Sunday, 8th September 2024

ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ

ತನ್ನಿಮಿತ್ತ

ನಂಜುಂಡ ನಂಜೇಗೌಡ

ಕೆಂಪೇಗೌಡರು ವಿಶ್ವವಿಖ್ಯಾತ ಬೆಂಗಳೂರು ನಗರ ನಿರ್ಮಾತೃ, ಸಾವಿರಾರು ಕೆರೆಗಳ ಸರದಾರ, ಮುನ್ನೋಟದ ಕನಸುಗಾರ, ನಾವ್ಯಾರು ಮರೆಯಲಾಗದ ನನಸುಗಾರ, ಕೋಟೆ ಪೇಟೆಗಳ ನಿರ್ಮಾಣದ ಸಾಕಾರ, ಕರುನಾಡಿನ ಹೆಮ್ಮೆಯ ಕುವರ. ಕೆಂಪೇಗೌಡರ ವಂಶಸ್ಥರನ್ನು ಯಲಹಂಕ ಪ್ರಭುಗಳೆಂದೇ
ಕರೆಯಲಾಗುತ್ತದೆ. ಯಲಹಂಕ ನಾಡು ವಿಜಯನಗರದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಫಲವಾಗಿ ಉದಯಿಸಿತು.

ಕರ್ನಾಟಕದ ದಕ್ಷಿಣ ಭಾಗದಲ್ಲಿ ಕ್ರಿ.ಶ. ಸುಮಾರು ೧೪೨೦ ರಿಂದ ೧೭೨೮ರವರೆಗೆ ಆವತಿ, ಯಲಹಂಕ, ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗ ಗಳನ್ನು ಪ್ರಮುಖ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಯಲಹಂಕ ನಾಡಪ್ರಭುಗಳು ರಾಜ್ಯದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಕದಂಬ, ಗಂಗ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳು ಆಳಿವೆ. ಆದರೆ
ಕೆಂಪೇಗೌಡರು ಈಗಲೂ ನಾಡಿನ ಚರಿತ್ರೆಯಲ್ಲಿ ಮತ್ತು ಜನ ಮಾನಸದಲ್ಲಿ ಉಳಿದಿದ್ದಾರೆ.

ನಾಡಪ್ರಭು ಸ್ಥಳೀಯವಾಗಿ ಜನರ ಮಧ್ಯೆ ಇದ್ದು ಜನಕಲ್ಯಾಣ ಕಾರ್ಯ ಕೈಗೊಂಡ ಚಾರಿತ್ರಿಕ ಪುರುಷ ಕೆಂಪೇಗೌಡರ ೫೧೫ನೇ ಜಯಂತಿ ಸಮಯದಲ್ಲಿ ಅವರ ಕಾರ್ಯಗಳನ್ನು ನೆನೆಯಬೇಕಿದೆ. ೧೫೧೦ರ ಜೂನ್ ೨೭ರಂದು ಜನಿಸಿದ ಕೆಂಪೇಗೌಡರು ಕೆಂಪನಂಜೇಗೌಡ ಮತ್ತು ಲಿಂಗಮಾಂಬೆಯವರ ನಾಲ್ವರು ಸುಪುತ್ರರಲ್ಲಿ ಮೊದಲನೆಯವರು. ಆದ್ದರಿಂದ ಇವರನ್ನು ಹಿರಿಯ ಕೆಂಪೇಗೌಡ ಎಂತಲೂ ಕರೆಯುತ್ತೇವೆ. ಉಳಿದವರು ಕ್ರಮವಾಗಿ ವೀರೇಗೌಡ, ಬಸವೇಗೌಡ ಹಾಗೂ ಕೆಂಪಸೋ ಮೇಗೌಡ. ತಂದೆ ಕೆಂಪನಂಜೇಗೌಡ ವಿಜಯನಗರ ಸಾಮ್ರಾ ಜ್ಯದ ನಿಷ್ಟಾವಂತ ಸಾಮಂತ, ಯಲಹಂಕದ ಈ ಪ್ರಭುಗಳು ಭೈರವನ ಆರಾಧಕ ಪಾಳೇಗಾರರೆಂದು ಪ್ರಸಿದ್ದರಾಗಿದ್ದರು. ಕೆಂಪಮ್ಮ ಇವರ ಮನೆ ದೇವತೆ ಹಾಗೆ ಭೈರವನ ಆರಾಧಕರೂ ಆಗಿದ್ದರು.

ಕೆಂಪೇಗೌಡರು ಹೆಸರುಘಟ್ಟದ ಗುರುಕುಲದಲ್ಲಿ ಎಂಟು ವರ್ಷ ವಿದ್ಯಾಭ್ಯಾಸ ಮುಗಿಸಿ ಮಾಧವ ಭಟ್ಟರೆಂಬ ಗುರುಗಳ ಬಳಿ ಕಲಿತು ಸಂಸ್ಕಾರ ಮತ್ತು ಸಾಂಸ್ಕೃತಿಕ ಅನ್ಯನ್ಯತೆಯ ವ್ಯಕ್ತಿತ್ವ ಹೊಂದಿದ್ದರು. ೧೫೩೧ ರಿಂದ ೧೫೬೯ರವರೆಗೆ ಯಲಹಂಕದ ಮಹಾನಾಡ ಪ್ರಭುವಾದರು. ನಂತರ ಇವರ ಪುತ್ರ ೨ನೇ
ಕೆಂಪೇಗೌಡ (ಮಾಗಡಿ ಕೆಂಪೇಗೌಡ), ಮೂರನೇ ಕೆಂಪೇಗೌಡ ನಂತರ ಗಿಡ್ಡೆಗೌಡ ಮೊದಲಾದವರು ಆಳ್ವಿಕೆ ನಡೆಸಿದರು. ಆದರೆ ಯಲಹಂಕ ಮಹಾನಾಡು ಹೆಚ್ಚು ಪ್ರಸಿದ್ದಿಗೆ ಬಂದದ್ದು ಹಿರಿಯ ಕೆಂಪೇಗೌಡರ ಕಾಲದಲ್ಲಿ ಪಟ್ಟಾಭಿಷಕ್ತರಾಗಿ ಚೆನ್ನಾಮಾಂಬೆಯವರೊಡನೆ ವಿವಾಹವಾದ ಇವರು ತಮ್ಮ ತಂದೆ ಯೊಡನೆ ೧೫೧೫ರಲ್ಲಿ ಹಂಪೆಯಲ್ಲಿ ಮೊಟ್ಟಮೊದಲು ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಆರಂಭವಾದ ವಿಜಯದಶಮಿ ಉತ್ಸವ ನೋಡಲು ಹೋಗಿದ್ದ ಕೆಂಪೇಗೌಡರ ಮನಸ್ಸಿನಲ್ಲಿ ಅದಾಗಲೇ ಅಂತರಾಷ್ಟ್ರೀಯ ಸಾಂಸ್ಕೃತಿಕ, ವಾಣಿಜ್ಯ ಖ್ಯಾತಿ ಹೊಂದಿದ್ದ ಹಂಪೆಯಂತಹ ನಗರವನ್ನು ನಿರ್ಮಿಸುವ ಮನದಾಸೆಯ ಫಲವಾಗಿ ೧೫೩೭ರಲ್ಲಿ ಬೆಂಗಳೂರು ನಿರ್ಮಾಣ ಕಾರ್ಯ ಸಕಲ ಸಂಪ್ರದಾಯಗಳಂತೆ ಆರಂಭವಾಯಿತು.

ಸಿರಿವಂತಿಕೆಯ ಹಂಪೆಯಂತಹ ವೈಭವಯುತ ನಗರ ನಿರ್ಮಾಣದ ಕನಸು ಹೊತ್ತಿದ್ದ ಕೆಂಪೇಗೌಡರು ವೃಷಭಾವತಿ ಮತ್ತು ಆರ್ಕಾವತಿ ನದಿಗಳಿಗೆ ಸೇರುತ್ತಿದ್ದ ತೊರೆಗಳು ಹರಿಯುವ ಪ್ರದೇಶ ಸಮುದ್ರಮಟ್ಟದಿಂದ ೩೦೦೦ ಅಡಿ ಎತ್ತರದ ಜಾಗ, ಉತ್ತಮ ಪರಿಸರ, ಫಲವತ್ತಾದ ಮಣ್ಣು ಇರುವ
ಸ್ಥಳವನ್ನು ಆಯ್ಕೆಮಾಡಿದರು. ಅದು ಈಗಿನ ಯಲಹಂಕಕ್ಕೆ ೧೦ ಮೈಲಿ ದೂರದಲ್ಲಿತ್ತು, ಚಿಕ್ಕಪೇಟೆ ಮತ್ತು ದೊಡ್ಡಪೇಟೆ ರಸ್ತೆ ಗಳು ಕೂಡುವ ಸ್ಥಳದಿಂದ ಭೂಮಿ ಪೂಜೆ-ವೇದ ಘೋಷಗಳೊಂದಿಗೆ ೪ ಜನ ರೈತರು ನೇಗಿಲು ಕಟ್ಟಿದ ನಾಲ್ಕು ಜೊತೆ ಬಿಳಿ ಎತ್ತುಗಳು ನಾಲ್ಕು ದಿಕ್ಕಿಗೆ ಗೆರೆ ಎಳೆಯುತ್ತಾ ಸಾಗಲಾಗಿ
ಪೂರ್ವ-ಪಶ್ಚಿಮದ ಸಾಲನ್ನು ಚಿಕ್ಕಪೇಟೆಯಾಗಿ ಉತ್ತರ- ದಕ್ಷಿಣ ಗೆರೆಯನ್ನು ದೊಡ್ಡಪೇಟೆ (ಈಗಿನ ಅವಿನ್ಯೂ ರಸ್ತೆ) ಯಾಗಿ ನಿರ್ಮಿಸಲಾಯಿತು.

ಕೆಂಪೇಗೌಡರ ದೃಷ್ಟಿಯಲ್ಲಿ ನಾಡು ಎಂದರೆ ಬರೀ ಕಲ್ಲು ಮಣ್ಣುಗಳಲ್ಲ. ಎಲ್ಲಾ ವರ್ಗದ ಜನಸಮುದಾಯ ಎನ್ನುವ ಬಹುತ್ವ ದೂರದೃಷ್ಟಿ ಅವರಲ್ಲಿತ್ತು, ವಾರದ ಏಳು ದಿನಗಳು ನಗರದಲ್ಲಿ ವಾಣಿಜ್ಯ ವ್ಯಾಪಾರ ಚಟುವಟಿಕೆಗಳು ನಡೆಯಬೇಕು. ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆಯನ್ನು ವಿಸ್ತರಿಸಿ
ರೈತರು ಬೆಳೆದ ಬೆಳೆಗಳನ್ನು ನಗರದಲ್ಲಿ ಮಾರಾಟ ಮಾಡಲು ಅನೇಕ ಪೇಟೆಗಳಿಗೆ ಅಸ್ತಿಭಾರ ಹಾಕಿದರು. ಎಲ್ಲಾ ಸಮುದಾಯದವರು ವೃತ್ತಿಗಳಿಗೆ ತಕ್ಕಂತೆ ವ್ಯವಹರಿಸಲು ದೊಡ್ಡ ಪೇಟೆ (ಸಗಟು ಮಾರುಕಟ್ಟೆ) ಚಿಕ್ಕಪೇಟೆ (ಚಿಲ್ಲರೆ ಮಾರುಕಟ್ಟೆ), ಅಕ್ಕಿಪೇಟೆ, ರಾಗಿಪೇಟೆ, ಅರಳೆಪೇಟೆ, ತರಗುಪೇಟೆ, ಗಾಣಿಗರ
ಪೇಟೆ, ಉಪ್ಪಾರಪೇಟೆ, ಕುಂಬಾರಪೇಟೆ, ತಿಗಳರ ಪೇಟೆ, ನಗರ್ತಪೇಟೆ, ಬಳೆಪೇಟೆ, ಮುತ್ಯಾಲಪೇಟೆ, ಗೊಲ್ಲರಪೇಟೆ ಮುಂತಾದ ಸಮುದಾಯ ಆಧಾರಿತ ಪೇಟೆಗಳನ್ನು ನಿರ್ಮಿಸಿ ಎಲ್ಲಾ ದಿಕ್ಕುಗಳಿಂದ ವರ್ತಕರನ್ನು ಆಹ್ವಾನಿಸಿ ಬೆಂಗಳೂರನ್ನು ವಿಜಯನಗರದ ರಾಜಧಾನಿ ಹಂಪೆಯಂತೆ ವಾಣಿಜ್ಯ ವ್ಯಾಪಾರಗಳ ಕೇಂದ್ರವಾಗಿಸಿ ಬಹುತ್ವ ಸಮ ಸಮಾಜದ ನಗರ ನಿರ್ಮಿಸಿದ ಬ್ಯಾಗಿ ಒಕ್ಕಲು ಹಿನ್ನಲೆಯುಳ್ಳ ಕಂಡಗೌಡರ ದೂರದೃಷ್ಟಿಗೆ ಮತ್ತೊಂದು ಸಾಕ್ಷಿಯಾಗಿದೆ.

ಕೆರೆಕಟ್ಟೆಗಳ ನಿರ್ಮಾಣ: ಒಕ್ಕಲು ಮನೆಯಲ್ಲಿ ಹುಟ್ಟಿ ಬಂದ ಕೆಂಪೇಗೌಡರಿಗೆ ಕೃಷಿಪ್ರಧಾನ ಆರ್ಥಿಕ ವ್ಯವಸ್ಥೆಗೆ ಮತ್ತು ನಗರಕ್ಕೆ ನೀರು ಅತಿ ತಿಳಿದಿದ್ದ ಅವರು ಸಾವಿರಾರು ಕೆರೆಕಟ್ಟೆ ಗಳನ್ನು ನಿರ್ಮಿಸಿದ್ದಾರೆ. ಮುಖ್ಯವಾಗಿ ಕೆಂಪಾಂಬುದಿ ಕೆರೆ, ಧರ್ಮಾಂಬುದಿ ಕೆರೆ, ಸಂಪಂಗಿರಾಮನ ಕೆರೆ, ಚೆನ್ನಮ್ಮನಕೆರೆ,
ಹಲಸೂರು ಕೆರೆ, ಕಾರಂಜಿ ಕೆರೆ, ಕೆಂಪಾಪುರ ಅಗ್ರಹಾರ ಕೆರೆ, ಸಿದ್ದಿಕಟ್ಟೆಕೆರೆ ಮುಂತಾದ ಸರಣಿ ಕೆರೆಗಳನ್ನು ನಿರ್ಮಿಸಿ ಮಳೆಕೊಯ್ತು ರೀತಿ ನೀರು ಸಂಗ್ರಹದ ವ್ಯವಸ್ಥೆ ಮಾಡಿದ್ದರು. ಹಾಗೆ ಅರ್ಕಾವತಿ ನದಿಗೆ ಅಡ್ಡಲಾಗಿ ತಿಪ್ಪಗೊಂಡನಹಳ್ಳಿ ಬಳಿ ಮಣ್ಣಣೆ ನಿರ್ಮಿಸಿದ್ದರು. ಆದ್ದರಿಂದ ಇವರನ್ನು ಸಾವಿರ
ಕೆರೆಗಳ ಸರದಾರನೆಂದರೆ ಅತಿಶಯೋಕ್ತಿಯಾಗಲಾರದು. ನಾಡಪ್ರಭುಗಳ ಚರಿತ್ರೆಯಲ್ಲಿ ಒಂದು ಮಾತಿದೆ ಅಂದರೆ ಕುಂತು ಕುಣಿಗಲ್ ಗೆದ್ದ-ನಿಂತು ಮಾಗಡಿ ಗೆದ್ದ ಎಂದು ಅಂದರೆ ಕೆಂಪೇಗೌಡರ ಕಾಲಕ್ಕೆ ಯಲಹಂಕ ಪ್ರಭುಗಳ ನಾಡು ಕೃಷ್ಣಗಿರಿಯಿಂದ-ನುಗ್ಗೆಹಳ್ಳಿವರೆಗೆ ಹಿಂದೂಪುರದಿಂದ
ಕಾವೇರಿವರೆಗೆ ವ್ಯಾಪಿಸಿದ್ದು, ಇದರಲ್ಲಿ ಮಾಗಡಿ ೨ನೇ ಕಂಡೇಗೌಡನ ಕಾಲಕ್ಕೆ ರಾಜಧಾನಿಯೂ ಆಗಿತ್ತು, ಹಾಗೇ ಹಿರಿಯ ಕೆಂಪೇಗೌಡರ ಕಾಲಕ್ಕೆ ಕುಣಿಗಲ್ ಸೀಮೆಯಲ್ಲಿ ಬರುವ ಹುತ್ರಿದುರ್ಗ-ಹುಲಿಯೂರು ದುರ್ಗಗಳು ಸೇನಾ ನೆಲೆ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಕೇಂದ್ರ ಗಳಾಗಿದ್ದವು.

ಸರಿಸುಮಾರು ೩೦೦೦ ವರ್ಷಗಳಷ್ಟು ಪುರಾತನ ಶಿಲಾ ಸಮಾಧಿಗಳನ್ನು ಹೊಂದಿರುವ ಇ ಕೆಂಪೇಗೌಡರು ನಾಡ ರಕ್ಷಣೆಗಾಗಿ ನಿರ್ಮಿಸಿರುವ ಕೋಟೆ ಇದೆ. ಇದೊಂದು ಅದ್ಭುತ ಸ್ಥಳ. ಇಲ್ಲಿ ಟಂಕಶಾಲೆ, ಲೋಹಗಳಿಂದ ಯುದ್ಧಕ್ಕೆ ಬೇಕಾದ ಆಯುಧಗಳನ್ನು ತಯಾರಿಸುತ್ತಿದ್ದ ಕುರುಹುಗಳಿವೆ. ವನ್ಯ ಜೀವಿ ಗಳಾದ ಕರಡಿ, ಚಿರತೆ, ನವಿಲು, ನರಿ, ತೋಳ, ಉಡ, ಗೌಜುಗ ಪ್ರಭೇದದ ಪ್ರಾಣಿಗಳಿವೆ. ಹಾಗೆ ಸಾವನದುರ್ಗ-ಹುತ್ರಿದುರ್ಗ-ಶಿವಗಂಗೆ-ದೇವರಾಯನ ದುರ್ಗ ಬೆಟ್ಟ ಸಾಲು ಗಳು ಆನೇ ದಾರಿಗಳೆಂದು ಪ್ರಸಿದ್ದಿ ಪಡೆದಿವೆ. ಹೀಗೆ ಕೆಂಪೇಗೌಡರು ಕುಣಿಗಲ್ ಹೆಟ್ಟೂರು, ರಾಮದುರ್ಗ, ಹುತ್ತಿದುರ್ಗ, ಹುಲಿಯೂರು ದುರ್ಗ, ಗುಡದಾರನಹಳ್ಳಿ, ಮಾಗಡಿ, ತಿಪ್ಪಗೊಂಡನಹಳ್ಳಿದರೆಗೆ ಸುರಕ್ಷಿತ ಬೆಟ್ಟಗುಡ್ಡಗಳಿಂದ ಸುತ್ತುಮದ ಮತ್ತು ನೈಸರ್ಗಿಕ ಜಲಮೂಲಗಳಾದ
ಹಳ್ಳ ತೊರೆಗಳಿದ್ದ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನಾಡಪ್ರಭುವಾಗಿ ಆಳಿದ್ದಾರೆ.

ಸಂಕಷ್ಟ ಎದುರಿಸಿದ್ದ ಕೆಂಪೇಗೌಡ: ಚರಿತ್ರೆಯಲ್ಲಿ ನಾವು ನೋಡಿ ಕಲಿಯಬೇಕಾಗಿರುವುದು ಮಹಾನ್ ವೃತ್ತಿಗಳೆಲ್ಲರೂ ಒಂದಲ್ಲ ಒಂದು ಕಷ್ಟ ನೋವು, ಅಪಮಾನ, ನಿಂಧನೆಗೊಳಗಾಗಿದ್ದವರ, ಅವೆಲ್ಲವನ್ನು ದಾಟಿ ಬಾಳಿ ತಮ್ಮ ಸಮಾಜಕ್ಕೆ ಬೆಳಕಾದವರು ಚರಿತ್ರೆಯಲ್ಲಿ ಅಜರಾಮರಾಗಿದ್ದಾರೆ. ಹಾಗೆ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರಿಗೂ ಬಂದಿತ್ತು. ಯಲಹಂಕದ ಸಿರಿ ಕೋಟೆ ಕಟ್ಟೆ, ಕಟ್ಟಡಗಳ ವೈಬೋಗ ಕಂಡು ಸಹಿಸದಾದ ಚನ್ನಪಟ್ಟಣದ ಕುಹಕಿ ಜಗದೇವರಾಯ, ಕೆಂಪೇ ಗೌಡರು ಬೈರವ ನಾಣ್ಯಗಳನ್ನು ಮುದ್ರಿಸಿ ಹವಣಿಸುತ್ತಿದ್ದಾನೆ ಸ್ವತಂತ್ರನಾಗಲು ಹವಣಿಸುತ್ತಿದ್ದಾನೆಂದು ದೊರೆ ಸದಾ
ಶಿವರಾಯ ಮತ್ತು ಅಧಿಕಾರ ನಡೆಸುತ್ತಿದ್ದ ರಾಮರಾಯರಲ್ಲಿ ಚಾಡಿಹೇಳಿದನು.

ಆಗ ೧ನೇ ಕೆಂಪೇಗೌಡರನ್ನು ಆನೆಗೊಂದಿ ಸೆರೆಯಲ್ಲಿಡಲಾಯಿತು. ಇಷ್ಟಾದರೂ ಕೆಂಪೇಗೌಡನ ವಂಶಸ್ಥರು ವಿಜಯನಗರಕ್ಕೆ ನಿಷ್ಟಾವಂತ ಪ್ರಜಾವಾ ತ್ಸಲ್ಯಕರಾಗಿ ನಡೆದು ಕೊಳ್ಳುತ್ತಿದ್ದರು. ಕುತಂತ್ರಿಗಳ ಸಾಮಂತಾಧಿಪತಿಗಳಾಗಿ, ತಿಳಿದು ಕೆಂಪೇ ಗೌಡರು ಬಿಡುಗಡೆಯಾದರು. ಕಾರವಾಸದಿಂದ ಬೆಂಗಳೂ ರಿಗೆ ಹಿಂತಿರುಗಿದ ಗೌಡರು ಮಶ್ವರದ ಕಾಡುಮಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜನರು ಜಯಘೋಷ ಕೂಗಿದರು. ಕೆಂಪೇಗೌಡ ರನ್ನು ಬೆಳ್ಳಿ ಉಯ್ಯಾಲೆ ಮೇಲೆ ಕೂರಿಸಿ ಅವರಿಗೆ ಹಾಲಿನ ಅಭಿಷೇಕ ಮಾಡಿದರು. ಆ ಸ್ಥಳ ಉಯ್ಯಾಲೆ ಕಾವಲು ಎಂದು ಹೆಸರಾಗಿ ನಂತರ ವಯ್ಯಾಲಿ ಕಾವಲ್ ಆಗಿ ಕರೆಯಲ್ಪಡುತ್ತಿದೆ.

ಇಂತಹ ಕೆಂಪೇಗೌಡರು ೧೫೬೯ರಲ್ಲಿ ಕುಣಿಗಲ್‌ನಿಂದ ಹಿಂತಿರುಗುವಾಗ ಮರಣ ಹೊಂದಿದರೆಂದು ತಿಳಿದು ಬರುತ್ತದೆ. ‘ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು, ದೇವಗಾರಂ ನಿರ್ಮಿಸು ಎಂಬ ನಾಣ್ಣುಡಿಯಂತೆ ಎಲ್ಲವನ್ನು ಮಾಡಿದ್ದ ಗಂಡಭೇರುಂಡ’ ಎಂಬ ಬಿರುದು ಹೊಂದಿದ್ದ ಕೆಂಪೇಗೌಡರ ಜಯಂತಿ ಸಂದಂರ್ಭದಲ್ಲಿ ಅವರಿಗೆ ನಮ್ಮೆಲ್ಲರ ನಮನಗಳು ಮುಂದೆ ನಾವೆಲ್ಲರೂ ಕೆಂಪೇಗೌಡರ ದೂರದರ್ಶಿತ್ವ ಮತ್ತು ಬಹುತ್ವದ ಮನೋ ಧರ್ಮದೊಂದಿಗೆ ಬದುಕುತ್ತಾ ನಾಡಿನ ಖ್ಯಾತಿಯನ್ನು ಎತ್ತಿ ಹಿಡಿಯೋಣ.

(ಲೇಖಕರು : ಒಕ್ಕಲಿಗ ಯುವ
ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷರು)

Leave a Reply

Your email address will not be published. Required fields are marked *

error: Content is protected !!