋಚನೆಯೂ ಕಾಡಲು ಶುರುವಾಗುತ್ತದೆ. ಕಳೆದ ವಾರವಷ್ಟೇ ರಾಮಜನ್ಮಭೂಮಿಯ ತೀರ್ಪು ಹೊರ ಬಂದಿದೆ. ವಿವಾದದಲ್ಲಿದ್ದ ಜಾಗವು ಹಿಂದೂಗಳಿಗೆ ನೀಡಬೇಕು ಹಾಗೂ ಆ ಜಾಗದಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಬೇಕೆಂಬ ಐತಿಹಾಸಿಕ ತೀರ್ಪು ನೀಡುವ ಮೂಲಕ ಐದು ದಶಕಗಳ ವಿವಾದಕ್ಕೆೆ ನ್ಯಾಾಯಾಲಯ ಅಂತ್ಯ ಹಾಡಿತು.

1885ರಲ್ಲಿ ಮೊದಲ ಬಾರಿಗೆ ಶುರುವಾದ ವ್ಯಾಾಜ್ಯವು, 1949ರಲ್ಲಿ ತಾರಕಕ್ಕೇರಿ ಕೋರ್ಟಿನ ಮೆಟ್ಟಿಿಲೇರಿತು. ಆಗತಾನೇ ಅಧಿಕಾರ ವಹಿಸಿಕೊಂಡಿದ್ದ ಮಹಾನುಭಾವ ನೆಹರು ಈ ವಿವಾದವನ್ನುಅಷ್ಟು ಸುಲಭವಾಗಿ ಬಗೆಹರಿಸಲು ತಯಾರಿರಲಿಲ್ಲ. ವಿವಾದಗಳಿಂದಲೇ ಚುನಾವಣೆಗಳನ್ನು ಗೆಲ್ಲುವ ಪಕ್ಷದವರಿಂದ ಏನನ್ನು ತಾನೇ ನಿರೀಕ್ಷಿಿಸಲು ಸಾಧ್ಯ? ಹಿಂದು ಹಾಗೂ ಮುಸಲ್ಮಾಾನ ಮತಗಳ ವಿರೋಧ ಮಾಡಿಕೊಳ್ಳಲು ತಯಾರಿಲ್ಲದ ಕಾಂಗ್ರೆೆಸ್ ಪಕ್ಷವು ಹಿಂದೂಗಳಿಗೆ ತಾವು ಇಟ್ಟಿಿದ್ದ ವಿಗ್ರಹಗಳ ಪೂಜೆ ಮಾಡಲು ಜತೆಗೆ ವಿವಾದಿತ ಸ್ಥಳದಲ್ಲಿ ಮುಸಲ್ಮಾಾನರು ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೊಟ್ಟರು. ಇದೇ ಪರಂಪರೆಯನ್ನು ಮುಂದುವರಿಸಿದ್ದ ರಾಜೀವ್ ಗಾಂಧಿಯವರು, ತನ್ನ ಆಡಳಿತಾವಧಿಯಲ್ಲಿಯೂ ಹಿಂದೂ ಹಾಗೂ ಮುಸಲ್ಮಾಾನರನ್ನು ಎದುರು ಹಾಕಿಕೊಳ್ಳಲು ತಯಾರಿರಲಿಲ್ಲ. ತಾನೂ ಸಹ ಇಬ್ಬರನ್ನು ತುಲನೆ ಮಾಡಿ 1986ರಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶವನ್ನೇ ನೀಡದೇ, ಮೂರು ವರ್ಷಗಳ ಕಾಲ ನಿರ್ಬಂಧಿಸಿದ್ದರು.

ಮೊದಲೇ ಉತ್ತರ ಪ್ರದೇಶ. ಭಾರತದಲ್ಲೇ ಅತಿ ಹೆಚ್ಚು ಸಂಸದರನ್ನು ಆರಿಸಿ ಕಳಿಸುವ ದೊಡ್ಡ ರಾಜ್ಯ. ಇಂಥ ರಾಜ್ಯದಲ್ಲಿ ಈ ರೀತಿಯ ಪರಿಸ್ಥಿಿತಿಯು ಬಂದಾಗ, ಅಲ್ಲಿನ ಜನರು ರಾಜೀವ್ ಗಾಂಧಿಯನ್ನು 1989ರ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆೆಸ್‌ನ ಸೋಲನ್ನೇ ಬಂಡವಾಳ ಮಾಡಿಕೊಂಡು ಮುಸ್ಲಿಿಂ ಮತಬ್ಯಾಾಂಕ್‌ನಿಂದ ಗೆದ್ದು ಅಧಿಕಾರಕ್ಕೆೆ ಬಂದ ಮುಲಾಯಂ ಸಿಂಗ್ ಯಾದವ್ 1990ರಲ್ಲಿ ಹಿಂದೂ ಕಾರ್ಯಕರ್ತರು ಮಸೀದಿಯನ್ನು ವಶಕ್ಕೆೆ ಪಡೆಯಲು ಪ್ರಯತ್ನಿಿಸಿದಾಗ, ಪೊಲೀಸರಿಂದ ನಡೆಸಿದ ಫೈರಿಂಗ್‌ನಲ್ಲಿ ಸುಮಾರು ಹದಿನಾರು ಜನ ಹಿಂದೂ ಕಾರ್ಯಕರ್ತರು ಸಾವಿಗೆ ಕಾರಣರಾದರು. ಅಲ್ಲಿನ ಹಿಂದೂ ಮತಗಳನ್ನು ಶಾಶ್ವತವಾಗಿ ಕಳೆದುಕೊಂಡ ಮುಲಾಯಂ ಸಿಂಗ್ ಯಾದವ್ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಂಡರು.

1991ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯು ಇದೇ ವಿವಾದವನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆೆ ಬಂದಿತು. ಕಲ್ಯಾಾಣ ಸಿಂಗ್ ನೂತನ ಮುಖ್ಯಮಂತ್ರಿಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲೇ ನೋಡಿ ಪಿ.ವಿ.ನರಸಿಂಹರಾವ್ ಅವರಿಗೆ ಶನಿಯ ಕಾಟ ಶುರುವಾಗಿದ್ದು. ಇಂಥ ಅವಕಾಶ ಕಾಯುತ್ತಿಿದ್ದ ಬಿಜೆಪಿ ನಾಯಕರ ಮೊದಲ ಟಾರ್ಗೆಟ್ ಆಗಿದ್ದೇ ರಾಮ ಮಂದಿರ ನಿರ್ಮಾಣ. ವಿವಾದಿತ ಜಾಗದಲ್ಲಿ ರಾಮಮಂದಿರವನ್ನು ಕಟ್ಟಲೇಬೇಕೆಂಬ ಹಠಕ್ಕೆೆ ಬಿದ್ದಿದ್ದ ಬಿಜೆಪಿಯನ್ನು ಅಷ್ಟು ಸುಲಭವಾಗಿ ಕೇಂದ್ರ ಸರಕಾರದಿಂದ ಕಟ್ಟಿಿ ಹಾಕಲು ಸಾಧ್ಯವಿರಲಿಲ್ಲ. ಇಡೀ ಕಾನೂನು ವ್ಯವಸ್ಥೆೆಯೇ ರಾಜ್ಯ ಸರಕಾರದ ಕೈಯಲ್ಲಿರುವಾಗ, ಕಲ್ಯಾಾಣ ಸಿಂಗ್‌ರನ್ನು ಕಟ್ಟಿಿಹಾಕುವುದು ಅಷ್ಟು ಸುಲಭಸಾಧ್ಯವಿರಲಿಲ್ಲ. ಬಾಬರಿ ಮಸೀದಿಯ ವಿಷಯದಲ್ಲಿ ಹಲವರು ಪಿ.ವಿ.ನರಸಿಂಹ ರಾವ್ ಅವರ ಬಗ್ಗೆೆ ವಿಚಿತ್ರವಾಗಿ ಮಾತಾಡಿಕೊಳ್ಳುತ್ತಾಾರೆ. ವಾಸ್ತವವೆಂದರೆ, ಅವರಿಗೆ ವಿವಾದಿತ ಜಾಗದಲ್ಲಿ ಮಸೀದಿ ಹಾಗೂ ಮಂದಿರ ಎರಡನ್ನೂ ಕಟ್ಟಬೇಕೆಂಬ ದೃಢವಾದ ಯೋಚನೆಯಿತ್ತು. ಕಾಂಗ್ರೆೆಸ್‌ನ ಸಂಸ್ಕೃತಿಗೆ ತಲೆಬಾಗಲೇಬೇಕಾದ ಪರಿಸ್ಥಿಿತಿಯಲ್ಲಿ ನರಸಿಂಹ ರಾವ್ ಅಯೋಧ್ಯೆೆ ವಿವಾದದಲ್ಲಿ ತಮ್ಮ ನಿಲುವನ್ನು ತಾಳಿದ್ದರು. ಹಿಂದು ಹಾಗೂ ಮುಸ್ಲಿಿಂ ಮತಬ್ಯಾಾಂಕ್ ಎರಡನ್ನೂ ಭದ್ರ ಮಾಡಿಕೊಂಡರೆ ಮಾತ್ರ ಪಕ್ಷದ ಏಳಿಗೆ ಸಾಧ್ಯವೆಂಬ ಅಚಲ ನಿರ್ಧಾರ ನರಸಿಂಹರಾವ್ ಅವರ ಮನಸ್ಸಿಿನಲ್ಲಿತ್ತು.

ಇದರ ಮಧ್ಯೆೆ ಕಾಂಗ್ರೆೆಸ್ ಪಕ್ಷದಲ್ಲಿಯೇ ಒಳಗೊಳಗೇ ರಾವ್ ಅವರನ್ನು ಮುಗಿಸುವ ಪ್ರಯತ್ನಗಳು ಶುರುವಾಗಿದ್ದವು. ಸ್ವತಃ ಅರ್ಜುನ ಸಿಂಗ್ ಅವರು ರಾವ್ ಅವರನ್ನು ಮುಗಿಸಲು ತುದಿಗಾಲಲ್ಲಿ ನಿಂತಿದ್ದರು. ಸದಾ ಕತ್ತಿಿ ಮಸೆಯುತ್ತಿಿದ್ದರು. ವಂಶಪಾರಂಪರೆಯ ಆಡಳಿತವನ್ನು ನೆಚ್ಚಿಿಕೊಂಡಿದ್ದ ಕಾಂಗ್ರೆೆಸ್ ಪಕ್ಷದಲ್ಲಿ ನರಸಿಂಹ ರಾವ್‌ರ ಆಡಳಿತವು ಎಲ್ಲರ ಕಣ್ಣನ್ನೂ ಕುಕ್ಕಿಿತ್ತು. ರಾಜೀವ್ ಗಾಂಧಿ ಮರಣದ ನಂತರ ಶರದ್ ಪವಾರ್, ಪ್ರಣಬ್ ಮುಖರ್ಜಿಯಂಥ ಘಟಾನುಘಟಿಗಳನ್ನೇ ಹಿಂದಿಕ್ಕಿಿ ಪ್ರಧಾನ ಮಂತ್ರಿಿಯಾದ ರಾವ್ ಅವರಿಗೆ ಬಾಬರಿ ಮಸೀದಿ ಪ್ರಕರಣವು ಉರುಳಾಗಿ ಪರಿಣಮಿಸಿತು. ಅತ್ತ ಕಲ್ಯಾಾಣ ಸಿಂಗ್ ಅಧಿಕಾರಕ್ಕೆೆ ಬಂದ ಮೇಲಂತೂ, ಪ್ರತಿನಿತ್ಯವೂ ರಾಮಮಂದಿರ ವಿವಾದ ಕುರಿತ ಏನಾದರೊಂದು ಪ್ರಕ್ರಿಿಯೆಗಳು ನಡೆಯುತ್ತಿಿದ್ದವು. ಹಿಂದೂ ಹಾಗೂ ಮುಸಲ್ಮಾಾನ ನಾಯಕರನ್ನು ಒಟ್ಟಿಿಗೆ ಒಂದೆಡೆ ಸೇರಿಸಿ ಸಮಸ್ಯೆೆಯನ್ನು ಬಗೆಹರಿಸುವ ಕಾರ್ಯವು ನಡೆಯುತ್ತಿಿದ್ದರೂ, ಸಭೆಯಿಂದ ಆಚೆ ಹೋದಮೇಲೆ ಯಾರನ್ನೂ ನಂಬುವ ಪರಿಸ್ಥಿಿತಿಯಲ್ಲಿ ನರಸಿಂಹ್ ರಾವ್ ಇರಲಿಲ್ಲ.

ಶಾಂತಿಯುತವಾಗಿ ವರ್ತಿಸುತ್ತೇವೆಂದು ಎಲ್ಲರೂ ಹೇಳಿಕೆ ನೀಡಿದರೂ, ಆಚೆಗೆ ಏನು ಮಾಡುತ್ತಾಾರೆಂಬ ಭಯದಲ್ಲಿಯೇ ನರಸಿಂಹ್ ರಾವ್ ಆಡಳಿತ ನಡೆಸಬೇಕಾಯಿತು. ಕಲ್ಯಾಾಣ ಸಿಂಗ್ ಆಶ್ವಾಾಸನೆಗಳನ್ನು ಪ್ರತಿಭಾರಿಯೂ ನೀಡುತ್ತಲೇ ಇದ್ದರು. ಕೇವಲ ಕರಸೇವಕರು ಡಿಸೆಂಬರ್ 6ರಂದು ಆರತಿಯನ್ನಷ್ಟೇ ಮಾಡುತ್ತಾಾರೆ, ಮಸೀದಿಯನ್ನು ಮುಟ್ಟುವುದಿಲ್ಲವೆಂದು ರಾವ್ ಅವರಿಗೆ ಪ್ರತಿ ಬಾರಿಯೂ ಹೇಳುತ್ತಲೇ ಬಂದಿದ್ದರು. ಆದರೆ ಇದೇ ಮಂದಿರದ ವಿಷಯವನ್ನೇ ಇಟ್ಟುಕೊಂಡು ಅಧಿಕಾರ ಗಳಿಸಿಕೊಂಡಿದ್ದ ಬಿಜೆಪಿಯು, ರಾಮ ಮಂದಿರವನ್ನು ಕಟ್ಟಲೇ ಬೇಕಿತ್ತು.

ಅಸಂಖ್ಯಾಾತ ಹಿಂದೂಗಳ ಆಶಯವನ್ನು ಕಲ್ಯಾಾಣ ಸಿಂಗ್ ಸರಕಾರ ಈಡೇರಿಸಲೇಬೇಕಾಗಿತ್ತು. ಇತ್ತ ಕೋರ್ಟಿನ ಆದೇಶವಿದ್ದರೂ ಸಹ ಆಯೋಧ್ಯೆೆಯಲ್ಲಿನ ವಿವಾದಿತ ಜಾಗದಲ್ಲಿ ಅಲ್ಲಲ್ಲಿ ರಾಮ ಮಂದಿರ ನಿರ್ಮಾಣದ ಕಾರ್ಯಗಳು ನಡೆಯುತ್ತಲೇ ಇದ್ದವು. ಈ ಎಲ್ಲಾಾ ವಿಚಾರಗಳೂ ನರಸಿಂಹ್ ರಾವ್ ಅವರನ್ನು ಮತ್ತಷ್ಟು ಪೇಚಿಗೆ ಸಿಲುಕಿಸಿದ್ದವು. ಹೀಗೆ ಹಿಂದೂ ಹಾಗೂ ಮುಸ್ಲಿಿಂ ಮಧ್ಯೆೆ ಸಿಕ್ಕಿಿ ನಲುಗುತ್ತಿಿದ್ದ ನರಸಿಂಹ್ ರಾವ್ ಅವರಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಬಾಬರಿ ಮಸೀದಿ ಕೆಡವಿದ ದಿನವಂತೂ ಪ್ರತಿ ಅರ್ಧತಾಸಿಗೆ ಅಂದಿನ ಕೇಂದ್ರ ಗೃಹ ಕಾರ್ಯದರ್ಶಿಯಾಗಿದ್ದ ಮಾದವ್ ಗಾಡ್‌ಬೊಲೆ ಅವರಿಂದ ಮಾಹಿತಿ ಪಡೆಯುತ್ತಿಿದ್ದರಂತೆ. ಈ ಎಲ್ಲಾಾ ವಿಚಾರಗಳು ಮಾಧವ್ ಅವರ ‘ಆ್ಯನ್ ಅನ್‌ಫಿನಿಶ್‌ಡ್‌ ಇನ್ನಿಿಂಗ್‌ಸ್‌’ನಲ್ಲೂ ನರಸಿಂಹ್ ರಾವ್, ರಾಮ ಮಂದಿರ ವಿವಾದ ಕುರಿತ ಹಲವಾರು ವಿಚಾರಗಳು ದಾಖಲಾಗಿವೆ.

ಇಂಥ ಪರಿಸ್ಥಿಿತಿಯಲ್ಲಿ ನರಸಿಂಗ್ ರಾವ್ ಅವರ ಆಪ್ತ ಅಧಿಕಾರಿ ಗಾಡ್‌ಬೊಲೆಯು ರಾವ್‌ಗೆ ಅಪ್ಪಿಿ ತಪ್ಪಿಿ ಡಿಸೆಂಬರ್ 6, 1992ರಂದು ಏನಾದರೂ ದುರಂತ ಸಂಭವಿಸಿದರೆ ಏನು ಮಾಡಬೇಕೆಂದು ಕೆಲವು ಸಲಹೆಗಳನ್ನು ನೀಡಿದರು. ಇಡೀ ಪೊಲೀಸ್ ವ್ಯವಸ್ಥೆೆಯೇ ರಾಜ್ಯ ಸರಕಾರದ ಅಡಿಯಲ್ಲಿರುವಾಗ, ಬಾಬರಿ ಮಸೀದಿಯನ್ನು ವಶಪಡಿಸಿಕೊಂಡು ರಕ್ಷಿಿಸಲು ಸಾಧ್ಯವಿಲ್ಲದಿದ್ದಾಾಗ, ಕೇಂದ್ರದ ಬಳಿ ಇರುವ ಒಂದೇ ಆಯ್ಕೆೆ ಎಂದರೆ, ಸಂವಿಧಾನದ 356ನೇ ವಿಧಿಯನ್ನು ಬಳಸಿ ಇಡೀ ರಾಜ್ಯ ಸರಕಾರವನ್ನೇ ಕೇಂದ್ರವು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದು. ಮಾಧವ್ ಗಾಡ್‌ಬೊಲೆಯು ಕೇಂದ್ರದ ಬಳಿ ಮಸೀದಿಯ ಧ್ವಂಸವನ್ನು ತಡೆಯಲು ಇರುವ ಮಾರ್ಗವು ಇದೊಂದೇ ಎಂದು ಹೇಳಿ ರಾವ್ ಅವರ ಮೇಲೆ ಒತ್ತಡ ಹೇರಿದರು. ಆದರೆ ನರಸಿಂಹ್ ರಾವ್ ಅವರಿಗೆ 356ನೇ ವಿಧಿಯನ್ನು ಹೇರಿ ರಾಜ್ಯದ ಆಡಳಿತ ಯಂತ್ರವನ್ನು ತನ್ನ ತೆಕ್ಕೆೆಗೆ ತೆಗೆದುಕೊಂಡರೆ, ಇಂದಿರಾ ಗಾಂಧಿ ಹಾಗೂ ತನಗೂ ಯಾವುದೇ ವ್ಯತ್ಯಾಾಸ ಇರುವುದಿಲ್ಲವೆಂದು ಅನಿಸಿತು. ಹಲವಾರು ಬಾರಿ ಇಂದಿರಾ ಗಾಂಧಿ 356ನೇ ವಿಧಿಯನ್ನು ಬಳಸಿ ಅಧಿಕಾರಕ್ಕಾಾಗಿ ರಾಜ್ಯ ಸರಕಾರಗಳನ್ನು ವಜಾಗೊಳಿಸಿದ್ದರು.

ಇದರ ಪರಿಣಾಮವಾಗಿ ಇಡೀ ದೇಶದ ಜನರೇ ಅವರ ವಿರುದ್ಧ ಸಿಡಿದೆದ್ದಿದ್ದಾಾರೆಂಬ ವಿಚಾರವೂ ರಾವ್ ಅವರಿಗೆ ಗೊತ್ತಿಿತ್ತು. ಅಷ್ಟೊೊಂದು ಆಕ್ರಮಣಕಾರಿಯಾಗಿ ಅಧಿಕಾರವನ್ನು ನಡೆಸುವ ವ್ಯಕ್ತಿಿತ್ವ ರಾವ್ ಅವರದ್ದು ಆಗಿರಲಿಲ್ಲ. ಈ ರೀತಿಯ ಆಡಳಿತದಿಂದಲೇ ಇಂದಿರಾ ಗಾಂಧಿ ತಮ್ಮ ಜೀವವನ್ನು ಕಳೆದುಕೊಳ್ಳುವಂತಾಯಿತು. ಈ ವಿಷಯವೂ ರಾವ್ ಅವರಿಗೆ ಗೊತ್ತಿಿತ್ತು. ಇಂಥ ಸಂದಿಗ್ಧ ಪರಿಸ್ಥಿಿತಿಯಲ್ಲಿದ್ದ ರಾವ್‌ಗೆ ಏನು ಮಾಡಬೇಕೆಂಬುದು ಹೊಳೆಯುತ್ತಲೇ ಇರಲಿಲ್ಲ. ರಾಜಕೀಯವಾಗಿಯೂ ಅವರನ್ನು ಮುಗಿಸಬಹುದೆಂಬ ಈ ವಿಚಾರ ಅವರಿಗೆ ತಿಳಿದಿತ್ತು. ಸಂವಿಧಾನದ 356ನೇ ವಿಧಿಯನ್ನುಬಳಸುವುದು ಅಷ್ಟು ಸುಲಭವಾಗಿರಲಿಲ್ಲ. ರಾಜ್ಯದಲ್ಲಿ ಈ ವಿಧಿಯನ್ನು ಬಳಸಬೇಕೆಂದರೆ, ಕಾನೂನು ಸುವ್ಯವಸ್ಥೆೆಯು ಹದಗೆಟ್ಟಿಿರಬೇಕು. ಆದರೆ ಇನ್ನು ಏನೂ ಆಗಿಲ್ಲ, ಗುಪ್ತಚರ ಇಲಾಖೆಗಳು ಸಂಭವಿಸಬಹುದೆಂದು ವರದಿ ನೀಡಿದ್ದವು. ಮುಂದೆ ಆಗಬಹುದಾದ ಅನಾಹುತವನ್ನು ನೆಚ್ಚಿಿಕೊಂಡು ಈ ವಿಧಿಯನ್ನು ಬಳಸಲು ಸಾಧ್ಯವಿಲ್ಲ. ಅಪ್ಪಿಿ ತಪ್ಪಿಿ ಬಳಸಿದರೂ ಸಹ ಬಿಜೆಪಿಯು ತನ್ನ ವಿರುದ್ಧ ಅವಿಶ್ವಾಾಸ ನಿರ್ಣಯವನ್ನು ಮಂಡಿಸುತ್ತದೆಯೆಂಬುದು ರಾವ್‌ಗೆ ಗೊತ್ತಿಿತ್ತು. ಇಡೀ ದೇಶವೇ ತನ್ನ ವಿರುದ್ಧ ತಿರುಗಿ ಬಿದ್ದರೂ ಬೀಳಬಹುದೆಂಬ ಆತಂಕ, ಭಯ ಅವರನ್ನು ಕಾಡುತ್ತಿಿತ್ತು. ತೋಳ ಹಳ್ಳಕ್ಕೆೆ ಬಿದ್ದರೆ, ಆಳಿಗೊಂದು ಕಲ್ಲು ಎಂಬಂತೆ, ಎಲ್ಲಾಾ ಮೂಲೆಗಳಿಂದಲೂ ನರಸಿಂಹ್‌ರಾವ್ ಅವರಿಗೆ ಸಮಸ್ಯೆೆಗಳು ಬರತೊಡಗಿದವು.

1992ರ ಸ್ವಾಾತಂತ್ರ್ಯ ದಿನದಂದು ನರಸಿಂಹ ರಾವ್ ಅವರ ಭಾಷಣವನ್ನು ಒಮ್ಮೆೆ ನೋಡಿದಾಗ, ಅವರ ಮಾತಿನಲ್ಲಿ ರಾಮಮಂದಿರ ವಿವಾದಿತ ಜಾಗದ ಭೂಮಿಯು ಮೇಲಿನ ತಮ್ಮ ನಿಲುವು ಏನಿತ್ತು ಎಂಬುದು ಸ್ಪಷ್ಟಪಡಿಸಿದ್ದಾಾರೆ. ಮಸೀದಿಯನ್ನು ಕೆಡವದೇ, ಅದೇ ಜಾಗದಲ್ಲಿ ಮಂದಿರವನ್ನೂ ನಿರ್ಮಾಣ ಮಾಡುತ್ತೇವೆಂದು ಹೇಳಿದ್ದರು. 1991ರ ಕಾಂಗ್ರೆೆಸ್ ಪಕ್ಷದ ಪ್ರಣಾಳಿಕೆಯಲ್ಲೂ ಕೂಡ ಇದೇ ನಿಲುವನ್ನು ಹೇಳಿತ್ತು. ಆದರೆ ತಮ್ಮ ನಿಲುವಿಗೆ ಬದ್ಧರಾಗದೇ ಪಿ.ವಿ.ನರಸಿಂಹ್ ರಾವ್‌ಗೆ ಬೇರೆ ವಿಧಿಯಿರಲಿಲ್ಲ. ಅತ್ತ ಕಲ್ಯಾಾಣ ಸಿಂಗ್ ಕೂಡ ಅಷ್ಟೇ, ರಾಮ ಮಂದಿರವನ್ನು ವಿವಾದಿತ ಜಾಗದಲ್ಲಿಯೇ ನಿರ್ಮಾಣ ಮಾಡುತ್ತೇವೆಂಬ ನಿಲುವಿಗೆ ಬದ್ಧರಾಗಲೇಬೇಕಿತ್ತು. ಅಡ್ವಾಾಣಿಯವರು ಇಡೀ ದೇಶದಲ್ಲಿ ರಾಮರಥ ಯಾತ್ರೆೆಯನ್ನು ನಡೆಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆೆ ತಂದಿದ್ದರು.

ಅಡ್ವಾಾಣಿಯವರ ಆಸೆಯನ್ನು, ಕನಸನ್ನು ಕಲ್ಯಾಾಣಸಿಂಗ್ ಸರಕಾರ ಈಡೇರಿಸಲೇಬೇಕಿತ್ತು. ಇಬ್ಬರೂ ತಮ್ಮ ತತ್ವ, ಸಿದ್ಧಾಾಂತಗಳಿಗೆ ಕಟಿಬದ್ಧರಾಗಿದ್ದರು. ಕಲ್ಯಾಾಣ ಸಿಂಗ್ ಮಾತ್ರ ಬೆಣ್ಣೆೆಯಲ್ಲಿ ಕೂದಲು ತೆಗೆದಂತೆಯೇ ಮಾತನಾಡಿ, ಪ್ರತಿಬಾರಿಯೂ ಕರಸೇವಕರಿಂದ ಪೂಜೆಯನ್ನು ಮಾಡಿಸುತ್ತೇವೆಂದು ಹೇಳಿಯೇ ತಮ್ಮ ಕೆಲಸವನ್ನು ಮಾಡುತ್ತಿಿದ್ದರು. ಆದರೆ ಮಾಧವ ಗಾಡ್‌ಬೊಲೆ ಮಾತ್ರ ಸಾರಾಸಗಟಾಗಿ ಹೇಳುತ್ತಿಿದ್ದ ಒಂದೇ ಮಾತೆಂದರೆ, ಡಿಸೆಂಬರ್ 6ರಂದು ಖಂಡಿತವಾಗಿಯೂ ಬಾಬರಿ ಮಸೀದಿಯನ್ನು ಧ್ವಂಸ ಮಾಡುವ ಎಲ್ಲಾಾ ಪ್ರಯತ್ನಗಳು ನಡೆಯುತ್ತಲೇ ಇದೆ, ಹಾಗಾಗಿ ಸಂವಿಧಾನದ ವಿಧಿಯನ್ನು ಶೀಘ್ರವಾಗಿ ಜಾರಿಗೆ ತರಲೇಬೇಕು. ಕರಸೇವಕರ ಸಂಖ್ಯೆೆಯೂ 10 ಲಕ್ಷವನ್ನು ದಾಟಿದರೂ ಅಚ್ಚರಿಪಡಬೇಕಿಲ್ಲ ಎಂದು ರಾವ್‌ಗೆ ಹೇಳಿದ್ದರು. ಆದರೆ ಇದೇ ಅಧಿಕಾರಿಯು ಈ ವಿಧಿಯನ್ನು ಜಾರಿಗೆ ತಂದರೆ, ಆಗುವ ಪರಿಣಾಮಗಳ ಬಗ್ಗೆೆಯೂ ರಾವ್‌ಗೆ ತಿಳಿಸಲಿಲ್ಲ.

ತಾನು ಕೇವಲ ಜಾರಿಗೆ ತರುವುದನ್ನಷ್ಟೇ ಹೇಳಿದ, ಪರಿಸ್ಥಿಿತಿಗಳು ಎದುರಾಗುವ ಮುನ್ನ 356ನೇ ವಿಧಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲವೆಂಬ ಸಾಮಾನ್ಯ ಜ್ಞಾಾನವೂ ಅವರಿಗೆ ಇಲ್ಲದಂತಿತ್ತು. ಮುಂದೊಂದು ದಿನ ನ್ಯಾಾಯಾಲಯ ಛೀಮಾರಿ ಹಾಕಿದರೆ ನರಸಿಂಹ್ ರಾವ್ ಅವರಿಗೆ ಅವಮಾನವಾಗುತ್ತದೆಯೆಂಬ ಯೋಚನೆಯನ್ನೂ ಅಧಿಕಾರಿ ಮಾಡಲಿಲ್ಲ. ಏನೂ ತೋಚದೆ ಇದ್ದಾಾಗ, ರಾವ್‌ಗೆ ನೆನಪಾದದ್ದು ಸರ್ವೋಚ್ಚ ನ್ಯಾಾಯಾಲಯ. ತಾನು ನ್ಯಾಾಯಾಲಯದಿಂದ ಆದೇಶವನ್ನು ಪಡೆದು, ಕಲ್ಯಾಾಣ ಸಿಂಗ್ ಸರಕಾರವನ್ನು ವಜಾಗೊಳಿಸದೇ ಮಸೀದಿಯನ್ನು ಕೇಂದ್ರದ ವಶಕ್ಕೆೆ ಪಡೆದು ಆಗುವ ಅನಾಹುತವನ್ನು ತಡೆಯಬೇಕೆಂದು ನಿರ್ಧರಿಸಿ ಕೋರ್ಟಿನ ಮೆಟ್ಟಿಿಲೇರಿದರು. ನವೆಂಬರ್ ತಿಂಗಳಲ್ಲಿ ವಾದ-ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಕೊನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿಿಯಾಗಿದ್ದ ಕಲ್ಯಾಾಣ ಸಿಂಗ್‌ರಿಂದ ತಾನು ಮಸೀದಿಯನ್ನು ರಕ್ಷಿಿಸುತ್ತೇನೆಂಬ ಭರವಸೆಯನ್ನು ಪಡೆಯಿತು. ಈ ಭರವಸೆಯಿಂದ ಸುಪ್ರೀಂ ಕೋರ್ಟ್ ನರಸಿಂಹ್ ರಾವ್ ಅವರ ಅರ್ಜಿಯನ್ನು ವಜಾಗೊಳಿಸಿತು.

ಇತ್ತ ಅಂದಿನ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್‌ರ ಜತೆಗೆ ರಾವ್ ಅವರ ಸಂಬಂಧ ಅಷ್ಟೊೊಂದು ಉತ್ತಮವಾಗಿರಲಿಲ್ಲ. ಕೇವಲ ಕೆಲವು ಪತ್ರಗಳಿಗೆ ಮಾತ್ರ ಸಿಮೀತವಾಗಿತ್ತು. ಇವರ ಸಂಬಂಧವನ್ನು ನೆಚ್ಚಿಿಕೊಂಡು ರಾವ್ ಉತ್ತರ ಪ್ರದೇಶದಲ್ಲಿ ಕೇಂದ್ರದ ಆಡಳಿತವನ್ನು ಹೇರಲು ಸಾಧ್ಯವಿರಲಿಲ್ಲ. ಇತ್ತ ಗುಪ್ತಚರ ಇಲಾಖೆಯು ಸುಪ್ರೀಂ ಕೋರ್ಟಿನ ನಿರ್ದೇಶನದ ನಂತರವೂ ಸಹ ಬಾಬರಿ ಮಸೀದಿಗೆ ಗಂಡಾಂತರ ಇದೆ ಎಂಬ ಸಂದೇಶವನ್ನು ರವಾನಿಸಿತ್ತು. ಪ್ರಧಾನ ಮಂತ್ರಿಿ ಯಾರನ್ನು ನಂಬುವುದು ನೀವೇ ಯೋಚಿಸಿ ನೋಡಿ.

ಡಿಸೆಂಬರ್ 1 ನೇ ತಾರೀಖಿನಂದು ಉತ್ತರ ಪ್ರದೇಶದ ರಾಜ್ಯಪಾಲರು ಕೂಡ, ರಾಜ್ಯದ ಸದ್ಯದ ಪರಿಸ್ಥಿಿತಿಯೂ ಶಾಂತವಾಗಿದೆ ಎಂಬ ವರದಿಯನ್ನು ನೀಡಿಯೇ ಬಿಟ್ಟರು. ಇನ್ನು ಈ ವರದಿ ಬಂದಮೇಲಂತೂ ಸಂವಿಧಾನದ ವಿಧಿ 356ರ ಆಶಯವೂ ನೀರಿನಲ್ಲಿ ಹರಿದು ಹೋಗಿತ್ತು. ಅಂದಿನ ಪರಿಸ್ಥಿಿತಿಯೂ ಪ್ರಧಾನಿಯವರ ನಿಯಂತ್ರಣದಲ್ಲಿರಲಿಲ್ಲ. ಕೇವಲ ಐದು ದಿನಗಳು ಬಾಕಿ ಇರುವಾಗ ಏನು ತಾನೆ ಮಾಡಲು ಸಾಧ್ಯ? ಬೇರೆ ವಿಧಿಯಿಲ್ಲದೆ, ಏನೂ ಆಗುವುದಿಲ್ಲವೆಂಬ ಆಶಾಭಾವನೆಯಿಂದ ಸುಮ್ಮನಿರಬೇಕಾಯಿತು.
ಆದರೂ ಸುಮ್ಮನಿರದ ರಾವ್, ಬಿಜೆಪಿ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ಮುರುಳಿ ಮನೋಹರ ಜೋಶಿ ಹಾಗೂ ಭೈರೋನ್ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ಪರಿಸ್ಥಿಿತಿಯನ್ನು ವಿವರಿಸಿ, ಶಾಂತಿಯುತವಾಗಿ ಕರಸೇವಕರು ಪೂಜೆ ಮಾಡುವಂತೆ ಕೋರಿದರು. ಆದರೆ ಅಡ್ವಾಾಣಿಯವರ ಜತೆ ರಾವ್ ಅವರ ಒಡನಾಟ ಅಷ್ಟೇನೂ ಉತ್ತಮವಾಗಿರಲಿಲ್ಲ. ಹಾಗಾಗಿ ಅವರನ್ನು ಅಷ್ಟು ಸುಲಭವಾಗಿ ಭೇಟಿ ಮಾಡಲಿಲ್ಲ. ಆದರೂ ಗುಪ್ತವಾಗಿ ಬಿಜೆಪಿ ಅವರಿಗೂ ಹೇಳುವ ಪ್ರಯತ್ನ ಮಾಡಿದ್ದರು.

ನರಸಿಂಹ ರಾವ್ ಹಲವಾರು ಸ್ವಾಾಮೀಜಿಗಳ ಜತೆಯಲ್ಲಿಯೂ ಉತ್ತಮ ಸಂಬಂಧಗಳನ್ನು ಹೊಂದಿದ್ದರು. ಶೃಂಗೇರಿಯ ಸ್ವಾಾಮೀಜಿಯಿಂದ ಹಿಡಿದು, ಉಡುಪಿಯ ಪೇಜಾವರ ಶ್ರೀಗಳವರೆಗೂ ಇವರ ಸಂಪರ್ಕವೂ ಚೆನ್ನಾಾಗಿತ್ತು. ಕೊನೆಯ ಕ್ಷಣದಲ್ಲಿ ಇವರ ಬಳಿಯೂ ಹೋಗಿ ನರಸಿಂಹರಾವ್ ಶಾಂತಿ ಕಾಪಾಡುವಂತೆ ಕೋರಿಕೊಂಡಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ, ಸಹ ಡಿಸೆಂಬರ್ 6 ನೇ ತಾರೀಖಿನಂದು ಕರಸೇವಕರು ಬಾಬರಿ ಮಸೀದಿಯನ್ನು ಧ್ವಂಸ ಮಾಡುವುದನ್ನು ತಡೆಯಲಾಗಲಿಲ್ಲ. ನ್ಯಾಾಯಾಲಯದಲ್ಲಿ ಮಸೀದಿ ರಕ್ಷಣೆಯ ಭರವಸೆ ನೀಡಿದ್ದ ಕಲ್ಯಾಾಣ ಸಿಂಗ್, ನೀಡಿದ ಭರವಸೆಯನ್ನು ಈಡೇರಿಸಲಿಲ್ಲ. ನ್ಯಾಾಯಾಲಯದ ಆದೇಶದ ವಿರುದ್ಧವೇ ಹೋಗಿ ಅಸಂಖ್ಯಾಾತ ಹಿಂದೂಗಳ ಪರವಾಗಿಯೇ ನಿಂತರು. ನಂತರದ ದಿನಗಳಲ್ಲಿ ನ್ಯಾಾಯಾಂಗ ನಿಂದನೆ ಆರೋಪದ ಮೇಲೆ ಒಂದು ದಿನ ಜೈಲು ಸೇರಿ, ತಮ್ಮ ಮುಖ್ಯಮಂತ್ರಿಿ ಸ್ಥಾಾನಕ್ಕೆೆ ರಾಜೀನಾಮೆಯನ್ನು ನೀಡಿದ್ದರು. ಕಾಂಗ್ರೆೆಸ್‌ನಲ್ಲಿ ಇಂದಿಗೂ ಪಿ.ವಿ.ನರಸಿಂಹರಾವ್ ಅವರಿಂದಲೇ ಬಾಬರಿ ಮಸೀದಿ ಧ್ವಂಸವಾಯಿತೆಂದು ಆರೋಪಿಸುತ್ತ ಬರಲಾಗಿದೆ.

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸೋನಿಯಾ ಗಾಂಧಿಯವರು, ನರಸಿಂಹ ರಾವ್ ಅವರ ರಾಜಕೀಯ ಭವಿಷ್ಯವನ್ನು ಕೊನೆಗೊಳಿಸಿದರು. ಕಡೆ ಪಕ್ಷ ಅವರ ನಿಧಾನದ ನಂತರ ಒಂದು ಸ್ಮಾಾರಕವನ್ನು ಕಟ್ಟಿಿಸಲಿಲ್ಲ. ಎಐಸಿಸಿ ಕಚೇರಿಯ ಹತ್ತಿಿರವೂ ಅವರ ಪಾರ್ಥಿವ ಶರೀರವನ್ನು ಸರಿಯಾಗಿ ನೋಡಿಕೊಳ್ಳಲಾಗದಷ್ಟು ದ್ವೇಷವನ್ನು ಸೋನಿಯ ಅವರು ಬಹಿರಂಗವಾಗಿ ತೋರ್ಪಡಿಸಿದರು.

1991ರ ಭಾರತದ ಕಷ್ಟದ ದಿನಗಳನ್ನು ನಿಭಾಯಿಸಿದ್ದು ಪಿ.ವಿ.ನರಸಿಂಹರಾವ್‌ಗೆ ಬಾಬರಿ ಮಸೀದಿ ಧ್ವಂಸ ಪ್ರಕರಣವು ಕಾಂಗ್ರೆೆಸ್‌ಗೆ ಕೆಟ್ಟ ಹೆಸರನ್ನೇ ತಂದಿತ್ತು. ಈ ಪ್ರಕರಣ ನಡೆಯದಂತೆ ರಾವ್ ಅವರು ಎಷ್ಟೇ ಪ್ರಯತ್ನ ಪಟ್ಟರೂ, ತನ್ನ ಕೈ ಮೀರಿ ನಡೆದದ್ದನ್ನೂ ಯಾರೂ ಕೇಳಲಿಲ್ಲ. ಸೋನಿಯಾ ಅವರಿಗೂ ಪಿ.ವಿ.ನರಸಿಂಹ ರಾವ್ ಅವರ ಜನಪ್ರಿಿಯತೆಯನ್ನು ಕಟ್ಟಿಿಹಾಕಲು ಅಸ್ತ್ರವೊಂದು ಬೇಕಿತ್ತು. ನರಸಿಂಹ ರಾವ್ ಅವರನ್ನು ಮುಸ್ಲಿಿಂ ವಿರೋಧಿಯೆಂದು ಬಿಂಬಿಸಿ ವಾಪಸ್ ವಂಶಪಾರಂಪರಿಕ ಆಡಳಿತವನ್ನು ಮುಂದುವರಿಸಿದ್ದು ಇತಿಹಾಸ.

Leave a Reply

Your email address will not be published. Required fields are marked *

error: Content is protected !!