Friday, 21st June 2024

ನಾಗ್ಪುರದಲ್ಲಿ ಮಾ.15-21ರವರೆಗೆ ಲಾಕ್​ಡೌನ್

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ.

ದಿನದಿಂದ ದಿನಕ್ಕೆ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ನಾಗ್ಪುರ ಜಿಲ್ಲೆಯಲ್ಲಿ ಮಾ.15ರಿಂದ 21ರವರೆಗೆ ಒಂದು ವಾರಗಳ ಕಾಲ ಮಹಾರಾಷ್ಟ್ರ ಸರ್ಕಾರ ಲಾಕ್​ಡೌನ್​ ವಿಧಿಸಿದೆ.

ಬುಧವಾರ 13,659 ಹೊಸ ಕೊರೊನಾ ಕೇಸ್​ಗಳು ವರದಿಯಾದ ಬಳಿಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.ಇದು ಈ ವರ್ಷದಲ್ಲಿ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆ ಆಗಿದೆ.

ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 22,52,057 ಕೊರೊನಾ ಕೇಸ್​ಗಳು ವರದಿಯಾಗಿದೆ. ಮುಂದಿನ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನ ನೋಡಿಕೊಂಡು ಲಾಕ್​ಡೌನ್​ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *

error: Content is protected !!