Sunday, 23rd June 2024

ಕೇವಲ ಐಡಿಯಾಗಳಿಂದ ವ್ಯವಹಾರ ಕಟ್ಟಲು ಸಾಧ್ಯವೇ?

ಮೊಟ್ಟ ಮೊದಲನೆಯದಾಗಿ ಈಗಿನ ಯುವಕರಿಗೆ ತಾಳ್ಮೆೆಯೇ ಇಲ್ಲ. ಇಂದಿನ ಯುವಕರಿಗೆ ರಾತ್ರಿಿ ಮಲಗಿ ಬೆಳಗ್ಗೆೆ ಏಳುವಷ್ಟರಲ್ಲಿ ಕೋಟ್ಯಧಿಪತಿಗಳಾಗಬೇಕು. ಯಾರೂ ಸಹ ಕಷ್ಟಪಡಲು ತಯಾರಿರುವುದಿಲ್ಲ. ಹಿಂದಿನ ದೊಡ್ಡ ವ್ಯವಹಾರಸ್ಥರು ಹಲವಾರು ದಶಕಗಳ ಕಾಲ ಕಟ್ಟಿಿದ ಬ್ರಾಾಂಡ್‌ಗಳನ್ನು ಕೇವಲ ಎರಡು ವರ್ಷದಲ್ಲಿ ಕಟ್ಟುತ್ತೇವೆಂಬ ಕನಸು ಕಾಣುತ್ತಾಾರೆ.

ಅದೊಂದು ಕಾಲವಿತ್ತು. ಮನುಷ್ಯನ ತಲೆಯಲ್ಲಿನ ಆಲೋಚನೆಗಳು ಎಷ್ಟು ಪ್ರಬುದ್ಧತೆಯಿಂದ ಕೂಡಿರುತ್ತಿಿದ್ದವು. ಆತನ ಪ್ರತಿಯೊಂದು ಆಲೋಚನೆಯಲ್ಲಿಯೂ ದೂರಾಲೋಚನೆಗಳು ಎದ್ದು ಕಾಣುತ್ತಿಿದ್ದವು. ಪ್ರತಿಯೊಂದು ಮಾತಿನ ಹಿಂದೆಯೂ ಆಳವಾದ ಯೋಚನೆಗಳಿರುತ್ತಿಿದ್ದವು. ಅದರಲ್ಲಿಯೂ ಯುವಜನತೆಯಂತೂ ತಮ್ಮ ಉತ್ತಮ ಆಲೋಚನೆಗಳಿಂದಲೇ ಹೆಸರು ಮಾಡುತ್ತಿಿದ್ದರು. ವ್ಯಾಾವಹಾರಿಕವಾಗಲಿ ಅಥವಾ ತಾವು ಕೆಲಸ ಮಾಡುವ ಜಾಗದಲ್ಲಾಾಗಲಿ ತಮ್ಮ ಪ್ರಬುದ್ಧತೆಯಿಂದ ಹೆಸರು ಮಾಡುತ್ತಿಿದ್ದರು. ಅವರ ಆಲೋಚನೆಗಳ ಫಲವಾಗಿಯೇ ಹಲವಾರು ಕಂಪನಿಗಳು ಇಂದು ಕೋಟ್ಯಂತರ ರುಪಾಯಿಗಳ ವ್ಯವಹಾರ ನಡೆಸುತ್ತಿಿವೆ. ಹಿಂದಿನ ಯುವಜನತೆಗೆ ತಾಳ್ಮೆೆಯಿತ್ತು.

ಕಾಯುವ ಛಲವಿತ್ತು. ಹಲವಾರು ಯಶಸ್ಸಿಿನ ಕಥೆಗಳ ಮೂಲಕ್ಕೆೆ ಕೈಹಾಕಿದರೆ ಸಿಗುವ ಆ ಕಥೆಗಳ ಹಿಂದೆ ಪ್ರಬುದ್ಧತೆಯು ಎದ್ದುಕಾಣುತ್ತದೆ. ದೊಡ್ಡದೊಡ್ಡ ಬ್ರಾಾಂಡ್‌ಗಳಾದ ರಿಲಯನ್‌ಸ್‌, ಟಾಟ, ಮಾರುತಿ, ಏರ್‌ಟೆಲ್, ವಿಆರ್‌ಎಲ್, ಎಂಟಿಆರ್, ವಿಜಯ ಕರ್ನಾಟಕ, ನೀಲ್‌ಗಿರೀಸ್, ಬಿಗ್ ಬಜಾರ್ ಈ ಎಲ್ಲ ಸಂಸ್ಥೆೆಗಳನ್ನು ಶುರು ಮಾಡಿದವರ ತಾಳ್ಮೆೆ ಹಾಗೂ ಪ್ರೌೌಢಿಮೆಯ ಫಲವಿದೆ.ಅಷ್ಟು ಸುಲಭವಾಗಿ ದೃಢವಾದ ಇಚ್ಛಾಾಶಕ್ತಿಿ ಇಲ್ಲದೆ ಯಾವುದೇ ಒಂದು ಬ್ರಾಾಂಡ್‌ಗಳನ್ನು ಕಲ್ಪಿಿಸಿಕೊಳ್ಳಲು ಸಾಧ್ಯವಿಲ್ಲ.

ಇತ್ತೀಚಿನ ಯುವಕರಲ್ಲಿ ಈ ರೀತಿಯ ಯಾವ ಮನಸ್ಥಿಿತಿಯೂ ಕಾಣುತ್ತಿಿಲ್ಲ. ಮೊಟ್ಟ ಮೊದಲನೆಯದಾಗಿ ಈಗಿನ ಯುವಕರಿಗೆ ತಾಳ್ಮೆೆಯೇ ಇಲ್ಲ. ಇಂದಿನ ಯುವಕರಿಗೆ ರಾತ್ರಿಿ ಮಲಗಿ ಬೆಳಗ್ಗೆೆ ಏಳುವಷ್ಟರಲ್ಲಿ ಕೋಟ್ಯಧಿಪತಿಗಳಾಗಬೇಕು. ಯಾರೂ ಸಹ ಕಷ್ಟಪಡಲು ತಯಾರಿರುವುದಿಲ್ಲ. ಹಿಂದಿನ ದೊಡ್ಡ ವ್ಯವಹಾರಸ್ಥರು ಹಲವಾರು ದಶಕಗಳ ಕಾಲ ಕಟ್ಟಿಿದ ಬ್ರಾಾಂಡ್‌ಗಳನ್ನು ಕೇವಲ ಎರಡು ವರ್ಷದಲ್ಲಿ ಕಟ್ಟುತ್ತೇವೆಂಬ ಕನಸು ಕಾಣುತ್ತಾಾರೆ. ಅಬ್ದುಲ್ ಕಲಾಂ ‘ಕನಸನ್ನು ಕಾಣುವಾಗ ದೊಡ್ಡದಾಗಿಯೇ ಕಾಣಿರಿ’ ಎಂದು ಹೇಳಿದ ಮಾತನ್ನು ತಪ್ಪಾಾಗಿ ಅರ್ಥಮಾಡಿಕೊಂಡಿದ್ದಾಾರೆ. ದೊಡ್ಡ ಕನಸನ್ನು ಕಂಡು ಅನುಷ್ಠಾಾನಗೊಳಿಸಲು ಅಷ್ಟೇ ದೊಡ್ಡದಾದ ತಾಳ್ಮೆೆ ಬೇಕೆಂಬ ಸಾಮಾನ್ಯ ಜ್ಞಾಾನವೂ ಇಲ್ಲ. ವ್ಯವಹಾರವನ್ನು ಶುರು ಮಾಡಿರುವುದೇ ಇಲ್ಲ, ಆಗಲೇ ಯಾರಿಗೆ ಮಾರಬೇಕೆಂಬ ಯೋಚನೆಯು ಇಂದಿನ ಯುವಕರ ತಲೆಯಲ್ಲಿರುತ್ತದೆ. ತುರ್ತಾಗಿ ಯಾವುದೋ ಒಂದು ಐಡಿಯಾವನ್ನು ತಲೆಯಲ್ಲಿಟ್ಟುಕೊಂಡು, ತುರ್ತಾಗಿ ಅದನ್ನು ಅನುಷ್ಠಾಾನಗೊಳಿಸಬೇಕೆಂದು ಎಲ್ಲವನ್ನೂ ತುರ್ತಾಗಿಯೇ ಮಾಡಲು ಹೋಗಿ, ಕೊನೆಗೆ ತುರ್ತಾಗಿಯೇ ಅಂಗಡಿ ಮುಚ್ಚಿಿಕೊಂಡು ಬೀದಿಗೆ ಬರುತ್ತಾಾರೆ. ಹಾಗಾಗಿಯೇ 100ಹೊಸ ಕಂಪನಿಗಳ ಪೈಕಿ ಸುಮಾರು 2ವರ್ಷಗಳ ನಂತರ ಕೇವಲ ಒಂದೇ ಒಂದು ಕಂಪನಿ ಉಳಿದಿರುತ್ತದೆ. ಹಣವನ್ನು ತರುವುದರಲ್ಲಿಯೂ ಇವರಿಗೆ ತಾಳ್ಮೆೆಯೇ ಇಲ್ಲ. ಯಾರ ಬಳಿಯೋ ಸಾಲಮಾಡಿ ಅಥವಾ ಆಕಾಶ ತೋರಿಸಿ ಹಣವನ್ನು ತುರ್ತಾಗಿ ತರುತ್ತಾಾರೆ. ನಂತರ ಖರ್ಚು ಮಾಡಲು ಸಹ ತಾಳ್ಮೆೆಯಿಲ್ಲದೆ ತುರ್ತಾಗಿ ಇದ್ದ ಹಣವನ್ನು ಸಹ ಹಾಳುಮಾಡುತ್ತಾಾರೆ.

ಇವರ ಹಿಂದಿನ ತುರ್ತಾದ ಹಣದ ಆಸೆಯ ಹಿಂದೆ ಹೋಗಿ ಕೊನೆಗೆ ಎಲ್ಲವನ್ನೂ ಕಳೆದುಕೊಳ್ಳುತ್ತಾಾರೆ. ತಾಳ್ಮೆೆ ಇಲ್ಲದೆ ಯಾವ ವ್ಯವಹಾರವನ್ನೂ ನಡೆಸಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದ ವಿಷಯವನ್ನೇ ತೆಗೆದುಕೊಳ್ಳಿಿ. ಅಲ್ಲಿನ ಯುವಕರ ಹಣೆಬರಹವೂ ಅಷ್ಟೇ. ಪಬ್ಲಿಿಸಿಟಿಗಾಗಿ ಏನಾದರೊಂದು ತರ್ಲೆೆ ವಿಚಾರವನ್ನು ಬರೆದು ಆದಷ್ಟು ಬೇಗ ಸಾವಿರಾರು ಹಿಂಬಾಲಕರನ್ನು ಪಡೆಯಬಹುದೆಂಬ ದುರಾಸೆ. ಅದರಿಂದ ಮೋದಿಯೂ ಇವರನ್ನು ಕರೆದು ಏನು ಎಂಎಲ್‌ಎ ಸೀಟು ಕೊಡುವುದಿಲ್ಲ. ಮೊದಲೇ ಸಾಮಾಜಿಕ ಜಾಲತಾಣವು ಒಂದು ರೀತಿ ‘ಸಾರ್ವಜನಿಕ ಶೌಚಾಲಯ’ದಂತಾಗಿಬಿಟ್ಟಿಿದೆ.

ಇನ್ನು ತಾಳ್ಮೆೆಯೊಂದಿದ್ದರೆ ಸಾಕೇ? ಉತ್ತಮವಾದ ವ್ಯವಹಾರಿಕ ಕಲ್ಪನೆ ಇರಬೇಕು. ಇಂದಿನ ಯುವಕರಲ್ಲಿ ಉತ್ತಮ ‘ಐಡಿಯಾ’ಗಳು ಸಿಗುವುದು ಕಷ್ಟ. ಎಲ್ಲರೂ ಅಷ್ಟೇ, ತಮ್ಮ ‘ಐಡಿಯಾ’ಗಳೇ ಜಗತ್ತಿಿನಲ್ಲಿ ಸರ್ವಶ್ರೇಷ್ಠ ಎಂದು ದೊಡ್ಡ ಕನಸು ಕಾಣುತ್ತಿಿರುತ್ತಾಾರೆ. ನಮ್ಮ ದೇಶದಲ್ಲಿ ಐಡಿಯಾ ಕೊಡುವವರಿಗೇನೂ ಕಮ್ಮಿಿಯಿಲ್ಲ. ಆದರೆ ಅದನ್ನು ಅನುಷ್ಠಾಾನಗೊಳಿಸಲು ಸಾಧ್ಯವಿದೆಯೇ, ಇಲ್ಲವೇ ಎಂಬುದನ್ನು ಆಲೋಚನೆ ಮಾಡುವ ಪ್ರಬುದ್ಧತೆ ಇಲ್ಲ.

ನಾನು ಇತ್ತೀಚೆಗೆ ಬೆಳಗಾವಿಯ ವಿಟಿಯುನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಾಸ ನೀಡಲು ಹೋಗಿದ್ದೆೆ. ಅಲ್ಲಿ ಒಬ್ಬ ಹುಡುಗ ಎದ್ದುನಿಂತು, ‘ನನ್ನ ಬಳಿ ಬಂದು ಅತ್ಯಂತ ದೊಡ್ಡ ಐಡಿಯಾ ಇದೆ. ಅದನ್ನೇನಾದರೂ ಅನುಷ್ಠಾಾನಗೊಳಿಸಿದರೆ ಕ್ಷಣ ಮಾತ್ರದಲ್ಲಿ ಕೋಟ್ಯಧಿಪತಿಗಳಾಗಬಹುದು’ ಎಂದು ಸಾವಿರಾರು ಜನರ ಸಮ್ಮುಖದಲ್ಲಿ ಹೇಳಿದ. ಆ ಐಡಿಯಾ ಏನೆಂದು ಕೇಳಿದರೆ ಅದನ್ನು ಹೇಳಲು ತಯಾರಿಲ್ಲ. ಕೊನೆಗೂ ಅವನು ಹೇಳಲೇ ಇಲ್ಲ. ಈತನ ಐಡಿಯಾ ಏನೇ ಇದ್ದರೂ ಸಹ, ನಿಜವಾದ ಪ್ರಬುದ್ಧತೆ ಇರುವ ಹುಡುಗನಾಗಿದ್ದರೆ ಕ್ಷಣಮಾತ್ರದಲ್ಲಿ ಕೋಟ್ಯಧಿಪತಿಯಾಗುವ ಬಗ್ಗೆೆ ಮಾತನಾಡುತ್ತಿಿರಲಿಲ್ಲ. ಯಾವಾಗ ಆತನು ಈ ರೀತಿಯ ಮಾತನ್ನಾಾಡಿದನೋ ಆಗಲೇ ಅವನ ಐಡಿಯಾ ಯಾವ ರೀತಿ ಇದೆ ಎಂದು ಅರ್ಥಮಾಡಿಕೊಳ್ಳಬಹುದು. ನಮ್ಮ ಉಪೇಂದ್ರನ ಐಡಿಯಾಗಳು ಅದೇ ರೀತಿ ಇರುತ್ತವೆ. ಕನಿಷ್ಠ ಒಂದಾದರೂ ತನ್ನ ಐಡಿಯಾಗಳನ್ನು ಎಲ್ಲಾಾದರೂ ಪ್ರಾಾಯೋಗಿಕವಾಗಿ ಅನುಷ್ಠಾಾನಗೊಳಿಸಿದ್ದಾಾರೆಯೇ? ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬಂತೆ ತಮ್ಮ ಕಲ್ಪನೆಯೇ ಅದ್ಭುತ. ಯಾರೂ ಸಹ ಮಾಡದ್ದನ್ನು ಮಾಡುತ್ತೇವೆಂಬ ಮಾಯಾಲೋಕದಲ್ಲಿರುತ್ತಾಾರೆ. ಇನ್ನು ಇವರ ಜತೆಯಲ್ಲಿರುವ ಸ್ನೇಹಿತರೂ ಸಹ ಹಾಗೆಯೇ ಇರುತ್ತಾಾರೆ. ಇವರನ್ನು ಹುರಿದುಂಬಿಸಿ, ನೀನೇ ಇಂದ್ರ ಎಂದು ಸ್ವಲ್ಪ ಮೇಲಕ್ಕೇರಿಸಿ ಇನ್ನೂ ಹಾಳು ಮಾಡುತ್ತಾಾರೆ. ಅಷ್ಟು ಸುಲಭವಾಗಿ ಎಲ್ಲರ ಐಡಿಯಾಗಳು ಮಾಡುವಂತಿದ್ದರೆ ನಮ್ಮ ದೇಶ ಇಂದು ಅಮೆರಿಕಕವನ್ನು ಮೀರಿಸಿ ಮುಂದುವರಿಯುತ್ತಿಿತ್ತು.

ಇನ್ನು ಮುಂದಿನದ್ದು ಪರಿಶ್ರಮ. ಯಾವುದೇ ಉದ್ಯಮವನ್ನು ಶುರುಮಾಡುವ ಮೊದಲು ಪರಿಶ್ರಮವಿರಬೇಕು. ನಂತರವೂ ಪರಿಶ್ರಮವಿರಬೇಕು. ತನ್ನ ಉದ್ಯಮವನ್ನು ಆರಂಭಿಸುವ ಮೊದಲು ಪರಿಶ್ರಮವಿರಬೇಕು. ನಂತರವೂ ಪರಿಶ್ರಮವಿರಬೇಕು. ಆರಂಭದಲ್ಲಿ ಹಲವಾರು ಪ್ರಯೋಗಗಳನ್ನು ಮಾಡಬೇಕಿರುತ್ತದೆ. ನಮ್ಮ ಯುವಕರು ಮಾಡುವ ಪ್ರಯೋಗಗಳು ಕೇವಲ ಕಂಪ್ಯೂೂಟರಿಗಷ್ಟೇ ಸೀಮಿತ. ಕಾಫಿಡೇನಲ್ಲಿ ಕುಳಿತು ಒಂದು ಲ್ಯಾಾಪ್‌ಟಾಪ್‌ನಲ್ಲಿಯೇ ತಮ್ಮ ಎಲ್ಲ ರೀತಿಯ ಪರಿಶ್ರಮಗಳನ್ನು ಹಾಕಿರುತ್ತಾಾರೆ. ಗೂಗಲ್‌ನಲ್ಲಿಯೇ ಇವರ ಹುಡುಕಾಟ. ನಂತರ ಒಂದು ಮೊಬೈಲ್, ಗಣಕಯಂತ್ರದಲ್ಲಿ ಕೂಡುವುದು, ಕಳೆಯುವುದು, ಉಳಿದದ್ದು ಲಾಭ ಹಾಗೂ ಗರಿಷ್ಠವನ್ನು ಹಂಚಿಕೊಳ್ಳುವ ಲೆಕ್ಕಾಾಚಾರವಷ್ಟೇ. ಒಂದು ಹೊಟೇಲಿನ ಮುಂದೆ ನಿಂತು ಅಲ್ಲಿ ಎಷ್ಟು ಜನರು ಬಂದು ಕಾಫಿಗಾಗಿ ಸಾಲಿನಲ್ಲಿ ನಿಲ್ಲುತ್ತಾಾರೆ, ಪ್ರತಿಯೊಂದು ಕಾಫಿಯ ಬೆಲೆಯಲ್ಲಿ ಅದನ್ನು ಗುಣಿಸಿ, ಕೊನೆಗೆ ಅರ್ಧವಾದರೂ ಲಾಭವಿದೆಯೆಂದು ತಿಳಿದುಬಂದು ಹೊಟೇಲಿನ ಲೆಕ್ಕಾಾಚಾರವನ್ನು ಹಾಕಿಬಿಡುತ್ತಾಾರೆ.

ದಿನಕ್ಕೆೆ ಇಷ್ಟು ಸಾವಿರ, ತಿಂಗಳಿಗಿಷ್ಟು ಲಕ್ಷ, ವರ್ಷದಲ್ಲಿ ಕೋಟ್ಯಧಿಪತಿ. ಇವರ ಲೆಕ್ಕಾಾಚಾರದ ಪರಿ ಇದು. ಅಪ್ಪಿಿತಪ್ಪಿಿ ಒಂದುದಿನ ಹಾಲು ಒಡೆದು ಹೋದರೆ ಏನಾಗುತ್ತದೆ ಎಂಬ ಯೋಚನೆ ಇಲ್ಲ. ಕುಡಿಯುವ ಪಿಂಗಾಣಿ ಲೋಟಗಳು ಕಳುವಾಗುವ ಲೆಕ್ಕವಿಲ್ಲ. ಈ ಲೆಕ್ಕವೆಲ್ಲವೂ ತಾವು ಹೊಟೇಲ್ ಶುರುಮಾಡಿದ ಮೇಲಷ್ಟೇ ತಿಳಿಯುತ್ತದೆ. ಆಗ ಕಾಲ ಮೀರಿಹೋಗಿರುತ್ತದೆ. ನಷ್ಟ ತುಂಬಲು ಹಣವಿಲ್ಲದೆ ಹೊಟೇಲ್ ಮುಚ್ಚುವ ಪರಿಸ್ಥಿಿತಿ ಎದುರಾಗುತ್ತದೆ. ನೆಲಮಟ್ಟದಲ್ಲಿ ಇಳಿದು ಏನಾಗುತ್ತಿಿದೆಯೆಂಬ ಸಣ್ಣ ಪರಿಕಲ್ಪನೆಯೂ ಇಲ್ಲದೆ ವ್ಯವಹಾರ ಆರಂಭಿಸುವ ಯುವಕರ ಪಡೆಯೇ ಹೆಚ್ಚು. ಈ ರೀತಿಯ ಪ್ರೌೌಢಿಮೆಯೇ ಇಲ್ಲದ ಯುವಕರ ಐಡಿಯಾಗಳಿಗೆ ಯಾವ ಹಣವಂತ ಮಣೆಹಾಕುತ್ತಾಾನೆ? ನಂತರ ಇವರಿಗೆ ಬ್ಯಾಾಂಕುಗಳು ಸಾಲ ನೀಡುತ್ತಿಿಲ್ಲವೆಂಬ ಮಾತುಗಳನ್ನಾಾಡುತ್ತಾಾರೆ. ವ್ಯವಹಾರ ಮಾಡಲು ಹಣ ಸಿಗುತ್ತಿಿಲ್ಲ ಎಂದು ಕೂಗಾಡುತ್ತಾಾರೆ. ಯಾರು ತಾನೇ ಇವರ ಈ ರೀತಿಯ ಪರಿಶ್ರಮವನ್ನು ನೋಡಿ ಹಣ ನೀಡುತ್ತಾಾರೆ ಹೇಳಿ?

ಇಂದಿನ ಯುವಕರ ಪರಿಸ್ಥಿಿತಿ ಹೇಗಿದೆ ಎಂದರೆ ತಾವುಹೋಗಿ ಕೊಟ್ಟಿಿಗಟ್ಟಲೆ ಹಣ ಸಂಪಾದಿಸಬಲ್ಲ ವ್ಯವಹಾರ ಮಾಡುತ್ತೇವೆಂದು ಹೇಳಿದ ಕೂಡಲೇ ಸಾಲವೋ ಅಥವಾ ವ್ಯವಹಾರ ಶುರುಮಾಡಲು ಹಣವನ್ನೋೋ ನೀಡಬೇಕು. ಇಲ್ಲವಾದರೆ ಯಾರೂ ಸರಿಯಿಲ್ಲ, ಕೇವಲ ಇವರು ಮಾತ್ರವೇ ಸರಿ. ಸರಕಾರ ಏನೂ ಮಾಡುತ್ತಿಿಲ್ಲ. ಇವರ ಬಳಿ ಸೂಪರ್ ಕೆಲಸವಿದೆ ಎಂಬ ಭ್ರಮೆಯಲ್ಲಿರುತ್ತಾಾರೆ. ಬ್ಯಾಾಂಕಿನಲ್ಲಿರುವ ಹಣ ಯಾವುದು ಹೇಳಿ? ಸಾರ್ವಜನಿಕರ ಹಣದಿಂದ ತಾನೇ ಬ್ಯಾಾಂಕುಗಳು ನಡೆಯುವುದು. ಅಪ್ಪಿಿತಪ್ಪಿಿ ಇವರ ಈ ವ್ಯವಹಾರಗಳಿಗೆ ಹಣ ನೀಡಿದರೆ, ಬ್ಯಾಾಂಕಿನಲ್ಲಿಟ್ಟಿಿರುವ ಸಾರ್ವಜನಿಕರ ಹಣದ ಪರಿಸ್ಥಿಿತಿ ಏನಾಗುವುದೆಂಬ ಕನಿಷ್ಠ ಯೋಚನೆಯೂ ಇವರಿಗೆ ಇಲ್ಲದಂತೆ ಕಾಣುತ್ತದೆ.

ಈಗಾಗಲೇ ವಿಜಯ್ ಮಲ್ಯನಂತಹವರಿಗೆ ಸಾಲವನ್ನು ನೀಡಿ ಸಾವಿರಾರು ಕೋಟಿಯ ಹಣವು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇದೇ ತಪ್ಪನ್ನು ಬ್ಯಾಾಂಕುಗಳು ಮತ್ತೆೆ ಮತ್ತೆೆ ಮಾಡಬಾರದು. ತಾವುಗಳು ಮಾಡಿದ ಪರಿಶ್ರಮವೇ. ಅಂತಿಮವೆಂದು ತಿಳಿಯುವ ಇಂದಿನ ಯುವಕರಿಗೆ ತಮ್ಮ ಪರಿಶ್ರಮವು ಏನೂ ಇಲ್ಲವೆಂಬ ಸತ್ಯವನ್ನು ಹೇಳುವವರೇ ಇಲ್ಲ.

ಇನ್ನು ಸ್ಪರ್ಧೆಯ ವಿಚಾರಕ್ಕೆೆ ಬರುವುದಾರೆ 20 ವರ್ಷಗಳ ಹಿಂದೆ ಇದ್ದ ಮಾರುಕಟ್ಟೆೆಯೂ ಇಂದು ಇಲ್ಲ. ಆಗಿನ ಮಾರುಕಟ್ಟೆೆಯಲ್ಲಿ ಕಂಪನಿಗಳಿದ್ದವು. ಆದರೆ ಈಗಿನ ಮಾರುಕಟೆಯಲ್ಲಿ ಹೆಚ್ಚಿಿನ ಕಂಪನಿಗಳಿವೆ. ಪ್ರತಿಯೊಂದು ವಿಭಾಗದಲ್ಲಿಯೂ ಸ್ಪರ್ಧೆಯನ್ನೊೊ ಒಡ್ಡಲು ನಮ್ಮ ಪ್ರತಿಸ್ಪರ್ಧಿ ಕಾಯುತ್ತಿಿರುತ್ತಾಾನೆ. ಅದರಲ್ಲಿಯೂ ಹಣವಂತರಿದ್ದರೆ ಮುಗಿಯಿತು, ಅವರ ಹಣ ಬಲದ ಮುಂದೆ ಇವರ ಐಡಿಯಾ ಬಲ ನಿಲ್ಲುವುದಿಲ್ಲ. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊೊಂದು ಅಂಶವೆಂದರೆ 20ವರ್ಷಗಳ ಹಿಂದಿನ ಜನಸಂಖ್ಯೆೆಯೂ ಈಗಿಲ್ಲ. ಜನಸಂಖ್ಯೆೆಯೂ ಹೆಚ್ಚಿಿರುವುದರಿಂದ ಅವಕಾಶಗಳೂ ಹೆಚ್ಚು. ಸರಿಯಾದ ಅವಕಾಶವಿರುವ ಮಾರುಕಟ್ಟೆೆಯೆಡೆಗೆ ಗಮನಹರಿಸಿದರೆ ಸ್ಪರ್ಧೆಯೂ ಏನೂ ಅಲ್ಲ. ಯುವಕರಿಗೆ ಯಾವ ವಸ್ತುವು ಯಾವ ಮಾರುಕಟ್ಟೆೆಯಲ್ಲಿ ಮಾರಾಟವಾಗುತ್ತವೆ ಎಂಬ ಕನಿಷ್ಠ ಜ್ಞಾಾನವೂ ಇರುವುದಿಲ್ಲ. ರಫ್ತಿಿನ ವಿಭಾಗಕ್ಕೆೆ ಬಂದರೆ ಅಮೆರಿಕ ಹಾಗೂ ಯುರೋಪಿನ ರಾಷ್ಟ್ರಗಳು ಈಗಾಗಲೇ ತುಂಬಿಹೋಗಿವೆ. ಇವರ ತಲೆಯು ಈಗಾಗಲೇ ತುಂಬಿರುವ ಮಾರುಕಟ್ಟೆೆಗೆ ಹೋಗಿರುತ್ತದೆ.

ಇನ್ನೂ ಹೆಚ್ಚಿಿನ ಅವಕಾಶವಿರುವ ಆಫ್ರಿಿಕಾ, ಲ್ಯಾಾಟಿನ್ ಅಮೆರಿಕ, ಆಗ್ನೇಯ ಏಷ್ಯ ಕಡೆ ತೆರಳುವುದೇ ಇಲ್ಲ. ಆಫ್ರಿಿಕಾದಲ್ಲಿನ ಕೆಲವು ರಾಷ್ಟ್ರಗಳು ಇಂದಿಗೂ 1990ರ ದಶಕದ ಭಾರತದ ರೀತಿಯಂತಿದೆ. ಅಲ್ಲಿನ ಜನರಿಗೆ ಬೇಕಿರುವುದನ್ನು ತಲುಪಿಸುವ ಕೆಲಸ ಮಾಡಿದರೆ ಸಾಕಲ್ಲವೇ? ಇವರಿಗೆ ಅದೇ ಐಟಿ ಬಿಟಿಯಂತಹ ಪ್ರಭಾವದ ರಾಷ್ಟ್ರಗಳಷ್ಟೇ ಕಣ್ಣಿಿಗೆ ಬೀಳುತ್ತವೆ. ಕಳೆದ ಕೆಲವು ವರ್ಷಗಳಿಂದ ಫ್ಲಿಿಪ್ ಕಾರ್ಟ್, ಓಲಾ, ಉಬರ್, ಬಿಗ್‌ಬಾಸ್ಕೆೆಟ್, ಸ್ವಿಿಗ್ಗಿಿ ತರಹದ ಕಂಪನಿಗಳು ಬಂದ ಮೇಲಂತೂ ಎಲ್ಲರೂ ಸಹ ಆನ್‌ಲೈನ್ ವ್ಯವಹಾರಗಳಲ್ಲಿಯೇ ಮುಳುಗಿಹೋಗಿದ್ದಾಾರೆ.

ಎಲ್ಲ ಹೊಸರೀತಿಯ ಐಡಿಯಾಗಳಲ್ಲಿಯೂ ಈ ಡಾಟ್‌ಕಾಂನದ್ದೇ ಹವಾ. ಶುರುಮಾಡಿದ ಬೆಳವಣಿಗೆಯಷ್ಟು ಕಂಪನಿಗಳಷ್ಟೇ ಲಾಭದಲ್ಲಿರುವುದು, ಬಹುತೇಕರೆಲ್ಲರೂ ಇಂದಿಗೂ ನಷ್ಟದಲ್ಲಿಯೇ ಇದ್ದಾಾರೆ. ಓಲಾ ಕಂಪನಿಯು ಸುಮಾರು 10,000 ಕೋಟಿಯಷ್ಟು ನಷ್ಟವನ್ನು ಅನುಭವಿಸಿದೆ ಎಂದರೆ ನಂಬುತ್ತಿಿರಾ? ಯಾವುದೇ ಒಂದು ಅದೃಷ್ಟ ಇದರ ಮಾಲೀಕರಿಗಿತ್ತು. ಹಣವು ಹರಿದು ಬಂತು ಹಾಗಂತ ಎಲ್ಲರಿಗೂ ಹಣ ಬರಲು ಸಾಧ್ಯವೇ? ಮಾತು ಮಾತಿಗೂ ವ್ಯಾಾಲ್ಯೂಷನ್ ಹಿಂದೆ ಬಿದ್ದಿರುವ ಯುವಕರಿಗೆ ದೀರ್ಘಕಾಲದ ದೂರದೃಷ್ಟಿಿಯೇ ಇಲ್ಲ. ಕೇವಲ ಹಣವೊಂದೇ ಉದ್ದೇಶವೆಂಬ ಮನಸ್ಥಿಿತಿಯಿಂದ ವ್ಯವಹಾರ ಶುರುಮಾಡಿರುತ್ತಾಾರೆ.

ಇವರ ಈ ಅಪ್ರಬುದ್ಧತೆಗೆ ಯಾರನ್ನು ದೂಷಿಸಬೇಕೋ ತಿಳಿದಿಲ್ಲ. ಶಾಲೆಯಲ್ಲಿನ ಶಿಕ್ಷಕರು ಇವರ ತಲೆಯಲ್ಲಿ ಚಿಕ್ಕಂದಿನಿಂದ ಜಗತ್ತಿಿನ ನಿಜಾಂಶವನ್ನು ತಿಳಿಸುವುದಿಲ್ಲ. ಅವರಿಗೇನು ಕೇಳುವ ಅಂಕಗಳಿಕೆಯನ್ನು ಹೇಳಿಕೊಡುತ್ತಾಾರೆ. ದೊಡ್ಡವರಾದ ಮೇಲೆ ಯಾವುದಾದರೊಂದು ಐಟಿಬಿಟಿ ಕಂಪನಿಯ ಕೆಲಸ, ಬ್ಯಾಾಂಕ್ ನೌಕರ ಅಥವಾ ಐಎಎಸ್, ಐಪಿಎಸ್ ಎಂದು ತಲೆಗೆ ತುಂಬಿ ವ್ಯವಹಾರಿಕ ಜ್ಞಾಾನವನ್ನು ತಿಳಿಹೇಳುವುದೇ ಇಲ್ಲ. ಇನ್ನು ಅಪ್ಪ ಅಮ್ಮಂದಿರದ್ದು ಇದೇ ರೀತಿಯ ಯೋಚನೆ, ಅವರಿಗೂ ತಮ್ಮ ಮಕ್ಕಳನ್ನು ಯಾವುದೋ ಒಂದು ಶಾಲೆಗೆ ಸೇರಿಸಿ ನಂತರ ಕಾಲೇಜಿನಲ್ಲಿ ಉತ್ತಮ ಅಂಕಗಳಿಸುವಂತೆ ಮಾಡಿ ಒಂದು ಒಳ್ಳೆೆಯ ಕಂಪನಿಗೆ ಸೇರಿಸಿ ಮಗನಿಗೆ ಮದುವೆ ಮಾಡಿಸಿದರೆ ಸಾಕೆಂಬ ಗುರಿ. ಇದಕ್ಕೆೆ ತಕ್ಕಂತೆ ನಮ್ಮ ಮ್ಯಾಾನೇಜ್‌ಮೆಂಟ್ ಕಾಲೇಜುಗಳು ಅಲ್ಲಿಂದ ಹೊರಬಂದು ಒಳ್ಳೆೆಯ ಬ್ರಾಾಂಡ್ ಕಟ್ಟಿಿರುವವರು ಸಾವಿರದಲ್ಲಿ ಒಬ್ಬರಿರಬಹುದು ಅಥವಾ ಲಕ್ಷದಲ್ಲಿಯೇ ಒಂದಿಬ್ಬರಿರಬಹುದಷ್ಟೇ.

ಹೇಳಿಕೊಳ್ಳಲು ನಮ್ಮಲ್ಲಿ 16 ಐಐಟಿಗಳಿವೆ. ಐಐಎಂಗಳಿವೆ. ಉತ್ತಮ ವಿಶ್ವವಿದ್ಯಾಾನಿಲಯಗಳ ಪಟ್ಟಿಿ ದೊಡ್ಡದಾಗಿಯೇ ಇದೆ. ಆದರೂ ನಾವು ದಿನ ಬೆಳಗಾದರೆ ಬಳಸುವ ತಂತ್ರಜ್ಞಾಾನಗಳಾದ ಮೈಕ್ರೋೋಸಾಫ್‌ಟ್‌, ಲ್ಯಾಾಪ್‌ಟಾಪ್, ಫೇಸ್‌ಬುಕ್, ಗೂಗಲ್, ಟ್ವಿಿಟ್ಟರ್, ವಾಟ್ಸಾಾಫ್ ನಮ್ಮದಲ್ಲ ಅಮೆರಿಕನ್ನರದ್ದು. ಅಷ್ಟೇ ಯಾಕೆ ನಾವು ಬಳಸುವ ಮೊಬೈಲ್ ನಮ್ಮದಲ್ಲ. ಈ ನಿಟ್ಟಿಿನಲ್ಲಿ ಯೋಚನೆ ಮಾಡದ ನಮ್ಮ ಯುವಕರು ಫೇಸ್‌ಬುಕ್‌ನಲ್ಲಿ ಜಯವೀರ ಯಾರು, ಅವರಪ್ಪ ಯಾರು ಎಂದು ಪಬ್ಲಿಿಸಿಟಿಗಾಗಿ ಟೈಂಪಾಸ್ ಮಾಡಿಕೊಂಡು ಕುಳಿತಿರುತ್ತಾಾರೆ. ಕಾಲೇಜುಗಳಲ್ಲಿನ ಶಿಕ್ಷಕರೂ ಅಷ್ಟೇ. ಕಡೆಯ ಪಕ್ಷ ಕಾಲೇಜಿನ ಕೊನೆಯ ದಿನಗಳಲ್ಲಾಾದರೂ ಸಹ ಅಲ್ಪಸ್ವಲ್ಪ ವ್ಯವಹಾರಿಕ ಜ್ಞಾಾನವನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡುವುದಿಲ್ಲ.
ಇನ್ನು ನಮ್ಮ ಸರಕಾರಗಳು ಬಂಡವಾಳ ಸಮಾವೇಶ, ತಂತ್ರಜ್ಞಾಾನ ಸಮಾವೇಶಗಳನ್ನು ಮಾಡುತ್ತಲೇ ಇರುತ್ತದೆ. ಇತ್ತ ನೋಡಿದರೆ ಯಾವುದೊಂದು ವ್ಯವಹಾರವೂ ಸಹ ಕುದುರುವುದಿಲ್ಲ. ಮುಂದುವರಿಯುತ್ತಿಿದ್ದರೆ ಉತ್ತಮ ಆಲೋಚನೆಗಳನ್ನು ಯೋಚಿಸಬೇಕಿದ್ದ ಯುವಕರ ಮೆದುಳು ಮಕ್ಕಳಂತೆ ಕೆಲಸಕ್ಕೆೆ ಬಾರದೆ ಪರಿಶ್ರಮವೇ ಇಲ್ಲದ ವ್ಯವಹಾರಿಕ ಯೋಚನೆಗಳೆಡೆಗೆ ತೆರಳುತ್ತಿಿರುವುದು ಮಾತ್ರ ದುರದೃಷ್ಟಕರ. ಇದಕ್ಕೆೆಲ್ಲವೂ ಮೂಲವೇ ಶಿಕ್ಷಣ. ಶಿಕ್ಷಣ ವ್ಯವಸ್ಥೆೆಯಲ್ಲಿನ ಲೋಪದೋಷಗಳನ್ನು ಸರಿಮಾಡಿದರೆ ಮಾತ್ರ ಯುವಕರ ತಲೆಯಲ್ಲಿ ಉತ್ತಮ ವ್ಯವಹಾರಿಕ ಆಲೋಚನೆ ತರಲು ಸಾಧ್ಯ. ಇಲ್ಲವಾದರೆ ಅದು ಕೇವಲ ‘ಐಡಿಯಾ’ಗಳಿಗಷ್ಟೇ ಸೀಮಿತವಾಗುತ್ತದೆ. ಕೇವಲ ಐಡಿಯಾಗಳಿಂದ ವ್ಯವಹಾರ ಕಟ್ಟಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *

error: Content is protected !!