Friday, 21st June 2024

ಕಲ್ಲು ತೂರಾಟ: ರಾಹುಲ್ ಕಾರಿನ ವಿಂಡ್ ಸ್ಕ್ರೀನ್ ಪುಡಿಪುಡಿ

ವದೆಹಲಿ: ಬಿಹಾರ-ಬಂಗಾಳ ಗಡಿಯಲ್ಲಿ ಕಲ್ಲು ತೂರಾಟದಲ್ಲಿ ರಾಹುಲ್ ಗಾಂಧಿ ಅವರ ಕಾರಿನ ವಿಂಡ್ ಸ್ಕ್ರೀನ್ ಪುಡಿಪುಡಿಯಾಗಿದೆ.

ರಾಹುಲ್ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಸ್ತುತ ಬಿಹಾರ ಪ್ರವಾಸದಲ್ಲಿದೆ.

“ಬಂಗಾಳ ಬಿಹಾರ ಗಡಿಯಲ್ಲಿ ರಾಹುಲ್ ಗಾಂಧಿ ಅವರ ಕಾರಿನ ಹಿಂಭಾಗದ ವಿಂಡ್ಸ್ಕ್ರೀನ್ ಒಡೆದಿದೆ. ಯಾರೋ ಕಲ್ಲು ತೂರಿರಬಹುದು” ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದರು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಂಗಳವಾರ ಕಟಿಹಾರ್ ತಲುಪಿದೆ. ಅವರು ಬುಧವಾರ ಬಿಹಾರ ಜಿಲ್ಲೆಯಲ್ಲಿ ರೋಡ್ ಶೋ ನಡೆಸಿದರು. ಅವರು ಮಾಲ್ಡಾ ಮೂಲಕ ಪಶ್ಚಿಮ ಬಂಗಾಳವನ್ನು ತಲುಪುವ ನಿರೀಕ್ಷೆಯಿತ್ತು.

ಬಿಹಾರದ ಮಾಜಿ ಮಿತ್ರ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್ಡಿಎಗೆ ಮರಳಿದ ಬೆನ್ನಲ್ಲೇ, ಕಾಂಗ್ರೆಸ್ ಯಾತ್ರೆ ನಡೆಯುತ್ತಿದೆ. ಇದೇ ಸಂದರ್ಭ ದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗಿಯಾಗಿದ್ದ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅವರ ಕಾರಿನ ಒಂದು ವಿಂಡೋಸ್ ಗ್ಲಾಸ್ ಪುಡಿ ಪುಡಿಯಾಗಿರೋದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!